ಮನುಷ್ಯನ ಜೀವಿತಾವಧಿಗೆ ಯಾವುದೇ ನಿರ್ದಿಷ್ಟತೆ ಇಲ್ಲ, ಹೊಸ ಸಂಶೋಧನೆ!

By: Jaya subramanya
Subscribe to Boldsky

ಮನುಷ್ಯನ ನಿಖರ ಜೀವಿತಾವಧಿ ಎಷ್ಟು? ಎಂಬುದು ಇದೀಗ ವಿಜ್ಞಾನಿಗಳ ಮೆದುಳನ್ನು ಕೊರೆಯುತ್ತಿರುವ ಪ್ರಶ್ನೆಯಾಗಿದೆ. ಮನುಷ್ಯನು ಇಷ್ಟು ವರ್ಷದವರೆಗೆ ಮಾತ್ರ ಜೀವಿಸುತ್ತಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂಬುದು ಅವರ ಲೆಕ್ಕಚಾರವಾಗಿದೆ. ಕೆಲವರು ದೀರ್ಘಕಾಲ ಬದುಕಿದರೆ ಇನ್ನು ಕೆಲವರು 60, 70 ವರ್ಷಗಳಲ್ಲೇ ತಮ್ಮ ಜೀವನವನ್ನು ಕೊನೆಗೊಳಿಸುತ್ತಿದ್ದಾರೆ. ಒಂದೊಮ್ಮೆ ಮಾನವರು 115 ವರ್ಷಗಳವರೆಗೆ ಬದುಕುತ್ತಾರೆ ಎಂಬುದಾಗಿ ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು.

ಆದರೆ ಕೆನಡಾದ ಮೆಕ್‌ಗ್ರಿಲ್ ಯೂನಿವರ್ಸಿಟಿಯ ಸೆಗ್‌ಫ್ರೈಡ್ ಹೆಕೀಮಿ ಜೀವಶಾಸ್ತ್ರಜ್ಞರು ಹೇಳುವಂತೆ ಇದುವೇ ಗರಿಷ್ಠ ಜೀವಿತಾವಧಿಯಾಗಿದ್ದಲ್ಲಿ ಇದನ್ನು ಗುರುತಿಸಬೇಕು ಮತ್ತು ಇದು ಈ ಮಿತಿಯನ್ನು ತಲುಪಿರಬೇಕು ಎಂದಾಗಿದೆ. ಆದರೆ ಇಂತಹುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. 

Human brain

ವಯಸ್ಸಿನ ಮಿತಿ ಎಷ್ಟಾಗಿದೆ ಎಂಬುದನ್ನು ಕೂಡ ನಾವು ಹೇಳಲು ಸಾಧ್ಯವಿಲ್ಲ. ಇಂದಿನ ಜೀವನ ಶೈಲಿಗಳನ್ನು ಆಧರಿಸಿ ಗರಿಷ್ಠ ಮತ್ತು ಸರಾಸರಿ ಜೀವಿತಾವಧಿಗಳನ್ನು ನಮಗೆ ತೋರಿಸಬಹುದು ಆದರೆ ಮುಂದೆ ಭವಿಷ್ಯದಲ್ಲಿ ಈ ಲೆಕ್ಕಾಚಾರವೇ ನಿಖರವಾಗಿರಬೇಕು ಎಂದೇನಿಲ್ಲ, ಇದರಲ್ಲೂ ಬದಲಾವಣೆಗಳು ಉಂಟಾಗಬಹುದು ಎಂಬುದು ಹೆಕೀಮಿ ವಾದವಾಗಿದೆ.

ಆದರೆ ಇನ್ನಷ್ಟು ವಿಜ್ಞಾನಿಗಳು ಪ್ರಸ್ತುತ ದೊರೆಯುತ್ತಿರುವ ಸೌಲಭ್ಯಗಳಾದ ತಂತ್ರಜ್ಞಾನ, ವೈದ್ಯಕೀಯ ಸಂಶೋಧನೆಗಳು ಮತ್ತು ಸುಧಾರಣೆಗಳಿಂದ ಜೀವನ ಮಟ್ಟದಲ್ಲಿ ಉತ್ತಮತೆಯನ್ನು ಕಂಡುಕೊಂಡು ಇನ್ನಷ್ಟು ಮೇಲ್ಮಟ್ಟಕ್ಕೆ ಹೋಗಬಹುದು ಎಂಬುದಾಗಿ ಸಾಧಿಸುತ್ತಿದ್ದಾರೆ. 

rainy water

ಅದಾಗ್ಯೂ ಇದು ಯಾವ ಮಟ್ಟವನ್ನು ತಲುಪಬಹುದು ಎಂಬುದಾಗಿ ಹೇಳುವುದು ಕಷ್ಟ, ಬರಿಯ ಅಂದಾಜು ಸಂಖ್ಯೆಯನ್ನು ಮಾತ್ರವೇ ನೀಡಬಹುದಾಗಿದೆ ಎಂಬುದಾಗಿ ಹೆಕೀಮಿ ತಿಳಿಸುತ್ತಾರೆ. "ಮಾನವನ ಜೀವಿತಾವಧಿ ಇಂತಿಷ್ಟೇ ಎಂಬುದನ್ನು ಹೇಳುವುದು ಕಷ್ಟವೆಂದು ಅವರು ಹೇಳುತ್ತಿದ್ದು, ಮುನ್ನೂರು ವರ್ಷಗಳ ಹಿಂದೆ ಜನರು ಅಲ್ಪ ಅವಧಿಯವರೆಗೆ ಮಾತ್ರ ಜೀವಿಸುತ್ತಿದ್ದರು. ಇವರಿಗೆ ಎಲ್ಲಿಯಾದರೂ ಇಂದು ಮಾನವರು ನೂರು ವರ್ಷಗಳವರೆಗೆ ಜೀವಿಸುತ್ತಿದ್ದಾರೆ ಎಂದು ಹೇಳಿದರೆ ಅವರು ಕುತೂಹಲಭರಿತರಾಗುವುದು ಖಂಡಿತ ಎಂಬುದಾಗಿ ಹೆಕೀಮ್ ವ್ಯಾಖ್ಯಾನಿಸಿದ್ದಾರೆ.

English summary

No Evidence On Limit On Human Lifespan

Challenging theories that say human lifespan is approaching a limit, researchers have found that there is no evidence that maximum human lifespan has stopped increasing and could instead far exceed previous predictions. In a previous study researchers concluded that the upper limit of human age is peaking at around 115 years.
Story first published: Thursday, July 6, 2017, 23:29 [IST]
Subscribe Newsletter