Latest Updates
-
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ
ಮಹಿಳೆಯರಿಗೆ ಆ ಸಮಯದಲ್ಲಿ, ಕಾಡುವ ಗುಟ್ಟಿನ ಸಮಸ್ಯೆಗಳಿಗೆ ಶೀಘ್ರ ಪರಿಹಾರ
ನಿಸರ್ಗ ನೀಡಿರುವ ಅದ್ಭುತ ಕೊಡುಗೆಗಳಲ್ಲಿ ದಂಪತಿಗಳ ನಡುವಣ ಮಿಲನ ಅತ್ಯಂತ ಚೇತೋಹಾರಿಯಾದ ಹಾಗೂ ಉಲ್ಲಾಸಗೊಳಿಸುವ ಕ್ರಿಯೆಯಾಗಿದೆ, ಆದರೆ ಸರಿಯಾದ ಕ್ರಮ ಅನುಸರಿಸಿದರೆ ಮಾತ್ರ! ಜೀವನದ ಇತರ ಸಂತೋಷಗಳಂತೆ ಈ ಕ್ರಿಯೆಯಲ್ಲಿಯೂ ಒಳಗೊಂಡ ಇಬ್ಬರು ವ್ಯಕ್ತಿಗಳೂ ಮಾನಸಿಕರಾಗಿ ಹಾಗೂ ದೈಹಿಕವಾಗಿ ಪರಸ್ಪರ ಹತ್ತಿರಾದರೆ ಮಾತ್ರ ಈ ಕ್ರಿಯೆಯ ಗರಿಷ್ಟ ಪ್ರಯೋಜನವನ್ನು ಪಡೆಯಲು ಸಾಧ್ಯ.
ಇಲ್ಲದಿದ್ದರೆ ಇದೊಂದು ನೀರಸ ಕ್ರಿಯೆಯಾಗಿ ಪರಿಣಮಿಸಿ ನಿರಾಶೆಯನ್ನುಂಟುಮಾಡಬಹುದು. ವಾಸ್ತವದಲ್ಲಿ ಸಾರ್ಥಕ ಜೀವನಕ್ಕೆ ಸುಖಕರ ಮಿಲನದ ಸುಖವೂ ಆಗತ್ಯವಾಗಿದ್ದು ಇದರ ಕೊರತೆಯಿಂದ ಜೀವನದಲ್ಲಿ ಬಹಳಷ್ಟು ತೊಂದರೆಗಳು ಹಾಗೂ ದಂಪತಿಗಳ ನಡುವೆ ಮನಸ್ತಾಪವೂ ಎದುರಾಗಬಹುದು.

ಮಿಲನಕ್ರಿಯೆಯಿಂದ ಮನಸ್ಸಿಗೆ ತೃಪ್ತಿಯಾಗುವುದು ಮಾತ್ರವಲ್ಲ, ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ ಹಾಗೂ ತಮ್ಮದೇ ಸಂತಾನವನ್ನು ಪಡೆಯಲೂ ತುಂಬಾ ಅಗತ್ಯವಾಗಿದೆ. ಒಂದು ವೇಳೆ ಮಿಲನಕ್ರಿಯೆಯಲ್ಲಿ ದಂಪತಿಗಳು ಸಂತೃಪ್ತಿ ಪಡೆಯಲು ವಿಫಲರಾದರೆ ಇದಕ್ಕೆ ಕಾಮಕ್ರಿಯೆಯ ಬಗ್ಗೆ ಅಥವಾ ಜನನಾಂಗಗಳ ಕುರಿತಾದ ಕೆಲವು ಕಾರಣಗಳಿರಬಹುದು. ಯಾವುದಕ್ಕೂ ಸಂಕೋಚಪಡದೇ ವೈದ್ಯರ ಸಲಹೆ ಪಡೆಯಬೇಕು. ಮಿಲನ ಕ್ರಿಯೆ ಸಂತಸಕರವಾಗದೇ ಇರಲು ಕೆಲವಾರು ಕಾರಣಗಳಿದ್ದು ಇವುಗಳನ್ನು ಸಹಾ ಇತರ ಆರೋಗ್ಯದ ಕಾರಣಗಳಷ್ಟೇ ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ಪಡೆಯಬೇಕು. ಏಕೆಂದರೆ ಇದಕ್ಕೆ ದೇಹದ ಇತರ ಅಂಗಗಳೂ ಕಾರಣವಿರಬಹುದು.
ಭಾರತದಂತಹ ಸಂಪ್ರದಾಯಗಳಿಂದ ಕೂಡಿದ ದೇಶದಲ್ಲಿ ಕಾಮದ ಬಗ್ಗೆ ಮುಕ್ತವಾಗಿ ಮಾತುಕತೆ ನಡೆಸುವುದು ಹೆಚ್ಚು ಪ್ರಚಲಿತವಾಗಿಲ್ಲ. ಕೆಲವು ಧರ್ಮಗಳಲ್ಲಿ ಕಾಮದ ಬಗ್ಗೆ ಕೆಲವು ಕಟ್ಟುಪಾಡುಗಳನ್ನು ವಿಧಿಸಲಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ವಿಶೇಷವಾಗಿ ಮಹಿಳೆಯರು ಮುಜುಗರದಿಂದ ವೈದ್ಯರ ಬಳಿಗೆ ತಮ್ಮ ಖಾಸಗಿ ತೊಂದರೆಗಳನ್ನು ತಿಳಿಸದಿರುವ ಸಂದರ್ಭವೇ ಹೆಚ್ಚು.
ಮಿಲನಕ್ರಿಯೆ ಸುಲಲಿತವಾಗಿ ಆಗುತ್ತಿಲ್ಲವೆಂದರೆ ಇದಕ್ಕೆ ಪುರುಷರಿಗೂ ಮಹಿಳೆಯರಿಗೂ ಎದುರಾಗುವ ಸಮಸ್ಯೆಗಳು ಬೇರೆ ಬೇರೆಯಾಗಿರಬಹುದು. ಪುರುಷರಲ್ಲಿ ನಿಮಿರು ದೌರ್ಬಲ್ಯ, ವಿಶೇಷವಾಗಿ ಒಂದು ವಯಸ್ಸನ್ನು ಮೀರಿದ ಬಳಿಕ ಹೆಚ್ಚಾಗಿ ಕಾಡುತ್ತದೆ. ಅದೇ ಮಹಿಳೆಯರಲ್ಲಿ ಜಾರುವಿಕೆಯ ಕೊರತೆ, ಶಿಲೀಂಧ್ರದ ಸೋಂಕು, ಮೂತ್ರನಾಳದ ಸೊಂಕು ಮೊದಲಾದವು ಈ ಕ್ರಿಯೆಯನ್ನು ಕಷ್ಟಕರವಾಗಿಸುತ್ತವೆ.
ಯಾವುದೇ ಮಹಿಳೆ ಮಿಲನಸುಖವನ್ನು ಪೂರ್ಣವಾಗಿ ಸವಿಯಬೇಕಾದರೆ ಆಕೆಯ ಜನನಾಂಗದಲ್ಲಿ ಸಾಕಷ್ಟು ಜಾರುಕದ್ರವವಿರಲೇಬೇಕು. ಮಿಲನಪೂರ್ವ ಚಟುವಟಿಕೆಗಳಿಂದ ದೇಹದಲ್ಲಿ ಉಂಟಾಗುವ ಪ್ರಚೋದನೆಗಳ ಮೂಲಕ ಈ ಭಾಗದಲ್ಲಿ ನೈಸರ್ಗಿಕವಾದ ಜಾರುಕ ಸ್ರವಿಸುತ್ತದೆ. ಇದರಿಂದ ಪ್ರವೇಶ ಸುಲಭವಾಗುತ್ತದೆ. ಒಂದು ವೇಳೆ ಈ ಜಾರುಕ ಸಾಕಷ್ಟು ಪ್ರಮಾಣದಲ್ಲಿ ಇಲ್ಲದೇ ಇದ್ದರೆ ಪ್ರವೇಶದ ಸಮಯದಲ್ಲಿ ಹೆಚ್ಚಿನ ಘರ್ಷಣೆಯುಂಟಾಗಿ ನೋವಿನ ಅನುಭವವಾಗುತ್ತದೆ. ಈ ಕೊರತೆಯನ್ನು ನೀಗಿಸಲು ನೈಸರ್ಗಿಕ ವಿಧಾನಗಳಿದ್ದು ಇವುಗಳು ಜಾರುಕದ ಪ್ರಮಾಣವನ್ನು ಹೆಚ್ಚಿಸಿ ಮಿಲನಸುಖವನ್ನು ಪೂರ್ಣವಾಗಿ ಪಡೆಯಲು ನೆರವಾಗುತ್ತವೆ.
ಅಗತ್ಯವಿರುವ ಸಾಮಾಗ್ರಿಗಳು
ಮೊಸರು ಒಂದು ಕಪ್
ಕ್ರ್ಯಾನ್ಬೆರಿ ರಸ: ಒಂದು ಲೋಟ
ಈ ನೈಸರ್ಗಿಕ ವಿಧಾನದಿಂದ ಮಿಲನಕ್ರಿಯೆಗೆ ಅಗತ್ಯವಾದ ನೈಸರ್ಗಿಕ ಜಾರುಕ ದೇಹದಲ್ಲಿ ಹೆಚ್ಚು ಉತ್ಪತ್ತಿಯಾಗುತ್ತದೆ. ಇದರ ಸರಿಯಾದ ಪರಿಣಾಮ ಪಡೆಯಬೇಕಾದರೆ ನಿಯಮಿತವಾಗಿ ಈ ವಿಧಾನವನ್ನು ಅನುಸರಿಸಬೇಕು. ಯಾವುದಕ್ಕೂ ಜಾರುಕ ಉತ್ಪತ್ತಿಯಾಗಲು ಮಿಲನಪೂರ್ವ ಚಟುವಟಿಕೆ ಅತ್ಯಗತ್ಯವಾಗಿದ್ದು ಮಹಿಳೆ ಮಾನಸಿಕಳಾಗಿ ಉನ್ಮತ್ತಳಾದರೆ ಮಾತ್ರವೇ ಸಾಧ್ಯ. ಈ ವಿಧಾನದ ಜೊತೆಗೇ ಮಹಿಳೆ ಸಾಕಷ್ಟು ನೀರು ಕುಡಿಯುವುದೂ ಅಗತ್ಯವಾಗಿದೆ. ಈ ಮೂಲಕ ಜನನಾಂಗಗಳಿಗೂ ಸಾಕಷ್ಟು ದ್ರವ ದೊರಕಲು ಸಾಧ್ಯವಾಗುತ್ತದೆ.
ಒಂದು ವೇಳೆ ಮಹಿಳೆ ಶಿಲೀಂಧ್ರದ ಸೋಂಕು ಅಥವಾ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದರೆ ಮಿಲನಕ್ಕೂ ಮುನ್ನ ಈ ಸೋಂಕುಗಳಿಂದ ಚಿಕಿತ್ಸೆ ಪಡೆಯಬೇಕು. ಏಕೆಂದರೆ ಈ ಸೋಂಕು ಇದ್ದಾಗ ಜಾರುಕ ಹೆಚ್ಚು ಉತ್ಪತ್ತಿಯಾಗಲು ಅಡ್ಡಿಯಾಗಬಹುದು. ಮೊಸರಿನಲ್ಲಿ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿದ್ದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ.
ದೇಹದ ಒಳಭಾಗದಲ್ಲಿ ಉತ್ಪತ್ತಿಯಾಗುವ ಜಾರುಕದಲ್ಲಿಯೂ ಇಂತಹದ್ದೇ ಸ್ನೇಹಿ ಬ್ಯಾಕ್ಟೀರಿಯಾಗಳಿರುತ್ತವೆ ಹಾಗೂ ಮೊಸರು ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುವ ಮೂಲಕ ನೈಸರ್ಗಿಕ ಜಾರುಕ ಹೆಚ್ಚು ಉತ್ಪತ್ತಿಯಾಗಲು ನೆರವಾಗುತ್ತದೆ. ಕ್ರ್ಯಾನ್ಬೆರಿ ರಸದಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ವಿಶೇಷವಾಗಿ ಇದರಲ್ಲಿರುವ ಪೋಷಕಾಂಶಗಳು ಜನನಾಂಗದ ಒಳಭಾಗದ ಪಿಎಚ್ ಮಟ್ಟ ಸಂತುಲಿತವಾಗಿದ್ದು ಗರಿಷ್ಟ ಪ್ರಮಾಣದ ಜಾರುಕ ಉತ್ಪತ್ತಿಯಾಗಲು ನೆರವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














