ಮನೆಔಷಧಿಗಳು: ಗ್ಯಾಸ್ಟ್ರಿಕ್‌ ಸಮಸ್ಯೆಗೆ ಬರೀ ಐದೇ ನಿಮಿಷದಲ್ಲಿ ಪರಿಹಾರ...

Posted By: Lekhaka
Subscribe to Boldsky

ಹೊಟ್ಟೆಯಲ್ಲಿ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುವುದು ನಾವು ತಿನ್ನುವಂತಹ ಆಹಾರಗಳು ಸರಿಯಾಗಿ ಇಲ್ಲದೆ ಇರುವಾಗ. ಕೆಲವೊಂದು ಸಲ ಅಜೀರ್ಣ ಸಮಸ್ಯೆಯಿಂದಾಗಿ ಉಂಟಾಗುವಂತ ಹೊಟ್ಟೆಯಲ್ಲಿನ ಉರಿಯೂತದಿಂದ ತೀವ್ರವಾದ ಜಠರದುರಿ (ಗ್ಯಾಸ್ಟ್ರಿಕ್) ಕಾಣಿಸಿಕೊಳ್ಳುವುದು. ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಮಾಡಲು ಹಲವಾರು ರೀತಿಯ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದರಲ್ಲಿ ಕೆಲವೊಂದು ಪರಿಣಾಮಕಾರಿಯಾದರೂ ಇನ್ನು ಕೆಲವು ಯಾವುದೇ ಫಲ ನೀಡದು. ಆಸ್ಪಿರನ್ ಮತ್ತು ನೋವು ನಿವಾರಕ ಔಷಧಿ ಪದೇ ಪದೇ ಸೇವೆನೆಯಿಂದ ತೀವ್ರ ಜಠರದುರಿ ಕಾಣಿಸಿಕೊಳ್ಳುವುದು.

ಇಂತಹ ಔಷಧಿಗಳು ಹೊಟ್ಟೆಯ ಪದರ ಮತ್ತು ಗೋಡೆಗೆ ಹಾನಿಯುಂಟು ಮಾಡಬಹುದು. ಅತಿಯಾದ ಆಲ್ಕೋಹಾಲ್ ಸೇವನೆ, ಕಾಫಿ, ಚಹಾ ಮತ್ತು ಲಿಂಬೆ ಜ್ಯೂಸ್ ನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಮತ್ತು ಬಿಸಿಬಿಸಿಯಾದ ಆಹಾರ ಸೇವನೆಯು ತೀವ್ರ ಜಠರದುರಿಗೆ ಕಾರಣವಾಗಬಹುದು. ಬಿಸಿಬಿಸಿಯಾದ ಆಹಾರ ಸೇವನೆ ಮಾಡಿದಾಗ ಹೊಟ್ಟೆಯ ಪದರ ಅಥವಾ ಗೋಡೆಗಳು ನಿಧಾನವಾಗಿ ಅಥವಾ ತಟಸ್ಥಗೊಂಡು ರಕ್ತಸಂಚಾರ ನಿಲ್ಲಿಸುವುದು.

Gastritis

ಇದರಿಂದ ಆ ಭಾಗದಲ್ಲಿ ಕಿರಿಕಿರಿ, ಕೆಂಪಾಗುವುದು ಮತ್ತು ಕೆಲವೊಂದು ಸಲ ರಕ್ತಸ್ರಾವವು ಆಗಬಹುದು. ಇದರಿಂದ ತೀವ್ರ ಹುಣ್ಣುಗಳು ಕಾಣಿಸಬಹುದು. ರಕ್ತದಲ್ಲಿ ಯೂರಿಕ್ ಆಮ್ಲವು ಅತಿಯಾದರೂ ತೀವ್ರ ಜಠರದುರಿ ಕಾಣಿಸಬಹುದು. ಕೆಲವೊಂದು ನೈಸರ್ಗಿಕ ಮದ್ದುಗಳು ಇಂತಹ ಜಠರದುರಿ ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು. ಅದು ಯಾವುದೆಂದು ತಿಳಿಯಿರಿ.

ಗ್ಯಾಸ್ಟ್ರಿಕ್-ಭೇದಿ ಸಮಸ್ಯೆಗೆ ಒಂದು ಮುಷ್ಟಿ ಕರಿಬೇವಿನ ಎಲೆಗಳು ಸಾಕು!

ತೀವ್ರ ಜಠರದುರಿಯ ಲಕ್ಷಣಗಳು

ಹಸಿವು ಆಗದೇ ಇರುವುದು. ಅದರಲ್ಲೂ ಬೆಳಗ್ಗೆ ಎದ್ದ ಬಳಿಕ.

ವಾಂತಿ ಮತ್ತು ವಾಂತಿ ಮಾಡುವಾಗ ಅಥವಾ ಮಲದಲ್ಲಿ ರಕ್ತ ಬರುವುದು.

ಹೊಟ್ಟೆಯಲ್ಲಿ ಉರಿಯೂತದ ಭಾವನೆ.

ಹೊಟ್ಟೆಯಲ್ಲಿ ನೋವು ಅದರಲ್ಲೂ ಕಿಬ್ಬೊಟ್ಟೆಯಲ್ಲಿ.

ನಿಶ್ಯಕ್ತಿ.

ರಕ್ತ ಕಣ ಕಡಿಮೆಯಾಗುವುದು ಅಥವಾ ಹಿಮೋಗ್ಲೋಬಿನ್ ಮಟ್ಟ ಕುಸಿತ.

ತೀವ್ರ ಜಠರದುರಿ(ಗ್ಯಾಸ್ಟ್ರಿಕ್) ಗೆ ಹತ್ತು ಸಲಹೆಗಳು

• ಊಟಕ್ಕೆ ಮೊದಲು ನಿಯಮಿತವಾಗಿ ಜೇನುತುಪ್ಪ ಸೇವನೆ ಮಾಡಿದರೆ ಅದರಿಂದ ಹೊಟ್ಟೆಯ ಪದರವು ಬಲಗೊಳ್ಳುವುದು.

• ಒಂದು ಲೋಟ ಬಿಸಿ ನೀರಿಗೆ ಎರಡು ಚಮಚ ಜೇನುತುಪ್ಪ ಹಾಕಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ಹೊಟ್ಟೆಯಲ್ಲಿ ಅಸಿಡಿಟಿ ನಿವಾರಣೆ ಮಾಡಿ ಹೊಟ್ಟೆಯ ಗೋಡೆಗಳು ನೈಸರ್ಗಿಕವಾಗಿ ಚೇತರಿಸಿಕೊಳ್ಳುವಂತೆ ಮಾಡುವುದು.

• ಒಂದು ಕಪ್ ಬಿಸಿ ಹಾಲಿಗೆ ಒಂದು ಚಮಚ ಆಲಿವ್ ತೈಲವನ್ನು ಹಾಕಿಕೊಂಡು ಬೆಳಗ್ಗೆ ಪ್ರತಿನಿತ್ಯ ಸೇವನೆ ಮಾಡಿದರೆ ಹೊಟ್ಟೆಯಲ್ಲಿನ ಕಿರಿಕಿರಿ ತಪ್ಪುವುದು ಮತ್ತು ಇದು ಗ್ಯಾಸ್ಟ್ರಿಕ್ ಒಳ್ಳೆಯ ಚಿಕಿತ್ಸೆ.

• ಕಾಲು ಚಮಚದಷ್ಟು ಕಾಲೋನ್ಜಿ ಬೀಜಗಳನ್ನು ಸೇವನೆ ಮಾಡಿದರೆ ಹೊಟ್ಟೆ ಮತ್ತು ತೀವ್ರ ಜಠರದುರಿ ನಿವಾರಣೆ ಮಾಡಬಹುದು. ಹೊಟ್ಟೆಯ ಅಲ್ಸರ್ ಮತ್ತು ಕ್ಯಾನ್ಸರ್ ಗೆ ಕಪ್ಪು ಈರುಳ್ಳಿ ಬೀಜಗಳನ್ನು ನಿಯಮಿತವಾಗಿ ಸೇವನೆ ಮಾಡಿ.

• ಪ್ರತಿನಿತ್ಯ ಉಪಾಹಾರಕ್ಕೆ ಓಟ್ ಮೀಲ್ ಜತೆಗೆ ಜೇನುತುಪ್ಪ ಬೆರೆಸಿಕೊಂಡು ತಿಂದರೆ ತೀವ್ರ ಜಠರದುರಿ ಮತ್ತು ಅಲ್ಸರ್ ಗೆ ಒಳ್ಳೆಯದು. • ಒಂದು ಕಪ್ ಮೊಸರಿಗೆ 2-3 ಚಮಚದಷ್ಟು ಇಸಬುಗೋಲ್ ಹಾಕಿಕೊಳ್ಳಿ ಮತ್ತು ಅದಕ್ಕೆ ಒಂದು ಬಾಳೆಹಣ್ಣು ಹಾಕಿ. ಪ್ರತಿನಿತ್ಯ ಉಪಾಹಾರಕ್ಕೆ ಅರ್ಧ ಗಂಟೆ ಮೊದಲು ಇದನ್ನು ಸೇವನೆ ಮಾಡಿ. ಇದು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

• ಪಪ್ಪಾಯಿ ಬೀಜಗಳನ್ನು ಬಿಸಿಲಿಗೆ ಹಾಕಿ ಒಣಗಿಸಿಕೊಂಡು ಅದನ್ನು ನಿತ್ಯವೂ ಹುಡಿ ಮಾಡಬೇಕು. ಈ ಹುಡಿಯನ್ನು ಒಂದು ತುಂಡು ಅನಾನಸಿಗೆ ಹಾಕಿಕೊಂಡು ದಿನನಿತ್ಯವು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ.

cardomon

• ಹಸಿರು ಏಲಕ್ಕಿ ಬೀಜ, ಜೀರಿಗೆ ಮತ್ತು ದಾಲ್ಚಿನಿ ಸಮಪ್ರಮಾಣದಲ್ಲಿ ಹಾಕಿ ತವಾದಲ್ಲಿ 20-30 ಸೆಕೆಂಡು ಬಿಸಿ ಮಾಡಿ. ಇದನ್ನು ಹುಡಿಮಾಡಿಕೊಂಡು ಊಟದೊಂದಿಗೆ ಅರ್ಧ ಚಮಚ ಸೇವಿಸಿ.

• ಅಲ್ಸರ್ ಮತ್ತು ಗ್ಯಾಸ್ಟ್ರಿಕ್ ನಿವಾರಣೆ ಮಾಡಲು ಒಂದು ತಿಂಗಳ ಕಾಲ ಪ್ರತಿನಿತ್ಯ ಊಟವಾದ ಬಳಿಕ 2-3 ಮೂರು ಚಮಚದಷ್ಟು ಕಪ್ಪು ಉಪ್ಪು ಸೇವಿಸಿ.

ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಈ ಆಹಾರಗಳನ್ನು ಸೇವಿಸಬೇಡಿ....

• 2-3 ಚಮಚ ಪಾರ್ಸ್ಲಿ ಸಸ್ಯದ ಜ್ಯೂಸ್ ತೆಗೆದು ಅದಕ್ಕೆ ಒಂದು ಚಿಟಿಕೆ ಕಪ್ಪು ಉಪ್ಪು ಮತ್ತು ಕರಿಮೆಣಸಿನ ಹುಡಿ ಹಾಕಿ ಕುಡಿಯಿರಿ.

• ಪ್ರತಿನಿತ್ಯ ಮೂರು ಸಲ ಇದನ್ನು ಸೇವನೆ ಮಾಡಿದರೆ ಅದರಿಂದ ಹಸಿವು ಹೆಚ್ಚಾಗುವುದು.

Ginger

• ಹೊಟ್ಟೆಗೆ ಶಮನ ನೀಡಲು ಶುಂಠಿ ತುಂಬಾ ಪರಿಣಾಮಕಾರಿ. ಶುಂಠಿ ಮತ್ತು ಈರುಳ್ಳಿ ರಸವನ್ನು ಸಮ ಪ್ರಮಾಣದಲ್ಲಿ ಸೇರಿಸಿಕೊಂಡು ಪ್ರತಿನಿತ್ಯ ಸೇವಿಸಿದರೆ ಇದರಿಂದ ಉರಿಯೂತ, ವಾಕರಿಕೆ ಮತ್ತು ಹೊಟ್ಟೆಯ ಕಿರಿಕಿರಿ ಕಡಿಮೆಯಾಗುವುದು.

English summary

Natural Tips to Cure Acute Gastritis

When hot foods enter into injured areas of the stomach, the stomach lining and the interior walls slow or stop altogether the flow of blood in the stomach walls, causing reddening, irritation, and in some cases bleeding. All of this can gradually lead to chronic ulcers. An increase of uric acid in the blood can also be the cause of acute gastritis. Some remedies for the treatment of acute gastritis may be very useful in place of using higher-strength medications.
Subscribe Newsletter