ಮನೆ ಔಷಧಿಗಳು-ಒಂದೇ ದಿನದಲ್ಲಿ ರಿಂಗ್‌ವರ್ಮ್ ಸಮಸ್ಯೆಗೆ ಪರಿಹಾರ

By: Hemanth
Subscribe to Boldsky

ಮಳೆಗಾಲ ಆರಂಭವಾಗುತ್ತಾ ಇದ್ದಂತೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಯಾವಾಗಲೂ ಹೊರಗಡೆ ನೀರಿನಲ್ಲಿ ಕೆಲಸ ಮಾಡುವಂತಹವರಿಗೆ ಮಳೆಗಾಲದಲ್ಲಿ ರಿಂಗ್‌ವರ್ಮ್ ಮತ್ತು ಇತರ ರೀತಿಯ ಕಚ್ಚಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಮಳೆಗಾಲದಲ್ಲಿ ಕೆಲವೊಂದು ಶಿಲೀಂಧ್ರಿಯಗಳಿಂದ ಈ ಚರ್ಮರೋಗಗಳು ಬೇಗನೆ ಹರಡುತ್ತದೆ. ಇದು ಕೆಲವೊಂದು ಸಲ ತುಂಬಾ ಸಮಸ್ಯೆ ಉಂಟು ಮಾಡುತ್ತದೆ. ರಿಂಗ್‌‌ ವರ್ಮ್ ಯಿಂದಾಗಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಮತ್ತು ಪ್ರತೀ ಸಲ ಇದು ಕಿರಿಕಿರಿ ಉಂಟು ಮಾಡುವುದು. ಒಣ ಮತ್ತು ಒರಟು ಚರ್ಮದ ಸುತ್ತಲು ಕೆಂಪು ಕಚ್ಚಿಗಳು ಮೂಡುವುದು ಇದರ ಪ್ರಮುಖ ಲಕ್ಷಣಗಳಾಗಿದೆ.

ರಿಂಗ್‌ವರ್ಮ್ ಸಮಸ್ಯೆ: ನೀವು ತಿಳಿದಿರಬೇಕಾದ ಸತ್ಯಾಸತ್ಯತೆಗಳು

ಕೆಲವೊಂದು ಸಲ ತುರಿಕಚ್ಚಿಯಿಂದಾಗಿ ಜ್ವರ ಕಾಣಿಸಿಕೊಳ್ಳಬಹುದು ಮತ್ತು ಕೆಲವು ಸಲ ಅಂಗಾಂಗಗಳಲ್ಲಿ ಊತ ಕಾಣಿಸಿಕೊಳ್ಳಬಹುದು. ಇದು ದೊಡ್ಡ ಮಟ್ಟದ ಸಾಂಕ್ರಾಮಿಕ ರೋಗವಾಗಿರುವ ಕಾರಣದಿಂದಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ರಿಂಗ್‌‌ ವರ್ಮ್ (ತರ್ದು ಅಥವಾ ದದ್ದು, ದರ್ದು, ಹುಳುಕಡ್ಡಿ ಎಂದು ಕರೆಯುತ್ತಾರೆ) ನಿವಾರಣೆ ಮಾಡುವಂತಹ ಹಲವಾರು ರೀತಿಯ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂತಹ ಕ್ರೀಮ್‌ಗಳು ಕೆಲವೊಂದು ಸಲ ಸಮಸ್ಯೆಯನ್ನು ನಿವಾರಣೆ ಮಾಡಬಹುದು. ಆದರೆ ಸ್ವಲ್ಪ ದಿನ ಬಿಟ್ಟು ಇದು ಮತ್ತೆ ಕಾಣಿಸಿಕೊಳ್ಳಬಹುದು.

ಬೇಸಿಗೆಯಲ್ಲಿ ಕಾಡುವ ರಿಂಗ್‌‌ ವರ್ಮ್ ಸಮಸ್ಯೆಗೆ ಪರಿಹಾರವೇನು?

ಇಂತಹ ಕ್ರೀಮ್‌ಗಳಲ್ಲಿ ರಾಸಾಯನಿಕಗಳು ಬಳಕೆಯಾಗುವುದು ನಿಶ್ಚಿತವಾಗಿರುವ ಕಾರಣದಿಂದ ಅಡ್ಡಪರಿಣಾಮ ಖಚಿತ. ರಿಂಗ್‌‌ ವರ್ಮ್ ಗೆ ಹಿಂದಿನಿಂದಲೂ ನಮ್ಮ ಹಿರಿಯರು ಕೆಲವೊಂದು ಗಿಡಮೂಲಿಕೆಗಳನ್ನು ಬಳಸಿಕೊಂಡು ಮದ್ದು ನೀಡುತ್ತಾ ಇದ್ದರು. ಆದರೆ ಅದೆಲ್ಲವೂ ಈಗ ಮೂಲೆ ಸೇರಿದೆ. ಮನೆಮದ್ದನ್ನು ಬಳಸಿಕೊಂಡು ರಿಂಗ್‌‌ ವರ್ಮ್ ನಿವಾರಣೆ ಹೇಗೆ ಎಂದು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ತಿಳಿಸಲಿದೆ....

ಬೆಳ್ಳುಳ್ಳಿ

ಬೆಳ್ಳುಳ್ಳಿ

ಶಿಲೀಂಧ್ರ ವಿರೋಧಿ ಗುಣ ಹೊಂದಿರುವ ಬೆಳ್ಳುಳ್ಳಿಯು ರಿಂಗ್‌‌ ವರ್ಮ್ ವಿರುದ್ಧ ಹೋರಾಡಲು ತುಂಬಾ ಪರಿಣಾಮಕಾರಿ ಮನೆಮದ್ದಾಗಿದೆ. ಇದು ರಿಂಗ್‌‌ ವರ್ಮ್‌ಗೆ ಕಾರಣವಾಗುವ ಶಿಲೀಂಧ್ರವನ್ನು ಕೊಂದು ಹಾಕಿ ಮುಂದೆ ಈ ಸೋಂಕು ಬೆಳೆಯದಂತೆ ನೋಡಿಕೊಳ್ಳುವುದು. ಬೆಳ್ಳುಳ್ಳಿಯ ಪೇಸ್ಟ್ ಮಾಡಿಕೊಂಡು ಅದನ್ನು ದಿನದಲ್ಲಿ ಎರಡು ಮೂರು ಸಲ ಹಚ್ಚಿಕೊಳ್ಳಿ. ಇದು ರಿಂಗ್‌‌ ವರ್ಮ್‌ಗೆ ತುಂಬಾ ಪರಿಣಾಮಕಾರಿ ಚಿಕಿತ್ಸೆಯಾಗಿದೆ.

ಅಲೋವೆರಾ

ಅಲೋವೆರಾ

ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುಂಬಾ ಲಾಭಕಾರಿ ಮತ್ತು ಬಹುಮುಖ ಗುಣ ಹೊಂದಿರುವಂತಹ ಅಲೋವೆರಾವು ರಿಂಗ್‌‌ ವರ್ಮ್ ನಿವಾರಣೆ ಮಾಡಲು ತುಂಬಾ ಸಹಕಾರಿಯಾಗಲಿದೆ. ಹಲವಾರು ಚಿಕಿತ್ಸಕ ಗುಣ ಹೊಂದಿರುವ ಅಲೋವೆರಾವು ಚರ್ಮಕ್ಕೆ ತುಂಬಾ ಒಳ್ಳೆಯದು ಮತ್ತು ಇದು ತುರಿಕಚ್ಚಿಗೆ ತುಂಬಾ ಪರಿಣಾಮಕಾರಿಯಾಗುವುದು. ಅಲೋವೆರಾ ಎಲೆಯನ್ನು ತುಂಡು ಮಾಡಿ ಅದರಲ್ಲಿರುವ ಲೋಳೆಯನ್ನು ತೆಗೆದು ಭಾದಿತ ಪ್ರದೇಶಕ್ಕೆ ರಾತ್ರಿ ವೇಳೆ ಹಚ್ಚಿಕೊಳ್ಳಿ. ನಿಯಮಿತವಾಗಿ ಬಳಸಿದರೆ ರಿಂಗ್‌‌ ವರ್ಮ್‌ನ ಸಮಸ್ಯೆ ಬೇಗನೇ ನಿವಾರಣೆಯಾಗುವುದು.

ಲೆಮನ್ ಗ್ರಾಸ್

ಲೆಮನ್ ಗ್ರಾಸ್

ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿರುವ ಲೆಮನ್ ಗ್ರಾಸ್ ರಿಂಗ್‌‌ ವರ್ಮ್ ನಿವಾರಣೆ ಮಾಡಲು ನೆರವಾಗುವುದು. ಇದರಲ್ಲಿರುವ ಈ ಗುಣಗಳು ರಿಂಗ್‌‌ ವರ್ಮ್ ಅನ್ನು ತಡೆದು ಅದು ಹರಡದಂತೆ ತಡೆಯುತ್ತದೆ. ಸಮಯ ಕಳೆದಂತೆ ಸೋಂಕು ನಿವಾರಣೆಯಾಗುವುದು. ಬೇಗನೆ ಫಲಿತಾಂಶ ಪಡೆಯಬೇಕಾದರೆ ದಿನದಲ್ಲಿ ಕೆಲವು ಸಲ ಲೆಮನ್ ಗ್ರಾಸ್ ನ ಪೇಸ್ಟ್ ಅನ್ನು ಭಾದಿತ ಜಾಗಕ್ಕೆ ಹಚ್ಚಿಕೊಳ್ಳಿ.

ಶುಂಠಿ

ಶುಂಠಿ

ಶಿಲೀಂಧ್ರ ವಿರೋಧಿ ಗುಣವು ಹೆಚ್ಚಾಗಿರುವಂತಹ ಶುಂಠಿಯು ರಿಂಗ್‌‌ ವರ್ಮ್‌ನ ಸೋಂಕು ನಿವಾರಣೆ ಮಾಡುವಲ್ಲಿ ತುಂಬಾ ಸುರಕ್ಷಿತವಾಗಿರುವ ಮನೆಮದ್ದಾಗಿದೆ. ಶುಂಠಿಯ ಪೇಸ್ಟ್ ಅನ್ನು ಬಳಸಿಕೊಳ್ಳುತ್ತಾ ಇದ್ದರೆ ಶಿಲೀಂಧ್ರದ ಸೋಂಕು ಕಡಿಮೆಯಾಗುವುದು. ಶುಂಠಿಯನ್ನು ಹಾಗೆ ಜಗಿದು ತಿನ್ನಬಹುದು ಅಥವಾ ಚಹಾದೊಂದಿಗೆ ಮಿಶ್ರಣ ಮಾಡಿಕೊಂಡು ತಿನ್ನಬಹುದು ಅಥವಾ ದಿನದಲ್ಲಿ 2-3 ಸಲ ಶುಂಠಿ ಪೇಸ್ಟ್ ನ್ನು ಭಾದಿತ ಜಾಗಕ್ಕೆ ಬಳಸಿ ಸೋಂಕು ನಿವಾರಣೆ ಮಾಡಬಹುದು.

ತುಳಸಿ

ತುಳಸಿ

ತುಳಸಿಯಲ್ಲಿ ಇರುವಂತಹ ಔಷಧೀಯ ಗುಣಗಳ ಬಗ್ಗೆ ಈಗಾಗಲೇ ಹಲವಾರು ಸಂಶೋಧನೆಗಳಿಂದ ತಿಳಿದುಬಂದಿದೆ. ತುಳಸಿಯಲ್ಲಿ ಇರುವಂತಹ ಹಲವಾರು ರೀತಿಯ ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತುರಿಕಚ್ಚಿಯನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತುಳಸಿ ಎಲೆಗಳನ್ನು ಪೇಸ್ಟ್ ಮಾಡಿ ಭಾದಿತ ಪ್ರದೇಶಕ್ಕೆ 2-3 ಸಲ ಹಚ್ಚಿದರೆ ಸೋಂಕು ನಿವಾರಣೆಯಾಗುವುದು.

ಅರಿಶಿನ

ಅರಿಶಿನ

ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುವ ಅರಿಶಿನವು ತುರಿಕಚ್ಚಿ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅರಿಶಿನವನ್ನು ಸಕ್ಕರೆ ಅಥವಾ ಜೇನುತುಪ್ಪದ ಜತೆ ಮಿಶ್ರಣ ಮಾಡಿಕೊಂಡು ಸೇವಿಸಬಹುದು. ಇದು ಕಷ್ಟವಾದರೆ ಅರಿಶಿನದ ಪೇಸ್ಟ್ ಮಾಡಿಕೊಂಡು ಭಾದಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ. ಎರಡೂ ರೀತಿಯಿಂದ ಇದನ್ನು ಬಳಸಿಕೊಂಡರೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.

ಪಾರ್ಸ್ಲಿ

ಪಾರ್ಸ್ಲಿ

ತುರಿಕಚ್ಚಿಯ ಸೋಂಕನ್ನು ನಿವಾರಣೆ ಮಾಡುವಲ್ಲಿ ಪಾರ್ಸ್ಲಿಯಲ್ಲಿರುವ ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ನೆರವಾಗಲಿದೆ. ಪಾರ್ಸ್ಲಿಯನ್ನು ಪೇಸ್ಟ್ ಮಾಡಿಕೊಂಡು ಅದನ್ನು ಭಾದಿತ ಪ್ರದೇಶಕ್ಕೆ ಹಚ್ಚಿಕೊಳ್ಳಬೇಕು. ಇದನ್ನು ಖಾದ್ಯಗಳಲ್ಲಿ ಬಳಕೆ ಮಾಡುವುದರಿಂದ ಅದರ ರುಚಿ ಹೆಚ್ಚಾಗುವುದು ಮತ್ತು ತುರಿಕಚ್ಚಿಯನ್ನು ನಿವಾರಣೆ ಮಾಡುವುದು. ತುರಿಕಚ್ಚಿಯು ತುಂಬಾ ಕಿರಿಕಿರಿ ಉಂಟು ಮಾಡುವಂತಹ ಸೋಂಕು ಆಗಿರುವ ಕಾರಣದಿಂದ ಇದರ ಬಗ್ಗೆ ನಿರ್ಲಕ್ಷ್ಯ ತೆಗೆದುಕೊಳ್ಳಬೇಡಿ. ಮೇಲೆ ಸೂಚಿಸಿರುವಂತಹ ಮನೆಮದ್ದನ್ನು ಪ್ರಯೋಗಿಸಿ ನೋಡಿ ತುಂಬಾ ಸಮಸ್ಯೆ ಉಂಟು ಮಾಡುವ ತುರಿಕಚ್ಚಿಯ ಸೋಂಕನ್ನು ಇದು ನಿವಾರಿಸುವುದು. ಸೋಂಕನ್ನು ನಿವಾರಣೆ ಮಾಡುವುದು ಮಾತ್ರವಲ್ಲದೆ ಒಳ್ಳೆಯ ಹಾಗೂ ಆರೋಗ್ಯಕರ ಚರ್ಮವು ನಿಮ್ಮದಾಗುವುದು.

English summary

Natural Remedies To Get Rid Of Ringworms During Monsoon

Ringworm infection is a common skin infection that is predominant during the monsoons. A number of different fungi species are the culprits behind this infection, and it can be quite distressful to a person. but there are natural remedies that one may use to get rid of this contagious infection. Here is a list of a few natural remedies that you can resort to at the comfort of your home. Take a look.
Story first published: Tuesday, July 4, 2017, 8:31 [IST]
Subscribe Newsletter