For Quick Alerts
ALLOW NOTIFICATIONS  
For Daily Alerts

ಏನಿದು ಕರುಳಿನ ಉರಿಯೂತ ಸಮಸ್ಯೆ? ಇದಕ್ಕೆ ಆಹಾರ-ಪಥ್ಯ ಹೇಗಿರಬೇಕು?

By Arshad
|

ಸಾಮಾನ್ಯವಾಗಿ ಕರುಳಿನ ಉರಿಗೆ ವಿಶೇಷವಾಗಿ ದೊಡ್ಡಕರುಳು ಹಾಗೂ ಗುದನಾಳದ ಒಳಭಾಗದಲ್ಲಿ ಉಂಟಾಗಿರುವ ಉರಿಯೂತವೇ ಕಾರಣವಾಗಿದೆ. ಈ ಭಾಗ ನಮ್ಮ ಜೀರ್ಣಾಂಗ ವ್ಯವಸ್ಥೆಯ ಕೊನೆಯ ಹಂತವಾಗಿದ್ದು ಈ ಭಾಗದಲ್ಲಿ ಆಹಾರದಿಂದ ನೀರನ್ನು ಹೀರಿಕೊಂಡು ತ್ಯಾಜ್ಯಗಳನ್ನು ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗುವಂತೆ ಒಳಭಾಗದ ಪದರದಲ್ಲಿ ಲೋಳೆಯಂತಹ ದ್ರವ ಅಂಟಿಕೊಂಡಿರುತ್ತದೆ.

ಈ ದ್ರವದ ಉತ್ಪತ್ತಿ ಕಡಿಮೆಯಾದರೆ ಅಥವಾ ಇಲ್ಲದೇ ಹೋದಾಗ ಈ ಚರ್ಮದಲ್ಲಿ ಭಾರೀ ಉರಿ ಕಾಣಿಸಿಕೊಳ್ಳುತ್ತದೆ. ಪರಿಣಾಮವಾಗಿ ಅತಿಸಾರ ಹಾಗೂ ನೋವು ಸಹಾ ಕಾಣಿಸಿಕೊಳ್ಳುತ್ತದೆ. ಈ ತೊಂದರೆ ವಿರಳವಾಗಿ ಕಂಡುಬಂದರೂ ಹೆಚ್ಚಿನವರಲ್ಲಿ ಇದು ಭಾರೀ ಎನ್ನುವಷ್ಟು ತೊಂದರೆ ಉಂಟುಮಾಡುವುದಿಲ್ಲ. ಆದರೆ ಕೆಲವರಿಗೆ ಮಾತ್ರ ಇದು ತುಂಬಾ ಹೆಚ್ಚಾಗಿದ್ದು ಪದೇ ಪದೇ ಮರುಕಳಿಸುವಂತಿರುವುದರಿಂದ ವೈದ್ಯರ ಸಲಹೆ ಪಡೆಯಲೇಬೇಕಾಗುತ್ತದೆ.

ಹಳ್ಳಿ ಮದ್ದು- ಹೊಟ್ಟೆಯ ಕಲ್ಮಶ ಹೊರಹಾಕಲು ನೈಸರ್ಗಿಕ ಟಿಪ್ಸ್

ಅಚ್ಚರಿ ಎಂದರೆ ಈ ತೊಂದರೆ ಇರುವ ರೋಗಿಗಳಲ್ಲಿ 60%ರಷ್ಟು ವ್ಯಕ್ತಿಗಳು ಮಹಿಳೆಯರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ನಲವತ್ತಕ್ಕಿಂತ ಕಡಿಮೆ ವಯಸ್ಸಿನವರು. ಈ ತೊಂದರೆಗೆ ಕೆಲವು ಸುಲಭ ಮನೆಮದ್ದುಗಳಿದ್ದು ಯಾವುದೇ ಅಡ್ಡಪರಿಣಾಮವಿಲ್ಲದ ಕಾರಣ ಸುಲಭವಾಗಿ ಪ್ರಯತ್ನಿಸಬಹುದಾಗಿದೆ. ತಡಮಾಡದೇ ಅನುಸರಿಸುವ ಮೂಲಕ ಇದರಿಂದ ಎದುರಾಗಬಹುದಾದ ಇತರ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು...

ನೈಸರ್ಗಿಕ ಮೊಸರು

ನೈಸರ್ಗಿಕ ಮೊಸರು

ಕರುಳಿನ ಉರಿಯನ್ನು ನಿವಾರಿಸಲು ಮೊಸರು ನಿಸರ್ಗ ನೀಡಿದ ಅತ್ಯುತ್ತಮ ಪರಿಹಾರಗಳಲ್ಲೊಂದಾಗಿದೆ. ಮೊಸರಿನಲ್ಲಿರುವ ಜೀರ್ಣಕ್ರಿಯೆಗೆ ಸಹಕರಿಸುವ ಸ್ನೇಹಿ ಬ್ಯಾಕ್ಟೀರಿಯಾಗಳು ಕರುಳಿನ ಒಳಗೆ ಪಿಎಚ್ ಮಟ್ಟವನ್ನು ಸಾಮಾನ್ಯ ಮಟ್ಟದಲ್ಲಿರಿಸಲು ನೆರವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಜೀರ್ಣಾಂಗಗಳಲ್ಲಿ ಲ್ಯಾಕ್ಟಿಕ್ ಆಮ್ಲವನ್ನು ಉತ್ಪತ್ತಿ ಮಾಡಿ ಜಠರ ಕರುಳುಗಳಿಂದ ವಿಷಕಾರಿ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತವೆ.

ಇದರ ಬಳಕೆ ಹೇಗೆ?

ಇದರ ಬಳಕೆ ಹೇಗೆ?

ಪ್ರತಿದಿನವೂ ಒಂದು ಕಪ್ ಮೊಸರನ್ನು ತಪ್ಪದೇ ಸೇವಿಸಿ. ನಿಮ್ಮ ನಿತ್ಯದ ಆಹಾರಗಳಲ್ಲಿ ಹಣ್ಣುಗಳು, ಹಸಿ ತರಕಾರಿಗಳು ಹಾಗೂ ಇವುಗಳಿಂದ ತಯರಿಸಿದ ಸಾಲಾಡ್ ಹಾಗೂ ಸ್ಮೂಥಿಗಳಲ್ಲಿ ಮೊಸರನ್ನು ಬೆರೆಸಿ ಸೇವಿಸಿ.

ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ಆಲೂಗಡ್ಡೆಯ ರಸ

ಆಲೂಗಡ್ಡೆಯ ರಸ

ಆಲೂಗಡ್ಡೆ ಕ್ಷಾರೀಯವಾಗಿದ್ದು ಕರುಳಿನ ಉರಿಗೆ ಕಾರಣವಾಗುವ ಆಮ್ಲೀಯತೆಯನ್ನು ನಿಷ್ಕ್ರಿಯಗೊಳಿಸುವ ಕ್ಷಮತೆ ಹೊಂದಿದೆ. ವಿಶೇಷವಾಗಿ ಅತಿಸಾರ ಹಾಗೂ ಕರುಳಿನ ಹುಣ್ಣು ಆಗಿದ್ದಾಗ (ulcerous colitis) ಈ ರಸ ಅತ್ಯುತ್ತಮ ಪರಿಹಾರ ಒದಗಿಸುತ್ತದೆ.

ಇದರ ಬಳಕೆ ಹೇಗೆ?

ಇದರ ಬಳಕೆ ಹೇಗೆ?

ಒಂದು ಹಸಿ ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದು ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸವನ್ನು ನೇರವಾಗಿ ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ.

ಅಕ್ಕಿಯ ನೀರು

ಅಕ್ಕಿಯ ನೀರು

ಎರಡು ದೊಡ್ಡ ಚಮಚ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಬೇಯಿಸಿ. ಅಕ್ಕಿ ಪೂರ್ಣವಾಗಿ ಬೆಂದ ಬಳಿಕ ಉರಿಯನ್ನು ಆರಿಸಿ ನೀರು ಹಾಗೇ ತಣಿಯಲು ಬಿಡಿ. ಈ ನೀರು ನೀವು ಕುಡಿಯಲು ಸಾಧ್ಯವಾಗುವಷ್ಟು ತಣಿದ ಬಳಿಕ ಇದನ್ನು ಸೋಸಿ ನೀರನ್ನು ಸಂಗ್ರಹಿಸಿ. ಈ ನೀರನ್ನು ದಿನಕ್ಕೆ ಒಂದರಿಂದ ಎರಡು ಲೋಟದಷ್ಟು ಕುಡಿಯಿರಿ.

ಅಕ್ಕಿ ತೊಳೆದ ನೀರಿನ ಆಶ್ಚರ್ಯಕರ ಸಂಗತಿ

ಕ್ಯಾರೆಟ್

ಕ್ಯಾರೆಟ್

ಇದರ ಬಳಕೆ ಹೇಗೆ? ನಿಮ್ಮ ಮನೆಯಲ್ಲಿ ಜ್ಯೂಸರ್ ಇದ್ದರೆ ಒಂದೆರಡು ಕ್ಯಾರೆಟ್ ಗಳನ್ನು ತುರಿದು ಹಿಂಡಿ ರಸ ಸಂಗ್ರಹಿಸಿ. ಪರ್ಯಾಯವಾಗಿ ಎರಡು ಕ್ಯಾರೆಟ್ಟುಗಳನ್ನು ನೀರಿನಲ್ಲಿ ಉಪ್ಪಿಲ್ಲದೇ ಕುದಿಸಿ ಮೃದುವಾದ ಬಳಿಕ ಇದನ್ನು ಜಜ್ಜಿ ಪ್ಯೂರಿ ತಯಾರಿಸಿ. ಈ ರಸವನ್ನು ಅಥವಾ ಪ್ಯೂರಿಯನ್ನು ದಿನಕ್ಕೊಂದು ಬಾರಿ ಸೇವಿಸಿ. ಉರಿಯೂತ ಪೂರ್ಣವಾಗಿ ಗುಣವಾಗುವವರೆಗೆ ಇದರ ಸೇವನೆಯನ್ನು ಮುಂದುವರೆಸಿ.

ಬಾಳೆಹಣ್ಣು

ಬಾಳೆಹಣ್ಣು

ಇದರ ಬಳಕೆ ಹೇಗೆ?

ಒಂದು ಚೆನ್ನಾಗಿ ಕಳಿತ ಬಾಳೆಹಣ್ಣು ಹಾಗೂ ಒಂದು ದೊಡ್ಡಚಮಚ ಜೇನು ಬೆರೆಸಿ ದಿನಕ್ಕೊಂದು ಬಾರಿ ಸೇವಿಸಿ. ಪರ್ಯಾಯವಾಗಿ ಬಾಳೆಹಣ್ಣನ್ನು ಕೊಂಚಕೊಂಚವಾಗಿ ಇಡಿಯ ದಿನ ತಿನ್ನುತ್ತಿರಿ ಹಾಗೂ ಬಾಳೆಹಣ್ಣು ಸೇರಿಸಿ ತಯಾರಿಸಿದ ಸ್ಮೂಥಿಗಳನ್ನು ಕುಡಿಯಿರಿ.

English summary

Natural And Homemade Colitis Remedies

They’re fibrous and have anti-inflammatory compounds which help to alleviate pain and avoid the feeling of weakness. Learn more in this article! Colitis is an illness caused by inflammation of the large intestine and the rectum This area, the lowest part of the intestine, presents changes in the mucous that coats it. In turn, this generates a chain of negative reactions that include intense pain and diarrhea. Although colitis tends to be sporadic and subtle, many people have to seek medical help because it is chronic and recurring.
Story first published: Saturday, June 17, 2017, 23:46 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X