ಬೆನ್ನುನೋವು ಗುಣಪಡಿಸುವ 'ನೈಸರ್ಗಿಕ ತೈಲ'-ಶೀಘ್ರ ಪರಿಹಾರ

By: Arshad
Subscribe to Boldsky

ಬೆನ್ನುನೋವು ಎಂದು ಗೊತ್ತಿದ್ದೂ ಎಚ್ಚರಿಕೆ ವಹಿಸದೇ ಇದ್ದರೆ ಇದು ಪ್ರಾಣವನ್ನೇ ಹಿಂಡುವಂತಹ ನೋವಾಗಿ ಕಾಡಬಹುದು. ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೆ ಬೆನ್ನುನೋವು ಒಂದಲ್ಲಾ ಒಂದು ರೀತಿಯಲ್ಲಿ ಕಾಡುತ್ತಲೇ ಇರುತ್ತದೆ. ಅತಿಹೆಚ್ಚು ಬೆನ್ನು ಬಾಗಿಸುವ ಅಥವಾ ಕೊಂಚವೇ ಬಾಗಿಸದೇ ಇರುವ ಯಾವುದೇ ಕೆಲಸಗಳಿಂದಲೂ ಬೆನ್ನುನೋವು ಕಾಡಬಹುದು. ಬೆನ್ನುನೋವಿಗೆ ಇನ್ನೂ ಕೆಲವಾರು ಕಾರಣಗಳಿವೆ.

ಬೆನ್ನುಮೂಳೆಯ ನಟ್ಟ ನಡುವೆ ಹಾದುಹೋಗಿರುವ ಬೆನ್ನುಹುರಿ ಕೊಂಚ ಸ್ಥಳಾಂತರಗೊಂಡಿರುವುದು, ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ನಿಂತುಕೊಳ್ಳುವುದು ಸಹಾ ಬೆನ್ನುನೋವಿಗೆ ಕಾರಣವಾಗಬಲ್ಲವು. ಸಾಮಾನ್ಯವಾಗಿ ನಡುವಯಸ್ಸು ದಾಟಿದ ಬಳಿಕ ಬೆನ್ನುನೋವು ಕಾಣಿಸಿಕೊಳ್ಳುವುದು ಸಾಮಾನ್ಯ.  

ಬೆನ್ನುನೋವಿನ ನಿವಾರಣೆಗೆ ಐದು ಟಿಪ್ಸ್

ಆದರೆ ಇಂದಿನ ದಿನಗಳಲ್ಲಿ ಯುವಕರೂ ಬೆನ್ನುನೋವು ಎಂಬ ದೂರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡತೊಡಗಿದ್ದಾರೆ. ಬೆನ್ನುನೋವು ಎಂದು ನೋವು ನಿವಾರಕಗಳನ್ನು ನುಂಗುವುದು ಉತ್ತಮ ಆಯ್ಕೆಯಲ್ಲ. ಏಕೆಂದರೆ ಬೆನ್ನುನೋವಿನ ಸಂಕೇತಗಳನ್ನು ಮೆದುಳಿಗೆ ತಲುಪಿಸದಿರುವ ಕೆಲಸವನ್ನು ಮಾತ್ರವೇ ಇವು ಮಾಡುತ್ತವೆಯೇ ಹೊರತು ನೋವು ಕಡಿಮೆ ಮಾಡುವುದಿಲ್ಲ.

ಬೆನ್ನು ನೋವಿಗೆ ಮನೆ ಔಷಧ- ಒಮ್ಮೆ ಪ್ರಯತ್ನಿಸಿ ನೋಡಿ

ಆದ್ದರಿಂದ ಬೆನ್ನುನೋವಿನ ಚಿಕಿತ್ಸೆಗೆ ನೈಸರ್ಗಿಕ ವಿಧಾನಗಳೇ ಸೂಕ್ತ. ಅದರಲ್ಲೂ ಅವಶ್ಯಕ ಎಣ್ಣೆಗಳು ನೋವಿಗೆ ಉತ್ತಮ ಶಮನ ನೀಡುವ ಹಾಗೂ ಉರಿಯುಂಟು ಮಾಡದೇ ಇರುವ ಮೂಲಕ ಮತ್ತೊಮ್ಮೆ ಉತ್ತಮ ಆರೋಗ್ಯ ಪಡೆಯಲು ನೆರವಾಗುತ್ತವೆ. ಬೆನ್ನು ನೋವನ್ನು ಶೀಘ್ರವೇ ಇಲ್ಲವಾಗಿಸುವ ಕೆಲವು ಅವಶ್ಯಕ ತೈಲಗಳನ್ನು ಇಂದು ವಿವರಿಸಲಾಗಿದೆ....

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ಈ ಎಣ್ಣೆಯಲ್ಲಿರುವ ಉರಿಯೂತ ನಿವಾರಕ ಹಾಗೂ ನೋವು ನಿವಾರಕ ಗುಣ ಬೆನ್ನುನೋವನ್ನು ಗುಣಪಡಿಸಲು ಉತ್ತಮ ಆಯ್ಕೆಯಾಗಿಸಿವೆ. ಈ ಎಣ್ಣೆಯನ್ನು ನೋವು ನಿವಾರಕವಾಗಿ ಬಳಸುವ ನಿಟ್ಟಿನಲ್ಲಿ ಕೆಲವಾರು ಪರೀಕ್ಷೆಗಳನ್ನು ನಡೆಸಲಾಗಿದ್ದು ವಿಶೇಷವಾಗಿ ಕೆಲವು ನಿರ್ದಿಷ್ಟ ಬಿಂದುಗಳಿಗೆ ಒತ್ತಡ ನೀಡುವ ಆಕ್ಯುಪ್ರೆಷರ್ ಚಿಕಿತ್ಸಾ ವಿಧಾನದೊಂದಿಗೆ ಬಳಸಿದಾಗ ಕೆಳಬೆನ್ನಿನ ನೋವು 39ಶೇಖಡಾ ಕಡಿಮೆಯಾಗಿರುವುದು ಕಂಡುಬಂದಿದೆ.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ಅಲ್ಲದೇ ಬೆನ್ನುನೋವಿನ ಕಾರಣದಿಂದ ನಡಿಗೆಯೂ ಅಸಾಧ್ಯವೆನಿಸುವಂತಿರುವ ಸ್ಥಿತಿಯಲ್ಲಿ ಈ ಎಣ್ಣೆಯನ್ನು ಬಳಸಿದಾಗ ಸರಾಗವಾಗಿ ನಡೆಯುವಷ್ಟು ಗುಣಪಡಿಸಿರುವುದೂ ಕಂಡುಬಂದಿದೆ. ಈ ಎಣ್ಣೆ ಹಿತವೆನಿಸುವ ಪರಿಮಳವನ್ನೂ ಹೊಂದಿರುವ ಮೂಲಕ ಎಣ್ಣೆ ಹಚ್ಚಿದ ಬಳಿಕ ಸುವಾಸನೆ ಮನಸ್ಸಿಗೆ ಮುದ ನೀಡುವ ಮೂಲಕವೂ ಮೆದುಳಿನಿಂದ ರಕ್ತದಲ್ಲಿ ಕೆಲವು ರಸದೂತಗಳು ಸ್ರವಿಸಿ ಬೆನ್ನುನೋವು ಇನ್ನಷ್ಟು ಬೇಗನೇ ಗುಣವಾಗಲು ನೆರವಾಗುತ್ತದೆ. ಇದೇ ಕಾರಣಕ್ಕೆ ಅರೋಮಾಥೆರಪಿ ಎಂಬ ಚಿಕಿತ್ಸಾ ವಿಧಾನದಲ್ಲಿಯೂ ಲ್ಯಾವೆಂಡರ್ ಎಣ್ಣೆಯನ್ನು ಆಯ್ಕೆ ಮಾಡಲಾಗುತ್ತದೆ. ನೋವಿರುವ ಭಾಗದ ಚರ್ಮಕ್ಕೆ ಈ ಎಣ್ಣೆಯ ಮಸಾಜ್ ಮೂಲಕ ರಕ್ತಪರಿಚಲನೆ ಹೆಚ್ಚುತ್ತದೆ. ಅಲ್ಲದೇ ನೋವು ಹೆಚ್ಚಲು ಕಾರಣವಾಗುವ ಉರಿಯೂತವನ್ನೂ ನಿವಾರಿಸುವ ಮೂಲಕ ನೋವಿನ ಮೂಲವನ್ನು ಚಿವುಟುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

ನಿಮ್ಮ ನಿತ್ಯದ ಸ್ನಾನದ ನೀರಿಗೆ ಕೆಲವು ಹನಿಗಳಷ್ಟು ಲ್ಯಾವೆಂಡರ್ ಎಣ್ಣೆಯನ್ನು ಬೆರೆಸಿ ಈ ನೀರಿನಲ್ಲಿ ಸ್ನಾನ ಮಾಡುವ ಮೂಲಕ ಸ್ನಾಯುಗಳು ಸಡಿಲಗೊಂಡು ನೋವು ನಿವಾರಣೆಯಾಗಲು ನೆರವಾಗುತ್ತದೆ. ಅಲ್ಲದೇ ನೋವಿರುವ ಭಾಗದ ಮೇಲೆ ನಯವಾಗಿ ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಬೇಕು. ಇದರ ಮೇಲೆ ಕೊಂಚ ಮಂಜುಗಡ್ಡೆಯ ಶೀತಲ ಅಥವಾ ಬಿಸಿನೀರು ತುಂಬಿದ ರಬ್ಬರ್ ಚೀಲದ ಶಾಖ ನೀಡುವ ಮೂಲಕ ನೋವನ್ನು ಕಡಿಮೆಯಾಗಿಸಬಹುದು.

ಕ್ಯಾಮೋಮೈಲ್ ಎಣ್ಣೆ

ಕ್ಯಾಮೋಮೈಲ್ ಎಣ್ಣೆ

ಈ ಎಣ್ಣೆ ಉತ್ತಮ ಉರಿಯೂತ ನಿವಾರಕವಾಗಿದ್ದು ನೋವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿಶೇಷವಾಗಿ ಬೆನ್ನು ನೋವನ್ನು ಕಡಿಮೆ ಮಾಡಲು ಈ ಎಣ್ಣೆ ಉತ್ತಮ ಆಯ್ಕೆಯಾಗಿದೆ. ವಿಶೇಷವಾಗಿ ಅನೈಚ್ಛಿಕ ಸ್ನಾಯುಗಳ ಸೆಡೆತವನ್ನು ಕಡಿಮೆಗೊಳಿಸುವ (antispasmodic) ಗುಣ ಬೆನ್ನುನೋವಿಗೆ ಕಾರಣವಾದ ಸ್ನಾಯುಸೆಡೆತವನ್ನು ಸಡಿಲಗೊಳಿಸಿ ಬೆನ್ನುನೋವು ಕಡಿಮೆಗೊಳಿಸಲು ನೆರವಾಗುತ್ತದೆ.

ಬಳಕೆಯ ವಿಧಾನ:

ಬೆನ್ನು ನೋವು ಇರುವ ಭಾಗದ ಮೇಲೆ ಕೆಲವು ತೊಟ್ಟು ಕ್ಯಾಮೋಮೈಲ್ ಎಣ್ಣೆಯನ್ನು ಹಚ್ಚಿ ನಯವಾದ ಮಸಾಜ್ ನೊಂದಿಗೆ ಹಚ್ಚಿಕೊಳ್ಳಬೇಕು. ತಾವೇ ಹಚ್ಚಿಕೊಳ್ಳುವ ಬದಲು ಇನ್ನೊಬ್ಬರ ನೆರವು ಪಡೆದುಕೊಳ್ಳುವುದು ಉತ್ತಮ.

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆ

ಈ ಎಣ್ಣೆಯ ಮುದಗೊಳಿಸುವ ಹಾಗೂ ಪೆಡಸನ್ನು ಕಡಿಮೆಗೊಳಿಸುವ ಗುಣದಿಂದ ನೈಸರ್ಗಿಕ ನೋವು ನಿವಾರಕ ಎಂಬ ಪಟ್ಟ ಪಡೆದಿದೆ. ಅಲ್ಲದೇ ಇದರ ಉರಿಯೂತ ನಿವಾರಕ ಗುಣ ಹಾಗೂ ಶಮನಪಡಿಸುವ ಗುಣ ಬೆನ್ನುನೋವನ್ನು ಬಹಳಷ್ಟು ಮಟ್ಟಿಗೆ ಶೀಘ್ರವೇ ಕಡಿಮೆಗೊಳಿಸುತ್ತದೆ.

ಬಳಕೆಯ ವಿಧಾನ: ಸುಮಾರು ಇಪ್ಪತ್ತು ತೊಟ್ಟುಗಳಷ್ಟು ಎಣ್ಣೆಯನ್ನು ನೋವಿರುವ ಭಾಗದ ಮೇಲೆ ಹಚ್ಚಿ ನಯವಾಗಿ ಮಸಾಜ್ ಮಾಡಬೇಕು. ಮೊದಲ ಬಾರಿ ಈ ಎಣ್ಣೆಯನ್ನು ಹಚ್ಚಿದಾದ ಕೊಂಚ ಉರಿಯಾದ ಅನುಭವವಾಗಬಹುದು. ಇದರ ಉರಿಯೂತ ನಿವಾರಕ ಗುಣ ಪ್ರಬಲವಾಗಿರುವ ಕಾರಣ ಕೊಂಚ ತುರಿಕೆಯೂ ಎದುರಾಗಬಹುದು. ಆದರೆ ಕೆಲವೇ ದಿನಗಳಲ್ಲಿ ದೇಹ ಈ ಗುಣಗಳಿಗೆ ಹೊಂದಿಕೊಳ್ಳುತ್ತದೆ ಹಾಗೂ ಶೀಘ್ರವೇ ನೋವು ಕಡಿಮೆಯಾಗುತ್ತದೆ. ಉತ್ತಮ ಪರಿಣಾಮಕ್ಕೆ ದಿನಕ್ಕೆ ಎರಡು ಬಾರಿ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡಬೇಕು.

ತುಳಸಿ ಎಣ್ಣೆ

ತುಳಸಿ ಎಣ್ಣೆ

ನೋವು ನಿವಾರಕವಾಗಿ ಈ ಎಣ್ಣೆಯನ್ನು ಸಾವಿರಾರು ವರ್ಷಗಳಿಂದ ಭಾರತದಲ್ಲಿ ಬಳಸಲಾಗುತ್ತಾ ಬರಲಾಗಿದೆ. ವಿಶೇಷವಾಗಿ ಪೆಡಸಾಗಿದ್ದ ಸ್ನಾಯುಗಳು ಸಡಿಲಗೊಂಡು ಆರಾಮ ದೊರಕುತ್ತದೆ. ಒಂದು ವೇಳೆ ಸ್ನಾಯುಗಳ ಪೆಡಸಾಗುವುದರಿಂದ ಬೆನ್ನುನೋವು ಉಂಟಾಗಿದ್ದರೆ ತುಳಸಿ ಎಣ್ಣೆ ಉತ್ತಮ ಆಯ್ಕೆಯಾಗಿದೆ.

ಬಳಕೆಯ ವಿಧಾನ: ಒಂದು ಸ್ವಚ್ಛವಾದ ಬಟ್ಟೆಯನ್ನು ಕೊಂಚವೇ ಬಿಸಿಯಾಗಿಸಿ ಕೆಲವು ತೊಟ್ಟು ತುಳಸಿ ಎಣ್ಣೆಯನ್ನು ಚಿಮುಕಿಸಿ ಈ ಭಾಗವನ್ನು ನೋವಿರುವ ಭಾಗದ ಮೇಲೆ ಒತ್ತಿಕೊಳ್ಳಬೇಕು. ಇನ್ನೂ ಉತ್ತಮವೆಂದರೆ ಬಿಸಿನೀರಿನ ಶಾಖ ನೀಡುವ ರಬ್ಬರಿನ ಚೀಲದ ಪಾರ್ಶ್ವದ ಮೇಲೆ ತುಳಸಿ ಎಣ್ಣೆಯನ್ನು ಚಿಮುಕಿಸಿಯೂ ಬಳಸಬಹುದು. ಇದರಿಂದ ಬೆನ್ನುನೋವು ತಕ್ಷಣವೇ ಕಡಿಮೆಯಾಗುತ್ತದೆ.

ಪುದೀನಾ ಎಣ್ಣೆ

ಪುದೀನಾ ಎಣ್ಣೆ

ಈ ಎಣ್ಣೆಯಲ್ಲಿಯೂ ಉರಿಯೂತ ನಿವಾರಕ ಹಾಗೂ ಶಮನಕಾರಿ ಗುಣಗಳಿವೆ. ಅಲ್ಲದೇ ಪೆಡಸಾದ ಸ್ನಾಯುಗಳನ್ನು ಸಡಿಲಗೊಳಿಸುವ ಮೂಲಕ ಹಾಗೂ ಮುದಗೊಳಿಸುವ ಪರಿಮಳದಿಂದ ಬೆನ್ನುನೋವನ್ನು ತಕ್ಷಣವೇ ಕಡಿಮೆಗೊಳಿಸುತ್ತದೆ.

ಬಳಕೆಯ ವಿಧಾನ:

ಈ ಎಣ್ಣೆ ಪ್ರಬಲವಾಗಿರುವ ಕಾರಣ ನೇರವಾಗಿ ಹಚ್ಚಬಾರದು, ಬದಲಿಗೆ ಕೊಂಚ ನೀರಿನೊಂದಿಗೆ ಬೆರೆಸಿ ಬಳಸಬೇಕು. ಇಡಿಯ ದಿನ ನೋವಿಲ್ಲದೇ ಇರಲು ನೀರು ಬೆರೆಸಿದ ಕೆಲವೇ ತೊಟ್ಟುಗಳು ಸಾಕು. ಈ ಎಣ್ಣೆಯನ್ನು ಹಚ್ಚಿದ ಚರ್ಮದ ಭಾಗದಲ್ಲಿ ರಕ್ತಪರಿಚಲನೆ ಹೆಚ್ಚುವ ಮೂಲಕ ಉರಿಯೂತದಿಂದ ಎದುರಾಗಿದ್ದ ಬೆನ್ನುನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

English summary

Natural Essential Oils For Back Pain

Back pain can be a nagging issue if left unchecked. Being a common, irritating factor which can greatly inhibit our work process, it is a problem which is often overlooked. There are several causes for back pain. It might be because of the misalignment of the spine or because of improper posture while sitting or standing.Generally, back pain used to be common among the elderly. However, today, the problem is commonly affecting young adults.
Subscribe Newsletter