Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ವೈದ್ಯರೇ ನಿದ್ರೆ ಮಾಡದಿದ್ದರೆ? ಅವರ ಆರೋಗ್ಯದ ಗತಿಯೇನು?
ದಣಿದಿರುವ ದೇಹವು ರಾತ್ರಿ ಸಮಯದಲ್ಲಿ ಬಯಸುವುದು ನಿದ್ರೆ. ಅಡಚಣೆಯಿಲ್ಲದೆ ಸರಿಯಾದ ನಿದ್ರೆ ಬರುವಂತಹ ವ್ಯಕ್ತಿಯಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ನಿದ್ರಾಹೀನತೆ ಇರುವವರಲ್ಲಿ ಹಲವಾರು ಕಾಯಿಲೆಗಳು ಕಂಡುಬರಬಹುದು. ಹೇಗೆ ಆಹಾರವು ದೇಹಕ್ಕೆ ಅಗತ್ಯವೋ ಅದೇ ರೀತಿ ನಿದ್ರೆ ಕೂಡ ಅನಿವಾರ್ಯ. ದಣಿದಿರುವ ದೇಹವು ಮತ್ತೆ ಪುನಶ್ಚೇತನ ಪಡೆಯಬೇಕೆಂದರೆ ನಿದ್ರೆ ಮುಖ್ಯವಾಗಿರುತ್ತದೆ.
ವೈದ್ಯರು ಕೂಡ ಸರಿಯಾಗಿ ನಿದ್ರೆ ಮಾಡಬೇಕೆಂದು ಸೂಚಿಸುತ್ತಾರೆ. ನಿದ್ರೆ ಸರಿಯಾಗಿ ಆಗದೆ ಇದ್ದರೆ ಹಲವಾರು ಸಮಸ್ಯೆಗಳು ಕಾಡಬಹುದು ಎಂದು ವೈದ್ಯರೇ ಹೇಳುವರು. ಆದರೆ ವೈದ್ಯರೇ ಸರಿಯಾಗಿ ನಿದ್ರೆ ಮಾಡದೆ ಇದ್ದರೆ ಏನಾಗಬಹುದು? ವೈದ್ಯರು ನಿದ್ರಾಹೀನತೆಗೆ ಒಳಗಾದರೆ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ವೈದ್ಯರು ಸರಿಯಾಗಿ ನಿದ್ರೆ ಮಾಡದೆ ಇರುವುದರಿಂದ ಮೆದುಳಿನ ಚಟುವಟಿಕೆ ಕ್ಷೀಣವಾಗಿ ನಿರ್ಧಾರ ತೆಗೆದುಕೊಳ್ಳಲು ಸಮಸ್ಯೆಯಾಗಬಹುದು.
ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ವೈದ್ಯರಿಗೆ ಸರಿಯಾದ ವಿಶ್ರಾಂತಿ ಅತೀ ಅಗತ್ಯವೆಂದು ಇತ್ತೀಚೆಗೆ ಅಧ್ಯಯನವೊಂದು ಹೇಳಿದೆ. ಮುಂದಿನ ಕೆಲವೇ ದಿನಗಳಲ್ಲಿ ವಿಶ್ವ ವೈದ್ಯರ ದಿನಾಚರಣೆ ಬರುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು ನಿದ್ರೆ ಬಿಟ್ಟರೆ ಏನಾಗುತ್ತದೆ ಎನ್ನುವ ಕುತೂಹಲಕಾರಿ ಲೇಖನವನ್ನು ಬೋಲ್ಡ್ ಸ್ಕೈ ನಿಮ್ಮ ಮುಂದಿಡುತ್ತಿದೆ....

ಆಯಾಸ
ನಿದ್ರಾಹೀನತೆಯೊಂದಿಗೆ ಕೆಲಸದ ಅತಿಯಾದ ಒತ್ತಡವು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೆಲಸದ ಸಮಯಕ್ಕೆ ಯಾವುದೇ ಮಿತಿ ಇಲ್ಲದೆ ಇರುವ ಕಾರಣದಿಂದಾಗಿ ಹೆಚ್ಚಿನ ವೈದ್ಯರು ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ನಿಶ್ಯಕ್ತಿ ಕಾಡುತ್ತದೆ. ನಿಶ್ಯಕ್ತಿಯಿಂದ ದೇಹದ ಚಯಾಪಚಾಯ ಕ್ರಿಯೆಯು ನಿಧಾನವಾಗುವುದು ಮತ್ತು ಇತರ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದು.

ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕುಂದುವುದು
ನಿದ್ರೆಯು ಆ ದಿನದ ಆಯಾಸವನ್ನೆಲ್ಲಾ ದೂರಮಾಡಿ ಮರುದಿನಕ್ಕೆ ಮೆದುಳನ್ನು ತಯಾರಿ ಮಾಡುತ್ತದೆ. ಇದರಿಂದ ಕಲಿಯುವ ಮತ್ತು ಸಮಸ್ಯೆ ನಿವಾರಿಸುವ ಸಾಮರ್ಥ್ಯ ಹೆಚ್ಚುವುದು. ನಿದ್ರೆಯ ಕೊರತೆಯು ಮನಸ್ಸನ್ನು ಕೇಂದ್ರೀಕರಿಸುವ ಶಕ್ತಿ ಕಡಿಮೆ ಮಾಡುವುದು. ಇದರಿಂದ ನಿರ್ಧಾರಗಳು ಸರಿಯಾಗಿ ಬರದೇ ಇರಬಹುದು.

ನೆನಪು ಕಡಿಮೆಯಾಗಬಹುದು
ನೆನಪು ಎನ್ನುವುದು ಕಲಿಯುವ, ಸಂಸ್ಕರಣೆ ಮತ್ತು ನೆನಪಿಸಿಕೊಳ್ಳುವುದನ್ನು ಒಳಗೊಂಡಿದೆ. ಈ ಮೂರು ಹಂತದಲ್ಲಿ ನಿದ್ರೆಯ ವೇಳೆ ಸಂಸ್ಕರಣೆಯು ನಡೆಯುತ್ತಾ ಇರುತ್ತೆ. ಘಟನೆಗಳನ್ನು ಸಂಸ್ಕರಣೆ ಮಾಡುವ ಮೆದುಳು ನೆನಪಿನ ಶಕ್ತಿಯನ್ನು ಬಲಗೊಳಿಸುವುದು. ನಿದ್ರೆಯ ಕೊರತೆಯು ಇದರ ಮೇಲೆ ಪರಿಣಾಮ ಬೀರಬಹುದು. ಕಲಿಯುವುದು ಮತ್ತು ಅನುಭವವು ವೈಧ್ಯರಿಗೆ ಅತೀ ಅಗತ್ಯ. ಇದರಿಂದ ವೈದ್ಯರಿಗೆ ಸರಿಯಾದ ನಿದ್ರೆ ಬೇಕೇಬೇಕು.

ಅವಘಡಗಳ ಅಪಾಯ
ನಿದ್ರೆಯು ದೇಹ ಹಾಗೂ ಮೆದುಳಿನ ನಡುವೆ ಸರಿಯಾದ ಸಂಯೋಜನೆಯನ್ನು ಉಂಟು ಮಾಡುತ್ತದೆ. ಮೆದುಳು ಸಂದೇಶಗಳನ್ನು ಬೇಗನೆ ಹಾಗೂ ಕ್ಷಿಪ್ರವಾಗಿ ಪಡೆಯುವಂತೆ ನಿದ್ರೆಯು ತಯಾರುಗೊಳಿಸುತ್ತದೆ. ನಿದ್ರಾ ಹೀನತೆಗೆ ಒಳಗಾಗಿರುವ ವ್ಯಕ್ತಿಯ ಮನಸ್ಥಿತಿಯು ಕುಡಿದ ವ್ಯಕ್ತಿಯ ಮನಸ್ಥಿತಿಗೆ ಸಮಾನವಾಗಿರುತ್ತದೆ. ರೋಗಿಗಳ ಶಸ್ತ್ರಚಿಕಿತ್ಸೆ ಮುಂತಾದ ವಿಚಾರಗಳು ತುಂಬಾ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ವೈದ್ಯರಿಗೆ ಸರಿಯಾದ ನಿದ್ರೆ ಅತೀ ಅಗತ್ಯ.

ಪ್ರತಿರೋಧಕ ಶಕ್ತಿ ಕುಂದುವುದು
ನಿದ್ರೆಯು ಬೆಳವಣಿಗೆಗೆ ಕಾರಣವಾಗುತ್ತದೆ. ಪ್ರತಿರೋಧಕ ವ್ಯವಸ್ಥೆಗೆ ಶಕ್ತಿ ನೀಡಬಲ್ಲ ಹಾರ್ಮೋನುಗಳನ್ನು ಇದು ಪ್ರಚೋದಿಸುತ್ತದೆ ಮತ್ತು ಹಾನಿಗೊಳಗಾದ ಕೋಶಗಳನ್ನು ಸರಿಪಡಿಸುವುದು. ನಿದ್ರಾಹೀನತೆಯಿಂದಾಗಿ ಟಿ-ಕೋಶದ ಮಟ್ಟವು ಕಡಿಮೆಯಾಗಬಹುದು. ಪ್ರತಿದಿನವೂ ಸೂಕ್ಷ್ಮಾಣುಜೀವಿ ಮತ್ತು ಕೀಟಾಣುಗಳನ್ನು ಎದುರಿಸುವಂತಹ ವೈದ್ಯರಿಗೆ ಒಳ್ಳೆಯ ಪ್ರತಿರೋಧಕ ಶಕ್ತಿ ಬೇಕೇಬೇಕು. ಇದಕ್ಕಾಗಿ ಅವರಿಗೆ ಸರಿಯಾದ ನಿದ್ರೆಯ ಅಗತ್ಯವೂ ಇದೆ.

ಅಧಿಕ ರಕ್ತದೊತ್ತಡ
ನಿದ್ರೆಯು ಹೃದಯ ಮತ್ತು ರಕ್ತದನಾಳಗಳನ್ನು ಸರಿಪಡಿಸುವ ಕೆಲಸ ಮಾಡುತ್ತದೆ. ನಿದ್ರಾಹೀನತೆಯಿಂದಾಗಿ ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಉಂಟಾಗಬಹುದು. ನಿದ್ರೆ ಕಡಿಮೆಯಾದಷ್ಟು ಸಿ-ರಿಆ್ಯಕ್ಟಿವ್ ಪ್ರೋಟೀನ್ ಮಟ್ಟವು ಹೆಚ್ಚಾಗುವುದು. ಇದು ಉರಿಯೂತ ಮತ್ತು ಹೃದಯದ ಕಾಯಿಲೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.



Click it and Unblock the Notifications











