ಸಾಸಿವೆ ಪುಡಿ: ಮಧುಮೇಹ ಸಹಿತ ಆರು ಕಾಯಿಲೆಗಳನ್ನು ಗುಣಪಡಿಸುತ್ತದೆ!

By: Arshad
Subscribe to Boldsky

ನಿಮ್ಮ ಆಹಾರ ಪಟ್ಟಿಯಲ್ಲಿ ಸಾಲಾಡ್ ಅಥವಾ ಸ್ಯಾಂಡ್ವಿಚ್ ಇರಬಹುದಲ್ಲವೇ? ಮುಂದಿನ ಬಾರಿ ಇಂತಹ ಆಹಾರಗಳನ್ನು ಸೇವಿಸುವ ಮುನ್ನ ಕೊಂಚ ಸಾಸಿವೆಯ ಪುಡಿಯನ್ನು ಚಿಮುಕಿಸಿ ಸೇವಿಸಿ. ಇದರ ರುಚಿ ಕೊಂಚ ಒಗರು ಹಾಗೂ ವಾಸನೆ ಕೊಂಚ ಘಾಟು ಎನಿಸಿದರೂ ಇದರ ಆರೋಗ್ಯಕರ ಗುಣಗಳನ್ನು ಅರಿತ ಬಳಿಕ ಇವುಗಳನ್ನು ಬಳಸದೇ ಇರಲು ನಿಮಗೆ ಸಾಧ್ಯವಿಲ್ಲ. ಸಾಸಿವೆ ಕಾಳುಗಳು ಕೆಲವಾರು ಬಣ್ಣಗಳಲ್ಲಿ ಲಭ್ಯವಿವೆ. ಹಳದಿ ಸಾಸಿವೆ (Brassica hirta), ಕಂದು ಸಾಸಿವೆ (Brassica juncea) ಹಾಗೂ ಕಪ್ಪು ಸಾಸಿವೆ(Brassica nigra), ಇವುಗಳಲ್ಲಿ ಯಾವುದಾದರೊಂದನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಕುಟ್ಟಿ ಪುಡಿಮಾಡಿ ಸಂಗ್ರಹಿಸಬೇಕು.

ಈ ಪುಡಿಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಗಂಧಕ, ಮೆಗ್ನೀಶಿಯಂ, ಸತು ಹಾಗೂ ಕ್ಯಾಲ್ಸಿಯಂ ಇದೆ. ಇದರ ಹಿರಿಮೆ ಇರುವುದು ಇದರಲ್ಲಿರುವ ಗ್ಲುಕೋಸಿನೋಲೇಟ್ (glucosinolate) ಎಂಬ ಪೋಷಕಾಂಶದಲ್ಲಿ. ಇದೊಂದು ಅದ್ಭುತ ಫೈಟೋ ನ್ಯೂಟ್ರಿಯೆಂಟ್ ಆಗಿದ್ದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಸಹಕಾರಿಯಾಗಿದೆ. ಅಲ್ಲದೇ ಇದರಲ್ಲಿ ಸಿಸ್ಟೀನ್ ಎಂಬ ಅಮೈನೋ ಆಮ್ಲವಿದ್ದು ಅದ್ಭುತವಾದ ಆಂಟಿ ಆಕ್ಸಿಡೆಂಟು ಗುಣವನ್ನು ಹೊಂದಿದೆ.

ಅಬ್ಬಾ..! ಪುಟ್ಟ ಸಾಸಿವೆಯಲ್ಲೂ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?

ಸಾಸಿವೆಯನ್ನು ನೇಪಾಳ, ಭಾರತ, ಪಾಕಿಸ್ತಾನ, ಕೆನಡಾ, ಉಕ್ರೇನ್ ನಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತದೆ. ವಿಶ್ವದ ಒಟ್ಟು ಇಪ್ಪತ್ತೊಂದಕ್ಕೂ ದೇಶದಲ್ಲಿ ಸಾಸಿವೆ ಬೆಳೆಯುತ್ತಾರೆ. ನಮ್ಮ ಒಗ್ಗರಣೆಯ ಪ್ರಮುಖ ಸಾಮಾಗ್ರಿಯಾದ ಸಾಸಿವೆಯನ್ನು ಕೆಂಪು ಮಾಂಸಕ್ಕೆ ಮಸಾಲೆ ಹಚ್ಚಿಡಲೂ ಬಳಸಲಾಗುತ್ತದೆ. ಇದರ ಗುಣಪಡಿಸುವ ಗುಣವನ್ನು ಮೊದಲು ಗ್ರೀಕರು ಹಾಗೂ ರೋಮನ್ನರು ಕಂಡುಕೊಂಡಿದ್ದು ಪ್ರಾಚೀನ ಸಮಯದಲ್ಲಿಯೇ ಔಷಧಿಯ ರೂಪದಲ್ಲಿ ಬಳಸುತ್ತಿದ್ದರು. ನೋವಿಗೆ ಶಮನಕಾರಕವಾಗಿ, ಅಸ್ತಮಾ ರೋಗಿಗಳಿಗೆ ಉಸಿರಾಟ ಸರಾಗಗೊಳಿಸಲು, ಚರ್ಮದ ತುರಿಕೆ ಹಾಗೂ ಇನ್ನಿತರ ರೋಗಗಳಿಗಾಗಿ ಬಳಸಲಾಗುತ್ತದೆ. ಬನ್ನಿ, ಇದರ ಸದ್ಗುಣಗಳ ಬಗ್ಗೆ ಅರಿಯೋಣ...

 ಉಸಿರಾಟದಲ್ಲಿ ತೊಂದರೆ

ಉಸಿರಾಟದಲ್ಲಿ ತೊಂದರೆ

ಕುಹರ ಅಥವಾ ಸೈನಸ್‌ನಲ್ಲಿ ಸೋಂಕು ಉಂಟಾಗಿದ್ದರೆ ಮೂಗಿನ ಒಳಭಾಗದಲ್ಲಿ ಅಂಟಿಕೊಳ್ಳುವ ಕಫದ ಕಾರಣ ಉಸಿರಾಟ ಕಷ್ಟಕರವಾಗುತ್ತದೆ. ಸಾಸಿವೆ ಪುಡಿಯ ಸೇವನೆಯಿಂದ ಕಟ್ಟಿಕೊಂಡಿದ್ದ ಕಫ ಸಡಿಲವಾಗಿ ನಿವಾರಣೆಯಾಗುತ್ತದೆ. ಆಯುರ್ವೇದದಲ್ಲಿ ಇದು ವಾತ ಮತ್ತು ಕಫವನ್ನು ನಿವಾರಿಸುತ್ತದೆ ಎಂದು ವಿವರಿಸಲಾಗಿದೆ.

ಸೈನಸ್ ಸೋಂಕಿನಿಂದ ಬಳಲುತ್ತಿದ್ದೀರಾ? ಇನ್ನು ಚಿಂತೆ ಬಿಡಿ!

ಸ್ನಾಯುಗಳ ನೋವು

ಸ್ನಾಯುಗಳ ನೋವು

ಒಂದು ವೇಳೆ ಸ್ನಾಯುಗಳಲ್ಲಿ ನೋವು ಉಂಟಾಗಿದ್ದರೆ ಸಾಸಿವೆಯನ್ನು ಅರೆದು ಬಟ್ಟೆಯ ಪಟ್ಟಿಗೆ ಲೇಪಿಸಿ ನೋವಿರುವ ಭಾಗಕ್ಕೆ ಬ್ಯಾಂಡೇಜಿನಂತೆ ಕಟ್ಟಿಕೊಳ್ಳುವ ಮೂಲಕ ನೋವು ಕಡಿಮೆಯಾಗುತ್ತದೆ. ಇದರಲ್ಲಿರುವ allyl isothiocyanate ಎಂಬ ಪೋಷಕಾಂಶ ಬಳಲಿದ ಸ್ನಾಯುಗಳು ಮತ್ತೆ ಬಲಗೊಳ್ಳಲು ನೆರವಾಗುತ್ತದೆ. ಈ ಮೂಲಕ ಸ್ನಾಯು ಸೆಳೆತ ಹಾಗೂ ಸಂಧಿವಾತವನ್ನು ಕಡಿಮೆಗೊಳಿಸುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತದೆ

ಇಲಿಗಳ ಮೇಲೆ ನಡೆಸಿದ ಸಂಶೋಧನೆಗಳಲ್ಲಿ ಕಂಡುಕೊಂಡ ಪ್ರಕಾರ ಸಾಸಿವೆಯ ಸೇವನೆಯಿಂದ ಹೊಟ್ಟೆ, ಕರುಳು, ಗರ್ಭನಾಳ ಹಾಗೂ ಗರ್ಭಕೋಶದ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಇದರಲ್ಲಿರುವ glucosinates ಎಂಬ ಪೋಷಕಾಂಶಗಳು ಕ್ಯಾನ್ಸರ್ ಕಾರಕ ಜೀವಕೋಶಗಳ ಬೆಳವಣಿಗೆಗೆ ಅಡ್ಡಿಯುಂಟುಮಾಡುವ ಮೂಲಕ ಕ್ಯಾನ್ಸರ್ ನ ವಿರುದ್ಧ ರಕ್ಷಣೆ ನೀಡುತ್ತದೆ.

ಹುಳಕಡ್ಡಿಗೆ ಚಿಕಿತ್ಸೆ

ಹುಳಕಡ್ಡಿಗೆ ಚಿಕಿತ್ಸೆ

ಸಾಸಿವೆ ಪುಡಿಯಲ್ಲಿರುವ ಔಷಧೀಯ ಗುಣಗಳು ಹಲವಾರು ಚರ್ಮವ್ಯಾಧಿಗಳನ್ನು ಗುಣಪಡಿಸುತ್ತವೆ. ಕೊಂಚ ಬಿಸಿನೀರಿನಲ್ಲಿ ಸಾಸಿವೆಯನ್ನು ಅರೆದು ಮಾಡಿದ ಲೇಪನವನ್ನು ಹಚ್ಚುವ ಮೂಲಕ ಹುಳಕಡ್ಡಿಯನ್ನು ವಾಸಿಗೊಳಿಸಬಹುದು.

ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿರಿಸುತ್ತದೆ

ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿರಿಸುತ್ತದೆ

ಇದರಲ್ಲಿ ಅಂಟಿ ಆಕ್ಸಿಡೆಂಟು ಗುಣವಿದ್ದು ಇದರ ಮೂಲಕ ಉತ್ಕರ್ಷಣಶೀಲ ಒತ್ತಡ (oxidative stress) ದಿಂದ ಎದುರಾಗುವ ಘಾಸಿಯನ್ನು ತಡೆಯಬಹುದು. ಅಲ್ಲದೇ glycosylated proteins ಹಾಗೂ serum glucose ಪ್ರಮಾಣಗಳನ್ನು ಸಾಸಿವೆ ಕಡಿಮೆಗೊಳಿಸುತ್ತದೆ ಎಂದು ಸಂಶೋಧನೆಗಳಲ್ಲಿ ಕಂಡುಬಂದಿದೆ.

ಗಂಟಲ ಬೇನೆ

ಗಂಟಲ ಬೇನೆ

ಸಾಸಿವೆಯ ಪುಡಿಯನ್ನು ಕುದಿಸಿದ ನೀರಿನಿಂದ ಗಳಗಳ ಮಾಡುವ ಮೂಲಕ ಗಂಟಲ ಬೇನೆ ಇಲ್ಲವಾಗುತ್ತದೆ. ಇದರ ಬೀಜಗಳಲ್ಲಿ ದೇಹಕ್ಕೆ ಬಿಸಿನೀಡುವ ಗುಣವಿದ್ದು ಗಂಟಲ ಒಳಭಾಗದ ಸೋಂಕನ್ನು ನಿವಾರಿಸಲು ನೆರವಾಗುತ್ತದೆ.

ಮುಟ್ಟಿನ ತೊಂದರೆಯನ್ನು ಕಡಿಮೆಗೊಳಿಸುತ್ತದೆ

ಮುಟ್ಟಿನ ತೊಂದರೆಯನ್ನು ಕಡಿಮೆಗೊಳಿಸುತ್ತದೆ

ಒಂದು ಕಪ್ ಸಾಸಿವೆಯಲ್ಲಿ 308 ಮೈಕ್ರೋಗ್ರಾಂ ಮ್ಯಾಂಗನೀಸ್ ಹಾಗೂ 104 ಮಿಲಿಗ್ರಾಂ ಗಂಧಕವಿದೆ. ಗಂಧಕಕ್ಕೆ ಹಾರ್ಮೋನುಗಳನ್ನು ನಿಯಂತ್ರಿಸುವ ಹಾಗೂ ಕಿಣ್ವಗಳ ಚಟುವಟಿಕೆಯನ್ನು ನಿಯಂತ್ರಿಸುವ ಗುಣವಿದೆ. ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ಮೂಳೆಗಳನ್ನು ದೃಢಗೊಳಿಸುತ್ತದೆ ಹಾಗೂ ಜೊಳ್ಳುಮೂಳೆಯಾಗುವ ಸಂಭವವನ್ನು ಕಡಿಮೆಗೊಳಿಸುತ್ತದೆ. ಇವೆಲ್ಲವೂ ಸಾಮಾನ್ಯವಾಗಿ ರಜೋನಿವೃತ್ತಿಯ ಸಮಯದಲ್ಲಿ ಕಾಡುವ ತೊಂದರೆಗಳಾಗಿದ್ದು ಸಾಸಿವೆಯ ನಿಯಮಿತ ಸೇವನೆಯಿಂದ ಈ ತೊಂದರೆಗಳನ್ನು ಸಮರ್ಥವಾಗಿ ಎದುರಿಸಬಹುದು.

English summary

Mustard (Sarson) Powder, A Wonder Spice That Helps Prevent Diabetes & Other Diseases

Mustard powder is grounded dried mustard seeds-yellow (Brassica hirta), brown (Brassica juncea) and black (Brassica nigra). A rich source of nutrients including iron, phosphorous, magnesium, zinc and calcium, its magic also lies in possessing a phytonutrient called glucosinolate. It also contains an amino acid, cysteine, which has anti oxidant properties. Its therapeutic use has been popular among Greeks and Romans since ancient times.
Story first published: Sunday, July 2, 2017, 7:01 [IST]
Subscribe Newsletter