ಸ್ತನದ ಆರೈಕೆ-ಇದು ಪ್ರತಿಯೊಬ್ಬ ಮಹಿಳೆಯೂ ತಿಳಿದಿರಲೇಬೇಕಾದ ಸಂಗತಿಗಳು

By: Jaya
Subscribe to Boldsky

ಬಳುಕುವ ನಾರಿಯು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಾಳೆ. ಸಪೂರ ಮೈಕಟ್ಟನ್ನು ಹೊಂದಿಕೊಂಡು ತಿದ್ದಿ ತೀಡಿದ ಅಂಗ ಸೌಷ್ಠವವನ್ನು ಪಡೆದುಕೊಂಡು ನೀರೆ ನಡೆದಾಡಿಕೊಂಡು ಹೋದರೆ ವಾಹ್ ಎಂಬ ಉದ್ಗಾರ ಎಲ್ಲರ ಬಾಯಲ್ಲೂ ಬರುತ್ತದೆ. ಹಿಂದಿನ ಕಾವ್ಯಗಳಲ್ಲಿ, ಪುರಾಣಗಳಲ್ಲಿ, ಕಲಾರಸಿಕರು ಕವಿಗಳು ಹೆಣ್ಣನ್ನು ವಿಧ ವಿಧವಾಗಿ ಹೊಗಳಿ ಆಕೆಯನ್ನು ಸುಂದರ ಪುಷ್ಟಕ್ಕೆ ಹೋಲಿಸಿದ್ದಾರೆ. ಹಣೆಯಿಂದ ಹಿಡಿದು ಕಾಲಿನ ಬೆರಳಿನವರೆಗೂ ಆಕೆಯ ಮೇಲೆ ಕವಿತೆಗಳನ್ನು ಹೆಣೆದಿದ್ದಾರೆ.

ಅಂಗ ಸೌಷ್ಠವಗಳ ವರ್ಣನೆಯನ್ನು ಸೊಗಸಾಗಿ ಮಾಡಿದ್ದು ಹೀಗೆದ್ದರೆ ಚೆಂದ, ಹೀಗಿದ್ದರೆ ಸೊಗಸು ಎಂಬುದಾಗಿ ಇಂದಿನ ನಾರೀ ಮಣಿಯರಿಗೆ ಕಿವಿ ಮಾತುಗಳನ್ನು ಹೇಳಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ನಾವು ಆಹಾರ ಮತ್ತು ಆರೋಗ್ಯದ ಮೇಲೆ ಆಸಕ್ತಿಯನ್ನು ಕಳೆದುಕೊಂಡು ಬೇಕಾಬಿಟ್ಟಿಯಾಗಿ ಜೀವನ ನಡೆಸುತ್ತಿರುವುದರಿಂದ ಕವಿ ವರ್ಣಿಸಿರುವುದು ಬರಿಯ ಕವಿತೆಗಳಿಗೆ ಮಾತ್ರವೇ ಸೀಮಿತವಾಗಿದೆ. '

ಜೋತಾಡುತ್ತಿರುವ ಸ್ತನ ಸಮಸ್ಯೆಗೆ ಇಲ್ಲಿದೆ ಅದ್ಭುತ ಪರಿಹಾರ

ಆದರೆ ಕೆಲವೊಂದು ಆರೋಗ್ಯಕಾರಿ ಚಟುವಟಿಕೆಗಳನ್ನು ನಿಮ್ಮದಾಗಿಸಿಕೊಂಡಲ್ಲಿ ಹೆಚ್ಚುವರಿ ತೂಕ ಸಮಸ್ಯೆ ಅಂತೆಯೇ ಸುಂದರ ಮೈಮಾಟವನ್ನು ನೀವು ಪಡೆದುಕೊಳ್ಳಬೇಕು ಎಂಬಂತಹ ನಿಮ್ಮ ಆಸೆಗಳನ್ನು ನೆರವೇರಿಸಿಕೊಳ್ಳಬಹುದಾಗಿದೆ. ಮಹಿಳೆಯರ ದೇಹದ ಭಾಗದಲ್ಲಿ ಸ್ತನ ಭಾಗಕ್ಕೆ ಹೆಚ್ಚಿನ ಮಹತ್ವವಿದೆ. ಸೌಂದರ್ಯದ ಪ್ರಮುಖ ಭಾಗಗಳಲ್ಲಿ ಇದೂ ಒಂದಾಗಿದ್ದು ಇದು ಸಮ ಪ್ರಮಾಣದಲ್ಲಿ ಬೆಳವಣಿಗೆಯನ್ನು ಹೊಂದಿಲ್ಲ ಎಂದಾದಲ್ಲಿ ಆಕೆಯ ಸೌಂದರ್ಯಕ್ಕೆ ಅದೊಂದು ಕುತ್ತು ಎಂದೇ ಹೇಳಬಹುದು.

ಹೆಣ್ಣಿನ ಸೌಂದರ್ಯ ಬರಿಯ ಮುಖದ, ತ್ವಚೆಯನ್ನು ಮಾತ್ರ ಅವಲಂಬಿತವಾಗಿರದೇ ಇತರ ಅಂಗಗಳನ್ನು ಆಧರಿಸಿದೆ. ಸ್ತನ ಭಾಗವು ಸಮಪ್ರಮಾಣದಲ್ಲಿಲ್ಲ ಎಂದಾದಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಅಪಾಯವೂ ಇದೆ. ನೀವು ಸ್ತನಭಾಗಕ್ಕೆ ಧರಿಸುವ ಒಳಉಡುಪು ಸಮವಾಗಿರಬೇಕು ಹೀಗೆ ಕೆಲವೊಂದು ನಿಯಮಗಳನ್ನು ನೀವು ಅನುಸರಿಸಬೇಕು. ಇಂದಿನ ಲೇಖನದಲ್ಲಿ ಮತ್ತಷ್ಟು ಸಲಹೆಗಳನ್ನು ಕಂಡುಕೊಳ್ಳೋಣ....

ತಪ್ಪಾದ ಬ್ರಾ ಗಾತ್ರ

ತಪ್ಪಾದ ಬ್ರಾ ಗಾತ್ರ

25% ದಷ್ಟು ಹೆಚ್ಚಿನ ಮಹಿಳೆಯರು ತಪ್ಪಾದ ಬ್ರಾ ಗಾತ್ರವನ್ನು ಧರಿಸುತ್ತಿದ್ದಾರೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ. ಇನ್ನು ಕೆಲವರು ಸಣ್ಣದು ಅಥವಾ ದೊಡ್ಡ ಗಾತ್ರದ ಬ್ರಾಗಳನ್ನು ಧರಿಸುತ್ತಿದ್ದಾರೆ. ಆದರೆ ಈ ರೀತಿ ತಪ್ಪು ಗಾತ್ರದ ಬ್ರಾವನ್ನು ಧರಿಸುವುದರಿಂದ ಸ್ತನದ ಗಾತ್ರ ವಿರೂಪಗೊಳ್ಳಬಹುದು. ಅಂತೆಯೇ ಬಿಗಿಯಾದ ಒಳಉಡುಪು ರಕ್ತದ ನಾಳಗಳನ್ನು ಬಿಗಿಗೊಳಿಸಬಹುದು.

ಕೂದಲು ಕೀಳುವುದು

ಕೂದಲು ಕೀಳುವುದು

ಸ್ತನವು ಸೂಕ್ಷ್ಮ ಭಾಗವಾಗಿದ್ದು ತೊಟ್ಟಿನ ಸುತ್ತಲಿರುವ ಕೂದಲನ್ನು ಕೀಳುವುದು ಮೊದಲಾದ ಕೆಲಸಗಳನ್ನು ಮಾಡಬಾರದು. ಟ್ವೀಜರ್‌ಗಳನ್ನು ಬಳಸುವುದಕ್ಕಿಂತ ನೈಸರ್ಗಿಕ ವಿಧಾನದಲ್ಲಿ ಕೂದಲನ್ನು ತೆಗೆಯಬೇಕು. ಕೀಳುವುದರಿಂದ ಸ್ತನಕ್ಕೆ ಪೆಟ್ಟಾಗುವ ಸಾಧ್ಯತೆ ಇದೆ.

ಸ್ತನ ಚಿವುಟುವುದು

ಸ್ತನ ಚಿವುಟುವುದು

ಸ್ತನ ಚಿವುಟುವಂತಹ ಕಾರ್ಯಗಳಿಂದ ಕೂಡ ಸ್ತನಕ್ಕೆ ಗಾಯವಾಗುವ ಸಾಧ್ಯತೆ ಇರುತ್ತದೆ. ಬಿಗಿಯಾದ ಒಳಉಡುಪನ್ನು ಧರಿಸುವುದರಿಂದ ಯಾವ ಬಗೆಯ ಅನಾಹುತ ಉಂಟಾಗಲಿದೆಯೋ ಅಂತೆಯೇ ಸ್ತನ ಚಿವುಟುವುದರಿಂದ ಉಂಟಾಗುತ್ತದೆ.

ಟ್ಯಾಟೂ ಬಳಕೆ

ಟ್ಯಾಟೂ ಬಳಕೆ

ಪಿಯರ್ಸಿಂಗ್ ಅಥವಾ ಸ್ತನದ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ನಿಮ್ಮ ಸ್ತನದ ಮೇಲೆ ದುಷ್ಪರಿಣಾಮ ಬೀರಬಹುದು.

ಕ್ರೀಡಾ ಬ್ರಾ ಇಲ್ಲದೆಯೇ ಜಾಗಿಂಗ್ ಮಾಡುವುದು

ಕ್ರೀಡಾ ಬ್ರಾ ಇಲ್ಲದೆಯೇ ಜಾಗಿಂಗ್ ಮಾಡುವುದು

ಕ್ರೀಡಾ ಬ್ರಾ ಇಲ್ಲದೆಯೇ ಜಾಗಿಂಗ್ ಮತ್ತು ಇನ್ನಿತರ ವ್ಯಾಯಾಮಗಳನ್ನು ಮಾಡುವುದು ತಪ್ಪಾಗಿದೆ. ಇದರಿಂದ ಸ್ತನದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ನಿಮ್ಮ ಹೊಟ್ಟೆಯ ಮೇಲೆ ಮಲಗುವುದು

ನಿಮ್ಮ ಹೊಟ್ಟೆಯ ಮೇಲೆ ಮಲಗುವುದು

ನಿಮ್ಮ ಹೊಟ್ಟೆಯ ಮೇಲೆ ಮಲಗುವುದರಿಂದ ಸ್ತನದ ಭಾಗಕ್ಕೆ ಏಟು ಬೀಳುವ ಸಾಧ್ಯತೆ ಇದೆ. ಆದ್ದರಿಂದ ಹೊಟ್ಟೆಯ ಭಾಗದಲ್ಲಿ ಮಲಗುವುದನ್ನು ಆದಷ್ಟು ತಪ್ಪಿಸಿ

ಕ್ರೀಮ್‌ಗಳನ್ನು ಬಳಸುವುದು

ಕ್ರೀಮ್‌ಗಳನ್ನು ಬಳಸುವುದು

ನಿಮ್ಮ ಸ್ತನವನ್ನು ಮಾಯಿಶ್ಚರೈಸ್ ಮಾಡುವುದು ಮತ್ತು ಸೂರ್ಯನ ಕಿರಣಗಳಿಂದ ಸಂರಕ್ಷಿಸುವುದನ್ನು ನೀವು ಮಾಡಬೇಕು. ಇಲ್ಲಿನ ತ್ವಚೆಯು ತುಂಬಾ ಸೂಕ್ಷ್ಮವಾಗಿದ್ದು ಕ್ರೀಮ್ ಹಚ್ಚುವುದನ್ನು ನೀವು ರೂಢಿಸಿಕೊಳ್ಳಬೇಕು.

ಪ್ಲಾಸ್ಟಿಕ್ ಸರ್ಜರಿ

ಪ್ಲಾಸ್ಟಿಕ್ ಸರ್ಜರಿ

ನಿಮ್ಮ ಸ್ತನಗಳ ಸೌಂದರ್ಯವನ್ನು ಹಾಳುಮಾಡುವುದು ಪ್ಲಾಸ್ಟಿಕ್ ಸರ್ಜರಿಯಾಗಿದೆ. ಚಾಕುವಿನಿಂದ ಶಸ್ತ್ರಚಿಕಿತ್ಸೆಯನ್ನು ಮಾಡುವುದು ಸ್ತನಕ್ಕೆ ದೋಷವನ್ನು ಉಂಟುಮಾಡಲಿದೆ.

English summary

Mistakes That Can Spoil The Health & Shape Of Your Breasts

The breasts are very delicate organs. Women never forget to take care of their faces. And it is important that they take care of their breasts in the same way. We often forget about this body part and do not give it the necessary attention it requires. Breasts are a very important feature of womanhood and they are a valuable asset for all ladies. But many do not provide proper care for them. In this article we have listed some of the common mistakes that can spoil the health and shape of your breasts. Read further to know what are the habits that can damage your breasts.
Subscribe Newsletter