ದಿನನಿತ್ಯದ ಆಹಾರದಲ್ಲಿ ಲವಂಗದ ಬಳಕೆ: ಅದ್ಭುತ ಆರೋಗ್ಯದ ಪ್ರಯೋಜನಗಳು

By Divya Pandith
Subscribe to Boldsky

ಗಾತ್ರದಲ್ಲಿ ಚಿಕ್ಕದಾಗಿದ್ದರೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿರುವ ನೈಸರ್ಗಿಕ ಉತ್ಪನ್ನಗಳಲ್ಲಿ ಲವಂಗವೂ ಒಂದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬಳಸುವ ಈ ಲವಂಗವು ಆಯುರ್ವೇದದಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. ಸಿಹಿತಿಂಡಿಗಳ ಪರಿಮಳ ಹೆಚ್ಚಿಸಲು ಹಾಗೂ ಅಡುಗೆ ಪದಾರ್ಥಗಳ ರುಚಿಯನ್ನು ದ್ವಿಗುಣ ಗೊಳಿಸುವ ಉದ್ದೇಶಕ್ಕೆ ಲವಂಗವನ್ನು ಬಳಸುತ್ತಾರೆ.

ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಲವಂಗ ಆರೋಗ್ಯ ದೃಷ್ಟಿಯಲ್ಲೂ ಅಡುಗೆಯ ಗುಣಮಟ್ಟವನ್ನು ದ್ವಿಗುಣಗೊಳಿಸುತ್ತದೆ. ಅನೇಕ ಔಷಧಗಳ ತಯಾರಿಕೆಯಲ್ಲಿ ಲವಂಗವನ್ನು ಬಳಸುವುದನ್ನು ನಾವು ಕಾಣಬಹುದು. ಲವಂಗವನ್ನು ಸೇವಿಸಬೇಕೆಂದರೆ ಅಡುಗೆಯಲ್ಲಿ ಬಳಸಿಯೇ ಸೇವಿಸಬೇಕೆಂದೇನೂ ಇಲ್ಲ. ನೀರಿನೊಂದಿಗೆ ನುಂಗುವುದು, ಚಹಾ ಅಥವಾ ಕಷಾಯದ ರೀತಿಯಲ್ಲೂ ಸೇವಿಸಬಹುದು. ಆರೋಗ್ಯ ಸುಧಾರಣೆಗೆ ಯಾವ ಮಾರ್ಗದಲ್ಲಾದರೂ ಸೇವಿಸಬಹುದು ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ.

ಮನೆ ಔಷಧಿ: ಲವಂಗ-ಕರಿಮೆಣಸು ಬೆರೆಸಿದ ಹಾಲು....

ಒಂದು ಪುಟ್ಟ ಲವಂಗದಲ್ಲಿ ಉತ್ಕರ್ಷಣ ನಿರೋಧಕ ಅಂಶ, ಪ್ರೋಟೀನ್,ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಸತು, ಪೊಟ್ಯಾಸಿಯಮ್, ನಿಯಾಸಿನ್, ಪೋಲೇಟ್, ಬಿ ಜೀವಸತ್ವ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ ಹಾಗೂ ವಿಟಮಿನ್ ಡಿಯು ಸಮೃದ್ಧವಾಗಿರುವುದನ್ನು ಕಾಣಬುದು. ನಿಯಮಿತವಾದ ಸೇವನೆಯಿಂದ ಆರೋಗ್ಯದಲ್ಲಿ ಯಾವೆಲ್ಲಾ ಬದಲಾವಣೆಯನ್ನು ಪಡೆಯಬಹುದು ಎನ್ನುವುದನ್ನು ಬೋಲ್ಡ್ ಸ್ಕೈ ಇಂದು ನಿಮಗೆ ತಿಳಿಸಿಕೊಡುತ್ತದೆ... ನೀವು ಇದರ ಉಪಯೋಗವನ್ನು ಪಡೆದು ಉತ್ತಮ ಆರೋಗ್ಯವನ್ನು ಹೊಂದಿರಿ.... 

ಅಜೀರ್ಣ ಸಮಸ್ಯೆಗೆ ಔಷಧಿ

ಅಜೀರ್ಣ ಸಮಸ್ಯೆಗೆ ಔಷಧಿ

ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಲವಂಗ ಸೇವನೆಯು ಅಜೀರ್ಣ ಸಮಸ್ಯೆಗಳ ಪರಿಹಾರಕ್ಕೆ ಉತ್ತಮವಾದದ್ದು. ಹೊಟ್ಟೆ ಉಬ್ಬರ, ವಾಯು, ಹೊಟ್ಟೆ ಕೆರಳಿಕೆ ಮತ್ತು ವಾಕರಿಗೆ ಸೇರಿದಂತೆ ಇನ್ನೂ ಅನೇಕ ಉದರ ಸಮಸ್ಯೆಗಳನ್ನು ಲವಂಗ ನಿವಾರಿಸುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪರಿಹಾರ ಹೊಂದಲು ಹುರಿದ ಲವಂಗವನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು.

 ಲೈಂಗಿಕ ಸಾಮರ್ಥ್ಯ

ಲೈಂಗಿಕ ಸಾಮರ್ಥ್ಯ

ಲವಂಗವು ಲೈಂಗಿಕ ಸಾಮರ್ಥ್ಯವನ್ನು ವೃದ್ಧಿಪಡಿಸಲು ಉಪಯುಕ್ತವಾಗಿದೆ. ವಿಶೇಷವಾಗಿ ಪುರುಷರಿಗೆ ಲೈಗಿಂಕ ಸಾಮಥ್ಯ ಹಾಗೂ ಆಸಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಲವಂಗ ಅಥವಾ ಲವಂಗದ ಕಷಾಯ/ಚಹಾ ಮಾಡಿ, ರುಚಿ ಹೆಚ್ಚಿಸಲು ಜೇನುತುಪ್ಪ ಬೆರೆಸಿ ಸೇವಿಸಬಹುದು.

ಮಧುಮೇಹವನ್ನು ಕಡಿಮೆ ಮಾಡುವುದು

ಮಧುಮೇಹವನ್ನು ಕಡಿಮೆ ಮಾಡುವುದು

ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಲವಂಗವು ದೇಹದಲ್ಲಿ ಇನ್ಸುಲಿನ್ ಅಂತೆಯೇ ಕಾರ್ಯ ನಿರ್ವಹಿಸುತ್ತದೆ. ಶರ್ಕರವನ್ನು ರಕ್ತದ ಮೂಲಕ ಜೀವಕೋಶಗಳಿಗೆ ಸಾಗಿಸಲು ಸಹಾಯ ಮಾಡುವುದು. ಹಾಗಾಗಿ ಸಕ್ಕರೆ ಮಟ್ಟವನ್ನು ಸಾಮಾನ್ಯ ಗೊಳಿಸುತ್ತದೆ. ಮಧುಮೇಹದಿಂದ ನಿವಾರಣೆ ಹೊಂದಬೇಕೆಂದರೆ ಲವಂಗವನ್ನು ಸೇವಿಸಿ.

 ಮೂಳೆಗಳು ಮತ್ತು ಕೀಲುಗಳ ರಕ್ಷಣೆ

ಮೂಳೆಗಳು ಮತ್ತು ಕೀಲುಗಳ ರಕ್ಷಣೆ

ಮೂಳೆಗಳ ಒಳಭಾಗದಲ್ಲಿರುವ ಯೂಜೆನಾಲ್ ಮತ್ತು ಫ್ಲೆವೊನೈಡ್‍ಗಳಂತಹ ಪದಾರ್ಥಗಳನ್ನು ಹೆಚ್ಚಿಸಲು ಲವಂಗ ಸಹಾಯ ಮಾಡುತ್ತದೆ. ಮೂಳೆಗಳಲ್ಲಿ ಖನಿಜಾಂಶವನ್ನು ಹೆಚ್ಚಿಸುವ ಸಾಮರ್ಥ್ಯವೂ ಲವಂಗಕ್ಕಿದೆ. ಹಾಗಾಗಿ ವಿಶೇಷವಾಗಿ ಮಹಿಳೆಯರು ಮತ್ತು ವೃದ್ದರು ಲವಂಗವನ್ನು ನಿಯಮಿತವಾಗಿ ಸೇವಿಸುವುದು ಸೂಕ್ತ.

ರೋಗ ನಿರೋಧಕ ಶಕ್ತಿ ಹೆಚ್ಚುವುದು

ರೋಗ ನಿರೋಧಕ ಶಕ್ತಿ ಹೆಚ್ಚುವುದು

ಲವಂಗದ ಸೇವನೆಯಿಂದ ರೋಗನಿರೋಧಕ ಶಕ್ತಿಯು ಹೆಚ್ಚುವುದು. ಅಲ್ಲದೆ ಅನೇಕ ಸಾಂಕ್ರಾಮಿಕ ರೋಗಗಳಿಂದಲೂ ನಾವು ದೂರ ಇರಬಹುದು. ಬಿಳಿ ರಕ್ತಕಣಗಳನ್ನು ಹೆಚ್ಚಿಸಿ, ಸೋಂಕುಗಳ ವಿರುದ್ಧ ನಮ್ಮ ದೇಹ ಹೋರಾಡಲು ಸಿದ್ಧಗೊಳಿಸುತ್ತದೆ.

ದೇಹದ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ

ದೇಹದ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ

ಲವಂಗವು ದೇಹದ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುವ ಶಕ್ತಿಯನ್ನು ಒಳಗೊಂಡಿದೆ. ಲವಂಗದಿಂದ ಯುಜೆನಾಲ್‍ಅನ್ನು ಹೇರಳವಾಗಿ ಪಡೆಯಬಹುದು. ಇದು ದೇಹದ ನೋವು ಮತ್ತು ಉರಿಯೂತಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುವುದು. ಹಾಗಾಗಿ ಲವಂಗದ ಉತ್ತಮ ಆರೋಗ್ಯ ಪ್ರಯೋಜನಗಳಲ್ಲಿ ಇದು ಒಂದು ಎಂದು ಪರಿಗಣಿಸಲಾಗುವುದು.

ಹಲ್ಲಿನ ಆರೋಗ್ಯಕ್ಕೆ

ಹಲ್ಲಿನ ಆರೋಗ್ಯಕ್ಕೆ

ಲವಂಗದ ಮತ್ತೊಂದು ಉತ್ತಮ ಪ್ರಯೋಜನವೆಂದರೆ ಹಲ್ಲು ನೋವನ್ನು ನಿಯಂತ್ರಿಸುವುದು. ಹಲ್ಲುಗಳು ಹುಳ ತಿಂದು ಕುಳಿಗಳಾಗಿ ನೋವನ್ನು ಅನುಭವಿಸುತ್ತಿದ್ದರೆ. ಆ ಜಾಗದಲ್ಲಿ ಜಜ್ಜಿದ ಲವಂಗವನ್ನುನಿಟ್ಟುಕೊಂಡರೆ ಬಹುಬೇಗ ನೋವು ಶಮನವಾಗುವುದು. ಇದರಲ್ಲಿ ಅರವಳಿಕೆ ಗುಣಲಕ್ಷಣಗಳಿರುವುದನ್ನು ಗಮನಿಸಬಹುದು. ಸಣ್ಣ ಪುಟ್ಟ ಅರವಳಿಕೆಗೆ ಇದನ್ನು ಬಳಸಬಹುದು.

ಕ್ಯಾನ್ಸರ್ ತಡೆಯುತ್ತದೆ

ಕ್ಯಾನ್ಸರ್ ತಡೆಯುತ್ತದೆ

ಲವಂಗದ ಹಲವಾರು ಪೋಷಕಾಂಶಗಳಲ್ಲಿ phenylpropanoids ಎಂಬ ಸಂಯುಕ್ತಗಳೂ ಇದ್ದು ಇವುಗಳು ಅನುವಂಶಿಕ ಗುಣವನ್ನು ಬದಲಿಸುವ ಕಣಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿವೆ. ಸಾಮಾನ್ಯವಾಗಿ ಒಂದು ಬಗೆಯ ಜೀವಕೋಶಗಳು ತನ್ನ ಅನುವಂಶಿಕ ಸಂಯೋಜನೆಯಿಂದ ಒಂದು ಹಂತದವರೆಗೆ ಮಾತ್ರವೇ ಬೆಳೆಯಬೇಕು. ಒಂದು ವೇಳೆ ಈ ಜೀವಕೋಶಗಳು ನಿಯಂತ್ರಣ ಮೀರಿ ಬೆಳೆದರೆ ಇದು ಕ್ಯಾನ್ಸರ್ ರೂಪ ಪಡೆಯಬಹುದು. ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಲವಂಗದಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿದ್ದರೆ ಇದನ್ನು ನಿಯಂತ್ರಿಸುವ ಗುಣ ಹೊಂದಿದೆ.

ತಲೆನೋವಿಗೆ

ತಲೆನೋವಿಗೆ

ತಲೆ ನೋವು ನಿವಾರಿಸಲು ಲವಂಗವನ್ನು ಬಳಸಬಹುದು. ಒಂದು ಗ್ಲಾಸ್ ಹಾಲಿಗೆ ಲವಂಗದ ಪುಡಿ ಮತ್ತು ಕಲ್ಲುಪ್ಪನ್ನು ಮಿಶ್ರಮಾಡಿ ಸೇವಿಸಬೇಕು. ಬಹುಬೇಗ ತಲೆನೋವಿನಿಂದ ಪಾರಾಗಬಹುದು. ತಲೆನೋವಿನ ನಿವಾರಣೆಗೆ ಇದೊಂದು ಅತ್ಯುತ್ತಮ ಮನೆ ಔಷಧಿಯೂ ಹೌದು.

ಲಿವರ್‌ನ ಆರೈಕೆಗೆ

ಲಿವರ್‌ನ ಆರೈಕೆಗೆ

ಲವಂಗವು ಯಕೃತ್ ರಕ್ಷಣೆ ಮಾಡಲು ಸಹಾಯ ಮಾಡುವುದು. ಇದರಲ್ಲಿರುವ ಆಂಟಿಆಕ್ಸಿಡೆಂಟ್‍ಗಳಲ್ಲಿ ಸಮೃದ್ಧವಾಗಿದೆ. ಯಕೃತ್ ಸೇರಿದಂತೆ ಇನ್ನಿತರ ಅಂಗಗಳಿಗೆ ಹಾನಿಯುಂಟುಮಾಡುವ ರಾಡಿಕಲ್ಸ್‌ಗಳನ್ನು ಕೊಲ್ಲುತ್ತದೆ. ಹಾಗಾಗಿಯೇ ಯಕೃತ್‍ನ ಆರೈಕೆಗೆ ಅಥವಾ ಕಾಯಿಲೆಗೆ ಚಿಕಿತ್ಸೆ ಪಡೆಯಲು ಲವಂಗವನ್ನು ನಿಯಮಿತವಾಗಿ ಸೇವಿಸಬೇಕು.

ಬಿಳಿರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ

ಬಿಳಿರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ

ರಕ್ತದಲ್ಲಿರುವ ಬಿಳಿರಕ್ತಕಣಗಳು ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುವ ಯೋಧರಾಗಿವೆ. ದೇಹವನ್ನು ಪ್ರವೇಶಿಸುವ ವೈರಾಣುಗಳನ್ನು ಕೊಂದು ದೇಹದಿಂದ ಹೊರಹಾಕುವ ಮೂಲಕ ಇವು ವಿವಿಧ ರೋಗಗಳಿಂದ ಸತತವಾಗಿ ರಕ್ಷಿಸುತ್ತಾ ಇರುತ್ತದೆ. ಆದ್ದರಿಂದ ನಮ್ಮ ರಕ್ತದಲ್ಲಿ ಉತ್ತಮ ಪ್ರಮಾಣದ ಬಿಳಿರಕ್ತಕಣಗಳಿರುವುದು ಅಗತ್ಯ. (ಒಂದು ಸಂದರ್ಭದಲ್ಲಿ ಬಿಳಿರಕ್ತಕಣಗಳು ವಿಪರೀತವಾಗಿದ್ದರೆ ಇದು ರಕ್ತದ ಕ್ಯಾನ್ಸರ್ ಗೂ ಕಾರಣವಾಗಬಹುದು). ಆದರೂ ಲವಂಗದ ಸೇವನೆಯಿಂದ ರಕ್ತದಲ್ಲಿ ಆರೋಗ್ಯಕರ ಮಟ್ಟದಲ್ಲಿ ಬಿಳಿರಕ್ತಕಣಗಳು ಉತ್ಪತ್ತಿಯಾಗುವಂತೆ ನೋಡಿಕೊಳ್ಳುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ವಿಶೇಷವಾಗಿ ಹಲವಾರು ಅಲರ್ಜಿಕಾರಕ ಪ್ರತಿಕ್ರಿಯೆಗಳಿಂದ ರಕ್ಷಿಸುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Miraculous Health Benefits Of Eating Cloves Daily

    The reason behind this is the immense health benefits offered by cloves to our body in many ways. It treats almost all ailments, for which we may be taking prescribed medicines. Cloves can replace most of your medicines, as it has medicinal properties too in treating diseases.There are many uses of cloves for health and you may eat them or just swallow them with water.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more