ಮೈಗ್ರೇನ್ ನಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಕಾಯಿಲೆಗಳ ಬಗ್ಗೆಯೂ ಎಚ್ಚರ ವಹಿಸಿ

By: Arshad
Subscribe to Boldsky

 ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ಪ್ರಭಾವ ಇದನ್ನು ಅನುಭವಿಸಿದವರಿಗೇ ಗೊತ್ತು. ಏಕೆಂದರೆ ಇದು ಭಾರೀ ನೋವುಂಟು ಮಾಡುವುದು ಮಾತ್ರವಲ್ಲ, ಯೋಚನಾ ಸಾಮರ್ಥ್ಯವನ್ನೇ ಕುಂದಿಸಿಬಿಡುತ್ತದೆ. ಅಷ್ಟೇ ಅಲ್ಲ, ಮೈಗ್ರೇನ್ ತೊಂದರೆ ಇದ್ದವರಿಗೆ ಇದರ ನೇರ ಅಥವಾ ಪಾರ್ಶ್ವ ಪರಿಣಾಮವಾಗಿ ಭವಿಷ್ಯದಲ್ಲಿ ಬೇರೆ ಕೆಲವು ತೊಂದರೆಗಳೂ ಎದುರಾಗಬಹುದು.

ಖಿನ್ನತೆ, ಅಸ್ತಮಾ ಹಾಗೂ ಹೃದಯದ ತೊಂದರೆಗಳಿಗೆ ಈಗ ಇರುವ ಮೈಗ್ರೇನ್ ಅಥವಾ ಹಿಂದೆಂದೋ ಇದ್ದ ಮೈಗ್ರೇನ್‌ನ ಇತಿಹಾಸ ಕಾರಣವಾಗಬಹುದು. ಮೈಗ್ರೇನ್‌ಗೆ ತುತ್ತಾದ ವ್ಯಕ್ತಿಗೆ ದಿನಗಳೆದಂತೆ ಆರೋಗ್ಯದ ಮೇಲೆ ಆಗುವ ಪರಿಣಾಮ ವಿವಿಧ ದಿಕ್ಕಿನಲ್ಲಿ ಮುಂದುವರೆಯುತ್ತಾ ಮುಂದೊಂದು ದಿನ ಬೇರೊಂದು ತೊಂದರೆಗೆ ನಾಂದಿಯಾಗಬಹುದು.

ಮಾತ್ರೆಯ ಹಂಗಿಲ್ಲದೆ ಮೈಗ್ರೇನ್ ತಲೆನೋವು ನಿಯಂತ್ರಣಕ್ಕೆ!

ಪ್ರತಿ ವ್ಯಕ್ತಿಗೂ ಇದು ಬೇರೆಬೇರೆಯಾಗಿರುವ ಕಾರಣ ಎಲ್ಲರಿಗೂ ಒಂದೇ ಬಗೆಯಾದ ಪರಿಣಾಮ ಬೀರಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ವೈದ್ಯರಿಗೂ ಮೈಗ್ರೇನ್ ನ ಚಿಕಿತ್ಸೆ ತುಂಬಾ ಜಟಿಲವಾದ ಸಮಸ್ಯೆಯಾಗಿದೆ. ಏಕೆಂದರೆ ಮೈಗ್ರೇನ್‌ನ ತೊಂದರೆ ಇರುವ ಒಬ್ಬ ವ್ಯಕ್ತಿಗೆ ನೀಡಿದ ಚಿಕಿತ್ಸೆ ಇದೇ ಲಕ್ಷಣಗಳನ್ನು ಹೊಂದಿರುವ ಇನ್ನೋರ್ವ ಮೈಗ್ರೇನ್ ರೋಗಿಗೆ ಫಲಕಾರಿಯಾಗದೇ ಇರಬಹುದು.

ಮೈಗ್ರೇನ್ ಉಪಶಮನಕ್ಕೆ ಮಾರ್ಗಗಳು

ಒಂದು ವೇಳೆ ನಿಮಗೆ ಮೈಗ್ರೇನ್ ಇದ್ದು ಬೇರೆ ತೊಂದರೆಗಳೂ ಇದ್ದರೆ ಮೈಗ್ರೇನ್ ಗೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಇತರ ತೊಂದರೆಗಳಿಗೂ ತಾನೇ ತಾನಾಗಿ ಚಿಕಿತ್ಸೆ ಲಭಿಸುತ್ತದೆ. ಇಂತಹ ಕೆಲವು ತೊಂದರೆಗಳ ಬಗ್ಗೆ ಇಂದಿನ ಲೇಖನದಲ್ಲಿ ವಿವರಗಳನ್ನು ನೀಡಲಾಗಿದ್ದು ಮೈಗ್ರೇನ್ ತೊಂದರೆ ಇರುವ ವ್ಯಕ್ತಿಗಳಿಗೆ ತಮಗೆ ಅರಿವಿಲ್ಲದೇ ಇದ್ದ ಮಾಹಿಯನ್ನು ಪಡೆದು ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಮತ್ತೊಮ್ಮೆ ಆರೋಗ್ಯವಂತರಾಗಲು ಸಾಧ್ಯ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ಖಿನ್ನತೆ

ಖಿನ್ನತೆ

ಒಂದು ವೇಳೆ ಒಂದು ನಿರ್ದಿಷ್ಟ ಕ್ರಮ ಅಥವಾ ಸಮಯದ ಬದ್ದತೆಯಲ್ಲಿಯೇ ಮೈಗ್ರೇನ್ ಆವರಿಸುತ್ತಿದ್ದರೆ (episodic migraines) ನಿಮಗೆ ಖಿನ್ನತೆ ಆವರಿಸುವ ಸಾಧ್ಯತೆ

ಇತರರಿಗಿಂತ ದುಪ್ಪಟ್ಟಾಗಿರುತ್ತದೆ. ಒಂದು ವೇಳೆ ಮೈಗ್ರೇನ್ ತೀವ್ರವಾಗಿದ್ದರೆ ಈ ಸಾಧ್ಯತೆ ಮೂರು ಪಟ್ಟು ಹೆಚ್ಚು! ಖಿನ್ನತೆ ಮೈಗ್ರೇನ್ ತಲೆನೋವಿಗೆ ನೇರವಾಗಿ ಸಂಬಂಧಿಸಿದ ಕಾಯಿಲೆಯಾಗಿದೆ.

ಆತಂಕ

ಆತಂಕ

ತೀವ್ರ ಗತಿಯ ಮೈಗ್ರೇನ್ ತೊಂದರೆ ಇರುವ ವ್ಯಕ್ತಿಗಳಿಗೆ ಆತಂಕವೂ ಸದಾ ಎದುರಾಗುತ್ತಾ ಇರುತ್ತದೆ. ಇವೆರಡೂ ಒಂದಕ್ಕೊಂದು ಪೂರಕವಾಗಿದ್ದು ಮೈಗ್ರೇನ್ ಇರುವವರಿಗೆ ಆತಂಕ ಹಾಗೂ ಆತಂಕ ಇರುವ ವ್ಯಕ್ತಿಗಳಿಗೆ ಮೈಗ್ರೇನ್ ತಲೆನೋವು ಆವರಿಸುವ ಸಾಧ್ಯತೆ ಹೆಚ್ಚು.

ಹೃದಯ ಸ್ತಂಭನ

ಹೃದಯ ಸ್ತಂಭನ

ಕೆಲವಾರು ಅಧ್ಯಯನಗಳ ಮೂಲಕ ಕಂಡುಕೊಂಡಂತೆ ಹೃದಯ ಸ್ತಂಭನ ಹಾಗೂ ಮೈಗ್ರೇನ್ ನಡುವೆ ನೇರವಾದ ಸಂಬಂಧವಿದೆ. ಮೈಗ್ರೇನ್ ಇರುವ ವ್ಯಕ್ತಿಗಳಿಗೆ ಹೃದಯ ಸ್ತಂಭನವಾಗುವ ಸಾಧ್ಯತೆ ಇತರ ವ್ಯಕ್ತಿಗಳಿಗಿಂತ ದುಪ್ಪಟ್ಟು ಹೆಚ್ಚಾಗಿದೆ.

ಮೂರ್ಛೆರೋಗ (Epilepsy)

ಮೂರ್ಛೆರೋಗ (Epilepsy)

ಅಪಸ್ಮಾರ, ಫಿಟ್ಸ್, ಮೂರ್ಛೆರೋಗ ಮೊದಲಾದ ತೊಂದರೆಗಳಿಗೆ ಮನೋಭಾವದಲ್ಲಿ ಬದಲಾವಣೆ ಹಾಗೂ ಇಂದ್ರಿಯಗಳಿಗೆ ಸಂಬಂಧಿಸಿದ ಅಂಗಗಳ ಕ್ಷಮತೆಯಲ್ಲಿ ಏರುಪೇರು ಪ್ರಮುಖ ಕಾರಣವಾಗಿವೆ. ಮೈಗ್ರೇನ್ ಇರುವ ವ್ಯಕ್ತಿಗಳಿಗೆ ತಲೆನೋವಿನ ಸಮಯದಲ್ಲಿ ಇಂದ್ರಿಯಗಳ ಕ್ಷಮತೆ ಕುಂದುವ ಕಾರಣ ಈ ತೊಂದರೆಗಳು ಆವರಿಸುವ ಸಾಧ್ಯತೆಯೂ ಹೆಚ್ಚು.

ಹೃದಯದ ತೊಂದರೆಗಳು

ಹೃದಯದ ತೊಂದರೆಗಳು

ಮೈಗ್ರೇನ್ ಇರುವ ಪುರುಷರಿಗೂ ಮಹಿಳೆಯರಿಗೂ ಹೃದಯದ ತೊಂದರೆ ಆವರಿಸುವ ಸಾಧ್ಯತೆ ಹೆಚ್ಚು. ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಮೈಗ್ರೇನ್ ನಿಂದ ಹೆಚ್ಚು ಬಳಲಿದಷ್ಟೂ ಹೃದಯದ ತೊಂದರೆಯ ಗಾಢತೆಯೂ ಹೆಚ್ಚುತ್ತದೆ. ಪರಿಣಾಮವಾಗಿ ಹೃದಯಘಾತ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಆವರಿಸುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.

ಅಸ್ತಮಾ

ಅಸ್ತಮಾ

ಅಸ್ತಮಾ ರೋಗ ಆವರಿಸಲು ಪ್ರಮುಖ ಕಾರಣ ಶ್ವಾಸನಾಳಗಳ ಉರಿಯೂತ. ಒಂದು ವೇಳೆ ಈ ಉರಿಯೂತ ಮೆದುಳಿನ ಹೊರಗಿರುವ ರಕ್ತನಾಳಗಳಿಗೆ ಹರಡಿದರೆ ಇದು ಭಾರೀ ತಲೆನೋವಿಗೆ ಕಾರಣವಾಗಬಹುದು ಹಾಗೂ ಮೈಗ್ರೇನ್ ರೂಪವನ್ನೂ ತಳೆಯಬಹುದು. ಮೈಗ್ರೇನ್ ಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ಅಸ್ತಮಾ ಸಹಾ ಪ್ರಮುಖವಾದೆ.

ಸ್ಥೂಲಕಾಯ

ಸ್ಥೂಲಕಾಯ

ಒಂದು ವೇಳೆ ನಿಮಗೆ ಮೈಗ್ರೇನ್ ಇದ್ದರೆ ನಿಮ್ಮ ಸ್ಥೂಲಕಾಯ ಈ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಬಲ್ಲುದು. ಒಂದು ವೇಳೆ ನಿಮಗೆ ಇದುವರೆಗೆ ಎಂದಿಗೂ ಮೈಗ್ರೇನ್ ಕಾಡಿರದೇ ಇದ್ದರೆ ಈಗ ಆವರಿಸಿರುವ ಸ್ಥೂಲಕಾಯ ಮೈಗ್ರೇನ್‌ಗೆ ಆಹ್ವಾನ ನೀಡಬಹುದು. ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ಹಿಂದೆ ಕೃಶಕಾಯರಾಗಿದ್ದು ಈಗ ಸ್ಥೂಲಕಾಯ ಪಡೆದಿರುವ ವ್ಯಕ್ತಿಗಳಿಗೆ ಮೈಗ್ರೇನ್ ಆವರಿಸುವ ಸಾಧ್ಯತೆ ಹೆಚ್ಚು.

ನೋವಿನ ಏರುಪೇರು

ನೋವಿನ ಏರುಪೇರು

ಒಂದು ವೇಳೆ ನಿಮಗೆ ದೇಹದ ಕೆಲವು ಭಾಗಗಳಲ್ಲಿ ವಿವರಿಸಲಾಗದಂತೆ ಕೆಲವೊಮ್ಮೆ ಹೆಚ್ಚು ಕೆಲವೊಮ್ಮೆ ಕಡಿಮೆಯಾಗುವುದು, ಕುತ್ತಿಗೆಯ ಭಾಗೂ ಭುಜಗಳ ಸ್ನಾಯುಗಳು ವಿಪರೀತ ನೋಯುವುದು, ಇದರೊಂದಿಗೆ ಸ್ನಾಯುಗಳಲ್ಲಿ ಅಲ್ಲಲ್ಲಿ ಸೆಡೆತಗೊಳ್ಳುವುದು (fibromyalgia) ಮೊದಲಾದವು ಕಾಣಿಸಿಕೊಂಡರೆ ಇದಕ್ಕೆಲ್ಲಾ ಮೈಗ್ರೇನ್ ತಲೆನೋವು ಕಾರಣವಾಗಿರಬಹುದು.

ಜೀರ್ಣಕ್ರಿಯೆ ಏರುಪೇರಾಗುವುದು

ಜೀರ್ಣಕ್ರಿಯೆ ಏರುಪೇರಾಗುವುದು

ಮೈಗ್ರೇನ್ ನಿಂದ ನರಳುವ ವ್ಯಕ್ತಿಗಳಿಗೆ ಅಜೀರ್ಣತೆ ಅಥವಾ ಇತರ ಜೀರ್ಣಕ್ರಿಯೆಯ ತೊಂದರೆಗಳು ಆವರಿಸುವ ಸಾಧ್ಯತೆ ಹೆಚ್ಚು. ಇದರಲ್ಲಿ ಹೊಟ್ಟೆಯಲ್ಲಿ ಉರಿ (irritable bowel syndrome (IBS), ಹುಳಿತೇಗು ಹಾಗೂ ಗೋಧಿಯನ್ನು ಜೀರ್ಣಿಸಿಕೊಳ್ಳಲು ಅಸಮರ್ಥತೆ ಅಥವಾ ಸೀಲಿಯಾಕ್ ಕಾಯಿಲೆ (coeliac disease) ಆವರಿಸುವ ಸಾಧ್ಯತೆ ಹೆಚ್ಚು.

ಕಾಲುನಡುಕ (Restless Leg Syndrome (RLS)

ಕಾಲುನಡುಕ (Restless Leg Syndrome (RLS)

ಕಾಲುಗಳನ್ನು ತಮಗರಿವಿಲ್ಲದಂತೆಯೇ ನಡುಗಿಸುತ್ತಾ ಇರುವ ಈ ತೊಂದರೆ ರೋಗಿಯ ನಿತ್ಯದ ಚಟುವಟಿಕೆಗಳಿಗೆ ಬಾಧೆಯೊಡ್ಡಬಹುದು ಹಾಗೂ ಇವರಿಗೆ ನಿದ್ದೆ ಆವರಿಸುವುದು ಸಹಾ ಕಷ್ಟವಾಗುತ್ತದೆ. RLS ಹಾಗೂ ಮೈಗ್ರೇನ್ ಎರಡಕ್ಕೂ ದೇಹದಲ್ಲಿ ಸ್ರವಿಸುವ ಡೋಪಮೈನ್ ರಸದೂತದ ಪ್ರಮಾಣಕ್ಕೆ ನೇರವಾದ ಸಂಬಂಧವಿದೆ. ಆದ್ದರಿಂದ ಮೈಗ್ರೇನ್ ಇದ್ದ ವ್ಯಕ್ತಿಗಳಿಗೆ RLS ತೊಂದರೆ ಸಹಾ ಆವರಿಸುವ ಸಾಧ್ಯತೆ ಇತರರಿಗಿಂತ ಹೆಚ್ಚು.

English summary

Migraines Can Cause Higher Risks Health

There are several other conditions that can affect you if you have migraine and hence taking the right treatment can benefit you to treat another condition. In this article, we have mentioned about the diseases linked to migraine. Read further to know more.
Story first published: Friday, November 10, 2017, 23:14 [IST]
Subscribe Newsletter