ಆರೋಗ್ಯ ಟಿಪ್ಸ್: 'ಗ್ರೀನ್ ಟೀ' ನಲ್ಲಿ ಅಡಗಿರುವ ಔಷಧೀಯ ಗುಣಗಳು

By: Arshad
Subscribe to Boldsky

ಇಂದಿನ ದಿನಗಳಲ್ಲಿ ಆರೋಗ್ಯಕ್ಕೆ ಹಸಿರು ಟೀ ಅಥವಾ ಗ್ರೀನ್ ಟೀ ಅತ್ಯುತ್ತಮ ಎಂದು ಈಗ ಎಲ್ಲರಿಗೂ ಗೊತ್ತಾಗಿದೆ. ಈ ಟೀ ಸೇವನೆಯ ಮೂಲಕ ದೇಹಕ್ಕೆ ಹಲವು ವಿಧದ ಪೋಷಕಾಂಶಗಳು ಲಭ್ಯವಾಗುತ್ತದೆ, ಇವು ದೇಹವನ್ನು ಹಲವಾರು ರೋಗಗಳಿಂದ ರಕ್ಷಿಸುತ್ತದೆ. ಒಂದು ದಿನಕ್ಕೆ ಮೂರು ಕಪ್ ನಷ್ಟು ಹಸಿರು ಟೀ ಕುಡಿದರೆ ಹಲವಾರು ಕಾಯಿಲೆಗಳು ಬರುವುದರಿಂದ ತಪ್ಪಿಸಿಕೊಳ್ಳಬಹುದು.

Green Tea

ಆದರೆ ಈ ಟೀಯನ್ನು ಹೇಗೆ ಬೇಕೋ ಹಾಗೆ ಸೇವಿಸುವಂತಿಲ್ಲ. ಬದಲಿಗೆ ನಿಯಮಿತವಾಗಿ ಸೂಕ್ತ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರವೇ ಇವುಗಳ ಪ್ರಯೋಜನವನ್ನು ಪಡೆಯಬಹುದು. ಒಂದು ವೇಳೆ ಪ್ರತಿ ಆರು ಗಂಟೆಗಳಿಗೊಂದು ಕಪ್ ನಂತೆ ದಿನಕ್ಕೆ ಮೂರು ಕಪ್ ಹಸಿರು ಕಪ್ ಸೇವಿಸಿದರೆ ದೇಹದಲ್ಲಿ ಆ ದಿನ ಸಂಗ್ರಹವಾದ ಎಲ್ಲಾ ಕಲ್ಮಶಗಳು ಹೊರಹಾಕಲ್ಪಡುತ್ತವೆ. ಪರಿಣಾಮವಾಗಿ ಯಕೃತ್ ಹಾಗೂ ಮೂತ್ರಪಿಂಡಗಳು ಅತ್ಯುತ್ತಮ ಆರೋಗ್ಯದಲ್ಲಿರುತ್ತವೆ.

Green Tea

ಮಧುಮೇಹಿಗಳಿಗೂ ಹಸಿರು ಟೀ ಉತ್ತಮ ಆಯ್ಕೆಯಾಗಿದ್ದು ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಹಸಿರು ಟೀ ಯಲ್ಲಿ ಯಾವುದೇ ಕ್ಯಾಲೋರಿಗಳಿಲ್ಲವಾದುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನೂ ನಿಯಂತ್ರಣದಲ್ಲಿರಿಸಲು ಸಾಧ್ಯ.

Green Tea

ಇದರಲ್ಲಿ ಉತ್ತಮ ಪ್ರಮಾಣದ ಅಮೈನೋ ಆಮ್ಲಗಳಿವೆ, ಇವು ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಈ ಟೀಯಲ್ಲಿ ಉತ್ತಮ ಪ್ರಮಾಣದ ಗಂಧಕವೂ ಇರುವ ಕಾರಣ ನಿಯಮಿತ ಸೇವನೆಯಿಂದ ಹಲ್ಲುಗಳು ಗಟ್ಟಿಯಾಗಿರುತ್ತವೆ. 

ಪ್ರತಿದಿನ ಗ್ರೀನ್ ಟೀ ಸೇವಿಸಿದರೆ ಖಂಡಿತ ಮೋಸವಿಲ್ಲ..!

English summary

Make liver and kidney healthy by drinking Green Tea

Everyone knows that green tea is very beneficial for our health, there are plenty of nutrients available in Green Tea which protect our body from many diseases, if you drink three cups of green tea in a day, then you can avoid many types of health related problems. But if you are consuming green tea then it is important to take care of some things so that your body can get all the benefits.
Story first published: Monday, September 25, 2017, 23:21 [IST]
Subscribe Newsletter