ಹೆಂಗಸರನ್ನು ಹಿಂಡಿ ಹಿಪ್ಪೆ ಮಾಡುವ ಆ ಬಿಳಿ ಸೆರಗಿಗೆ ಕಾರಣವೇನು?

By: Hemanth
Subscribe to Boldsky

ಬಿಳಿ ಸೆರಗು ಸಮಸ್ಯೆ ಎನ್ನುವುದು ಮಹಿಳೆಯರಲ್ಲಿ ಹೆಚ್ಚಿನ ಸಲ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ನಡೆಯುತ್ತಾ ಇರುವುದು. ಆದರೆ ಕೆಲವೊಂದು ಸಲ ಬಿಳಿ ಸೆರಗು ಸಮಸ್ಯೆ ಸೋಂಕಿಗೆ ಕಾರಣವಾಗಬಹುದು. ಬಿಳಿ ಸೆರಗು ಅತಿಯಾದರೆ ಅದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಅದೇ ರೀತಿ ಹಳದಿ ಅಥವಾ ಹಸಿರು ಬಣ್ಣ, ಕೆಟ್ಟ ವಾಸನೆಯಿಂದ ಹೊರಹೋದರೆ ಅದು ಅಸಾಮಾನ್ಯವೆಂದು ಭಾವಿಸಬೇಕಾಗುತ್ತದೆ. ಕಿಣ್ವ ಅಥವಾ ಸೋಂಕಿನಿಂದಾಗಿ ಯೋನಿಯಿಂದ ಅಸಾಮಾನ್ಯ ಹೊರಹೋಗುವಿಕೆ ಇದ್ದರೆ ಇದರ ಬಗ್ಗೆ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಸೂಕ್ತ.

ಯೋನಿಯಿಂದ ಹೊರಹೋಗುವಿಕೆಯನ್ನು ಅದರ ಬಣ್ಣ ಹಾಗೂ ಸ್ಥಿರತೆಯನ್ನು ಅನುಸರಿಸಿ ವಿಂಗಡಿಸಲಾಗಿದೆ. ಕೆಲವೊಂದು ಸಲ ಈ ಸಮಸ್ಯೆಯು ಯಾವುದೇ ರೋಗದ ಲಕ್ಷಣವಾಗಿರಬಹುದು. ಇದರ ಬಗ್ಗೆ ತಕ್ಷಣ ಗಮನಹರಿಸಿದರೆ ಸಮಸ್ಯೆ ನಿವಾರಣೆ ಮಾಡಬಹುದು. ಬಿಳಿ ಸೆರಗು ಹೋಗಲು ಕಾರಣಗಳು ಏನು ಎನ್ನುವ ಬಗ್ಗೆ ಹಲವಾರು ಪ್ರಶ್ನೆಗಳು ಈಗಲೇ ಕಾಡುತ್ತಾ ಇವೆ.

ಕೆಲವೊಂದು ಹೊರಹೋಗುವಿಕೆಯು ಬಿಳಿ, ಸ್ವಚ್ಛ ಮತ್ತು ನೀರಿನಂತೆ, ಕಂದು ಅಥವಾ ರಕ್ತ, ಹಳದಿ ಅಥವಾ ಹಸಿರು ಇತ್ಯಾದಿಯಾಗಿರಬಹುದು. ಬಿಳಿ ಸೆರಗು ಹೋಗುವುದು ಅತಿಯಾಗಿದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಬಿಳಿ ಸೆರಗು ಹೋಗುವುದಕ್ಕೆ ಹಲವಾರು ರೀತಿಯ ಕಾರಣಗಳನ್ನು ಈ ಲೇಖನದಲ್ಲಿ ಪಟ್ಟಿ ಮಾಡಲಾಗಿದೆ. ಇದರ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಮುಂದಕ್ಕೆ ಓದುತ್ತಾ ಸಾಗಿ....

ಕಿಣ್ವ ಸೋಂಕು

ಕಿಣ್ವ ಸೋಂಕು

ದಪ್ಪ, ಬಿಳಿ ಮತ್ತು ಕಾಟೇಜ್ ಚೀಸ್ ನಂತಹ ಪದಾರ್ಥವು ಹೊರಹೋಗುತ್ತಾ ತುರಿಕೆಯು ಇದ್ದರೆ ನಿಮಗೆ ಕಿಣ್ವದ ಸೋಂಕು ಉಂಟಾಗಿದೆ ಎನ್ನಬಹುದು. ಯೋನಿಯಿಂದ ಹೊರಹೋಗಲು ಇದು ಒಂದು ಕಾರಣವಾಗಿದೆ.

 ಅಂಡೋತ್ಪತ್ತಿ

ಅಂಡೋತ್ಪತ್ತಿ

ಅಂಡೋತ್ಪತ್ತಿ ಆಗುವಂತಹ ಸಮಯದಲ್ಲಿ ಇಂತಹ ಹೊರಹೋಗುವಿಕೆಯು ಸಾಮಾನ್ಯ. ಹಾರ್ಮೋನುಗಳಲ್ಲಿ ವ್ಯತ್ಯಯವಾಗುವುದರಿಂದ ಹೀಗೆ ಆಗುವುದು. ಪ್ರತಿಯೊಬ್ಬ ಮಹಿಳೆಯಲ್ಲೂ ಹೊರಹೋಗುವಿಕೆ ಕಂಡುಬರುವುದಿಲ್ಲ. ಕೆಲವು ಮಹಿಳೆಯರಲ್ಲಿ ಇದು ಇರುತ್ತದೆ.

ಐಯುಡಿ ಜನನ ನಿಯಂತ್ರಣ

ಐಯುಡಿ ಜನನ ನಿಯಂತ್ರಣ

ಐಯುಡಿಗೆ ಯೋನಿಯ ಹೊರಹೋಗುವಿಕೆಯ ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ. ಆದರೂ ಕೆಲವೊಂದು ಮಹಿಳೆಯರಲ್ಲಿ ಐಯುಡಿ ಹಾಕಿಸಿಕೊಂಡ ಬಳಿಕ ಇದು ಕಾಣಿಸಿಕೊಳ್ಳುವುದಿದೆ.

ಅಲರ್ಜಿ

ಅಲರ್ಜಿ

ಸಾಮಾನ್ಯ ನಿಯಮದಂತೆ ನೇರವಾಗಿರುವ ವಸ್ತುವನ್ನು ಯೋನಿಯೊಳಗಡೆ ಹಾಕಬಾರದು. ಆದರೆ ಕೆಲವೊಂದು ಸಲ ಹೊಸ ಕಾಂಡೋಮ್, ಸೆಕ್ಸ್ ಆಟಿಕೆ, ಸೋಪ್ ಅಥವಾ ಡಿಟರ್ಜೆಂಟ್ ನಿಂದ ಅಲರ್ಜಿ ಉಂಟಾಗುವುದು. ನಿಮ್ಮ ದೇಹವು ಇಂತಹ ಯಾವುದೇ ವಸ್ತುವಿಗೆ ಅಲರ್ಜಿಯಾಗಬಹುದು. ಈ ವೇಳೆ ದೇಹವು ಹೆಚ್ಚು ಹೊರಹಾಕಬಹುದು.

ಕಾಂಡೋಮ್!

ಕಾಂಡೋಮ್!

ಕಾಂಡೋಮ್ ಯೋನಿಯೊಳಗೆ ಉಳಿದಿರುವ ಕಾರಣದಿಂದಾಗಿ ಹೊರಹೋಗುವಿಕೆಯು ತುಂಬಾ ವಾಸನೆ ಉಂಟು ಮಾಡಬಹುದು. ವೈದ್ಯರನ್ನು ಭೇಟಿಯಾಗಿ ಕಾಂಡೋಮ್ ಅನ್ನು ಹೊರತೆಗೆದು ಹೊರಹೋಗುವಿಕೆ ನಿವಾರಿಸಬೇಕು.

English summary

main reasons why your vaginal discharge unusually heavy

There are several types of vaginal discharges that are categorized based on their colour and consistency. But some forms of discharge can indicate an underlying health issue that requires immediate attention. There might be several answers behind the question 'what are the reasons for white discharge'. You'll find them out right here. In this article, we have listed some of the top reasons for heavy vaginal discharge. Read this further to know what are the reasons for heavy white discharge and other kinds of discharges as well.
Story first published: Thursday, August 31, 2017, 7:02 [IST]
Subscribe Newsletter