'ಸಂಧಿವಾತಕ್ಕೆ' ಲಿಂಬೆ ಹಣ್ಣಿನ ಸಿಪ್ಪೆಯೇ ಸಾಕು, ಇದಕ್ಕೆಲ್ಲಾ ವೈದ್ಯರ ಬಳಿ ಹೋಗಬೇಡಿ!!

By: Arshad
Subscribe to Boldsky

ಸಾಮಾನ್ಯವಾಗಿ ಎಲ್ಲರೂ ಲಿಂಬೆಹಣ್ಣನ್ನು ಹಿಂಡಿ ರಸ ಸಂಗ್ರಹಿಸಿ ಸಿಪ್ಪೆಯನ್ನು ಎಸೆದುಬಿಡುತ್ತೇವೆ. ಆದರೆ ಈ ಸಿಪ್ಪೆಯಲ್ಲಿಯೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂದು ನಿಮಗೆ ಗೊತ್ತಿತ್ತೇ? ಲಿಂಬೆಹಣ್ಣಿನಲ್ಲಿ ವಿಟಮಿನ್ B6, B1, A ಹಾಗೂ C, ಫೋಲಿಕ್ ಆಮ್ಲ, ಮೆಗ್ನೇಶಿಯಂ, ಪೆಕ್ಟಿನ್, ಕ್ಯಾಲ್ಸಿಯಂ, ಪೊಟ್ಯಾಶಿಯಂ ಹಾಗೂ ಗಂಧಕ ಉತ್ತಮ ಪ್ರಮಾಣದಲ್ಲಿವೆ.

ಲಿಂಬೆ ಹಣ್ಣಿನ ಸಿಪ್ಪೆ- ತ್ವಚೆಯ ಸರ್ವರೋಗಕ್ಕೂ ರಾಮಬಾಣ

ಇವೆಲ್ಲವೂ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ಹಾಗಾದರೆ ಸಿಪ್ಪೆಯಲ್ಲಿ ಏನೂ ಇಲ್ಲವೇ? ತಪ್ಪು, ಇದರಲ್ಲಿಯೂ ಪೊಟ್ಯಾಶಿಯಂ, ವಿಟಮಿನ್ ಸಿ ಹಾಗೂ ಕರಗದ ನಾರು ಇದೆ. ಬನ್ನಿ ಈ ಸಿಪ್ಪೆಯನ್ನು ಸಂಧಿವಾತದ ಉಪಶಮನಕ್ಕಾಗಿ ಹೇಗೆ ಬಳಸಬಹುದು ಎಂಬುದನ್ನು ನೋಡೋಣ...

ಔಷಧೀಯ ಗುಣಗಳ ಆಗರ

ಔಷಧೀಯ ಗುಣಗಳ ಆಗರ

ಲಿಂಬೆಸಿಪ್ಪೆ ಉತ್ತಮವಾದ ಪ್ರತಿಜೀವಕಗಳನ್ನು ಹೊಂದಿದ್ದು ಸಮರ್ಥ ಔಷಧಿಯಂತೆ ಕೆಲಸ ನಿರ್ವಹಿಸುತ್ತದೆ. ಅಲ್ಲದೇ ಇದರಲ್ಲಿರುವ ಕೆಲವು ಅವಶ್ಯಕ ತೈಲಗಳಲ್ಲಿಯೂ ಗುಣಪಡಿಸುವ ಗುಣಗಳಿದ್ದು ದೇಹದ ಹೊರಗಿನಿಂದ ಹಾಗೂ ಒಳಗಿನಿಂದಲೂ ಉಪಶಮನ ಒದಗಿಸುತ್ತದೆ.

ರಕ್ತಸಂಚಾರ ಸುಗಮಗೊಳಿಸಲು

ರಕ್ತಸಂಚಾರ ಸುಗಮಗೊಳಿಸಲು

ಲಿಂಬೆ ಸಿಪ್ಪೆಯಲ್ಲಿರುವ ಪೋಷಕಾಂಶಗಳು ರಕ್ತನಾಳಗಳನ್ನು ನಿರಾಳಗೊಳಿಸಿ ರಕ್ತಸಂಚಾರ ಸುಗಮಗೊಳಿಸಲು ನೆರವಾಗುವುದಲ್ಲದೇ ಉರಿಯೂತವನ್ನೂ ಕಡಿಮೆಗೊಳಿಸುತ್ತದೆ.

ಸಂಧಿವಾತಕ್ಕೆ ಒಳ್ಳೆಯ ಮನೆಮದ್ದು

ಸಂಧಿವಾತಕ್ಕೆ ಒಳ್ಳೆಯ ಮನೆಮದ್ದು

ಸಂಧಿವಾತವೇ? ಈ ವಿಧಾನ ಪ್ರಯತ್ನಿಸಿ. ರಸ ಹಿಂಡಿ ತೆಗೆದ ಲಿಂಬೆಹಣ್ಣಿನ ಸಿಪ್ಪೆಯನ್ನು ಸಂಗ್ರಹಿಸಿ. ಈ ಸಿಪ್ಪೆಯ ಒಳಭಾಗದಲ್ಲಿರುವ ಸೊಳೆಗಳನ್ನು ನಿವಾರಿಸಿ ಕೇವಲ ಸಿಪ್ಪೆಯನ್ನು, ಅಂದರೆ ಒಳಗಿನ ಬಿಳಿಪದರವನ್ನು ನಿವಾರಿಸಿ ಕೇವಲ ಹಳದಿ ಬಣ್ಣದ ಹೊರಪದರವನ್ನು ಮಾತ್ರವೇ ಸಂಗ್ರಹಿಸಿ. ಈ ಪದರವನ್ನು ನೋವಿರುವ ಸಂಧುಗಳ ಮೇಲೆ ಇರಿಸಿ ಅಲ್ಲಾಡದಂತೆ ಬಟ್ಟೆಯ ಪಟ್ಟಿಯೊಂದನ್ನು ಬಿಗಿಯಾಗಿ ಕಟ್ಟಿ. ಒಂದೆರಡು ಘಂಟೆಗಳ ಬಳಿಕ ಪಟ್ಟಿಯನ್ನು ನಿವಾರಿಸಿ.

ಲಿಂಬೆ ಹಣ್ಣಿನ ಸಿಪ್ಪೆ

ಲಿಂಬೆ ಹಣ್ಣಿನ ಸಿಪ್ಪೆ

ಸಂಧಿವಾತಕ್ಕೆ ಇನ್ನೊಂದು ವಿಧಾನ ಹೀಗಿದೆ: ಕೆಲವು ಲಿಂಬೆಹಣ್ಣುಗಳ ಹೊರಸಿಪ್ಪೆಯನ್ನು ಸಂಗ್ರಹಿಸಿ ಒಂದು ಚಿಕ್ಕ ಗಾಜಿನ ಬಾಟಲಿಯಲ್ಲಿ ಹಾಕಿ. ಇದಕ್ಕೆ ಸುಮಾರು ಮೂರರಿಂದ ನಾಲ್ಕು ದೊಡ್ಡಚಮಚ ಆಲಿವ್ ಎಣ್ಣೆಯನ್ನು ಬೆರೆಸಿ ಸುಮಾರು ಹದಿನೈದು ದಿನಗಳ ಕಾಲ ಗಟ್ಟಿಯಾಗಿ ಮುಚ್ಚಳ ಮುಚ್ಚಿ. ಬಳಿಕ ಈ ಎಣ್ಣೆಯನ್ನು ನೋವಿರುವ ಭಾಗಕ್ಕೆ ನಯವಾದ ಮಸಾಜ್ ಮಾಡಿ ಹಚ್ಚಿಕೊಳ್ಳಿ. ಕೆಲವು ಗಂಟೆಗಳ ಕಾಲ ಹಾಗೇ ಇರಿಸಿ ಬಳಿಕ ತೊಳೆದುಕೊಳ್ಳಿ.

ವಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿದೆ

ವಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿದೆ

ಲಿಂಬೆರಸದಂತೆಯೇ ಲಿಂಬೆಯ ಸಿಪ್ಪೆಯಲ್ಲಿಯೂ ವಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿದೆ. ಈ ಕ್ಯಾಲ್ಸಿಯಂ ಮೂಳೆಗಳಿಗೆ ಅಗತ್ಯವಾಗಿದೆ. ಭಾರತೀಯರು ಲಿಂಬೆಹಣ್ಣನ್ನು ಇಡಿಯಾಗಿ ಅಂದರೆ ಸಿಪ್ಪೆಸಹಿತ ಉಪ್ಪಿನಕಾಯಿ ಹಾಕಿ ವರ್ಷವಿಡೀ ಊಟದೊಡನೆ ಸೇವಿಸುತ್ತಾರೆ. ಈ ಸಿಪ್ಪೆಯ ಸೇವನೆಯಿಂದ ಸಂಧಿವಾತ ಹಾಗೂ ಮೂಳೆಗಳು ಟೊಳ್ಳಾಗುವ osteoporosis ಎಂಬ ಸ್ಥಿತಿಯಿಂದ ರಕ್ಷಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುತ್ತದೆ

ಲಿಂಬೆಸಿಪ್ಪೆಯಲ್ಲಿಯೂ ಉತ್ತಮ ಪ್ರಮಾಣದ ಬಯೋ ಫ್ಲೇವನಾಯ್ಡುಗಳಿದ್ದು ಇವು ಉತ್ಕರ್ಷಣಶೀಲ ಒತ್ತಡವನ್ನು (oxidative stress) ನಿವಾರಿಸಲು ಸಮರ್ಥವಾಗಿವೆ. ಲಿಂಬೆಸಿಪ್ಪೆಯಲ್ಲಿರುವ ಪಾಲಿಫೆನಾಲ್ ಫ್ಲೇವನಾಯ್ಡುಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುತ್ತದೆ. ಲಿಂಬೆ ಸಿಪ್ಪೆಯನ್ನು ತುರಿದು ಆಹಾರದ ಜೊತೆಗೆ ಸೇವಿಸುವ ಮೂಲಕ ದೇಹದಲ್ಲಿರುವ ವಿಷವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ.

English summary

Lemon Peel Trick to Get Rid of Inflammation

We squeeze lemons for juice and throw away those peels. But do you know that even the peels are useful in many ways? Lemons contain vitamins B6, B1, A and C, folic acid, magnesium, pectin, calcium, potassium and phosphorous. Here are some more facts about lemon peels and how they can be used to cure joint pains...
Subscribe Newsletter