ಮಿಲನದ ಬಳಿಕ ಮಹಿಳೆಯರು ತಕ್ಷಣ ಮೂತ್ರ ವಿಸರ್ಜಿಸ ಬೇಕು!

By: Arshad
Subscribe to Boldsky

ಪ್ರತಿ ಹೆಣ್ಣಿಗೂ ಆಕೆಯ ತಾಯಿಯಿಂದ ಅತ್ಯಂತ ಆಪ್ತವಾದ ಮತ್ತು ಖಾಸಗಿಯಾದ ವಿಷಯಗಳು ಹಾಗೂ ಪಾಠಗಳು ದೊರಕುತ್ತವೆ. ಈ ಪಾಠಗಳಲ್ಲಿ ಪ್ರಮುಖವಾದುದೆಂದರೆ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು. ಹೆಣ್ಣಿನ ಶರೀರ ರಚನೆ ಅತಿ ಸೂಕ್ಷ್ಮ ಹಾಗೂ ಸುಲಭವಾಗಿ ಸೋಂಕುಗಳಿಗೆ ಒಳಗಾಗುವ ಹಾಗೆ ಇರುವುದರಿಂದ ಹೆಚ್ಚಿನ ಕಾಳಜಿಯ ಅಗತ್ಯವಿದೆ. ವಿವಾಹದ ಬಳಿಕ ದೇಹದ ನೈಸರ್ಗಿಕ ದಾಹವನ್ನು ಪೂರೈಸಿಕೊಳ್ಳಲು ಮಿಲನದ ರೂಪದಲ್ಲಿ ನಿಸರ್ಗ ನೀಡಿರುವ ಕೊಡುಗೆಯನ್ನು ಪಡೆದ ಬಳಿಕ ಇನ್ನೂ ಹೆಚ್ಚಿನ ಕಾಳಜಿಯನ್ನು ವಹಿಸಿಕೊಳ್ಳಬೇಕಾಗುತ್ತದೆ.

ಇದರಲ್ಲಿ ಪ್ರಮುಖವಾದುದು ಮಿಲನದ ಬಳಿಕ ಅಗತ್ಯವೆನಿಸದೇ ಇದ್ದರೂ ಕಡ್ಡಾಯವಾಗಿ ಮೂತ್ರವಿಸರ್ಜನೆಗೆ ತೆರಳುವುದು. ಹಿಂದಿನಿಂದಲೂ ಈ ಪದ್ಧತಿಯನ್ನು ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ಬೋಧಿಸುತ್ತಾ ಬಂದಿದ್ದು ಇದರ ಪರಿಣಾಮದಿಂದ ಹಲವಾರು ತೊಂದರೆಗಳಿಗೆ ಒಳಗಾಗದೇ ಇರುವುದನ್ನು ಈಗ ಸಂಶೋಧನೆಗಳಿಂದ ಸಾಬೀತುಪಡಿಸಲಾಗಿದೆ. 

ಮಿಲನಕ್ಕೂ ಮುನ್ನ, ಅಪ್ಪಿತಪ್ಪಿಯೂ ಇಂತಹ ಆಹಾರಗಳನ್ನು ಸೇವಿಸಬೇಡಿ

ಸಾಮಾನ್ಯವಾಗಿ ಮೂತ್ರನಾಳದ ಸೋಂಕು ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚು. ಏಕೆಂದರೆ ಮೂತ್ರಕೋಶದಿಂದ ಕಲ್ಮಶಗಳನ್ನು ಹೊರಹಾಕುವ ಮೂತ್ರನಾಳದ ತುದಿ ದೇಹದ ಕೊಂಚ ಒಳಭಾಗದಲ್ಲಿಯೇ ಇರುತ್ತದೆ. ಆದರೆ ಪುರುಷರಲ್ಲಿ ಇದು ಶಿಶ್ನದ ತುದಿಯಲ್ಲಿರುವ ಕಾರಣ ಪುರುಷರಿಗಿಂತಲೂ ಮಹಿಳೆಯರಲ್ಲಿ ಮೂತ್ರನಾಳದ ತುದಿಯಲ್ಲಿ ಕೊಂಚವಾದರೂ ಉಳಿಯುವ ಸಾಧ್ಯತೆ ಹೆಚ್ಚು. ಆದ್ದರಿಂದಲೂ ಮಹಿಳೆಯರಿಗೆ ಮೂತ್ರವಿಸರ್ಜಿಸಿದ ಬಳಿಕ ಕಡ್ಡಾಯವಾಗಿ ನೀರನ್ನು ಉಪಯೋಗಿಸಿ ಸ್ವಚ್ಛಗೊಳಿಸುವುದು ಅನಿವಾರ್ಯವಾಗಿದೆ. ಅದರಲ್ಲೂ ವಿವಾಹದ ಬಳಿಕ ಮಿಲನಗಳ ನಂತರ ಮೂತ್ರನಾಳದ ಸೋಂಕು (UTI-Unirary tract infection) ಎದುರಾಗುವ ಸಾಧ್ಯತೆ ಇನ್ನಷ್ಟು ಹೆಚ್ಚುತ್ತದೆ. ಇದನ್ನು ತಡೆಗಟ್ಟಲು ಮಿಲದ ಬಳಿಕ ಮೂತ್ರವಿಸರ್ಜಿಸುವುದು ಅಗತ್ಯವಾಗಿದೆ.

ಮೂತ್ರ ನಾಳದ ಸೋಂಕಿನ ಸಮಸ್ಯೆ ನಿವಾರಣೆಗೆ 'ಕೊತ್ತಂಬರಿ ಬೀಜಗಳು'

ಮೂತ್ರನಾಳದ ಸೋಂಕು ಉಂಟಾಗಲು ಬ್ಯಾಕ್ಟೀರಿಯಾ ಮೂತ್ರನಾಳದ ತುದಿಯಿಂದ ಒಳಪ್ರವೇಶಿಸಿ ಮೂತ್ರನಾಳದ ಮೂಲಕ ಮೂತ್ರಕೋಶವನ್ನು ತಲುಪುತ್ತದೆ. ಇಲ್ಲಿ ಇವು ಭಾರೀ ಸಂಖ್ಯೆಯಲ್ಲಿ ವೃದ್ಧಿಗೊಂಡು ಸೋಂಕು ಹರಡುತ್ತವೆ. ಮಿಲನದ ಸಂದರ್ಭದಲ್ಲಿ ಮೂತ್ರನಾಳದ ತುದಿಯಲ್ಲಿ ಬ್ಯಾಕ್ಟೀರಿಯಾಗಳು ಸೇರುವ ಸಂಭವ ಹೆಚ್ಚು. ಆದ್ದರಿಂದ ಮಿಲನದ ಬಳಿಕ ಮೂತ್ರ ವಿಸರ್ಜಿಸುವ ಮೂಲಕ ಈಗತಾನೇ ಮೂತ್ರನಾಳವನ್ನು ಪ್ರವೇಶಿಸಿದ್ದ ಬ್ಯಾಕ್ಟೀರಿಯಾಗಳನ್ನು ಒತ್ತಡದಿಂದ ಹೊರಹಾಕಲು ಸಾಧ್ಯ. ಆದ್ದರಿಂದ ಮಿಲನದ ಮುನ್ನ ಹಾಗೂ ಮಿನಲದ ಬಳಿಕ ಮೂತ್ರ ವಿಸರ್ಜಿಸುವ ಮೂಲಕ ಈ ಸೋಂಕಿನ ಸಾಧ್ಯತೆಯನ್ನು ಬಹುತೇಕವಾಗಿ ಇಲ್ಲವಾಗಿಸಬಹುದು. ಬನ್ನಿ, ಈ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಅರಿತುಕೊಳ್ಳೋಣ....

ಒಂದು ವೇಳೆ ಮೂತ್ರವಿಸರ್ಜನೆಗೆ ಅವಸರವಾದರೆ ಅಲಕ್ಷಿಸಬೇಡಿ

ಒಂದು ವೇಳೆ ಮೂತ್ರವಿಸರ್ಜನೆಗೆ ಅವಸರವಾದರೆ ಅಲಕ್ಷಿಸಬೇಡಿ

ದಿನದ ಯಾವುದೇ ಹೊತ್ತಿನಲ್ಲಿ ಅಥವಾ ರಾತ್ರಿ ಮಿಲನದ ಬಳಿಕ ಮೂತ್ರಕ್ಕೆ ಕೊಂಚ ಅವಸರವಾದರೂ ಸರಿ, ತಕ್ಷಣ ಶೌಚಾಲಯಕ್ಕೆ ಹೊರಡಿ. ಏಕೆಂದರೆ ಮೂತ್ರಕೋಶದಲ್ಲಿ ಎಷ್ಟು ಹೆಚ್ಚು ಹೊತ್ತು ಮೂತ್ರವನ್ನು ಸಂಗ್ರಹಿಸಿಟ್ಟುಕೊಳ್ಳುತ್ತೀರೋ ಅಷ್ಟೇ ಸೋಂಕು ತಗಲುವ ಸಾಧ್ಯತೆಯೂ ಹೆಚ್ಚುತ್ತದೆ. ಮೂತ್ರದ ಸಾಂದ್ರತೆ ಸಮಯ ಕಳೆದಂತೆ ಹೆಚ್ಚುತ್ತಾ ಬ್ಯಾಕ್ಟೀರಿಯಾಗಳಿಗೆ ಸೂಕ್ತ ತಾಣವಾಗುತ್ತದೆ. ಅಷ್ಟೇ ಅಲ್ಲ, ಮೂತ್ರ ವಿಸರ್ಜಿಸಿದ ಬಳಿತ ತಪ್ಪದೇ ನೀರಿನಿಂದ ತೊಳೆದುಕೊಂಡು ಮುಂಭಾಗದಿಂದ ಹಿಂಭಾಗಕ್ಕೆ ಬರುವಂತೆ ಒರೆಸಿಕೊಂಡು ಒಣಗಿಸಬೇಕು.

ಕೆಲವು ಮಹಿಳೆಯರಿಗೆ ಉಳಿದವರಿಗಿಂತಲೂ ಹೆಚ್ಚು ಸೋಂಕು ಎದುರಾಗುತ್ತದೆ

ಕೆಲವು ಮಹಿಳೆಯರಿಗೆ ಉಳಿದವರಿಗಿಂತಲೂ ಹೆಚ್ಚು ಸೋಂಕು ಎದುರಾಗುತ್ತದೆ

ಕೆಲವು ವ್ಯಕ್ತಿಗಳಿಗೆ ಈ ಸೋಂಕು ಸುಲಭವಾಗಿ ಎದುರಾಗುತ್ತದೆ. ಇದಕ್ಕೆ ಸ್ವಚ್ಛತೆಯ ಕೊರತೆಯ ಸಹಿತ ಇತರ ದೈಹಿಕ ಏರುಪೇರುಗಳೂ ಕಾರಣವಾಗಿರಬಹುದು. ಆದರೆ ಒಂದು ವೇಳೆ ಪ್ರತಿ ಆರು ತಿಂಗಳಲ್ಲಿ ಎರಡು ಬಾರಿಯಾದರೂ ಈ ಸೋಂಕು ಎದುರಾಗಿದ್ದರೆ ನಿಮ್ಮ ದೇಹ ಬ್ಯಾಕ್ಟೀರಿಯಾದ ಸೋಂಕಿಗೆ ಒಳಗಾಗುವ ಸಾಧ್ಯತೆ ಇತರರಿಗಿಂತ ಹೆಚ್ಚು ಎಂದು ತಿಳಿದುಕೊಳ್ಳಬೇಕು. ಈ ವ್ಯಕ್ತಿಗಳಿಗೆ ಸ್ವಚ್ಛತೆ ಹಾಗೂ ಇತರ ಆರೋಗ್ಯದ ಕಾಳಜಿಯ ಬಗ್ಗೆ ಅತಿ ಹೆಚ್ಚು ಗಮನ ನೀಡಬೇಕಾಗುತ್ತದೆ.

ಒಂದು ವೇಳೆ ಮಿಲನದ ಬಳಿಕ ಒಮ್ಮೆಯೂ ಸೋಂಕು ಉಂಟಾಗದೇ ಇದ್ದರೆ ನೀವು ಅವಸರಿಸಬೇಕಾಗಿಲ್ಲ

ಒಂದು ವೇಳೆ ಮಿಲನದ ಬಳಿಕ ಒಮ್ಮೆಯೂ ಸೋಂಕು ಉಂಟಾಗದೇ ಇದ್ದರೆ ನೀವು ಅವಸರಿಸಬೇಕಾಗಿಲ್ಲ

ಒಂದು ವೇಳೆ ಮಿಲನದ ಬಳಿಕವೂ ಯಾವುದೇ ತೊಂದರೆ ಆಗಿಲ್ಲ ಎಂದಾದರೆ ನಿಮ್ಮ ದೇಹ ಬ್ಯಾಕ್ಟೀರಿಯಾ ಎದುರಿಸುವ ಶಕ್ತಿಯನ್ನು ಪಡೆದಿದೆ ಹಾಗೂ ನಿಮ್ಮ ದೇಹದಲ್ಲಿ ಸಾಕಷ್ಟು ನೀರು ಹಾಗೂ ಸೂಕ್ತಕಾಲದಲ್ಲಿ ಮೂತ್ರ ವಿಸರ್ಜಿಸುತ್ತಾ ಬಂದಿದ್ದೀರಿ ಎಂದು ತಿಳಿದುಕೊಳ್ಳಬಹುದು.

ಮಹಿಳೆಯರಲ್ಲಿ ಮೂತ್ರನಾಳ ಚಿಕ್ಕದಿರುತ್ತದೆ

ಮಹಿಳೆಯರಲ್ಲಿ ಮೂತ್ರನಾಳ ಚಿಕ್ಕದಿರುತ್ತದೆ

ಪುರುಷರಿಗೆ ಹೋಲಿಸಿದರೆ ಮೂತ್ರಕೋಶದಿಂದ ಹೊರಟ ಮೂತ್ರನಾಳದ ತುದಿಯವರೆಗಿನ ಉದ್ದ ಮಹಿಳೆಯರಲ್ಲಿ ಕಡಿಮೆ ಇರುತ್ತದೆ. ಇದೇ ಕಾರಣಕ್ಕೆ ಬ್ಯಾಕ್ಟೀರಿಯಾಗಳಿಗೆ ಮೂತ್ರಕೋಶದವರೆಗೂ ತಲುಪಲು ಸುಲಭವಾಗುತ್ತದೆ. ಇವು ಇಲ್ಲಿ ವೃದ್ಧಿಗೊಂಡು ಸೋಂಕು ಹರಡಿ ಮೂತ್ರದಲ್ಲಿ ಉರಿಯನ್ನುಂಟುಮಾಡುತ್ತವೆ.

ಮಹಿಳೆಯರ ಸ್ಖಲನ ಮೂತ್ರನಾಳದಿಂದ ಆಗುವುದಿಲ್ಲ

ಮಹಿಳೆಯರ ಸ್ಖಲನ ಮೂತ್ರನಾಳದಿಂದ ಆಗುವುದಿಲ್ಲ

ಮಿಲನದ ಬಳಿಕ ಮಹಿಳೆಯರ ಜನನಾಂಗ ಹಾಗೂ ಗುದದ್ವಾರದ ಸೂಕ್ಷ್ಮ ಪ್ರದೇಶದಲ್ಲಿ ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಜೀವಿಗಳು ದಾಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸೂಕ್ಷ್ಮಜೀವಿಗಳು ಮೂತ್ರನಾಳದ ಮೂಲಕ ಒಳಪ್ರವೇಶಿಸುತ್ತವೆ.

ಮಹಿಳೆಯರ ಸ್ಖಲನ ಮೂತ್ರನಾಳದಿಂದ ಆಗುವುದಿಲ್ಲ

ಮಹಿಳೆಯರ ಸ್ಖಲನ ಮೂತ್ರನಾಳದಿಂದ ಆಗುವುದಿಲ್ಲ

ಇದರಿಂದ ಮೂತ್ರಕೋಶದಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚುತ್ತದೆ. ಈ ಪರಾವಲಂಬಿಗಳನ್ನು ಇವುಗಳ ಆಶ್ರಯದಿಂದ ಹೊರಹಾಕಲು ಒಂದೇ ಉಪಾಯ, ಅದೆಂದರೆ ಮಿಲನದ ಬಳಿಕ ಮೂತ್ರವಿಸರ್ಜಿಸುವುದು.

ಗುದದ್ವಾರದಿಂದ ಮೂತ್ರನಾಳಕ್ಕೆ ಹೆಚ್ಚಿನ ದೂರವಿಲ್ಲ

ಗುದದ್ವಾರದಿಂದ ಮೂತ್ರನಾಳಕ್ಕೆ ಹೆಚ್ಚಿನ ದೂರವಿಲ್ಲ

ದೇಹದಿಂದ ವಿಸರ್ಜಿಸಲ್ಪಡುವ ಉಚ್ಛಿಷ್ಟದಲ್ಲಿಯೂ ಲಕ್ಷಾಂತರ ಕ್ರಿಮಿಗಳಿರುತ್ತವೆ. ಗುದದ್ವಾರದ ಭಾಗವನ್ನು ಎಷ್ಟು ತೊಳೆದುಕೊಂಡಿದ್ದರೂ ಕೊಂಚವಾದರೂ ಕ್ರಿಮಿಗಳು ಉಳಿದುಕೊಳ್ಳುವ ಸಾಧ್ಯತೆ ಇದ್ದೇ ಇದೆ.

ಗುದದ್ವಾರದಿಂದ ಮೂತ್ರನಾಳಕ್ಕೆ ಹೆಚ್ಚಿನ ದೂರವಿಲ್ಲ

ಗುದದ್ವಾರದಿಂದ ಮೂತ್ರನಾಳಕ್ಕೆ ಹೆಚ್ಚಿನ ದೂರವಿಲ್ಲ

ಇವು ನಿಧಾನವಾಗಿ ದಾಟಿಕೊಂಡು ಮೂತ್ರನಾಳದವರೆಗೂ ಬರುವ ಸಾಧ್ಯತೆ ಇದೆ. ಮಿಲನದ ಬಳಿಕ ಈ ಕ್ರಿಮಿಗಳು ದಾಟಿ ಬರುವ ಸಾಧ್ಯತೆ ಇನ್ನಷ್ಟು ಹೆಚ್ಚುತ್ತದೆ. ಹಾಗಾಗಿ ಮಿಲನದ ಬಳಿಕ ಮೂತ್ರವಿಸರ್ಜಿಸುವುದು ಅತ್ಯಂತ ಅಗತ್ಯವಾಗಿದೆ.

English summary

Ladies, You Need To Do This One Thing Immediately After An Intercourse!

Peeing after an intercourse is one of the unwritten rules that we either ignore or follow. But it is high time that you knew whether you must actually pee after sex and the importance of doing so. Of course, it doesn't mean that you have to immediately jump out of bed after you're done. It is a well-known fact that UTIs are very common in women and those who are sexually active are more likely to get them. This article will let you know if it is necessary to urinate after an intercourse.
Subscribe Newsletter