For Quick Alerts
ALLOW NOTIFICATIONS  
For Daily Alerts

  ಮಹಿಳೆಯರಿಗೆ ಮಾತ್ರ! ನೊರೆಮೂತ್ರದ ಕಾರಣಗಳನ್ನು ಅರಿಯಿರಿ

  By Arshad
  |

  ಮಹಿಳೆಯರು ಎದುರಿಸುವ ಕೆಲವು ಆರೋಗ್ಯದ ಸಮಸ್ಯೆಗಳು ಉಲ್ಬಣಗೊಳ್ಳಲು ಬಹಳ ಹಳೆಯ ಕಾಲದಿಂದಲೂ ನಡೆದುಬಂದ ಕಾರಣವೆಂದರೆ-ಮುಜುಗರ! ಇಪ್ಪತ್ತೊಂದನೆಯ ಶತಮಾನಕ್ಕೆ ಲಗ್ಗೆಯಿಟ್ಟು ಎರಡು ದಶಕಗಳೇ ಕಳೆದರೂ ಇಂದಿಗೂ ಎಷ್ಟೋ ಮಹಿಳೆಯರು ತಮ್ಮ ವೈಯಕ್ತಿಯ ತೊಂದರೆಗಳನ್ನು ಸ್ತ್ರೀರೋಗತಜ್ಞರಲ್ಲಿ ತೋರಿಸಲು ಹಿಂದೇಟು ಹಾಕುತ್ತಾರೆ.

  ಸಾಮಾನ್ಯವಾಗಿ ಮುಜಗರದಿಂದ ಕೆಲವು ಸಾಮಾನ್ಯ ಸೂಚನೆಗಳನ್ನು ಮಹಿಳೆಯರು ಅಲಕ್ಷಿಸುತ್ತಾರೆ. ಹಲವೊಮ್ಮೆ ತಾವು ಸೇವಿಸಿದ ಆಹಾರವೇ ಕಾರಣವಿರಬಹುದು ಎಂದುಕೊಂಡು ಮಜ್ಜಿಗೆಯನ್ನು ಕುಡಿದೋ ಅಥವಾ ತಮ್ಮ ಹಿರಿಯರು ಸೂಚಿಸಿದ ಔಷಧಿಗಳನ್ನು ಸೇವಿಸಿ ಈ ತೊಂದರೆ ತನ್ನಿಂತಾನೇ ವಾಸಿಯಾಗುತ್ತದೆ ಎಂದುಕೊಳ್ಳುತ್ತಾರೆ. ಇಂತಹ ಒಂದು ಸಾಮಾನ್ಯ ಸೂಚನೆ ಎಂದರೆ ಮೂತ್ರ ನೊರೆನೊರೆಯಾಗಿರುವುದು.

  ಮೂತ್ರ ನೊರೆ ನೊರೆಯಿಂದ ಕೂಡಿದ್ದರೆ, ಆರೋಗ್ಯ ಸಮಸ್ಯೆವಿದೆ ಎಂದರ್ಥ!

  ಮೂತ್ರದ ಮೂಲಕ ದೇಹದ ಕಲ್ಮಶಗಳನ್ನು ಕಾಲಕಾಲಕ್ಕೆ ವಿಸರ್ಜಿಸುತ್ತಲೇ ಇರಬೇಕು. ಆರೋಗ್ಯಕರ ವ್ಯಕ್ತಿಯ ಮೂತ್ರ ಪಾರದರ್ಶಕದಿಂದ ತೊಡಗಿ ತಿಳಿಹಳದಿ ಬಣ್ಣದವರೆಗೂ ಇರಬಹುದು. ಇದಕ್ಕೆ ಆಹಾರದಲ್ಲಿ ಬದಲಾವಣೆ, ನೀರು ಕುಡಿಯುವ ಪ್ರಮಾಣದಲ್ಲಿ ಕಡಿಮೆಯಾಗಿರುವುದು, ಸೇವಿಸುವ ಔಷಧಿಗಳ ಪರಿಣಾಮ ಮೊದಲಾದವುಗಳು ಕಾರಣವಾಗಿರುತ್ತವೆ.

  ಸಾಮಾನ್ಯವಾಗಿ ಹೆಚ್ಚು ಹೊತ್ತು ಮೂತ್ರವಿಸರ್ಜಿಸದೇ ಇದ್ದಾಗ ಹೆಚ್ಚಿನ ಪ್ರಮಾಣ ಒಮ್ಮೆಲೇ ಹೊರಬರುವ ಒತ್ತಡದಿಂದಲೂ ನೊರೆಯುಂಟಾಗುತ್ತದೆ ಆದರೆ ಈ ಗುಳ್ಳೆಗಳು ಹೆಚ್ಚೂ ಕಡಿಮೆ ತಕ್ಷಣವೇ ಒಡೆದುಹೋಗುತ್ತವೆ. ಆದರೆ ಮೂತ್ರ ನೊರೆನೊರೆಯಾಗಿದ್ದು ಗುಳ್ಳೆಗಳು ಪೂರ್ಣವಾಗಿ ಒಡೆದುಹೋಗಲು ಹೆಚ್ಚೇ ಸಮಯ ತೆಗೆದುಕೊಳ್ಳುತ್ತಿದ್ದರೆ ಮಾತ್ರ ಇದು ವೈದ್ಯಕೀಯ ನೆರವು ಪಡೆಯಲೇಬೇಕಾಗಿರುವ ಲಕ್ಷಣವಾಗಿದೆ.

  ಮುಜುಗರ ತರುವ 'ಮೂತ್ರ ಸಮಸ್ಯೆ'! ಇನ್ನು ಚಿಂತೆ ಬಿಡಿ....

  ಕೆಲವು ಮಹಿಳೆಯರು ಮೂತ್ರದಲ್ಲಿ ರಕ್ತ ಅಥವಾ ಕೀವು ಸಹಾ ಇರುವುದನ್ನು ಗಮನಿಸಬಹುದು. ಇದಕ್ಕೆ ಕೆಲವಾರು ಕಾರಣಗಳಿದ್ದು ಸಾಮಾನ್ಯವಾದ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ. ಕಾರಣ ಯಾವುದೇ ಇರಲಿ, ತಕ್ಷಣವೇ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯುವುದು ಮಾತ್ರ ಅನಿವಾರ್ಯವಾಗಿದೆ....

  ಮೂತ್ರನಾಳದ ಸೋಂಕು

  ಮೂತ್ರನಾಳದ ಸೋಂಕು

  ಮೂತ್ರನಾಳದ ಸೋಂಕು ಅಥವಾ UTI ಸಾಮಾನ್ಯವಾಗಿ ಪ್ರತಿ ಮಹಿಳೆಯನ್ನೂ ಬಾಧಿಸುತ್ತದೆ. ಇದರ ಪ್ರಾರಂಭ ನಿರ್ಮಲವಿರದ ಶೌಚಾಲಯವನ್ನು ಬಳಸುವ ಮೂಲಕ ಮೊದಲಿಗೆ ಪ್ರಾರಂಭವಾಗುತ್ತದೆ. ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳು ಮೂತ್ರದ್ವಾರದಿಂದ ದೇಹದಲ್ಲಿ ಪ್ರವೇಶ ಪಡೆದು ಮೂತ್ರನಾಳದಲ್ಲಿ ಸೋಂಕು ಉಂಟುಮಾಡಿ ಭಾರೀ ಉರಿ ತರಿಸುತ್ತವೆ. ಈ ಸೋಂಕಿನಿಂದ ಕೂಡಿದ ಮೂತ್ರವೂ ನೊರೆನೊರೆಯಾಗಿರುತ್ತದೆ. ಈ ಪರಿಸ್ಥಿತಿ ಕಂಡುಬಂದ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಆಂಟಿ ಬಯಾಟಿಕ್ ಗುಳಿಗೆಗಳನ್ನು ಸೇವಿಸಬೇಕು. ಅಷ್ಟೇ ಅಲ್ಲ, ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಸೋಂಕುಕಾರಕ ಕ್ರಿಮಿಗಳಿಂದ ರಕ್ಷಣೆ ಪಡೆಯುವತ್ತ ಸೂಕ್ತ ಸ್ಯಾನಿಟೈಜರ್ ಗಳನ್ನು ಬಳಸಬೇಕು.

  ಮೂತ್ರಪಿಂಡದ ತೊಂದರೆ

  ಮೂತ್ರಪಿಂಡದ ತೊಂದರೆ

  ರಕ್ತವನ್ನು ಶುದ್ಧೀಕರಿಸುವ ಮೂತ್ರಪಿಂಡಗಳು ಅತ್ಯಂತ ಮುಖ್ಯ ಅಂಗಗಳಾಗಿದ್ದು ಇದರ ಕ್ಷಮತೆಯಲ್ಲಿ ಏರುಪೇರಾದರೂ ಆರೋಗ್ಯಕ್ಕೆ ಮಾರಕವಾಗಿದೆ. ಮೂತ್ರಪಿಂಡ ವಿಫಲಗೊಂಡರೆ ಡಯಾಲಿಸಿಸ್ ಸಹಾ ಮಾಡಬೇಕಾಗಿ ಬರಬಹುದು. ಮೂತ್ರಪಿಂಡದಲ್ಲಿರುವ ಕಲ್ಲು ಬೆಳೆದಿದ್ದರೂ ಈ ತೊಂದರೆ ಕಾಣಿಸಿಕೊಳ್ಳುತ್ತದೆ.

  ಮೂತ್ರಪಿಂಡದ ತೊಂದರೆ

  ಮೂತ್ರಪಿಂಡದ ತೊಂದರೆ

  ಆದ್ದರಿಂದ, ಒಂದು ವೇಳೆ ನೊರೆಭರಿತ ಮೂತ್ರ ಸತತವಾಗಿ ಹಲವು ದಿನಗಳಿಂದ ಕಂಡುಬರುತ್ತಾ ಇದ್ದರೆ ಇದಕ್ಕೆ ಮೂತ್ರಪಿಂಡದ ಕ್ಷಮತೆ ಉಡುಗಿರುವುದು ಒಂದು ಕಾರಣವಾಗಿರಬಹುದು. ಯಾವುದಕ್ಕೂ ತಡವಾಗುವ ಮುನ್ನವೇ, ಮೂತ್ರದಲ್ಲಿ ನೊರೆಯನ್ನು ಕಂಡ ಮೊದಲ ದಿನಗಳಲ್ಲಿಯೇ ವೈದ್ಯರಲ್ಲಿ ತಪಾಸಣೆಗೊಳಪಡುವ ಮೂಲಕ ಮುಂದಾಗುವ ಅನಾಹುತವನ್ನು ತಡೆಯಬಹುದು.

  ಮಧುಮೇಹ

  ಮಧುಮೇಹ

  ಮೂತ್ರಪಿಂಡಗಳ ಕ್ಷಮತೆ ಉಡುಗಲು ಇನ್ನೊಂದು ಕಾರಣವೆಂದರೆ ಮಧುಮೇಹ. ಮಧುಮೇಹವಿರುವ ವ್ಯಕ್ತಿಗಳ ಮೂತ್ರ ನೊರೆನೊರೆಯಾಗಿರುತ್ತದೆ ಹಾಗೂ ಈ ನೊರೆ ಅತಿ ಚಿಕ್ಕ ಗುಳ್ಳೆಗಳಿಂದ ಕೂಡಿರುತ್ತದೆ. ಮಧುಮೇಹಿಗಳು ತಾವು ಹಿಂದೆ ಯಾವಾಗ ಕಡೆಯ ಬಾರಿ ಸಕ್ಕರೆಯ ಪರೀಕ್ಷೆ ಮಾಡಿದ್ದೆವು ಎಂಬುದನ್ನು ಪರಿಶೀಲನೆ ನಡೆಸಿ ಹಲವು ದಿನಗಳೇ ಆಗಿದ್ದರೆ ತಕ್ಷಣ ಮಧುಮೇಹ ತಜ್ಞ ವೈದ್ಯರ ಬಳಿ ಮತ್ತೊಮ್ಮೆ ತಪಾಸಣೆಗೊಳಪಡಬೇಕು. ಈ ತೊಂದರೆ ಎದುರಾದಾಗ ವೈದ್ಯರು ರೋಗಿಗೆ ಆಹಾರದ ಮೇಲೂ ಕೆಲವು ನಿರ್ಬಂಧಗಳನ್ನು ವಿಧಿಸಿ ಔಷಧಿಗಳಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಬಹುದು. ತಕ್ಷಣದ ವೈದ್ಯಕೀಯ ನೆರವಿನಿಂದ ಮಧುಮೇಹದ ಪ್ರಭಾವವನ್ನು ಎದುರಿಸಿ ಆರೋಗ್ಯವನ್ನು ಮರುಪಡೆಯಲು ಸಾಧ್ಯ.

  ಹೃದಯದ ತೊಂದರೆ

  ಹೃದಯದ ತೊಂದರೆ

  ಒಂದು ವೇಳೆ ರೋಗಿ ಹೃದಯದ ತೊಂದರೆಗಳಿಂದಲೂ ಬಾಧಿತನಾಗಿದ್ದರೆ ಈ ವ್ಯಕ್ತಿಯ ಮೂತ್ರವೂ ಕೊಂಚ ನೊರೆನೊರೆಯಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ದೇಹದ ಎಲ್ಲಾ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಹೃದಯ ತಜ್ಞರಿಂದ ಪರಿಶೀಲಿಸಿ ಸೂಕ್ತ ಸಲಹೆ ಪಡೆದುಕೊಳ್ಳಬೇಕು. ಅಧಿಕ ರಕ್ತದೊತ್ತಡವೂ ನೊರೆಮೂತ್ರಕ್ಕೆ ಕಾರಣವಾಗಿರುತ್ತದೆ. ಆದ್ದರಿಂದ ಹೃದಯರೋಗಿಗಳು ಈ ಸೂಚನೆಯನ್ನು ಎಂದಿಗೂ ಅಲಕ್ಷಿಸಕೂಡದು.

  ಮೂತ್ರದಲ್ಲಿ ಅಧಿಕ ಪ್ರೋಟೀನ್ ಇರುವುದು (Proteinuria)

  ಮೂತ್ರದಲ್ಲಿ ಅಧಿಕ ಪ್ರೋಟೀನ್ ಇರುವುದು (Proteinuria)

  ಪ್ರೋಟೀನುಗಳು ನಮ್ಮ ರಕ್ತದಿಂದ ಜೀವಕೋಶ ಹಾಗೂ ಅಂಗಾಂಶಗಳಿಗೆ ತಲುಪಬೇಕಾದ ಪೋಷಕಾಂಶಗಳಾಗಿವೆ. ಒಂದು ವೇಳೆ ಇವು ಅಲ್ಲಿ ತಲುಪದೇ ಮೂತ್ರಪಿಂಡಗಳ ಮೂಲಕ ಶುದ್ಧೀಕರಣಗೊಂಡು ಮೂತ್ರದ ಮೂಲಕ ವಿಸರ್ಜಿಸಲ್ಪಟ್ಟರೆ ಇದಕ್ಕೆ Proteinuria ಎಂದು ಕರೆಯುತ್ತಾರೆ. ಈ ಸ್ಥಿತಿಯಲ್ಲಿಯೂ ಮೂತ್ರ ನೊರೆನೊರೆಯಾಗಿರುತ್ತದೆ ಹಾಗೂ ಗುಳ್ಳೆಗಳು ಒಡೆಯಲು ತುಂಬಾ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

  ಮೂತ್ರದಲ್ಲಿ ಅಧಿಕ ಪ್ರೋಟೀನ್ ಇರುವುದು (Proteinuria)

  ಮೂತ್ರದಲ್ಲಿ ಅಧಿಕ ಪ್ರೋಟೀನ್ ಇರುವುದು (Proteinuria)

  ಸಾಮಾನ್ಯವಾಗಿ ಎಲ್ಲಾ ಆರೋಗ್ಯಕರ ವ್ಯಕ್ತಿಗಳ ಮೂತ್ರದಲ್ಲಿಯೂ ಕೊಂಚ ಪ್ರೋಟೀನ್ ಇದ್ದೇ ಇರುತ್ತದೆ. ಆದರೆ ಇದರ ಪ್ರಮಾಣ ಹೆಚ್ಚಾದರೆ ಮಾತ್ರ (ಸಾಮಾನ್ಯ ಪ್ರಮಾಣ-ದಿನಕ್ಕೆ ಎರಡು ಗ್ರಾಂ) ಇದು ಆತಂಕಕ್ಕೆ ಕಾರಣವಾಗಿದೆ. ಇದು ಮೂತ್ರಪಿಂಡದಲ್ಲಿ ಕಲ್ಲು ಅಥವಾ ಮಧುಮೇಹದ ಲಕ್ಷಣವೂ ಆಗಿದೆ. ಉಳಿದಂತೆ ಅಧಿಕ ರಕ್ತದೊತ್ತಡ ಅಥವಾ ಅತಿ ಹೆಚ್ಚು ಪ್ರೋಟೀನ್ ಸೇವನೆ (ಮೊಟ್ಟೆ, ಮಾಂಸ, ಕೋಳಿ ಮಾಂಸ) ಯಿಂದಲೂ ಅಗತ್ಯಕ್ಕೂ ಹೆಚ್ಚಿನ ಪ್ರಮಾಣ ದೇಹಕ್ಕೆ ಸೇರುವುದೂ ಇನ್ನೊಂದು ಕಾರಣವಾಗಿದೆ.

  ಮಾನಸಿಕ ಒತ್ತಡ

  ಮಾನಸಿಕ ಒತ್ತಡ

  ಕೆಲಸದ ಮೂಲಕ ಎದುರಾಗುವ ಮಾನಸಿಕ ಒತ್ತಡ ಅಥವಾ ಬೇರಾವುದೋ ಕಾರಣದಿಂದ ಪ್ರಕ್ಷುಬ್ದಗೊಂಡಿರುವ ಮನವೂ ಮೂತ್ರ ನೊರೆಯಾಗಲಿಕ್ಕೆ ಕಾರಣವಾಗಿರಬಹುದು. ಹೀಗಾದಾಗ ಮನಸ್ಸನ್ನು ನಿರಾಳಗೊಳಿಸಲು ಯತ್ನಿಸಿ. ಪ್ರಾಣಾಯಾಮ, ಧ್ಯಾನ ಮೊದಲಾದವು ಖಂಡಿತಾ ನೆರವಾಗುತ್ತವೆ. ಇದರಿಂದ ಮೆದುಳಿನ ಒತ್ತಡವನ್ನು ಕಡಿಮೆಗೊಳಿಸುವುದು ಮಾತ್ರವಲ್ಲದೇ ಇತರ ಅನಗತ್ಯ ತೊಂದರೆಗಳಿಂದಲೂ ಮುಕ್ತಿ ಪಡೆಯಬಹುದು.

  ನಿರ್ಜಲೀಕರಣ

  ನಿರ್ಜಲೀಕರಣ

  ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸದೇ ಇರುವುದೂ ಇನ್ನೊಂದು ಕಾರಣವಾಗಿದೆ. ಮೂತ್ರವಿಸರ್ಜನೆಗೆ ಸೂಕ್ತ ಅವಕಾಶವಿಲ್ಲದ ಸ್ಥಳಗಳಲ್ಲಿ ಅಥವಾ ಪ್ರಯಾಣದ ಅವಧಿಯಲ್ಲಿ ಮೂತ್ರಕ್ಕೆ ಅವಸರವಾಗಬಾರದೆಂದು ಎಷ್ಟೋ ಮಹಿಳೆಯರು ನೀರನ್ನೇ ಕುಡಿಯುವುದಿಲ್ಲ. ಇದರಿಂದ ನಿರ್ಜಲೀಕರಣ ಎದುರಾಗುತ್ತದೆ. ಆದ್ದರಿಂದ ನಿತ್ಯವೂ ಸಾಕಷ್ಟು ಪ್ರಮಾಣದ ನೀರು ಕುಡಿಯುವ ಮೂಲಕ ನಿರ್ಜಲೀಕರಣದಿಂದ ಪಾರಾಗಬಹುದು. ಆದರೆ ಮಧುಮೇಹಿಗಳಿಗೆ ನೀರು ಕುಡಿಯುವ ಪ್ರಮಾಣಕ್ಕೊಂದು ಮಿತಿಯಿದೆ. ಇದರಿಂದ ಒಂದು ವೇಳೆ ಇದಕ್ಕೂ ಹೆಚ್ಚಿನ ಪ್ರಮಾಣದ ನೀರು ಕುಡಿದರೆ ಹೆಚ್ಚುವರಿ ನೀರು ಹೆಚ್ಚಿನ ಗ್ಲೂಕೋಸ್ ಅನ್ನು ಮೂತ್ರದ ಮೂಲಕ ಹೊರಹಾಕುವ ಮೂಲಕವೂ ಮೂತ್ರ ನೊರೆನೊರೆಯಾಗುತ್ತದೆ. ಆದ್ದರಿಂದ ಮಧುಮೇಹಿಗಳಲ್ಲದವರು ತಾವು ಕುಡಿಯುವ ನೀರಿನ ಪ್ರಮಾಣದ ಬಗ್ಗೆ ಗಮನ ಹರಿಸಬೇಕು.

  ಕನಿಷ್ಠ ಎಂಟರಿಂದ ಹತ್ತು ಲೋಟಗಳಷ್ಟು ನೀರು ಕುಡಿಯಿರಿ

  ಕನಿಷ್ಠ ಎಂಟರಿಂದ ಹತ್ತು ಲೋಟಗಳಷ್ಟು ನೀರು ಕುಡಿಯಿರಿ

  ದಿನಕ್ಕೆ ಕನಿಷ್ಠ ಎಂಟರಿಂದ ಹತ್ತು ಲೋಟಗಳಷ್ಟು ನೀರನ್ನಾದರೂ ಕುಡಿಯಲೇಬೇಕು. ಒಂದು ವೇಳೆ ಉರಿಮೂತ್ರ ನಿತ್ಯವೂ ಕಂಡುಬಂದರೆ ಇದಕ್ಕೆ ಮೇಲೆ ತಿಳಿಸಿದ ಯಾವುದೇ ಕಾರಣಗಳಿರಬಹುದು. ತಕ್ಷಣವೇ ವೈದ್ಯಕೀಯ ನೆರವು ಪಡೆದು ಸೂಕ್ತ ಚಿಕಿತ್ಸೆ ಕೈಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಆರೋಗ್ಯವನ್ನು ಪಡೆಯಬಹುದು. ಆದರೆ ಗರ್ಭಿಣಿಯರಿಗೆ ಈ ಸ್ಥಿತಿ ಸಾಮಾನ್ಯವಾಗಿದ್ದು ಹೆಚ್ಚಿನ ಆತಂಕಕ್ಕೆ ಕಾರಣವಿಲ್ಲ.

  English summary

  Ladies! Know These Causes Of Foamy Urine

  Foamy urine can be a major concern for women and needs immediate medical help. It's not always that the pressure on your bladder was high and thus you passed a foamy urine. Well, it can be a primary cause, but there are secondary factors too. Some women even experience blood or pus in the urine. Here is the list of a few possible reasons for a persistent foamy urination.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more