ಮಹಿಳೆಯರೇ! ಮಿಲನದ ಬಳಿಕ ಈ ಕ್ರಮಗಳನ್ನು ಕೈಗೊಳ್ಳಲು ಮರೆಯದಿರಿ

Posted By: Arshad
Subscribe to Boldsky

ನಮ್ಮಲ್ಲಿ ಹೆಚ್ಚಿನ ದಂಪತಿಗಳು ಮಿಲನದ ಅಥವಾ ಸೆಕ್ಸ್ ಮುನ್ನ ಹಾಗೂ ಮಿಲನದ ಬಳಿಕ ಕೈಗೊಳ್ಳಬೇಕಾದ ಕೆಲವು ಅವಶ್ಯಕ ಕ್ರಮಗಳ ಬಗ್ಗೆ ಚಿಂತಿಸುವುದಿಲ್ಲ. ಪರಿಣಾಮವಾಗಿ ಹೆಚ್ಚಿನವರಲ್ಲಿ ಸೋಂಕು ಹಾಗೂ ಇತರ ಪರಿಣಾಮಗಳು ಎದುರಾಗಿರುತ್ತವೆ. ಇವುಗಳಿಗೆ ತಮ್ಮ ಸ್ವಚ್ಛತೆಯ ಕಾಳಜಿಯ ಕೊರತೆ ಎಂದೇ ಇದುವರೆಗೆ ಅನ್ನಿಸಿರುವುದಿಲ್ಲ ಅಥವಾ ಹೆಚ್ಚಿನವರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ! ಆದರೆ ಕೆಲವು ಕ್ರಮಗಳನ್ನು ಮಾತ್ರ ನೈರ್ಮಲ್ಯ ಹಾಗೂ ಆರೋಗ್ಯದ ದೃಷ್ಟಿಯಿಂದ ಅನುಸಸಿರುವುದು ಅವಶ್ಯವಾಗಿದೆ. ಇಂದಿನ ಲೇಖನದಲ್ಲಿ ಇಂತಹ ಕೆಲವು ಕ್ರಮಗಳನ್ನು ಸೂಚಿಸಲಾಗಿದ್ದು ಪ್ರತಿ ವಿವಾಹಿತೆ ಕಡ್ಡಾಯವಾಗಿ ಪಾಲಿಸಬೇಕಾದ ಕ್ರಮಗಳಾಗಿವೆ.

ದಿನನಿತ್ಯ 'ಲೈಂಗಿಕ ಕ್ರಿಯೆ' ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

ಸ್ವಚ್ಛತಾ ಕ್ರಮಗಳನ್ನು ಅನುಸರಿಸದೇ ಇರುವ ಮೂಲಕ ಕೆಲವಾರು ತೊಂದರೆಗಳು ಎದುರಾಗುತ್ತವೆ. ವಿಶೇಷವಾಗಿ ಮಿಲನದ ಸಮಯದಲ್ಲಿ ಗುಪ್ತಾಂಗದ ಭಾಗದಲ್ಲಿ ಘರ್ಣಣೆಯ ಕಾರಣ ಈ ಭಾಗದ ಅಂಗಾಂಶಗಳು ಕೊಂಚ ಊದಿಕೊಳ್ಳುತ್ತವೆ ಹಾಗೂ ಸೋಂಕಿಗೆ ಸುಲಭವಾಗಿ ತೆರೆದುಕೊಳ್ಳುತ್ತದೆ. ಆದ್ದರಿಂದ ಕೆಲವು ಕ್ರಮಗಳನ್ನು ಇದುವರೆಗೆ ಕೈಗೊಳ್ಳುತ್ತಾ ಬಂದಿದ್ದು ಇವು ತಪ್ಪಾಗಿರಬಹುದು ಅಥವಾ ಕೆಲವು ಅಗತ್ಯ ಕ್ರಮದ ಬಗ್ಗೆ ಮಾಹಿತಿಯೇ ಇಲ್ಲದೇ ಇದನ್ನು ಕೈಗೊಳ್ಳದೇ ಇರಬಹುದು. ಇವೆರಡರಿಂದಲೂ ಸೋಂಕು, ವಿಶೇಷವಾಗಿ ಶಿಲೀಂಧ್ರದ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತದೆ. ಬನ್ನಿ, ಈ ಬಗ್ಗೆ ಪ್ರತಿ ಮಹಿಳೆಯೂ ಅರಿತಿರಬೇಕಾದ ಕೆಲವು ಅಗತ್ಯ ಮಾಹಿತಿಗಳನ್ನು ನೋಡೋಣ.... 

ಮಿಲನದ ಬಳಿಕ ಶೌಚಾಲಯಕ್ಕೆ ಹೋಗುವುದು ಕಡ್ಡಾಯ

ಮಿಲನದ ಬಳಿಕ ಶೌಚಾಲಯಕ್ಕೆ ಹೋಗುವುದು ಕಡ್ಡಾಯ

ಮಿಲನದ ಸಮಯದಲ್ಲಿ ಎಷ್ಟು ಬೇಡವೆಂದರೂ, ಯಾವುದೇ ಕ್ರಮ ಕೈಗೊಂಡರೂ ಕೆಲವಾರು ಬ್ಯಾಕ್ಟೀರಿಯಾಗಳು ಶರೀರವನ್ನು ಪ್ರವೇಶಿಸಿಯೇ ಇರುತ್ತವೆ. ಈ ಭಾಗ ತೇವಭರಿತವಾಗಿರುವ ಕಾರಣ ಬ್ಯಾಕ್ಟೀರಿಯಾಗಳಿಗೆ ಸೂಕ್ತ ಮನೆ ದೊರತಂಗಾಗುತ್ತದೆ ಹಾಗೂ ಇವು ಶೀಘ್ರವಾಗಿ ಅಭಿವೃದ್ದಿಗೊಂಡು ಜನನಾಂಗದ ಮೂಲಕ ದೇಹದ ಇನ್ನಷ್ಟು ಒಳಭಾಗವನ್ನು ಪ್ರವೇಶಿಸಿ ಭಾರೀ ಸೋಂಕಿಗೆ ಕಾರಣವಾಗಬಹುದು. ಆದ್ದರಿಂದ ಈ ಬ್ಯಾಕ್ಟೀರಿಯಾಗಳನ್ನು ಬಾಗಿಲ ಹೊಸ್ತಿಲಿನಿಂದಲೇ ಒದ್ದು ಓಡಿಸಲು ಸುಲಭವಾದ ಮಾರ್ಗವೆಂದರೆ ಮಿಲನದ ಬಳಿಕ ತಕ್ಷಣವೇ ಮೂತ್ರ ವಿಸರ್ಜಿಸುವುದು. ಈ ಕೆಲಸ ಇನ್ನಷ್ಟು ಸುಲಭವಾಗಿಸಲು ಮಿಲನಕ್ಕೂ ಅರ್ಥ ಅಥವಾ ಒಂದು ಘಂಟೆ ಮುನ್ನ ಚೆನ್ನಾಗಿ ನೀರು ಕುಡಿಯಬೇಕು.

ಲೈಂಗಿಕ ಕ್ರಿಯೆ ನಡೆಸಿದ ಮೇಲೆ ಮೂತ್ರ ವಿಸರ್ಜನೆ ಮಾಡಲೇಬೇಕು!

ಬಿಸಿ ನೀರಿನ ಸ್ನಾನ ಮಾಡಬೇಡಿ

ಬಿಸಿ ನೀರಿನ ಸ್ನಾನ ಮಾಡಬೇಡಿ

ಸಾಮಾನ್ಯವಾಗಿ ಮಿಲನದ ಬಳಿಕ ಯೋನಿಯ ಸ್ನಾಯುಗಳು ಸಡಿಲವಾಗಿ ತೆರೆದ ಸ್ಥಿತಿಯಲ್ಲಿರುತ್ತವೆ. ಈ ಸಮಯದಲ್ಲಿ ಬಿಸಿನೀರಿನ ಸ್ನಾನ ಮಾಡುವುದು ಅಥವಾ ಬಿಸಿನೀರಿರುವ ಸ್ನಾನದ ತೊಟ್ಟಿಯಲ್ಲಿ ಮುಳುಗುವುದು ಸೋಂಕುಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ ಬಿಸಿನೀರಿನ ಸ್ನಾನ ಬೇಡ.

ಕೊಂಚ ನೀರು ಕುಡಿಯಿರಿ

ಕೊಂಚ ನೀರು ಕುಡಿಯಿರಿ

ಮಿಲನದ ಬಳಿಕ ತಕ್ಷಣವೇ ಮಲಗದೇ ಕೊಂಚ ಅಡ್ಡಾಡಿದ ಬಳಿಕ ಮಲಗಬೇಕು. ಇದರಿಂದ ದೇಹದ ಎಲ್ಲಾ ಕಡೆ ರಕ್ತಸಂಚಾರ ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆ. ಹಾಗೂ ಒಂದು ಅಥವಾ ಎರಡು ಲೋಟ ನೀರು ಕುಡಿಯಬೇಕು. ಇದರಿಂದ ದೇಹದಿಂದ ತ್ಯಾಜ್ಯಗಳನ್ನು ಹೊರಹಾಕಲು ಹಾಗೂ ದೇಹದ ಇತರ ಚಟುವಟಿಕೆಗಳಿಗೆ ಅಗತ್ಯವಾದ ನೀರನ್ನು ಪಡೆಯಲು ನೆರವಾಗುತ್ತದೆ ಹಾಗೂ ತನ್ಮೂಲಕ ಮೂತ್ರನಾಳದಲ್ಲಿ ಉಂಟಾಗುವ ಸೋಂಕಿನಿಂದ ರಕ್ಷಣೆ ಪಡೆಯಬಹುದು.

ಜೀರ್ಣಸ್ನೇಹಿ ಬ್ಯಾಕ್ಟೀರಿಯಾಗಳಿರುವ ಆಹಾರ ಸೇವಿಸಿ

ಜೀರ್ಣಸ್ನೇಹಿ ಬ್ಯಾಕ್ಟೀರಿಯಾಗಳಿರುವ ಆಹಾರ ಸೇವಿಸಿ

ಮಿಲನದ ಬಳಿಕ ನೀವು ಯಾವ ಆಹಾರ ಸೇವಿಸುತ್ತೀರಿ ಎಂಬುದೂ ಮುಖ್ಯ. ಅತ್ಯಂತ ಸೂಕ್ತ ಆಯ್ಕೆ ಎಂದರೆ ಜೀರ್ಣಸ್ನೇಹಿ ಬ್ಯಾಕ್ಟೀರಿಯಾ ಅಥವಾ ಜೀರ್ಣಕ್ರಿಯೆಗೆ ಸಹಕರಿಸುವ ಬ್ಯಾಕ್ಟೀರಿಯಾಗಳಿರುವ ಆಹಾರಗಳು. ಮೊಸರು, ಕಿಮ್ಚಿ ಅಥವಾ ಕೊಂಬುಚಾ ಉತ್ತಮವಾಗಿವೆ. ಈ ಅಹಾರಗಳನ್ನು ಕೊಂಚ ಪ್ರಮಾಣದಲ್ಲಿ ಸೇವಿಸುವ ಮೂಲಕ ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಹೆಚ್ಚಿ ಶಿಲೀಂಧ್ರದ ಸೋಂಕು ತಗಲುವ ಸಾಧ್ಯತೆ ಇಲ್ಲವಾಗುತ್ತದೆ.

ಆ ಭಾಗದಲ್ಲಿ ಸೋಪು ಬಳಸಲೇಬೇಡಿ

ಆ ಭಾಗದಲ್ಲಿ ಸೋಪು ಬಳಸಲೇಬೇಡಿ

ಹೆಚ್ಚಿನ ಮಹಿಳೆಯರು ಅರಿವಿಲ್ಲದೇ ಮಾಡುತ್ತಾ ಬಂದಿರುವ ತಪ್ಪು ಇದು. ಈ ಭಾಗದಲ್ಲಿ ಮಿಲನದ ಬಳಿಕ ಸೋಪು ಉಪಯೋಗಿಸಿ ತೊಳೆದುಕೊಳ್ಳಬಾರದು. ಮಿಲನದ ಬಳಿಕ ಮಾತ್ರವಲ್ಲ, ನಂತರದ ಅವಧಿಯಲ್ಲಿಯೂ ಸೋಪು ಬಳಸಬಾರದು. ಮಹಿಳೆಯರ ಗುಪ್ತಾಂಗ ತನ್ನನ್ನು ತಾನೇ ಸ್ವಚ್ಛಗೊಳಿಸಿಕೊಳ್ಳುವ ಅದ್ಭುತ ಶಕ್ತಿಯನ್ನು ಪಡೆದಿದೆ. ಸೋಪು ಅಥವಾ ಇತ್ತೀಚಿನ ದಿನಗಳಲ್ಲಿ ದೊರಕುತ್ತಿರುವ douche ಎಂಬ ವಸ್ತುವನ್ನು ಉಪಯೋಗಿಸಿದರೆ ಇದು ಗುಪ್ತಾಂಗದ ಒಳಭಾಗದ ಆಮ್ಲೀಯತೆ-ಕ್ಷಾರೀಯತೆಯ ಮಟ್ಟವನ್ನು ಅಳೆಯುವ ಪಿಎಚ್ ಮಟ್ಟವನ್ನು ಏರುಪೇರುಗೊಳಿಸುತ್ತದೆ. ಇದರಿಂದ ನೈಸರ್ಗಿಕವಾಗಿ ಇರಬೇಕಾದ ತೇವ ಇಲ್ಲವಾಗಿ ಒಳಭಾಗ ತೀರಾ ಒಣಗುತ್ತದೆ ಅಥವಾ ಸೋಂಕಿಗೆ ಸುಲಭವಾಗಿ ತುತ್ತಾಗುತ್ತದೆ.

ಗಾಳಿಯಾಡದ ಒಳ ಉಡುಪು ಧರಿಸಬೇಡಿ

ಗಾಳಿಯಾಡದ ಒಳ ಉಡುಪು ಧರಿಸಬೇಡಿ

ಇಂದಿನ ಹೆಚ್ಚಿನ ಒಳ ಉಡುಪುಗಳು ನೈಲಾನ್ ಅಥವಾ ಪಾಲಿಸ್ಟರ್ ನಿಂದ ತಯಾರಾಗುತ್ತವೆ. ಇವು ನೋಡಲಿಕ್ಕೆ ಮಾತ್ರ ಸುಂದರವೇ ಹೊರತು ಇದರ ಮೂಲಕ ಗಾಳಿಯಾಡದ ಕಾರಣ ಆರೋಗ್ಯಕರವಲ್ಲ. ಆದ್ದರಿಂದ ಮಿಲನದ ಬಳಿಕ ಈ ಉಡುಪುಗಳನ್ನು ತೊಟ್ಟರೆ ಗಾಳಿಯ ಕೊರತೆಯಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತದೆ. ಬದಲಿಗೆ ಸಡಿಲವಾದ ಹತ್ತಿಯ ಒಳ ಉಡುಪುಗಳೇ ಸೂಕ್ತ.

ತೇವವಾದ ವೈಪ್ಸ್ ಬಳಸದಿರಿ

ತೇವವಾದ ವೈಪ್ಸ್ ಬಳಸದಿರಿ

ಥಟ್ಟನೇ ಒರೆಸಿ ಸ್ವಚ್ಛಗೊಳಿಸಲು ನೆರವಾಗುವ ವೆಟ್ ವೈಪ್ಸ್ ಎಂದು ಈಗ ಮಾರುಕಟ್ಟೆಯಲ್ಲಿ ಸಿಗುತ್ತಿರುವ ವಸ್ತುಗಳು ಬೆವರೊನ್ನೊರೆಸಿಕೊಳ್ಳಲು ಸೂಕ್ತವೇ ಹೊರತು ಮಿಲನದ ಬಳಿಕದ ಉಪಯೋಗಕ್ಕಲ್ಲ. ಈ ವೈಪ್ಸ್ ನಲ್ಲಿರುವ ಸುಗಂಧಕಾರಕ ಹಾಗೂ ಬೆವರನ್ನು ಹೀರಿಕೊಳ್ಳುಲು ಬಳಸುವ ಕೆಲವು ರಾಸಾಯನಿಕಗಳು ಸೂಕ್ಷ್ಮಭಾಗಕ್ಕೆ ಪ್ರಬಲವಾದ ಪರಿಣಾಮವುಂಟುಮಾಡಬಹುದು. ಆದ್ದರಿಂದ ಈ ಭಾಗವನ್ನು ಸ್ವಚ್ಛಗೊಳಿಸಲು ಒಂದು ಲೋಟ ನೀರಿನಲ್ಲಿ ಒಂದೆರಡು ಚಮಚ ಶಿರ್ಕಾ ಸೇರಿಸಿ ಸ್ವಚ್ಛ ಹತ್ತಿಯ ಬಟ್ಟೆಯಿಂದ ಒರೆಸಿಕೊಂಡರೆ ಬೇಕಾದಷ್ಟಾಯಿತು. ಮಿಲನದ ಬಳಿಕ ಕೈಗೊಳ್ಳಬೇಕಾದ ಕ್ರಮಗಳಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ.

ಸಾಧ್ಯವಾದರೆ ಬ್ಲೋ-ಡ್ರೈಯರ್ ಬಳಸಿ

ಸಾಧ್ಯವಾದರೆ ಬ್ಲೋ-ಡ್ರೈಯರ್ ಬಳಸಿ

ಮಿಲನದ ಬಳಿಕ ಕೆಲವು ಮಹಿಳೆಯರು ತಮ್ಮ ಗುಪ್ತಾಂಗಗಳನ್ನು ಬಿಸಿಗಾಳಿ ಹಾಯಿಸಿ ಒಣಗಿಸಿಕೊಳ್ಳುತ್ತಾರೆ. ವೈದ್ಯರ ಪ್ರಕಾರ ಈ ವಿಧಾನವೂ ಸುರಕ್ಷಿತವಾಗಿದ್ದು ಹೆಚ್ಚಿನ ನೆರವು ನೀಡುತ್ತದೆ. ವಿಶೇಷವಾಗಿ ಸೋಂಕಿಗೆ ಸುಲಭವಾಗಿ ತುತ್ತಾಗುವ ಹಾಗೂ ಒತ್ತಡದ ಮೂಲಕ ಎದುರಾಗುವ ಸೋಂಕು (mycosis) ಮೊದಲಾದ ತೊಂದರೆ ಇರುವ ಮಹಿಳೆಯರಿಗೆ ಸೂಕ್ತವಾಗಿದೆ.

English summary

Ladies! Do These Things Immediately After An Intercourse

There are some important things that you need to follow after an intercourse. We have listed the must dos in this article. When the vaginal tissues have been lubricated, swollen and rubbed against during an intercourse, it changes how the tissues react to the environment. Hence, you need to keep in mind that there are certain things that you must never do, as they can primarily increase your risk of an infection.