ನಿದ್ದೆ ಬರುತ್ತಿಲ್ಲವೇ? ಹೀಗೆ ಮಾಡಿ ನೋಡಿ, ನಿದ್ರೆ ಬರದಿದ್ದರೆ ಆಮೇಲೆ ಹೇಳಿ

By: manu
Subscribe to Boldsky

ಕೆಲವು ಅನಾರೋಗ್ಯದ ಕಾರಣದಿಂದ ರಾತ್ರಿ ನಿದ್ದೆಯಿಲ್ಲದೆ ತಡವರಿಸುವುದು ಸಹಜ. ಅದೇ ಆರೋಗ್ಯವಾಗಿದ್ದರೂ ರಾತ್ರಿ ಸರಿಯಾಗಿ ನಿದ್ರೆ ಬರದೆ ಇರುವುದು, ಕೆಟ್ಟ ಕನಸು ಬೀಳುವುದು, ಯಾವುದೋ ವಿಚಾರದ ಕುರಿತು ನಿದ್ರೆ ಗೆಡುವುದು, ಎಲ್ಲವೂ ಆಧ್ಯಾತ್ಮಿಕ ತೊಂದರೆ ಎಂದು ಪರಿಗಣಿಸಲಾಗುತ್ತದೆ. ವಾಸ್ತು ದೋಷಗಳಿದ್ದರೂ ಈ ರೀತಿಯ ಸಮಸ್ಯೆಗಳು ಉಲ್ಬಣವಾಗುವುದು. ಅದಕ್ಕಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಪರಿಹಾರಗಳಿವೆ. 

ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ

ರಾತ್ರಿ ನಿದ್ರೆ ಸರಿಯಾಗಿ ಆಗದಿದ್ದರೆ ಆರೋಗ್ಯದಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರಾತ್ರಿ ನಿದ್ರೆಗೆ ಉಂಟಾಗುವ ಅಡಚಣೆಯನ್ನು ತಪ್ಪಿಸಲು ಕೆಲವು ಸುಲಭ ಕ್ರಮಗಳನ್ನು ಕೈಗೊಳ್ಳ ಬಹುದು. ಅದು ಯಾವುದು ಎನ್ನುವ ಹುಡುಕಾಟ ನೀವು ಶುರುಮಾಡಿದ್ದರೆ ಆ ಪ್ರಯತ್ನವನ್ನು ಬಿಟ್ಟು ಈ ಲೇಖನವನ್ನು ಓದಿ... ನಿಮಗೆ ಉತ್ತಮ ಪರಿಹಾರ ದೊರೆಯುತ್ತದೆ. ಜೊತೆಗೆ ಸುಂದರ ನಿದ್ರೆ, ಆರೋಗ್ಯವಂತ ಶರೀರ ನಿಮ್ಮದಾಗುವುದು...

ಸೋಂಪು ಕಾಳುಗಳು

ಸೋಂಪು ಕಾಳುಗಳು

ಒಂದು ಬಿಳಿಯ ಬಟ್ಟೆಯಲ್ಲಿ ಸ್ವಲ್ಪ ಸೋಂಪು ಕಾಳುಗಳನ್ನು ಹಾಕಿ, ಗಂಟು ಕಟ್ಟಬೇಕು. ಇದೊಂದು ಜ್ಯೋತಿಷ್ಯ ಶಾಸ್ತ್ರದ ಪರಿಹಾರೋಪಾಯ ಕ್ರಮ. ಹೀಗೆ ಮಾಡುವುದರಿಂದ ರಾಹುವಿನ ದುಷ್ಪರಿಣಾಮವನ್ನು ತಡೆಯಬಹುದು ಎಂದು ಹೇಳಲಾಗುತ್ತದೆ.

ಬೆಳ್ಳುಳ್ಳಿ ಎಸಳು

ಬೆಳ್ಳುಳ್ಳಿ ಎಸಳು

ಸಾಮಾನ್ಯವಾಗಿ ಬೆಳ್ಳುಳ್ಳಿಯ ಖಾರವಾದ ಮತ್ತು ಘಾಟು ವಾಸನೆಯನ್ನು ಯಾರೂ ಸಹಿಸುವುದಿಲ್ಲ. ಆದರೆ ಈ ಘಾಟು ಆರೋಗ್ಯಕ್ಕೆ ಉತ್ತಮವಾಗಿದ್ದು ಇದನ್ನು ಕೊಂಚ ಸಹಿಸಬೇಕಾಗಿರುವುದು ಅಗತ್ಯವಾಗಿದೆ. ಈ ಘಾಟು ವಾಸನೆ ನಮಗೆ ಹೇಗೆ ಸಹ್ಯವಲ್ಲವೋ ಹಾಗೇ ಋಣಾತ್ಮಕ ಶಕ್ತಿಗಳಿಯೂ ಸಹ್ಯವಲ್ಲ. ಒಂದೆರಡು ಎಸಳು ಬೆಳ್ಳುಳ್ಳಿಯನ್ನು ತಲೆದಿಂಬಿನಡಿ ಅಥವಾ ಜೇಬಿನಲ್ಲಿರಿಸಿದರೆ ಈ ಶಕ್ತಿಗಳು ಹತ್ತಿರ ಬರದೇ ಸುಖನಿದ್ದೆಗೆ ಯಾವುದೇ ತಡೆ ಇಲ್ಲವಾಗುತ್ತದೆ.

ದಿಂಬಿನಡಿ ಬೆಳ್ಳುಳ್ಳಿ ಇಟ್ಟು ಮಲಗಿದರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ!

ಮಲಗುವ ದಿಕ್ಕು

ಮಲಗುವ ದಿಕ್ಕು

ಎಲ್ಲೇ ಮಲಗಿದರೂ ನಮ್ಮ ತಲೆಯು ಉತ್ತರಕ್ಕೆ, ಕಾಲು ದಕ್ಷಿಣ ದಿಕ್ಕಿಗೆ ಬರುವಂತೆ ಮಲಗಬೇಕು. ಆಗ ನಿದ್ರೆಯೂ ಸುಂದರವಾಗಿ ಬರುವುದು.

ತೆಂಗಿನೆಣ್ಣೆಯ ಬಳಕೆ

ತೆಂಗಿನೆಣ್ಣೆಯ ಬಳಕೆ

ತೆಂಗಿನ ಎಣ್ಣೆಯೊಂದಿಗೆ ಕರ್ಪೂರವನ್ನು ಬೆರೆಸಿ ಒಂದು ಮಿಶ್ರಣ ತಯಾರಿಸಿಕೊಂಡಿರಬೇಕು. ರಾತ್ರಿ ಮಲಗುವಾಗ ಕಾಲನ್ನು ತೊಳೆದು, ಒಣಗಿದ ಮೇಲೆ ಎಣ್ಣೆಯ ಮಿಶ್ರಣವನ್ನು ಕಾಲಿಗೆ ಹಚ್ಚಿಕೊಂಡು ಮಲಗಬೇಕು. ಹೀಗೆ ಮಾಡುವುದರಿಂದ ದೇಹದ ಆಯಾಸವು ನಿವಾರಣೆಯಾಗುತ್ತದೆ. ಜೊತೆಗೆ ಉತ್ತಮ ನಿದ್ರೆಯನ್ನು ಹೊಂದಬಹುದು.

ಜೇನು ತುಪ್ಪ

ಜೇನು ತುಪ್ಪ

ಜೇನು ತುಪ್ಪ ಚೆನ್ನಾಗಿ ನಿದ್ದೆ ಮಾಡಲು ರಾತ್ರಿಯ ಹೊತ್ತು ಮಲಗುವ ಮುನ್ನ ಒಂದು ಟೇಬಲ್ ಚಮಚ ಜೇನು ತುಪ್ಪವನ್ನು ಸೇವಿಸಿ. ಜೇನು ತುಪ್ಪವು ನಿಮ್ಮ ದೇಹಕ್ಕೆ ಅಗತ್ಯವಾದ ಗ್ಲೂಕೋಸನ್ನು ನೀಡುವುದರ ಜೊತೆಗೆ ಇದು ಮೆದುಳಿಗೆ ವಿಶ್ರಾಂತಿಯನ್ನು ನೀಡುತ್ತದೆ.

ಬಿಸಿ ಹಾಲು

ಬಿಸಿ ಹಾಲು

ಮಲಗುವ ಮೊದಲು ಸ್ವಲ್ಪ ಬಿಸಿ ಹಾಲು ಕುಡಿಯಿರಿ ಹಲವಾರು ಶತಮಾನಗಳಿಂದಲು ನಿದ್ರಾಹೀನತೆಗೆ ಇದೇ ಅತ್ಯುತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಲಿನಲ್ಲಿರುವ ಅಮೈನೊ ಆಮ್ಲವು ನಿದ್ದೆಯನ್ನು ಉದ್ದೀಪಿಸಿ, ಅದರ ಅಡ್ಡಪರಿಣಾಮಗಳನ್ನು ತಡೆಯುತ್ತದೆ. ನೀವು ಆಲ್ಕೋಹಾಲ್ ಸೇವಿಸಿದ್ದರು ಸಹ ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿಯಿರಿ, ಇದರಿಂದಾಗಿ ಮುಂದೆ ನಿಮಗೆ ಬರಬಹುದಾದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ.

ಒಂದು ಕಪ್ ಮೊಸರು ಸೇವಿಸಿ ಮಲಗಿ

ಒಂದು ಕಪ್ ಮೊಸರು ಸೇವಿಸಿ ಮಲಗಿ

ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಬೇಗನೆ ನಿದ್ದೆ ತರುತ್ತದೆ. ಮಲಗುವ 10 ನಿಮಿಷ ಮೊದಲು ಮೊಸರು ತಿಂದು ಮಲಗಿದರೆ ಬೇಗನೆ ನಿದ್ದೆ ಬರುವುದು.

ಮಲಗುವ ಮುನ್ನ ಅತಿ ಹೆಚ್ಚು ಮಸಾಲೆಭರಿತ ಆಹಾರವನ್ನು ಸೇವಿಸಬೇಡಿ

ಮಲಗುವ ಮುನ್ನ ಅತಿ ಹೆಚ್ಚು ಮಸಾಲೆಭರಿತ ಆಹಾರವನ್ನು ಸೇವಿಸಬೇಡಿ

ಯಾವ ಆಹಾರಗಳಲ್ಲಿ ಹೆಚ್ಚು ಮಸಾಲೆ ಅಥವಾ ಸಕ್ಕರೆಯ ಅಂಶವಿರುತ್ತದೆಯೋ ಅಂತಹ ಆಹಾರವನ್ನು ಸೇವಿಸತಕ್ಕದ್ದಲ್ಲ. ಇವು ನಿದ್ರೆಯನ್ನು ಹೋಗಲಾಡಿಸುತ್ತದೆ. ಆದ್ದರಿಂದ ಮಲಗುವ ಮುನ್ನ ಲಗುವಾದ ಹಾಗು ಸಮತೋಲನತೆಯುಳ್ಳ ಆಹಾರವನ್ನು ಸೇವಿಸುವುದು ಹೆಟ್ಟು ಸೂಕ್ತ.

 

English summary

Keep Any One Of These Three Things Under Your Pillow Tonight for better sleep

If you have been finding it difficult to sleep at night, wake up often or are having bad dreams, astrology may have a solution for you.
Subscribe Newsletter