ಟಾಯ್ಲೆಟ್ ಪೇಪರ್-ಇದು ಬಲು ಡೇಂಜರ್! ತಪ್ಪದೇ ಇದನ್ನು ಓದಿ...

By: manu
Subscribe to Boldsky

ಮನೆಯ ಸ್ವಚ್ಛತೆಯನ್ನು ಪ್ರತಿಬಿಂಬಿಸುವಲ್ಲಿ ಶೌಚಾಲಯದ ಪಾತ್ರವೂ ಮಹತ್ತರವಾದದ್ದು. ಶುಚಿಯಿಲ್ಲದ ಶೌಚಾಲಯದಿಂದಲೂ ಕುಟುಂಬದವರಿಗೆ ಅನೇಕ ರೋಗಗಳು ಕಾಣಿಸಿಕೊಳ್ಳಬಹುದು. ಅತಿಥಿಗಳು ಬಂದ ತಕ್ಷಣ ಶುಚಿಯಿಲ್ಲದ ಶೌಚಾಲಯವನ್ನು ನೋಡಿ ಅಸಹ್ಯ ಪಡುವ ಸಂಭವವೂ ಇರುತ್ತದೆ.

ಈ ನಿಟ್ಟಿನಲ್ಲಿ ಕೆಲವರು ಶೌಚಾಲಯದ ವಾಸನೆ ಮರೆಮಾಚಲು ಅನೇಕ ಸುಗಂಧ ಭರಿತ ವಸ್ತುಗಳನ್ನು ಇಡುತ್ತಾರೆ. ಇದರಿಂದ ಸ್ನಾನ ಗೃಹ ಮತ್ತು ಶೌಚಾಲಯಗಳು ಸದಾ ಫ್ರೆಶ್ ಅನುಭವ ನೀಡಬಲ್ಲವು. ಈ ರೀತಿ ವಾಸನೆ ಮರೆಮಾಚಲು ಇರುವ ವಸ್ತುಗಳು ನಿಧಾನವಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಶೌಚಾಲಯದಲ್ಲಿ ಬಳಸುವ 'ಟಾಯ್ಲೆಟ್ ಪೇಪರ್' ತುಂಬಾನೇ ಡೇಂಜರ್!

ಅದರಲ್ಲೂ ಶೌಚಾಲಯದ ಉಪಯೋಗಕ್ಕೆ ಎಂದು ಬಳಸುವ ಬಣ್ಣ ಬಣ್ಣದ ಟಾಯ್ಲೆಟ್ ಪೇಪರ್‌ಗಳು ಹೆಚ್ಚು ಅಪಾಯಕಾರಿ ಎಂದು ಸಂಶೋಧಿಸಲಾಗಿದೆ. ಇವುಗಳ ಉಪಯೋಗದಿಂದ ಕೆಲವು ಆರೋಗ್ಯ ಸಮಸ್ಯೆ ಸಂಭವಿಸಬಹುದು. ಅವುಗಳ ಬಗ್ಗೆ ಕಿರು ಮಾಹಿತಿ ಇಲ್ಲಿದೆ ನೋಡಿ....   

ಮೂತ್ರಕೋಶಗಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚು!

ಮೂತ್ರಕೋಶಗಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚು!

ಶೌಚಾಲಯದಲ್ಲಿ ಬಳಸಲ್ಪಡುವ ಬಣ್ಣದ ಟಾಯ್ಲೆಟ್ ಪೇಪರ್ ಬಳಕೆಯಿಂದ ಆರೋಗ್ಯ ಕೆಡಬಹುದು. ಅವುಗಳಲ್ಲಿರುವ ರಾಸಾಯನಿಕ ಅಂಶಗಳು ಮೂತ್ರಕೋಶಗಳಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಮೂತ್ರವಿಸರ್ಜನೆಯ ಸಮಯದಲ್ಲಿ ಉರಿಯೂತ ಕಾಣಿಸಿಕೊಳ್ಳಬಹುದು.

ಉಷ್ಣಕ್ಕೆ ಕಾಡುವ 'ಮೂತ್ರಕೋಶದ ಸೋಂಕು'! ಇಲ್ಲಿದೆ ನೋಡಿ ಪರಿಹಾರ

ಕಿಣ್ವಗಳ (ಯೀಸ್ಟ್) ಸೋಂಕು

ಕಿಣ್ವಗಳ (ಯೀಸ್ಟ್) ಸೋಂಕು

ಮಹಿಳೆಯರಿಗೆ ಹೆಚ್ಚು ಅಪಾಯಕಾರಿ ಎಂದು ಹೇಳಬಹುದು. ಬಣ್ಣ ಮತ್ತು ಪರಿಮಳಯುಕ್ತ ಟಾಯ್ಲೆಟ್ ಕಾಗದದ ರಾಸಾಯನಿಕಗಳು ಯೋನಿಗಳಲ್ಲಿ ಶಿಲೀಂಧ್ರಗಳು ಹುಟ್ಟುವಂತೆ ಮಾಡುತ್ತದೆ. ಇದರಿಂದ ಯೋನಿಯಲ್ಲಿ ನೋವಿನ ಸೆಳೆತ, ತುರಿಕೆ ಹಾಗೂ ವಾಸನೆಯುಕ್ತ ವಿಸರ್ಜನೆ ಉಂಟಾಗುವುದು.

ಗುದನಾಳದ ಸೋಂಕು

ಗುದನಾಳದ ಸೋಂಕು

ಬಣ್ಣ ಮತ್ತು ಸುವಾಸನೆ ಭರಿತ ಕಾಗದಗಳಿಂದ ಗುದನಾಳವನ್ನು ಶುಚಿಗೊಳಿಸುವುದರಿಂದ ಗುದನಾಳಗಳಲ್ಲಿ ಸೋಂಕು ಪ್ರವೇಶಿಸುತ್ತದೆ. ಇವು ಸೂಕ್ಷ್ಮ ಪ್ರದೇಶಗಳನ್ನು ಪ್ರವೇಶಿಸಿ ವಿವಿಧ ಬಗೆಯ ರೋಗಗಳು ಕಾಣಿಸಿಕೊಳ್ಳುವವು.

ಗರ್ಭಕೋಶದ ಕ್ಯಾನ್ಸರ್!

ಗರ್ಭಕೋಶದ ಕ್ಯಾನ್ಸರ್!

ಕೆಲವು ಸಂಶೋಧನೆ ಮತ್ತು ಅಧ್ಯಯನಗಳ ಪ್ರಕಾರ ಬಣ್ಣ ಮತ್ತು ಪರಿಮಳಯುಕ್ತ ಟಾಯ್ಲೆಟ್ ಪೇಪರ್‌ಗಳ ಬಳಕೆಯಿಂದ ಗರ್ಭಕೋಶದ ಕ್ಯಾನ್ಸರ್ ಬರುತ್ತದೆ ಎಂದು ಹೇಳಲಾಗಿದೆ.

ಟಾಯ್ಲೆಟ್‌ನ ಪೇಪರ್‌ನಲ್ಲಿಯೇ ಬ್ಯಾಕ್ಟೀರಿಯಾಗಳು ಹೆಚ್ಚಿರುತ್ತವೆ!

ಟಾಯ್ಲೆಟ್‌ನ ಪೇಪರ್‌ನಲ್ಲಿಯೇ ಬ್ಯಾಕ್ಟೀರಿಯಾಗಳು ಹೆಚ್ಚಿರುತ್ತವೆ!

ಟಾಯ್ಲೆಟ್‌ನ ಪೇಪರ್‌ನಲ್ಲಿ ಬ್ಯಾಕ್ಟೀರಿಯಾಗಳು ನೆಲೆನಿಲ್ಲುತ್ತದೆ. ಇದರಿಂದ ಟಾಯ್ಲೆಟ್ ಪೇಪರ್ ಅನ್ನು ಮುಖ, ಮೂಗು ಅಥವಾ ದೇಹದ ಬೇರೆ ಭಾಗವನ್ನು ಒರೆಸಲು ಬಳಸಿಕೊಳ್ಳಬಾರದು. ಹೀಗೆ ಮಾಡಿದರೆ ಬ್ಯಾಕ್ಟೀರಿಯಾಗಳು ದೇಹದೊಳಗೆ ಪ್ರವೇಶಿಸಬಹುದು.

English summary

Is Using Coloured Or Scented Toilet Paper Dangerous For Health?

A few decades ago, in countries like India, this article would not have been very relevant because not many people here used toilet papers, right? Well, now the times have changed and whether it is because people are trying to look up to the western concepts or purely due to hygiene reasons, more and more people in developing countries are also using toilet papers. Find out what are some of the ill-effects of coloured and scented toilet paper, here.
Subscribe Newsletter