ಅರ್ಧಗಂಟೆಗೊಮ್ಮೆ ಮೂತ್ರ ಬಂದಂತೆ ಆಗುತ್ತಿದ್ದರೆ, ಇದು ಅಪಾಯದ ಲಕ್ಷಣ!!

By: Arshad
Subscribe to Boldsky

ಸತತವಾಗಿ ಮೂತ್ರವಿಸರ್ಜನೆಗೆ ಅವಸರವಾಗುವುದು ಸಹಜವೇ? ದಿನಕ್ಕೆ ಎಷ್ಟು ಬಾರಿ ಮೂತ್ರವಿಸರ್ಜನೆಯಾಗುತ್ತದೆ ಎಂಬುದೇ ಆರೋಗ್ಯದ ಅಥವಾ ಅನಾರೋಗ್ಯದ ಮಾನದಂಡವೂ ಹೌದು. ನಮ್ಮ ಮೂತ್ರಪಿಂಡಗಳು ರಕ್ತವನ್ನು ಸತತವಾಗಿ ಶೋಧಿಸುತ್ತಾ ಮೂತ್ರವನ್ನು ಮೂತ್ರಕೋಶದಲ್ಲಿ ಸಂಗ್ರಹಿಸುತ್ತಾ ಹೋಗುತ್ತದೆ.

ನಿಯಮಿತವಾಗಿ ಇದನ್ನು ಖಾಲಿ ಮಾಡುತ್ತಿರಬೇಕು. ಮೂತ್ರದ ಪ್ರಮಾಣ ಹಾಗೂ ದಿನಕ್ಕೆಷ್ಟು ಬಾರಿ ವಿಸರ್ಜನೆ ಆಗುತ್ತದೆ ಎಂಬ ಮಾಹಿತಿ ನಿಮ್ಮ ಜೀವನಶೈಲಿ ಹಾಗೂ ಅಭ್ಯಾಸಗಳನ್ನು ವಿವರಿಸುತ್ತದೆ. 

ಮೂತ್ರ ನೊರೆ ನೊರೆಯಿಂದ ಕೂಡಿದ್ದರೆ, ಆರೋಗ್ಯ ಸಮಸ್ಯೆವಿದೆ ಎಂದರ್ಥ!

ದಿನಕ್ಕೆಷ್ಟು ಬಾರಿ ವಿಸರ್ಜನೆಯಾಯಿತು ಎಂಬ ಮಾಹಿತಿ ನಿಮ್ಮ ಆರೋಗ್ಯವೆಷ್ಟು ಉತ್ತಮವಿದೆ ಎಂದು ತಿಳಿಸುವ ಮುನ್ನ ದಿನಕ್ಕೆಷ್ಟು ಬಾರಿ ಮೂತ್ರ ವಿಸರ್ಜಿಸುವುದು ಆರೋಗ್ಯಕರ ಎಂಬುದನ್ನು ಅರಿತುಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈಗ ನೋಡೋಣ....

ದಿನಕ್ಕೆಷ್ಟು ಬಾರಿ ಮೂತ್ರ ವಿಸರ್ಜಿಸುವುದು ಆರೋಗ್ಯಕರ?

ದಿನಕ್ಕೆಷ್ಟು ಬಾರಿ ಮೂತ್ರ ವಿಸರ್ಜಿಸುವುದು ಆರೋಗ್ಯಕರ?

ಉತ್ತಮ ಆರೋಗ್ಯಕ್ಕೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಮೂತ್ರ ವಿಸರ್ಜಿಸಬೇಕು. ಆದರೆ ಎಲ್ಲಾ ಹೊತ್ತಿನಲ್ಲಿ ಇದು ಸಾಧ್ಯವಾಗುವುದಿಲ್ಲ. ಹಾಗಾಗಿ ದಿನಕ್ಕೆ ನಾಲ್ಕರಿಂದ ಹತ್ತು ಬಾರಿ ವಿಸರ್ಜಿಸುವುದು ಆರೋಗ್ಯಕರ ಎಂದು ಭಾವಿಸಲಾಗಿದೆ. ಸಾಮಾನ್ಯ ಆರೋಗ್ಯವಂತ ವ್ಯಕ್ತಿ ಪ್ರತಿ ಬಾರಿ ಸುಮಾರು ಎರಡು ಕಪ್ ನಷ್ಟು ಮೂತ್ರವನ್ನು ಪ್ರತಿ ಬಾರಿ ವಿಸರ್ಜಿಸುತ್ತಾರೆ. ಮೂತ್ರಕೋಶದ ಪೂರ್ಣ ಸಾಮರ್ಥ್ಯ ಇಷ್ಟೇ ಆಗಿದ್ದು ಇದು ತುಂಬಿದ ಬಳಿಕ ಗರಿಷ್ಟ ಮೂರರಿಂದ ಐದು ಗಂಟೆ ಕಾಲ ಮಾತ್ರ ಹಿಡಿದಿಟ್ಟುಕೊಳ್ಳಬಹುದು.

ಪದೇ ಪದೇ ಉರಿ ಮೂತ್ರ ಕಾಡುತ್ತದೆಯೇ? ಹಾಗಿದ್ದರೆ ಈ ಕಷಾಯ ಕುಡಿಯಿರಿ

 ಹಾಗಾದರೆ ಅಸಾಮಾನ್ಯವಾದ ಮೂತ್ರ ಯಾವುದು?

ಹಾಗಾದರೆ ಅಸಾಮಾನ್ಯವಾದ ಮೂತ್ರ ಯಾವುದು?

ಒಂದು ವೇಳೆ ಮೂತ್ರ ವಿಸರ್ಜಿಸುವಾಗ ಉರಿಯಾಗುತ್ತಿದ್ದರೆ ಈ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಅಲ್ಲದೇ ಒಂದು ವೇಳೆ ಅಗತ್ಯಕ್ಕೂ ಹೆಚ್ಚೇ ಬಾರಿ ಮೂತ್ರ ವಿಸರ್ಜಿಸಿದರೂ ಕಾಳಜಿಯ ವಿಷಯವಾಗಿದೆ. ಪದೇ ಪದೇ ಮೂತ್ರಕ್ಕೆ ಅವಸರವಾಗುವುದೂ ಆರೋಗ್ಯದಲ್ಲಿ ಏರುಪೇರಾಗಿರುವ ಸಂಭವವಿದೆ.

ರಾತ್ರಿ ಹೊತ್ತು ಎಷ್ಟು ಬಾರಿ ಮೂತ್ರ ವಿಸರ್ಜಿಸಬೇಕು?

ರಾತ್ರಿ ಹೊತ್ತು ಎಷ್ಟು ಬಾರಿ ಮೂತ್ರ ವಿಸರ್ಜಿಸಬೇಕು?

ಒಂದು ವೇಳೆ ನಿಮಗೆ ರಾತ್ರಿ ನಿದ್ದೆಯಲ್ಲಿ ಮೂತ್ರವಿಸರ್ಜನೆಗಾಗಿ ಎದ್ದೇಳುವ ಅಭ್ಯಾಸವಿದ್ದರೆ ಇದು ಸಾಮಾನ್ಯ ಎಂದು ಭಾವಿಸಬೇಕು. ಕೆಲವರಿಗೆ ರಾತ್ರಿ ಮಲಗುವ ಮುನ್ನ ಮೂತ್ರ ವಿಸರ್ಜಿಸಿ ಮಲಗಿದರೆ ಮರುದಿನ ಬೆಳಿಗ್ಗೆದ್ದ ಬಳಿಕವೇ ಮತ್ತೊಮ್ಮೆ ಮೂತ್ರ ವಿಸರ್ಜಿಸಿದರೆ ಸಾಕು. ಇದೂ ಕೂಡಾ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ವಯಸ್ಸಿನೊಂದಿಗೇ ಈ ತೊಂದರೆ ಹೆಚ್ಚುತ್ತಾ ರಾತ್ರಿ ಎಚ್ಚರಾಗುವ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ.

ಮೂತ್ರಕೋಶ ಹೆಚ್ಚು ಹೊತ್ತು ಮೂತ್ರವನ್ನು ಹಿಡಿದಿಟ್ಟುಕೊಳ್ಳಲು ಆಗದಿದ್ದರೆ?

ಮೂತ್ರಕೋಶ ಹೆಚ್ಚು ಹೊತ್ತು ಮೂತ್ರವನ್ನು ಹಿಡಿದಿಟ್ಟುಕೊಳ್ಳಲು ಆಗದಿದ್ದರೆ?

ಒಂದು ವೇಳೆ ನಿಮ್ಮಲ್ಲಿ ಮೂತ್ರವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೆ ಪದೇ ಪದೇ ಮೂತ್ರ ವಿಸರ್ಜನೆಗೆ ಅವಸರವಾಗುತ್ತಾ ಇರುತ್ತದೆ. ಇದೇ ಮುಂದೆ ಅಭ್ಯಾಸವಾಗುತ್ತಾ ಕೊಂಚ ಹೊತ್ತಿಗೇ ಮತ್ತೊಮ್ಮೆ ಮೂತ್ರ ವಿಸರ್ಜನೆಗೆ ಅವಸರವಾಗುತ್ತಾ ಹೋಗುತ್ತದೆ. ಇದಕ್ಕೆ urinary incontinence ಎಂದು ಕರೆಯುತ್ತಾರೆ.

ಮುಜುಗರ ತರುವ 'ಮೂತ್ರ ಸಮಸ್ಯೆ'! ಇನ್ನು ಚಿಂತೆ ಬಿಡಿ....

ಮೂತ್ರವನ್ನು ತಡೆದಿಟ್ಟುಕೊಳ್ಳುವುದು ಕೆಟ್ಟದೇ?

ಮೂತ್ರವನ್ನು ತಡೆದಿಟ್ಟುಕೊಳ್ಳುವುದು ಕೆಟ್ಟದೇ?

ಒಂದರ್ಥದಲ್ಲಿ ಇದು ತಪ್ಪಲ್ಲ. ಅನಿವಾರ್ಯ ಕಾರಣಗಳಿಂದ ಮೂತ್ರವನ್ನು ಹಲವು ಬಾರಿ ತಡೆದು ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಆದರೆ ನೋವು ಆಗುವವರೆಗೂ ತಡೆಯುವುದು ಮಾತ್ರ ಒಳ್ಳೆಯದಲ್ಲ. ಸಾಮರ್ಥ್ಯ ಮೀರಿದಾಗ ಮೂತ್ರಕೋಶದ ಗೋಡೆಗಳ ಮೇಲಿನ ಒತ್ತಡ ಹೆಚ್ಚಾದಂತೆ ನೋವು ಸಹಾ ಹೆಚ್ಚಾಗುತ್ತದೆ. ಇದು ಅನಾರೋಗ್ಯಕರವಾಗಿದೆ.

ಹಾಗಾದರೆ ವೈದ್ಯರನ್ನು ಯಾವಾಗ ಭೇಟಿಯಾಗಬೇಕು?

ಹಾಗಾದರೆ ವೈದ್ಯರನ್ನು ಯಾವಾಗ ಭೇಟಿಯಾಗಬೇಕು?

ಒಂದು ವೇಳೆ ನಿಮ್ಮ ಮೂತ್ರವಿಸರ್ಜನೆಯ ಅಭ್ಯಾಸ ಕಾರಣವಿಲ್ಲದೇ ಒಮ್ಮಿಂದೊಮ್ಮೇ ಬದಲಾದರೆ ಮಾತ್ರ ವೈದ್ಯರನ್ನು ತಕ್ಷಣ ಕಾಣಬೇಕು. ಒಂದು ವೇಳೆ ಸಾಮಾನ್ಯಕ್ಕಿಂತಲೂ ಹೆಚ್ಚು ಬಾರಿ ಅಥವಾ ಕಡಿಮೆ ಬಾರಿ ಆದರೆ ಅಥವಾ ರಾತ್ರಿ ನಿದ್ದೆಯಲ್ಲಿ ಕೆಲವಾರು ಬಾರಿ ಏಳಬೇಕಾದರೆ ವೈದ್ಯರನ್ನು ಕಾಣುವುದು ಅನಿವಾರ್ಯವಾಗಿದೆ.

ಸೋಂಕಿನ ಲಕ್ಷಣಗಳು

ಸೋಂಕಿನ ಲಕ್ಷಣಗಳು

ಒಂದು ವೇಳೆ ನೀವು ಈಗತಾನೇ ಶೌಚಾಲಯಕ್ಕೆ ಹೋಗಿ ಬಂದ ಕೆಲವೇ ಕ್ಷಣಗಳಲ್ಲಿ ಮತ್ತೊಮ್ಮೆ ಅವಸರವಾದರೆ ಇದು ಸೋಂಕಿನ ಒಂದು ಲಕ್ಷಣವಾಗಿದೆ. ಒಂದು ವೇಳೆ ಮೂತ್ರ ವಿಸರ್ಜಿಸುವಾಗ ಉರಿಯಾದರೆ ಅಥವಾ ಪೂರ್ಣವಾಗಿ ಮೂತ್ರಕೋಶವನ್ನು ಖಾಲಿ ಮಾಡಲು ಅಸಮರ್ಥರಾದರೆ, ಮೂತ್ರದ ಬಣ್ಣ ಬದಲಾಗಿದ್ದರೆ, ಇವೆಲ್ಲವೂ ಮೂತ್ರಕೋಶದಲ್ಲಿ ಸೋಂಕು ಉಂಟಾಗಿರುವ ಸಾಧ್ಯತೆಯನ್ನು ಸೂಚಿಸುತ್ತವೆ.

ಮೂತ್ರ ನಾಳದ ಸೋಂಕಿನ ಸಮಸ್ಯೆ ನಿವಾರಣೆಗೆ 'ಕೊತ್ತಂಬರಿ ಬೀಜಗಳು'

English summary

Is Peeing Too Much A Sign Of Bad Health?

Is frequent urination normal? Well, the number of times you visit the toilet can also decide how healthy or unhealthy you are. Your urinary system may take a blow if your lifestyle or health are bad. Also, your hydrating habits have a say in how much and how often you pee. Before knowing whether you your health is fine or not, you may first need to know what is normal an what is abnormal when it comes to the frequency of passing urine in a day.
Subscribe Newsletter