ಖಾಲಿ ಹೊಟ್ಟೆಯಲ್ಲಿ ಎಳೆನೀರು ಕುಡಿದರೆ ಒಂದಲ್ಲಾ, ಎರಡಲ್ಲಾ 10 ಲಾಭಗಳಿವೆ!

By: Arshad
Subscribe to Boldsky

 ನಿಸರ್ಗ ನೀಡಿರುವ ಅತ್ಯುತ್ತಮ ದ್ರವಾಹಾರವೆಂದರೆ ಎಳನೀರು ಅಥವಾ ಎಳೆನೀರು. ಅತ್ಯುತ್ತಮ ಮೂತ್ರವರ್ಧಕವಾಗಿರುವ ಎಳೆನೀರಿನ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಸಾಮಾನ್ಯವಾಗಿ ಪ್ರತಿ ಮನೆಯಲ್ಲಿಯೂ ತೆಂಗಿನಕಾಯಿಯ ವಿವಿಧ ಉತ್ಪನ್ನಗಳನ್ನು ಆಹಾರ, ಆರೋಗ್ಯ ಹಾಗೂ ಸೌಂದರ್ಯವರ್ಧಕವಾಗಿ ತಪ್ಪದೇ ಬಳಸುತ್ತಾರೆ. ಎಳೆನೀರನ್ನು ಕುಡಿಯುವ ಮೂಲಕ ಆರೋಗ್ಯವೃದ್ಧಿಯಾಗುವುದನ್ನು ಶತಮಾನಗಳ ಹಿಂದೆಯೇ ನಮ್ಮ ಪೂರ್ವಜರು ಕಂಡುಕೊಂಡಿದ್ದಾರೆ.

ಸತತ 15 ದಿನ ಎಳೆನೀರು ಕುಡಿಯಿರಿ-ಆರೋಗ್ಯ ಪಡೆಯಿರಿ

ಈ ನೀರಿನಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿದ್ದು ಅತಿ ಹೆಚ್ಚಿನ ಪೋಷಕಾಂಶಗಳಿರುವ ಕಾರಣ ಇದೊಂದು ಅದ್ಭುತ ಜೀವಜಲವಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟುಗಳು, ಅಮೈನೋ ಆಮ್ಲ, ಕಿಣ್ವಗಳು, ಬಿ-ಕಾಂಪ್ಲೆಕ್ಸ್ ವಿಟಮಿನ್ನುಗಳು, ವಿಟಮಿನ್ ಸಿ ಹಾಗೂ ಖನಿಜಗಳಾದ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನೀಶಿಯಂ, ಮ್ಯಾಂಗನೀಸ್ ಮೊದಲಾದವುಗಳಿವೆ.

ಈ ಎಲ್ಲಾ ಪೋಷಕಾಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಅಷ್ಟೇ ಅಲ್ಲ, ಎಳೆನೀರಿನಲ್ಲಿ ಸಸ್ಯಮೂಲದ ರಸದೂತವೊಂದಿದೆ. ಸೈಟೋಕೈನಿನ್ (cytokinin) ಎಂಬ ಈ ರಸದೂತಕ್ಕೆ ವಯಸ್ಸಾಗುವುದನ್ನು ಮುಂದೂಡುವ ಗುಣವಿದೆ. ಅಲ್ಲದೇ ಈ ರಸದೂತಕ್ಕೆ ನರಗಳ ಒಳಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ (anti-thrombotic) ಹಾಗೂ ಕ್ಯಾನ್ಸರ್ಕ ಣಗಳನ್ನು ತಡೆಗಟ್ಟುವ ಗುಣಗಳಿವೆ. 

ಬೆಳ್ಳಂ ಬೆಳಿಗ್ಗೆ ಎದ್ದು ಎಳೆ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

ಎಳೆನೀರಿನ ಗರಿಷ್ಠ ಪ್ರಯೋಜನವನ್ನು ಪಡೆಯಬೇಕಾದರೆ ಈ ನೀರು ಯಾವುದೇ ಕಲಬೆರಕೆಯಿಲ್ಲದೇ ನೈಸರ್ಗಿಕ ರೂಪದಲ್ಲಿರಬೇಕು. ಹಾಗಾಗಿ ತಾಜಾ ಎಳೆನೀರನ್ನು ಕತ್ತರಿಸಿ ನೀರು ಕುಡಿಯುವುದೇ ಅತ್ಯಂತ ಆರೋಗ್ಯಕರವಾಗಿದೆ. ಇಂದಿನ ಲೇಖನದಲ್ಲಿ ಎಳೆನೀರನ್ನು ಕುಡಿಯುವುದರ ಪ್ರಯೋಜನಗಳನ್ನು ವಿವರಿಸಲಾಗಿದೆ ಹಾಗೂ ಖಾಲಿಹೊಟ್ಟೆಯಲ್ಲಿ ಕುಡಿಯುವುದರ ಮಹತ್ವವನ್ನೂ ವಿವರಿಸಲಾಗಿದೆ.... 

ಬಾಯಾರಿಕೆ ತಣಿಸಿವುದರಲ್ಲಿ ಅಪ್ರತಿಮ

ಬಾಯಾರಿಕೆ ತಣಿಸಿವುದರಲ್ಲಿ ಅಪ್ರತಿಮ

ಬಾಯಾರಿಕೆಯಾದಾಗ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಎಳನೀರಿಗಿಂತ ಬೇರಾವ ದ್ರವವೂ ಸರಿಸಾಟಿಯಾಗಲಾರದು. ಇದರಲ್ಲಿರುವ ಎಲೆಕ್ಟ್ರೋಲೈಟುಗಳು ದೇಹ ಕಳೆದುಕೊಂಡಿರುವ ನೀರು ಮತ್ತು ಶಕ್ತಿಯನ್ನು ಮರುತುಂಬಿಸಲು ನೆರವಾಗುತ್ತವೆ. ವಿಶೇಷವಾಗಿ ಆಮಶಂಕೆ, ವಾಂತಿ, ಅತಿ ಹೆಚ್ಚಿನ ಬೆವರುವಿಕೆ ಮೊದಲಾದ ಸಂದರ್ಭದಲ್ಲಿ ದೇಹ ಕಳೆದುಕೊಂಡಿದ್ದ ನೀರಿನ ಅಂಶವನ್ನು ಮರುಪಡೆಯಲು ಸಹಾ ಈ ನೀರೇ ಅತ್ಯುತ್ತಮವಾಗಿದೆ.

ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತದೆ

ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತದೆ

ಎಳೆನೀರಿನಲ್ಲಿರುವ ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಅದರಲ್ಲೂ ಅಧಿಕ ಉಪ್ಪಿನ ಅಥವಾ ಸೋಡಿಯಂ ಪ್ರಭಾವದಿಂದ ದೇಹಕ್ಕೆ ಎದುರಾಗಿರುವ ತೊಂದರೆಯನ್ನು ಸಮತೋಲನಗೊಳಿಸಲು ನೆರವಾಗುವ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಇದು ಎಳನೀರಿನ ಅತ್ಯುತ್ತಮ ಗುಣವಾಗಿದೆ.

ಹೃದಯದ ಟಾನಿಕ್

ಹೃದಯದ ಟಾನಿಕ್

ಎಳನೀರಿನಲ್ಲಿ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ ಹಾಗೂ ಇದರ ನೀರಿನಲ್ಲಿ ಹೃದಯವನ್ನು ರಕ್ಷಿಸುವ ಗುಣಗಳಿವೆ. ಎಳನೀರನ್ನು ನಿಯಮಿತವಾಗಿ ಕುಡಿಯುವ ಮೂಲಕ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಬಹುದು ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ (high-density lipoprotein) ಹೆಚ್ಚಿಸಿ ಒಟ್ಟಾರೆ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುವ ಮೂಲಕ ಹೃದಯದ ಮೇಲಿನ ಭಾರವನ್ನು ಕಡಿಮೆ ಮಾಡಬಹುದು.

ಮದ್ಯದ ಅಮಲಿನಿಂದ ಹೊರತರುತ್ತದೆ

ಮದ್ಯದ ಅಮಲಿನಿಂದ ಹೊರತರುತ್ತದೆ

ಮದ್ಯವನ್ನು ಕುಡಿದ ಬಳಿಕ ದೇಹದಲ್ಲಿ ನೀರಿನ ಕೊರತೆಯುಂಟಾಗುತ್ತದೆ ಹಾಗೂ ಬೆಳಿಗ್ಗೆದ್ದಾಗ ತಲೆ ತಿರುಗುತ್ತಿರುವಂತೆ ಭಾಸವಾಗುತ್ತದೆ. ಈ ಸಮಯದಲ್ಲಿ ಎಳನೀರು ಕುಡಿಯುವ ಮೂಲಕ ಮೆದುಳಿಗೆ ಹೆಚ್ಚಿನ ರಕ್ತಸರಬರಾಜು ದೊರಕುತ್ತದೆ ಹಾಗೂ ಈ ತಲೆ ತಿರುಗುವಿಕೆ ನಿಲ್ಲುತ್ತದೆ.

ತೂಕ ಇಳಿಸಲು ಸಹಕರಿಸುತ್ತದೆ

ತೂಕ ಇಳಿಸಲು ಸಹಕರಿಸುತ್ತದೆ

ಸಕ್ಕರೆ ತುಂಬಿರುವ ಪೇಯಗಳ ಬದಲಿಗೆ ಎಳನೀರನ್ನು ಕುಡಿಯುವ ಮೂಲಕ ತೂಕ ಇಳಿಸುವ ಪ್ರಕ್ರಿಯೆಗೆ ಹೆಚ್ಚಿನ ಬೆಂಬಲ ದೊರಕುತ್ತದೆ. ಇದರಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಲೂ ಯೋಗ್ಯವಾಗಿದೆ. ಅಲ್ಲದೇ ಈ ನೀರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ದ್ರವವಾಗಿದ್ದು ಇದರಲ್ಲಿರುವ ಕಿಣ್ವಗಳು ಕೊಬ್ಬನ್ನು ಹೆಚ್ಚು ಕರಗಿಸಲು ನೆರವಾಗುವ ಮೂಲಕ ಶೀಘ್ರವಾಗಿ ತೂಕ ಇಳಿಯಲು ನೆರವಾಗುತ್ತವೆ.

ತಲೆನೋವು ಕಡಿಮೆ ಮಾಡುತ್ತದೆ

ತಲೆನೋವು ಕಡಿಮೆ ಮಾಡುತ್ತದೆ

ಸಾಮಾನ್ಯವಾಗಿ ದೇಹದಲ್ಲಿ ನೀರಿನ ಕೊರತೆಯಾಗುವುದರಿಂದಲೇ ತಲೆನೋವು ಉಂಟಾಗುತ್ತದೆ. ಇದಕ್ಕೆ ಮೈಗ್ರೇನ್ ಸಹಾ ಹೊರತಲ್ಲ. ಎಳೆನೀರಿನ ಸೇವನೆಯಿಂದ ದೇಹ ಕಳೆದುಕೊಂಡಿದ್ದ ಎಲೆಕ್ಟ್ರೋಲೈಟುಗಳನ್ನು ಮತ್ತೆ ಪೂರೈಸುವ ಮೂಲಕ ದೇಹಕ್ಕೆ ಆರ್ದ್ರತೆಯ ಕೊರತೆಯನ್ನು ನೀಗಿಸುತ್ತದೆ. ವಿಶೇಷವಾಗಿ ಇದರಲ್ಲಿರುವ ಮೆಗ್ನೀಶಿಯಂ ಮೈಗ್ರೇನ್ ತಲೆನೋವು ಬರದಂತೆ ಇರಲು ಹಾಗೂ ಕಡಿಮೆ ಮಾಡಲು ನೆರವಾಗುತ್ತದೆ. ಎಳೆನೀರನ್ನು ಪ್ರತಿದಿನ ಕುಡಿಯುವ ಪ್ರಯೋಜನಗಳಲ್ಲಿ ಇದು ಪ್ರಮುಖ ಪ್ರಯೋಜನವಾಗಿದೆ.

ಕೆಟ್ಟಿದ್ದ ಹೊಟ್ಟೆಯನ್ನು ಸರಿಪಡಿಸುತ್ತದೆ

ಕೆಟ್ಟಿದ್ದ ಹೊಟ್ಟೆಯನ್ನು ಸರಿಪಡಿಸುತ್ತದೆ

ಹೊಟ್ಟೆ ಕೆಡಲು ಅಜೀರ್ಣತೆ ಪ್ರಮುಖ ಕಾರಣವಾಗಿದೆ. ಅಜೀರ್ಣತೆಗೆ ಕೆಲವಾರು ಕಾರಣಗಳಿರಬಹುದು. ಆದರೆ ಎಳೆನೀರಿನ ಸೇವನೆಯಿಂದ ಯಾವುದೇ ಕಾರಣಕ್ಕೂ ಅಜೀರ್ಣತೆಯಾಗಿದ್ದರೆ ಇದನ್ನು ತಕ್ಷಣವೇ ಸರಿಪಡಿಸಿ ಆಹಾರ ಜೀರ್ಣಿಸಿಕೊಳ್ಳಲು ನೆರವಾಗುತ್ತದೆ ಹಾಗೂ ಈ ಮೂಲಕ ಎದುರಾಗಬಹುದಾಗಿದ್ದ ಇತರ ತೊಂದರೆಗಳಿಂದ ಕಾಪಾಡುತ್ತದೆ.

English summary

is it okay to drink coconut water daily on empty stomach

Coconut water contains plant hormones called cytokinins that are rich in anti-ageing, anti-thrombotic and anti-cancerous properties. In order to reap its maximum health benefits, you'll need to opt for fresh and pure coconut water. Anything that is available in a bottled form is laden with sugar. Hence, it is recommended to go for the natural option. In this article, we have mentioned the top health benefits of coconut water and the benefits of drinking this every day.
Subscribe Newsletter