For Quick Alerts
ALLOW NOTIFICATIONS  
For Daily Alerts

ಎಸಿ ರೂಮ್: ಕ್ಷಣ ಮಾತ್ರಕ್ಕೆ ಆನಂದ, ಆದರೆ ಆರೋಗ್ಯಕ್ಕೆ ಹಾನಿಕಾರಕ!

By Manu
|

ಅತಿಯಾದ ಸೆಖೆ ಇದ್ದಾಗ ಮನಸ್ಸು ಬಯಸುವುದು ಒಂದಿಷ್ಟು ತಂಪಾದ ಗಾಳಿಯನ್ನು. ವಾತಾವರಣ ತಂಪಾಗಿದ್ದರೆ ಮನಸ್ಸು ಉಲ್ಲಾಸದಲ್ಲಿರುತ್ತದೆ. ಯಾವುದೇ ಕೆಲಸ ಮಾಡಬೇಕೆಂದರೂ ಲವಲವಿಕೆಯಿಂದ ಮಾಡಬಹುದು. ಹಾಗಾಗಿಯೇ ಇಂದು ಸ್ವಲ್ಪ ಆರ್ಥಿಕವಾಗಿ ಅನುಕೂಲವಿದೆ ಎಂದಾದರೆ ಮೊದಲು ಮನೆಗೆ ಹವಾ ನಿಯಂತ್ರಿತ(ಎಸಿ)ವನ್ನು ಹಾಕಿಸಿಕೊಳ್ಳುತ್ತಾರೆ. ಇದು ಮನೆಗಷ್ಟೇ ಸೀಮಿತವಾಗಿಲ್ಲ. ಬಹುತೇಕ ಕಚೇರಿಗಳಲ್ಲೂ ಕೆಲಸಗಾರರ ಅನುಕೂಲಕ್ಕಾಗಿ ಎಸಿ ಅಳವಡಿಸಿರುತ್ತಾರೆ.

ನಿಜ, ಅನುಕೂಲಕ್ಕೆ ಎಂದು ಮಾಡಿಕೊಂಡ ಹವಾನಿಯಂತ್ರಿತ ಇಂದು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎನ್ನುವುದನ್ನು ನಂಬಲೇ ಬೇಕಾದ ಸ್ಥಿತಿ ಬಂದಿದೆ. ದಿನವಿಡೀ ಎಸಿ ಕೆಳಗೆ ಕುಳಿತು ಕೆಲಸ ಮಾಡುವುದು, ಶಾಪಿಂಗ್ ಮಾಲ್‍ಗಳಲ್ಲಿ ಎಸಿ ಕೆಳಗೆ ನಿಂತು ಖರೀದಿಸುವುದು. ಮನೆಗೆ ಬಂದರೆ ಎಸಿ ಕೆಳಗೆ ಕುಳಿತು ವಿಶ್ರಾಂತಿ ಪಡೆಯುವುದರಿಂದ ದೇಹದ ಮೇಲೆ ಗಣನೀಯವಾದ ಪರಿಣಾಮ ಬೀರುತ್ತವೆ. ಎಸಿಯನ್ನು ಅತಿಯಾಗಿ ಬಳಸುವುದರಿಂದ ಏನೆಲ್ಲಾ ಪರಿಣಾಮ ಬೀರುತ್ತದೆ ಎನ್ನುವುದನ್ನು ಇಲ್ಲಿ ತಿಳಿಸುತ್ತಿದ್ದೇವೆ ನೋಡಿ...

ತುಂಬಾ ಬೇಗನೇ ಸುಸ್ತಾಗಿ ಬಿಡುವಿರಿ!

ತುಂಬಾ ಬೇಗನೇ ಸುಸ್ತಾಗಿ ಬಿಡುವಿರಿ!

ಇಡಿಯ ದಿನ ಆಫೀಸ್ ಅಥವಾ ಕೆಲಸದ ಸ್ಥಳದಲ್ಲಿ ಹವಾನಿಯಂತ್ರಣದ ಹವೆಯನ್ನು ಮಾತ್ರ ಸೇವಿಸಿರುವವರು ಇತರರಿಗಿಂತ ಹೆಚ್ಚು ಸುಸ್ತು ಮತ್ತು ಅನಾರೋಗ್ಯಪೀಡಿತರಾಗುತ್ತಾರೆ ಎಂದು ಸಂಶೋಧನೆಗಳ ಮೂಲಕ ದೃಢಪಟ್ಟಿದೆ. ಅತಿ ಹೆಚ್ಚಿನ ತಲೆನೋವು, ವಿಪರೀತ ಸುಸ್ತು, ಕೆಲಸದಲ್ಲಿ ಮಗ್ನರಾಗಲು ಏಕಾಗ್ರತೆಯ ತೊಂದರೆ ಅನುಭವಿಸುತ್ತಾರೆ.

ಚರ್ಮದ ಸಮಸ್ಯೆ ಕಾಡಬಹುದು!

ಚರ್ಮದ ಸಮಸ್ಯೆ ಕಾಡಬಹುದು!

ನಮ್ಮ ಚರ್ಮಕ್ಕೆ ಸತತವಾಗಿ ಆರ್ದ್ರತೆ ದೊರಕುತ್ತಾ ಇರಬೇಕು. ಇಲ್ಲದಿದ್ದರೆ ಚರ್ಮ ಒಣದಾಗುತ್ತಾ ಒಡೆಯಲು ಮತ್ತು ಬಿರಿಬಿಡಲು ತೊಡಗುತ್ತದೆ. ಹವಾನಿಯಂತ್ರಣದ ಗಾಳಿ ತಣ್ಣಗಿದ್ದರೂ ಅದರಲ್ಲಿರುವ ನೀರಿನ ಅಂಶ ಮರುಬಳಕೆಯಾಗುವುದರಿಂದ ಆವಿಯಾಗಿ ಹೋಗಿದ್ದು ಈ ಹವೆ ಒಣದಾಗಿರುತ್ತದೆ. ಈ ಹವೆ ಒಣಚರ್ಮಕ್ಕೆ ನೇರವಾದ ಕಾರಣವಾಗಿದೆ.

ತ್ವಚೆಯ ಸುಕ್ಕು ಕಾಣಿಸಿಕೊಳ್ಳಬಹುದು

ತ್ವಚೆಯ ಸುಕ್ಕು ಕಾಣಿಸಿಕೊಳ್ಳಬಹುದು

ಹವಾನಿಯಂತ್ರಕವು ಸುತ್ತ ಮುತ್ತಲಿನ ಗಾಳಿಯಲ್ಲಿರುವ ತೇವಾಂಶವನ್ನು ಹೀರಿಕೊಳ್ಳುತ್ತದೆ. ಹೀಗಾಗಿ ತ್ವಚೆಯ ಮೇಲೂ ಇದರ ಪರಿಣಾಮ ಬೀರುತ್ತದೆ. ತ್ವಚೆಯಲ್ಲಿ ತೇವಾಂಶ ಕಡಿಮೆಯಾಗಿ, ಬಹು ಬೇಗ ಸುಕ್ಕು ಕಾಣಿಸಿಕೊಳ್ಳುತ್ತವೆ.

ಶೀತ ಮತ್ತು ತಲೆನೋವು

ಶೀತ ಮತ್ತು ತಲೆನೋವು

ಹವಾ ನಿಯಂತ್ರಕದ ಕೆಳಗೆ ಬಹಳ ಸಮಯ ಕಳೆದರೆ ತಲೆ ನೋವು, ಶೀತ, ಉಸಿರಾಟದ ಸಮಸ್ಯೆ ಮತ್ತು ಪದೇ ಪದೇ ಜ್ವರ ಬರುವುದು.

ದೇಹದಲ್ಲಿ ಒತ್ತಡ

ದೇಹದಲ್ಲಿ ಒತ್ತಡ

ಬಹಳ ಹೊತ್ತು ತಂಪಾದ ವಾತಾವರಣದಲ್ಲಿ ಕುಳಿತು ಹಠಾತ್ ಬಿಸಿಲಿಗೆ ಬಂದರೆ ಅಥವಾ ಕೋಣೆಯ ಸಾಮಾನ್ಯ ತಾಪಮಾನಕ್ಕೆ ಬಂದರೆ ದೇಹಕ್ಕೆ ಒಂದು ವಾತಾವರಣದಿಂದ ಇನ್ನೊಂದು ವಾತಾವರಣಕ್ಕೆ ಹೊಂದಿಕೊಳ್ಳುವಾಗ ಒತ್ತಡ ಉಂಟಾಗುವುದು.

ಇಲ್ಲಸಲ್ಲದ ರೋಗಗಳು ಬಂದುಬಿಡುತ್ತದೆ!

ಇಲ್ಲಸಲ್ಲದ ರೋಗಗಳು ಬಂದುಬಿಡುತ್ತದೆ!

ಹವಾ ನಿಯಂತ್ರಕಗಳು ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಉಂಟುಮಾಡುತ್ತದೆ. ಇದರಿಂದ ಸಂಧಿವಾತ, ಬಿಪಿ, ಕೂದಲು ಉದುರುವುದು ಸೇರಿದಂತೆ ಅನೇಕ ಅನಾರೋಗ್ಯವು ಕಾಡುವುದು.

ಆಯಾಸವನ್ನುಂಟು ಮಾಡುತ್ತದೆ

ಆಯಾಸವನ್ನುಂಟು ಮಾಡುತ್ತದೆ

ಎಸಿ ತೀರಾ ತಣ್ಣಗಿಡಿಸುವುದರಿಂದ ದೇಹದಲ್ಲಿ ಚಳಿ ಉಂಟಾಗುವುದು. ಇದರಿಂದ ನಡುಕ ಪ್ರಾರಂಭವಾಗಿ ದೇಹವು ಹೆಚ್ಚು ಆಯಾಸಕ್ಕೆ ಒಳಗಾಗುತ್ತದೆ.

 ಇದರಿಂದ ಪಾರಾಗಲು ಪರಿಹಾರ?

ಇದರಿಂದ ಪಾರಾಗಲು ಪರಿಹಾರ?

ಕಚೇರಿಯಲ್ಲಿ ಎಸಿ ಇದ್ದರೆ ಮನೆಯಲ್ಲಿ ಎಸಿ ಬಳಸಬೇಡಿ. ನಿರ್ಜಲೀಕರಣವನ್ನು ತಪ್ಪಿಸಲು ಹೆಚ್ಚು ಹೆಚ್ಚು ನೀರನ್ನು ಸೇವಿಸಿ. ಮಲಗುವ ಕೋಣೆಯಲ್ಲಿ ಎಸಿ ಇದ್ದರೆ ಒಂದು ಮೂಲೆಯಲ್ಲಿ ನೀರಿನ ಬಕೇಟ್/ಬುಟ್ಟಿ ಇಟ್ಟಿರಿ. ಅದು ವಾತಾವರಣದಲ್ಲಿ ತೇವಾಂಶ ಇರುವಂತೆ ಮಾಡುತ್ತದೆ.

ಹವಾನಿಯಂತ್ರಣದ ಕೆಡುಕಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

ಹವಾನಿಯಂತ್ರಣದ ಕೆಡುಕಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

1) ಹೆಚ್ಚಿನ ಹವಾನಿಯಂತ್ರಣಗಳನ್ನು ಹದಿನೇಳು ಹದಿನೆಂಟು ಡಿಗ್ರಿಗಳಲ್ಲಿ ಇರಿಸಿರುತ್ತಾರೆ. ಇದನ್ನು ಇಪ್ಪತ್ತೈದಕ್ಕೆ ಏರಿಸುವುದು ಮತ್ತು ಇದರ ಸೆಟ್ಟಿಂಗ್ ಬದಲಿಸಲು ಜನಸಾಮಾನ್ಯರಿಗೆ ಸಾಧ್ಯವಿಲ್ಲದಂತೆ ಬೀಗವಿರುವ ಪೆಟ್ಟಿಗೆಗಳಲ್ಲಿ ಏಸಿಯ ಸ್ವಿಚ್ ಇರಿಸುವುದು ಉತ್ತಮ.

2) ಸತತವಾಗಿ ಇಡಿಯ ದಿನ ಹವಾನಿಯಂತ್ರಣದಲ್ಲಿರುವವರು ದಿನಕ್ಕೆ ನಾಲ್ಕಾರು ಬಾರಿಯಾದರೂ ಹೊರಗಿನ ತಾಜಾಹವೆಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕು. ಇದಕ್ಕಾಗಿ ಯಾವುದಾದರೊಂದು ನೆವ ಹಾಕಿ ಹೊರಗಿನ ಗಾಳಿಯಲ್ಲಿ ಪ್ರತಿಬಾರಿ ಕನಿಷ್ಠ ಹತ್ತು ನಿಮಿಷವಾದರೂ ನಡೆದಾಡಬೇಕು

ಹವಾನಿಯಂತ್ರಣದ ಕೆಡುಕಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

ಹವಾನಿಯಂತ್ರಣದ ಕೆಡುಕಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

3) ಏರ್ ಕಂಡೀಶನ್ ಮೂಲಕ ತಾಜಾ ಹವೆ ಒಳಬರುವಂತೆ ನೋಡಿಕೊಳ್ಳಬೇಕು.

4) ಹೊರಗಿನ ಹವೆ ಇಪ್ಪತ್ತೈದು ಅಥವಾ ಅದರ ಆಸುಪಾಸು ಇದ್ದರೆ ಏಸಿ ಬಂದ್ ಮಾಡಬೇಕು. ಇದು ಸಾಧ್ಯವಿಲ್ಲದಿದ್ದಲ್ಲಿ ಹವಾನಿಯಂತ್ರಣ ಬಂದ್ ಮಾಡಿ ಕೇವಲ ಫ್ಯಾನ್ ತಿರುಗುವಂತೆ ನೋಡಿಕೊಳ್ಳಬೇಕು

5) ಮನೆ, ಕಛೇರಿ, ಪ್ರಯಾಣ ಎಲ್ಲೆಡೆಯೂ ಹವಾನಿಯಂತ್ರಣದಲ್ಲಿಯೇ ಇರುವವರ ದೇಹ ಬೇಗನೇ ಶಿಥಿಲವಾಗುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ಇದನ್ನು ತಡೆಯಲು ಪ್ರತಿದಿನ ಒಂದೆರಡು ಗಂಟೆಗಳನ್ನಾದರೂ, ಅದರಲ್ಲೂ ಮುಂಜಾನೆಯ ಹೊತ್ತು ನಿಸರ್ಗದಲ್ಲಿ ಕಳೆಯಬೇಕು.

English summary

Is It Healthy To Use Air Conditioners?

Today, the shopping malls, the multiplexes, the work spaces and even the spas and resorts that you spend your weekends are air-conditioned spaces. Let us discuss how unhealthy they are..
X
Desktop Bottom Promotion