For Quick Alerts
ALLOW NOTIFICATIONS  
For Daily Alerts

ಆಡಿನ ಹಾಲು ಆರೋಗ್ಯಕ್ಕೆ ಎಷ್ಟು ಉತ್ತಮ?

By Manu
|

ಆಡಿನ ಹಾಲು ಆರೋಗ್ಯಕ್ಕೆ ಎಷ್ಟು ಉತ್ತಮ? ಇಂದಿಗೂ ಹಳ್ಳಿಗಳಲ್ಲಿ ಕೆಲವರು ಹಸುವಿನ ಹಾಲಿಗಿಂತಲೂ ಆಡಿನ ಹಾಲೇ ಉತ್ತಮ ಎಂದು ಭಾವಿಸುತ್ತಾರೆ. ಆಡಿನ ಹಾಲನ್ನೇ ಸೇವಿಸುವವರು ಭಾರತದಲ್ಲಿ ಬೇಕಾದಷ್ಟು ಜನರಿದ್ದು ಇವರು ತಮ್ಮ ಆರೋಗ್ಯಕ್ಕೆ ಆಡಿನ ಹಾಲಿನ ಸೇವನೆಯೇ ಕಾರಣ ಎಂದು ವಿವರಿಸುತ್ತಾರೆ.

ಹಸು ಹಾಲಿಗಿಂತ ಆಡಿನ ಹಾಲು ಪರಿಪೂರ್ಣ ಏಕೆ?

ಒಂದು ವೇಳೆ ನಿಮ್ಮ ಆರೋಗ್ಯದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿದ್ದು ಹಸುವಿನ ಅಥವಾ ಎಮ್ಮೆಯ ಹಾಲನ್ನು ಹೆಚ್ಚು ಸೇವಿಸಲು ವೈದ್ಯರು ಸಲಹೆ ನೀಡಿದರೆ ಆಡಿನ ಹಾಲು ನಿಮ್ಮ ಕ್ಯಾಲ್ಸಿಯಂ ಕೊರತೆಯನ್ನು ಸಮರ್ಥವಾಗಿ ಪೂರೈಸಬಲ್ಲುದು...

ಆಡಿನ ಹಾಲಿನಲ್ಲಿ ಏನೇನಿದೆ?

ಆಡಿನ ಹಾಲಿನಲ್ಲಿ ಏನೇನಿದೆ?

ಒಂದು ಸಾಮಾನ್ಯ ಲೋಟದಷ್ಟು ಹಾಲಿನಲ್ಲಿ ಸುಮಾರು ನೂರಾ ಎಪ್ಪತ್ತರಷ್ಟು ಕ್ಯಾಲೋರಿಗಳು, ಹತ್ತು ಗ್ರಾಂ ಪ್ರೋಟೀನ್, 27mg ಕೊಲೆಸ್ಟ್ರಾಲ್, 11 ಗ್ರಾಂ ಕಾರ್ಬೋಹೈಡ್ರೇಟುಗಳು, ಮತ್ತು 6.3 ಗ್ರಾಂ ಸಂತುಲಿತ ಕೊಬ್ಬು ಇದೆ. ಇದರ ಜೊತೆಗೇ ಖನಿಜಗಳಾದ ಸೆಲೆನಿಯಂ, ಸತು, ತಾಮ್ರ, ಪೊಟ್ಯಾಶಿಯಂ, ಗಂಧಕ, ಮೆಗ್ನೀಶಿಯಂ, ರೈಬೋಫ್ಲೆವಿನ್ ಮತ್ತ ವಿಟಮಿನ್ ಎ, ಬಿ೨, ಸಿ ಮತ್ತು ಡಿ ಇವೆ.

ಆಡಿನ ಹಾಲಿನ ಸೇವನೆಯ ಪ್ರಯೋಜನಗಳು

ಆಡಿನ ಹಾಲಿನ ಸೇವನೆಯ ಪ್ರಯೋಜನಗಳು

ಈ ಹಾಲು ಹಸುವಿನ ಹಾಲಿಗಿಂತಲೂ ಸುಲಭವಾಗಿ ಜೀರ್ಣವಾಗುತ್ತದೆ. ಇದರಲ್ಲಿರುವ ಕೊಬ್ಬಿನ ಕಣಗಳು ಇತರ ಹಾಲಿಗಿಂತಲೂ ತೀರಾ ಚಿಕ್ಕದಾಗಿರುವುದರಿಂದ ಜೀರ್ಣಾಂಗಗಳಿಗೆ ಹೆಚ್ಚಿನ ಭಾರ ಬೀಳುವುದಿಲ್ಲ.

ಹೃದಯಕ್ಕೂ ಉತ್ತಮ

ಹೃದಯಕ್ಕೂ ಉತ್ತಮ

ಈ ಹಾಲಿನ ಸೇವನೆಯಿಂದ ಹೃದಯದ ಕ್ಷಮತೆ ಹೆಚ್ಚುತ್ತದೆ. ಇದು ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ.

ಕೊಬ್ಬಿನ ಆಮ್ಲಗಳು

ಕೊಬ್ಬಿನ ಆಮ್ಲಗಳು

ಇದರಲ್ಲಿ ಮಧ್ಯಮ ಪ್ರಮಾಣದ ಕೊಬ್ಬಿನ ಆಮ್ಲಗಳಿವೆ. ಅಂದರೆ ಆಡಿನ ಹಾಲಿನಲ್ಲಿ ಇದು 35% ಇದ್ದರೆ ಇದೇ ಪ್ರಮಾಣದ ಹಸುವಿನ ಹಾಲಿನಲ್ಲಿ 20% ಇರುತ್ತದೆ. ಜೀರ್ಣಕ್ರಿಯೆ ಉತ್ತಮಗೊಳಿಸುವಲ್ಲಿ ಹಾಗೂ ಕರುಳುಗಳ ಒಳಭಾಗದಲ್ಲಿ ಯಾವುದೇ ಸೋಂಕು ಉಂಟಾಗದಿರಲು ಈ ಕೊಬ್ಬಿನ ಆಮ್ಲಗಳು ಅವಶ್ಯವಾಗಿವೆ.

ಕ್ಯಾಲ್ಸಿಯಂನ ಗಣಿಯಾಗಿದೆ

ಕ್ಯಾಲ್ಸಿಯಂನ ಗಣಿಯಾಗಿದೆ

ಹಸುವಿನ ಹಾಲಿಗಿಂತಲೂ ಆಡಿನ ಹಾಲಿನಲ್ಲಿ ಕೊಂಚ ಹೆಚ್ಚೇ ಕ್ಯಾಲ್ಸಿಯಂ ಇದೆ. ನಮ್ಮ ಮೂಳೆಗಳ ಆರೋಗ್ಯಕ್ಕಾಗಿ ಕ್ಯಾಲ್ಸಿಯಂ ಅಗತ್ಯ. ಆಡಿನ ಹಾಲಿನ ಸೇವನೆಯ ಇದು ಅತ್ಯಂತ ಮುಖ್ಯ ಪ್ರಯೋಜನವಾಗಿದೆ.

ತ್ವಚೆಯ ಆರೋಗ್ಯ

ತ್ವಚೆಯ ಆರೋಗ್ಯ

ಇದರಲ್ಲಿರುವ ವಿಟಮಿನ್ ಎ ತ್ವಚೆಯನ್ನು ಮೃದು ಹಾಗೂ ಕಾಂತಿಯುತ ಮತ್ತು ಆರೋಗ್ಯಕರವಾಗಿಸಲು ನೆರವಾಗುತ್ತದೆ. ಆಡಿನ ಹಾಲನ್ನು ಸೇವಿಸತೊಡಗಿದ ಕೆಲವೇ ದಿನಗಳಲ್ಲಿ ನಿಮ್ಮ ತ್ವಚೆ ಕಾಂತಿಯುಕ್ತವಾಗುವುದನ್ನು ಕಾಣಬಹುದು.

ಲ್ಯಾಕ್ಟೋಸ್ ಪ್ರಮಾಣ ಕಡಿಮೆ

ಲ್ಯಾಕ್ಟೋಸ್ ಪ್ರಮಾಣ ಕಡಿಮೆ

ಹಾಲಿಗೆ ಬಿಳಿ ಬಣ್ಣ ಬರಲು ಕಾರಣವಾದ ಲ್ಯಾಕ್ಟೋಸ್ ಆಡಿನ ಹಾಲಿನಲ್ಲಿ ಕಡಿಮೆ ಇರುವುದರಿಂದಲೇ ಈ ಹಾಲು ಹಸುವಿನ ಹಾಲಿನಷ್ಟು ಬೆಳ್ಳಗಿರುವುದಿಲ್ಲ. ಆದ್ದರಿಂದ ಲ್ಯಾಕ್ಟೋಸ್ ಅಸಹಿಷ್ಣುತೆ ಇರುವ ವ್ಯಕ್ತಿಗಳು ಅಂದರೆ ಹಾಲನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಮರ್ಥರಿರದವರಿಗೆ ಆಡಿನ ಹಾಲು ವರದಾನವಾಗಿದೆ. ಆದರೆ ನಿಮ್ಮ ವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಸೂಕ್ತ.

ಪೋಷಕಾಂಶಗಳನ್ನು ಹೀರಿಕೊಳ್ಳುವುದು

ಪೋಷಕಾಂಶಗಳನ್ನು ಹೀರಿಕೊಳ್ಳುವುದು

ಆಡಿನ ಹಾಲಿನಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದಲೇ ಹಾಲಿನೊಂದಿಗೆ ಜೇನನ್ನು ಬೆರೆಸಬೇಕಾಗುತ್ತದೆ. ಆದರೆ ಅಡಿನ ಹಾಲಿನಲ್ಲಿರುವ ಪೋಷಕಾಂಶಗಳು ಸುಲಭವಾಗಿ ಹೀರಲ್ಪಡುತ್ತವೆ. ಮೆಗ್ನೇಶಿಯಂ, ಗಂಧಕ, ಕಬ್ಬಿಣ ಮತ್ತು ಕ್ಯಾಲ್ಸಿಯಂಗಳು ಸುಲಭವಾಗಿ ದೇಹಕ್ಕೆ ಲಭ್ಯವಾಗುತ್ತದೆ. ತನ್ಮೂಲಕ ಮೂಳೆಗಳಲ್ಲಿ ಗಾಳಿಗುಳ್ಳೆ ತುಂಬಿಕೊಳ್ಳುವ ಮೂಲಕ ಎದುರಾಗುವ ಜೊಳ್ಳುಮೂಳೆ (osteoporosis), ಪೋಷಕಾಂಶಗಳ ಕೊರತೆ ಹಾಗೂ ರಕ್ತಹೀನತೆಯಂತಹ ಕೊರತೆಗಳನ್ನು ಸಮರ್ಥವಾಗಿ ಪೂರೈಸ ಬಹುದಾಗಿದೆ.

English summary

Is Goat Milk Good For Health?

Is goat milk good for health? In Indian villages, many people still prefer goat milk over cow's milk. Yes, there are enough admirers for goat milk in India and they all claim that it is very good for heath. If you are worried that your calcium intake would suffer, if you stop buffalo or cow milk then rest assured. Even goat milk is rich in calcium.
X
Desktop Bottom Promotion