ಹೌದು ಸ್ವಾಮಿ, ಜ್ವರ ಬಂದರೆ ಆರೋಗ್ಯಕ್ಕೆ ಒಳ್ಳೆಯದಂತೆ!

By: manu
Subscribe to Boldsky

ಜ್ವರ ಬಂದಾಕ್ಷಣ ನಾವು ಕಾಯಿಲೆ ಬಂದಿದೆ ಎಂದೇ ತಿಳಿದುಕೊಳ್ಳುತ್ತೇವೆ. ಜ್ವರ ಬಂದಿದೆ ಎಂಬ ನೆಪವನ್ನೇ ಒಡ್ಡಿಕೊಂಡು ನಮ್ಮ ನಿತ್ಯದ ಕೆಲಸಗಳನ್ನೆಲ್ಲಾ ಮುಂದೂಡಿ ಹಾಸಿಗೆ ಹಿಡಿದುಬಿಡುತ್ತೇವೆ. ಜ್ವರ ಕಡಿಮೆಯಾಗಬೇಕೆಂದು ತಕ್ಷಣವೇ ಪ್ಯಾರಾಸೆಟಮಾಲ್ ಮಾತ್ರೆಯನ್ನು ನುಂಗಿಬಿಡುತ್ತೇವೆ. ನಮ್ಮ ಉದ್ದೇಶವೆಂದರೆ ಈ ಜ್ವರ ತಕ್ಷಣ ಬಿಟ್ಟು ಹೋಗಬೇಕು ಅಷ್ಟೇ.

ಸಾಮಾನ್ಯ ಜ್ವರಕ್ಕೆಲ್ಲಾ ಮನೆಮದ್ದಿರುವಾಗ ವೈದ್ಯರ ಹಂಗೇಕೆ?

ವಾಸ್ತವವಾಗಿ ಜ್ವರ ಎಂದರೆ ಒಂದು ಕಾಯಿಲೆ ಅಥವಾ ವ್ಯಾಧಿಯೇ ಅಲ್ಲ, ಬದಲಿಗೆ ನಮ್ಮ ರೋಗ ನಿರೋಧಕ ವ್ಯವಸ್ಥೆ ದೇಹದೊಳಗೆ ನುಸುಳಿರುವ ಕ್ರಿಮಿಗಳ ವಿರುದ್ಧ ಹೋರಾಡಲು ದೇಹದ ತಾಪಮಾನವನ್ನು ಏರಿಸುವ ಮೂಲಕ ಕೈಗೊಳ್ಳುವ ಒಂದು ವ್ಯವಸ್ಥೆಯಾಗಿದೆ. ಆದ್ದರಿಂದ ಜ್ವರ ಬಂದಾಗ ದೇಹ ರೋಗ ನಿರೋಧಕ ಶಕ್ತಿಗೆ ಹೆಚ್ಚಿನ ಬಲ ನೀಡಲು ಇತರ ಅಂಗಗಳಿಗೆ ರಕ್ತಪೂರೈಸುವುದನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಮಗೆ ಶ್ರಮದಾಯಕ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ಹೆಚ್ಚು ವಿಶ್ರಾಂತಿ ಪಡೆಯಲು ಪ್ರೇರಣೆ ನೀಡುತ್ತದೆ.

ಜ್ವರ ಬಂದಾಗ ತಿನ್ನಬೇಕಾದ ಆಹಾರಗಳಿವು

ಆದ್ದರಿಂದ ಜ್ವರ ಬಂದಾಗ ಸಾಧ್ಯವಾದಷ್ಟು ವಿಶ್ರಾಂತಿ ಪಡೆದು ಜೀವನಿರೋಧಕ ಶಕ್ತಿಗೆ ತನ್ನ ಕೆಲಸ ಮಾಡಲು ಅವಕಾಶ ಮಾಡಿಕೊಡುವುದೇ ಜಾಣತನದ ಕ್ರಮ. ಬದಲಿಗೆ ವೈರಲ್ ಜ್ವರ ಇಳಿಯಲು ಮಾತ್ರೆ ತೆಗೆದುಕೊಂಡರೆ ಇದು ನಮ್ಮ ಶತ್ರುಗಳಾದ ಕ್ರಿಮಿಗಳಿಗೆ ನಾವೇ ನೆರವು ನೀಡಿದಂತಾಗಿ ರೋಗ ಉಲ್ಬಣಗೊಳ್ಳಲು ಹಾಗೂ ನಮ್ಮ ಸೋಲಿಗೆ ನಾವೇ ಕಾರಣರಾಗುತ್ತೇವೆ.ಬನ್ನಿ, ಜ್ವರದ ಮಹತ್ವದ ಕೆಲವು ವಿಷಯಗಳನ್ನು ಅರಿಯೋಣ....

ರೋಗ ನಿರೋಧಕ ಶಕ್ತಿ ಹೇಗೆ ಕೆಲಸ ಮಾಡುತ್ತದೆ?

ರೋಗ ನಿರೋಧಕ ಶಕ್ತಿ ಹೇಗೆ ಕೆಲಸ ಮಾಡುತ್ತದೆ?

ನಮ್ಮ ದೇಹದ ರೋಗ ನಿರೋಧಕ ಶಕ್ತಿ ಸತತವಾಗಿ ಕೆಲಸ ಮಾಡುತ್ತಾ ನಮ್ಮ ರಕ್ಷಣೆ ಮಾಡುತ್ತಿರುತ್ತದೆ. ಇದಕ್ಕೆ ತನ್ನ ಕೆಲಸ ತಾನೇ ಮಾಡಲು ಅವಕಾಶ ಮಾಡಿಕೊಟ್ಟರೆ ಇದರ ಕ್ಷಮತೆ ಗರಿಷ್ಟವಾಗಿರುತ್ತದೆ. ಆದರೆ ಈ ವ್ಯವಸ್ಥೆ ಉತ್ತಮವಾಗಿ ಕೆಲಸ ಮಾಡುತ್ತಿರಲು ಪ್ರತಿಬಾರಿ ಹೊಸ ಹೊಸ ಬಗೆಯ ಶತ್ರುಗಳು ಎದುರಾಗುತ್ತಲೇ ಇರಬೇಕು. ಆದ್ದರಿಂದ ಪ್ರತಿ ಬಾರಿಯೂ ನಮಗೆ ಜ್ವರ, ಶೀತವಾದರೆ ಇದಕ್ಕೆ ಕಾರಣವಾದ ಕ್ರಿಮಿಯನ್ನು ಎದುರಿಸುವ ವ್ಯವಸ್ಥೆಯನ್ನು ಸ್ಥಾಪಿಸಿಬಿಡುತ್ತದೆ ಹಾಗೂ ಜೀವಮಾನದಲ್ಲಿ ಈ ಕ್ರಿಮಿಯಿಂದ ನಮಗೆ ಮತ್ತೊಮ್ಮೆ ಜ್ವರ ಬರುವುದಿಲ್ಲ.

ಜ್ವರ ಇನ್ನೂ ಜಾಸ್ತಿಯಾದರೆ ವೈದ್ಯರ ಸಲಹೆ ಪಡೆಯಿರಿ

ಜ್ವರ ಇನ್ನೂ ಜಾಸ್ತಿಯಾದರೆ ವೈದ್ಯರ ಸಲಹೆ ಪಡೆಯಿರಿ

ಮುಂದಿನ ಬಾರಿ ಶೀತವಾದರೆ ಇದಕ್ಕೆ ಬೇರೆಯೇ ಹೊಸದಾದ ಬ್ಯಾಕ್ಟೀರಿಯಾ ಅಥವಾ ಕ್ರಿಮಿಗಳು ಕಾರಣವಿರಬಹುದು. ಆದ್ದರಿಂದ ಪ್ರತಿಬಾರಿ ಹೊಸ ನೀರನ್ನು ಕುಡಿದಾಗ, ಹೊಸ ಸ್ಥಳಕ್ಕೆ ಆಗಮಿಸಿದಾಗ ಜ್ವರ ಶೀತ ಸಾಮಾನ್ಯ. ಇದೇ ಕಾರಣಕ್ಕೆ ಪರವೂರಿಗೆ ಹೋದಾಗ ಅಲ್ಲಿನ ನೀರನ್ನು ಒಮ್ಮೆಲೇ ಕುಡಿಯಬಾರದು, ಬದಲಿಗೆ ಸಂಸ್ಕರಿತ ಬಾಟಲಿ ನೀರನ್ನು ಕುಡಿಯಬೇಕು. ಒಂದೇ ಸ್ಥಳದಲ್ಲಿ ಬಹಳ ಕಾಲದಿಂದ ನೆಲೆಸಿರುವ ಹಿರಿಯರಲ್ಲಿ ಆ ಸ್ಥಳದಲ್ಲಿ ಸಾಮಾನ್ಯವಾಗಿರುವ ಎಲ್ಲಾ ಕ್ರಿಮಿಗಳಿಗೆ ರೋಗ ನಿರೋಧಕ ಶಕ್ತಿ ಈಗಾಗಲೇ ಪಡೆದುಬಿಟ್ಟಿರುವ ಕಾರಣ ಇವರಿಗೆ ಸಾಮಾನ್ಯವಾಗಿ ಶೀತವಾಗುವುದಿಲ್ಲ. ಆದ್ದರಿಂದ ಜ್ವರ ಬಂದ ತಕ್ಷಣ ಮಾತ್ರೆ ತೆಗೆದುಕೊಳ್ಳಬಾರದು. ಒಂದು ದಿನ ಅವಕಾಶ ಮಾಡಿಕೊಡಬೇಕು. ಎರಡನೆಯ ದಿನಕ್ಕೆ ಇದು ಇನ್ನಷ್ಟು ಹೆಚ್ಚಾದರೆ ಮಾತ್ರವೇ ವೈದ್ಯರ ಸಲಹೆ ಪಡೆಯಬೇಕು.

 ಅಷ್ಟಕ್ಕೂ ದೇಹ ಬಿಸಿ ಆಗುವುದೇಕೆ?

ಅಷ್ಟಕ್ಕೂ ದೇಹ ಬಿಸಿ ಆಗುವುದೇಕೆ?

ನಮ್ಮ ದೇಹವನ್ನು ಹೇಗೋ ಪ್ರವೇಶಿಸಿರುವ ಬ್ಯಾಕ್ಟೀರಿಯಾ ಅಥವಾ ವೈರಸ್ಸುಗಳ ಮೂಲಕ ಸೋಂಕು ಎದುರಾಗುತ್ತದೆ. ಈ ಬ್ಯಾಕ್ಟೀರಿಯಾ ಅಥವಾ ವೈರಸ್ಸುಗಳೂ ನಮ್ಮ ದೇಹದ ತಾಪಮಾನದಲ್ಲಿ ಬದುಕುತ್ತವೆ. ಆದರೆ ಹೆಚ್ಚಿನ ತಾಪಮಾನದಲ್ಲಿ ಸಾಯುತ್ತವೆ. ಇದೇ ತಂತ್ರವನ್ನು ದೇಹ ಉಪಯೋಗಿಸಿ ದೇಹದ ತಾಪಮಾನವನ್ನು ಏರಿಸಿ ಕ್ರಿಮಿಗಳನ್ನು ಕೊಂದು ವಿಸರ್ಜಿಸುತ್ತದೆ.

ಸಾಮಾನ್ಯ ಮತ್ತು ಅಸಾಮಾನ್ಯ ತಾಪಮಾನಗಳು

ಸಾಮಾನ್ಯ ಮತ್ತು ಅಸಾಮಾನ್ಯ ತಾಪಮಾನಗಳು

ನಾವು ಬಿಸಿರಕ್ತದ ಜೀವಿಗಳು ಅಂದರೆ ವಾತಾವರಣದ ತಾಪಮಾನವೆಷ್ಟಿದ್ದರೂ ದೇಹದ ಒಳಗಣ ತಾಪಮಾನ 98.6 ಡಿಗ್ರಿ ಫ್ಯಾರನ್ ಹೀಟ್ ಇರಬೇಕು. ಆದರೆ ಜ್ವರ ಬಂದಾಗ ಇದು ಸುಮಾರು ನೂರು ಅಥವಾ ನೂರಾಒಂದರಷ್ಟು ಹೆಚ್ಚಬಹುದು. ಅಲ್ಲಿಯವರೆಗೆ ಚಿಂತೆಯಿಲ್ಲ. ಆದರೆ ನೂರಾಎರಡು ದಾಟಿದರೆ ಮಾತ್ರ ವೈದ್ಯರ ನೆರವು ಅಗತ್ಯ.

ಹೆಚ್ಚಿನ ತಾಪಮಾನದಲ್ಲಿಯೂ ಬದುಕುವ ಕ್ರಿಮಿಗಳು

ಹೆಚ್ಚಿನ ತಾಪಮಾನದಲ್ಲಿಯೂ ಬದುಕುವ ಕ್ರಿಮಿಗಳು

ಕೆಲವು ಕ್ರಿಮಿ ಹಾಗೂ ಬ್ಯಾಕ್ಟೀರಿಯಾಗಳು ಹೆಚ್ಚಿನ ತಾಪಮಾನದಲ್ಲಿಯೂ ಬದುಕಬಲ್ಲವು. ಆಗ ದೇಹ ನೂರಾಒಂದಕ್ಕೂ ಹೆಚ್ಚಿನ ತಾಮಪಾನಕ್ಕೆ ಏರುತ್ತದೆ. ಸಾಮಾನ್ಯವಾದ ಪರಿಸರದಲ್ಲಿ ಕಂಡುಬರುವ ಅಂದರೆ ಗಾಳಿಯ ಮೂಲಕ ತಲುಪುವ ಕ್ರಿಮಿಗಳು ನೂರು ಡಿಗ್ರಿಯಲ್ಲಿ ಬದುಕಲಾರವು. ಆದರೆ ಸೊಳ್ಳೆಕಡಿತದ ಮೂಲಕ ಬರುವ ಕ್ರಿಮಿಗಳು ಮಾತ್ರ ನೂರಾನಾಲ್ಕಕ್ಕೂ ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳಬಲ್ಲು. ಮಲೇರಿಯಾ, ಡೆಂಗಿ ವೈರಸ್ಸು ಇದಕ್ಕೆ ಉದಾಹರಣೆ.

ನೂರಾ ಎರಡು ದಾಟಲು ಬಿಡಬೇಡಿ!

ನೂರಾ ಎರಡು ದಾಟಲು ಬಿಡಬೇಡಿ!

ದೇಹದ ತಾಪಮಾನ ನೂರಾಎರಡು ದಾಟಿತೆಂದರೆ ಇದಕ್ಕೆ ಕಾರಣವಾದ ವೈರಸ್ಸು ಅಥವಾ ಕ್ರಿಮಿ ಸಾಮಾನ್ಯವಾದುದಲ್ಲ, ಇದು ಸೊಳ್ಳೆಕಡಿತ ಅಥವಾ ಬೇರಾವುದೋ ಗಂಭೀರ ಸೋಂಕಿನ ಮೂಲಕ ತಲುಪಿದೆ ಎಂದು ಅರ್ಥೈಸಿಕೊಳ್ಳಬೇಕು. ತಕ್ಷಣ ವೈದ್ಯರ ಬಳಿ ಧಾವಿಸಬೇಕು. ಅಲ್ಲದೇ ಒಂದು ವೇಳೆ ಸಾಮಾನ್ಯ ಜ್ವರವೂ ಎರಡನೆಯ ದಿನದಂದೂ ಇಳಿಯುವ ಸೂಚನೆ ತೋರದಿದ್ದರೂ ತಕ್ಷಣ ವೈದ್ಯರನ್ನು ಕಾಣಬೇಕು.

ಕಫ ಮತ್ತು ಸುರಿಯುವ ಮೂಗು

ಕಫ ಮತ್ತು ಸುರಿಯುವ ಮೂಗು

ಶೀತವಾದರೆ ಮೂಗು ಸುರಿಯುವುದೂ ಒಂದು ರಕ್ಷಣಾ ವ್ಯವಸ್ಥೆಯಾಗಿದೆ. ತೇವವಿರುವ ಭಾಗದಲ್ಲಿ ಹೆಚ್ಚಿನ ದ್ರವವನ್ನು ಸುರಿಸುವ ಮೂಲಕ ಕ್ರಿಮಿಗಳನ್ನು ಹೊರಹಾಕುವುದೂ ಜೀವ ನಿರೋಧಕ ಶಕ್ತಿಯ ಒಂದು ವ್ಯವಸ್ಥೆಯಾಗಿದೆ. ಆದ್ದರಿಂದ ಸೋರುತ್ತಿರುವ ಮೂಗಿನ ನೀರನ್ನು ಎಂದಿಗೂ ಒಳಗೆಳೆದುಕೊಳ್ಳಬಾರದು. ಬದಲಿಗೆ ಮೂಗನ್ನು ಇನ್ನಷ್ಟು ಬಲವಾಗಿ ನಿಃಶ್ವಾಸದ ಒತ್ತಡದಿಂದ ಸ್ವಚ್ಛಗೊಳಿಸಬೇಕು. ಅಂತೆಯೇ ಕಫವೂ ಇದೇ ರೀತಿಯ ರಕ್ಷಣಾ ವ್ಯವಸ್ಥೆಯಾಗಿದ್ದು ಕೆಮ್ಮಿನ ಮೂಲಕ ಸಾಧ್ಯವಾದಷ್ಟು ಕಫವನ್ನು ಹೊರಹಾಕಬೇಕು.

ಶೀತ ,ಕೆಮ್ಮು, ಗಂಟಲು ಕೆರೆತ ಸಮಸ್ಯೆ ಹೋಗಲಾಡಿಸುವ 'ಕಷಾಯ'

ನಿಮ್ಮನ್ನು ಬಲಹೀನಗೊಳಿಸುವುದು ಏನು?

ನಿಮ್ಮನ್ನು ಬಲಹೀನಗೊಳಿಸುವುದು ಏನು?

ಜ್ವರ ಶೀತಕ್ಕೆ ನೀವು ಎಷ್ಟು ಮಾತ್ರೆಗಳನ್ನು ತೆಗೆದುಕೊಳ್ಳುತ್ತೀರೋ ಅಷ್ಟೇ ವೇಗವಾಗಿ ನಿಮ್ಮ ದೇಹವೂ ಶಿಥಿಲವಾಗುತ್ತಾ ಹೋಗುತ್ತದೆ. ಇದಕ್ಕೆ ಉದಾಹರಣೆ ಎಂದರೆ ವ್ಯಾಯಾಮದ ಮೂಲಕ ಬೆಳೆಸಿದ ಸ್ನಾಯುಗಳಿಗೆ ಕೆಲಸವಿಲ್ಲದೇ ಹೋದರೆ ಈ ಸ್ನಾಯುಗಳು ಬಲಹೀನವಾಗಿ ಸೆಳೆತ ಕಳೆದುಕೊಳ್ಳುತ್ತವಲ್ಲಾ, ಹಾಗೇ. ಆದ್ದರಿಂದ ರೋಗ ನಿರೋಧಕ ಶಕ್ತಿಗೆ ತನ್ನ ಕೆಲಸವನ್ನು ತಾನು ಮಾಡಿಕೊಳ್ಳುತ್ತಾ ಇರಲು ಬಿಡುವ ಮೂಲಕ ಇದರ ಕ್ಷಮತೆಯನ್ನು ಹೆಚ್ಚಿಸಬಹುದು.

English summary

Is Fever Good For Health? Read This!

When your body raises its temperature for a reason, you taking a pill will reduce the temperature and defeat the purpose behind raising temperature. This may also affect the development of your immune system. That is how certain micro organisms survive and slowly become the reason for chronic issues. Here are some more facts.
Subscribe Newsletter