Latest Updates
-
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ಈ ಸ್ಮಾರ್ಟ್ ಟಿಪ್ಸ್ ಪಾಲಿಸಿ -
ಮಳೆಗಾಲದ ತೇವಾಂಶದಿಂದ ಬಟ್ಟೆ ಹಾಳಾಗುತ್ತಿದೆಯೇ? ನಿಮ್ಮ ಕಬೋರ್ಡ್ ಮತ್ತು ಬಟ್ಟೆಗಳನ್ನು ರಕ್ಷಿಸಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಇನ್ಮುಂದೆ ಸ್ನ್ಯಾಕ್ಸ್ ಪ್ಯಾಕೆಟ್ ಮೇಲೆ ಎಚ್ಚರಿಕೆ! FSSAI ತರುತ್ತಿದೆ ಹೊಸ ನಿಯಮ, ಗ್ರಾಹಕರಿಗೆ ಲಾಭವೇನು? -
ಮುಂಬೈನಲ್ಲಿ ವರುಣನ ಅಬ್ಬರ: IMDಯಿಂದ ಆರೆಂಜ್ ಅಲರ್ಟ್ ಘೋಷಣೆ, ಕನ್ನಡಿಗರು ಎಚ್ಚರ!
ಅರೆ ಬೆಣ್ಣೆ ದೋಸೆ ಕೇಳಿದ್ದೇವೆ, ಆದರೆ ಇದೇನಿದು ಬೆಣ್ಣೆ ಟೀ?
ಬೆಣ್ಣೆ ಮಸಾಲೆ ಆಯಿತು, ಈಗ ಬೆಣ್ಣೆ ಟೀ ಸವಿಯದಿದ್ದರೆ ಹೇಗೆ? ನಿಮ್ಮ ಸ್ನೇಹಿತವೃಂದದಲ್ಲಿ ಯಾರಾದರೂ ದೇಹದಾರ್ಢ್ಯತೆ ಹೊಂದುವತ್ತ ಹೆಚ್ಚಿನ ಅಸ್ಥೆ ವಹಿಸಿದ್ದರೆ ಅವರು ಖಂಡಿತವಾಗಿಯೂ ಬೆಣ್ಣೆ ಬೆರೆಸಿದ ಟೀ ಕುಡಿಯುವುದನ್ನು ಗಮನಿಸಿಯೇ ಇರುತ್ತೀರಿ. ಆದರೆ ಬೆಣ್ಣೆ ಟೀ ಮಾಡುವುದನ್ನು ನೋಡಿಲ್ಲವೇ? ಮೊದಲು ಟೀ ಪುಡಿಯನ್ನು ಬಿಸಿನೀರಿನಲ್ಲಿ ಕೊಂಚ ಹೊತ್ತು ಕುದಿಸಲಾಗುತ್ತದೆ. ಬಳಿಕ ಈ ನೀರನ್ನು ಸೋಸಿ ಒಂದು ಚಿಕ್ಕ ಚಮಚ ಬೆಣ್ಣೆಯನ್ನು ಹಾಕಿ ಕರಗಿಸಿ ಬಳಿಕ ಬ್ಲೆಂಡರಿನಲ್ಲಿ ಹಾಕಿ ಕೆಲವು ಸೆಕೆಂಡುಗಳ ಕಾಲ ಗೊಟಾಯಿಸಿದರೆ ಸರಿ, ಬಿಸಿಬಿಸಿ ಬೆಣ್ಣೆ ಟೀ ಸಿದ್ಧ.
ನಮಗೆ ಈ ಟೀ ಈಗ ಹೊಸದಾಗಿರಬಹುದು. ಆದರೆ ನೇಪಾಳ ಮತ್ತು ಟಿಬೆಟ್ನಲ್ಲಿ ಈ ಟೀ ತೀರಾ ಸಾಮಾನ್ಯ. ಇವರಿಗೆ ಇದು ಅನಿವಾರ್ಯ ಸಹಾ. ಏಕೆಂದರೆ ಹಿಮಾಲಯದ ಗೋವುಗಳಾದ ಯಾಕ್‌ನ ಹಾಲು ಹೆಚ್ಚೂ ಕಡಿಮೆ ಬೆಣ್ಣೆಯಷ್ಟೇ ಗಾಢವಾಗಿರುತ್ತದೆ. ಇದು ಬಿಸಿನೀರಿನಲ್ಲಿ ಅಷ್ಟು ಸುಲಭವಾಗಿ ಬೆರೆಯದ ಕಾರಣ ಇದನ್ನು ಗೊಟಾಯಿಸಲಾಗುತ್ತಿತ್ತು, ಬಳಿಕ ಕೆಲಸ ಸುಲಭವಾಗಿಸಲು ಬ್ಲೆಂಡರಿನ ಬಳಕೆಯಾಗಿತ್ತು. ಇದೇ ಕೊಂಚ ಮಾರ್ಪಾಡು ಹೊಂದಿ ಬೆಣ್ಣೆ ಟೀ ಆಗಿದೆ ಅಷ್ಟೇ. ಬನ್ನಿ, ಈ ಟೀ ಕುಡಿಯುವ ಪ್ರಯೋಜನಗಳನ್ನು ನೋಡೋಣ...

ಶಕ್ತಿಯನ್ನು ಹೆಚ್ಚಿಸುತ್ತದೆ
ಈ ಟೀ ಕುಡಿಯುವ ಪ್ರಮುಖ ಉದ್ದೇಶವೆಂದರೆ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುವುದು. ಬೆಣ್ಣೆಯ ಕೊಬ್ಬು ಮತ್ತು ಟೀ ಯಲ್ಲಿರುವ ಕೆಫೀನ್ ಎರಡೂ ಕೈಜೋಡಿಸಿದಾಗ ತಕ್ಷಣದ ಶಕ್ತಿ ದೇಹಕ್ಕೆ ದೊರಕುತ್ತದೆ.

ಮೆದುಳು ಹೆಚ್ಚು ಚುರುಕಾಗುತ್ತದೆ
ಈ ಪೇಯದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹಕ್ಕೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಪ್ರಭಾವವನ್ನು ಕಡಿಮೆಗೊಳಿಸಿ ಆರೋಗ್ಯವನ್ನು ಮರುಕಳಿಸಲು ನೆರವಾಗುತ್ತವೆ. ವಿಶೇಷವಾಗಿ ಈ ಕಣಗಳು ವಯಸ್ಸಿನೊಂದಿಗೇ ಮೆದುಳಿನ ಕ್ಷಮತೆ ಕಡಿಮೆಯಾಗಿಸುತ್ತವೆ. ಈ ತೊಂದರೆಯನ್ನು ಸರಿಪಡಿಸಲು ಈ ಟೀ ಯನ್ನು ನಿತ್ಯವೂ ಕುಡಿಯುವುದು ಒಂದು ಪರಿಹಾರವಾಗಿದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಹೊಟ್ಟೆ ಉಬ್ಬರಿಕೆಯಿಂದ ತೊಂದರೆ ಎದುರಾಗಿದ್ದರೆ ಈ ಟೀ ಕುಡಿಯುವ ಮೂಲಕ ತಕ್ಷಣ ಪರಿಹಾರ ದೊರಕುತ್ತದೆ. ಹುಳಿತೇಗು, ಹೊಟ್ಟೆಯಲ್ಲಿ ಆಮ್ಲೀಯತೆ ಮೊದಲಾದ ತೊಂದರೆಗಳನ್ನೂ ನಿವಾರಿಸಿ ಜೀರ್ಣಕ್ರಿಯೆಯನ್ನು ಸರಳಗೊಳಿಸುತ್ತದೆ ಹಾಗೂ ಆಹಾರದಿಂದ ಹೆಚ್ಚು ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆಯೇ?
ತೂಕ ಇಳಿಸಲು ಇದು ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನೆರವಾಗುತ್ತದೆ. ಈ ಟೀ ಕುಡಿದ ಬಳಿಕ ಹೊತ್ತಲ್ಲದ ಹೊತ್ತಿನಲ್ಲಿ ಹಸಿವಾಗದೇ ಸಿದ್ಧ ಆಹಾರಗಳನ್ನು ತಿನ್ನದೇ ಇರಲು ಸಾಧ್ಯವಾಗುತ್ತದೆ. ಇದು ಜೀವ ರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಇಡಿಯ ದಿನ ಹೊಟ್ಟೆ ತುಂಬಿದಂತೆ ಇರಿಸಲು ನೆರವಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆಯೇ?
ಕೆಲವರಿಗೆ ಮಧ್ಯಾಹ್ನದ ಊಟಕ್ಕೂ ಮುನ್ನವೇ ತುಂಬಾ ಹಸಿವಾಗುತ್ತದೆ. ಈ ವ್ಯಕ್ತಿಗಳು ಬೇರೆ ಆಹಾರವನ್ನು ಸೇವಿಸುವ ಬದಲು ಈ ಟೀ ಕುಡಿದರೆ ಇದರಲ್ಲಿರುವ ಬೆಣ್ಣೆ ಹೊಟ್ಟೆ ತುಂಬಿದಂತಾಗಿಸಿ ಅನಗತ್ಯವಾಗಿ ಹೆಚ್ಚಿನ ಆಹಾರ ಅಥವಾ ಮಧ್ಯಾಹ್ನದ ಊಟದಲ್ಲಿ ಹೆಚ್ಚು ಪ್ರಮಾಣ ಸೇವಿಸುವುದನ್ನು ತಡೆದಂತಾಗುತ್ತದೆ.

ಇದು ಹೃದಯಕ್ಕೆ ಒಳ್ಳೆಯದೇ?
ಬೆಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಕೆಟ್ಟದು ಹೌದು, ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ. ಆದರೆ ದಿನಕ್ಕೊಂದು ಲೋಟ ಬೆಣ್ಣೆಯ ಟೀ ಕುಡಿದರೆ ಇದರಲ್ಲಿ ಬೆರೆಸಲಾದ ಒಂದು ಚಿಕ್ಕ ಚಮಚ ಬೆಣ್ಣೆಯಲ್ಲಿರುವ ಲಿನೋಲಿಕ್ ಆಮ್ಲ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಲ್ಲುದು.

ಮಲಬದ್ಧತೆಯಿಂದ ಬಳಲುತ್ತಿದ್ದೀರಾ?
ಮಲಬದ್ಧತೆ ಕಡಿಮೆಯಾಗಲು ಆಹಾರದಲ್ಲಿ ನಾರಿನ ಅಂಶ ಹೆಚ್ಚಿರುವುದು ಅಗತ್ಯ ಎಂದು ನಾವೆಲ್ಲಾ ತಿಳಿದುಕೊಂಡಿದ್ದೇವೆ. ಆದರೆ ಮಲಬದ್ಧತೆ ಕಡಿಮೆಗೊಳಿಸಲು ಕೊಂಬ ಬೆಣ್ಣೆಯೂ ಸಹಕಾರಿಯಾಗಿದೆ. ಬೆಣ್ಣೆ ಉತ್ತಮ ಜಾರುಕವಾಗಿದ್ದು ಕರುಳುಗಳಲ್ಲಿ ಗಟ್ಟಿಯಾಗಿದ್ದ ಕಲ್ಮಶಗಳು ಸುಲಭವಾಗಿ ಜಾರಲು ನೆರವಾಗುತ್ತದೆ.

ಮಧುಮೇಹಿಗಳಿಗೆ ಉತ್ತಮವೇ?
ಬೆಣ್ಣೆಯ ಟೀ ಕುಡಿಯುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಬಹುದು. ಬೆಣ್ಣೆಯಲ್ಲಿರುವ ಲಿನೋಲಿಕ್ ಆಮ್ಲ ಈ ಕೆಲಸವನ್ನು ನಿರ್ವಹಿಸುತ್ತದೆ. ಒಂದು ವೇಳೆ ನೀವು ಮಧುಮೇಹಿಯಾಗಿದ್ದರೆ ಈ ಟೀಯನ್ನು ನಿಯಮಿತವಾಗಿ ಸೇವಿಸುವ ಬಗ್ಗೆ ನಿಮ್ಮ ವೈದ್ಯರ ಸಲಹೆ ಪಡೆದೇ ಮುಂದುವರೆಯಿರಿ.

ಬೆಣ್ಣೆಯ ಟೀ ಆರೋಗ್ಯಕರವೇ?
ಹೌದು, ಆದರೆ ನಿಯಮಿತ ಪ್ರಮಾಣದಲ್ಲಿ ಕುಡಿದರೆ ಮಾತ್ರ. ಒಂದು ವೇಳೆ ನಿಮ್ಮ ನಿತ್ಯದ ಚಟುವಟಿಕೆಯಲ್ಲಿ ಸಾಕಷ್ಟು ವ್ಯಾಯಾಮವಿಲ್ಲದಿದ್ದರೆ, ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ಅಥವಾ ಸ್ಥೂಲಕಾಯದವರಾಗಿದ್ದರೆ ಈ ಟೀ ಸೇವನೆ ಬೇಡ. ಅಲ್ಲದೇ ಈ ಟೀಯಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಮತ್ತು ಉಪ್ಪು ಸಹಾ ಇರುವುದರಿಂದ ದಿನಕ್ಕೊಂದು ಲೋಟಕ್ಕಿಂತ ಹೆಚ್ಚು ಕುಡಿಯುವುದು ಆರೋಗ್ಯಕರವಲ್ಲ.



Click it and Unblock the Notifications