ಸ್ತನಗಳ ಕೊಬ್ಬನ್ನು ನೈಸರ್ಗಿಕವಾಗಿ ಕರಗಿಸಲು ಸಮರ್ಥ ಮನೆಮದ್ದುಗಳು

Posted By: Arshad
Subscribe to Boldsky

ತಮ್ಮ ಸ್ತನಗಳು ಆಕರ್ಷಕವಾಗಿರಬೇಕೆಂಬ ಬಯಕೆ ಪ್ರತಿ ಮಹಿಳೆಯಲ್ಲಿಯೂ ಇರುತ್ತದೆ. ಆಕರ್ಷಣೆಗೂ ಸ್ತನಗಳ ಗಾತ್ರಕ್ಕೂ ನೇರವಾದ ಸಂಬಂಧವಿದೆ. ತೀರಾ ಚಿಕ್ಕ ಅಥವಾ ತೀರಾ ದೊಡ್ಡ ಗಾತ್ರ ಅನಾಕರ್ಷಣೀಯವಾಗಿರುವ ಕಾರಣ ಗಾತ್ರ ತೀರಾ ದೊಡ್ಡದಾಗಿರುವ ಮಹಿಳೆಯರು ತಮ್ಮ ಸ್ತನಗಳ ಗಾತ್ರವನ್ನು ಚಿಕ್ಕದಾಗಿಸುವ ಬಗ್ಗೆ ಚಿಂತಿಸುತ್ತಾರೆ. ಏಕೆಂದರೆ ಸ್ತನಗಳ ಗಾತ್ರ ಹೆಚ್ಚಿದಷ್ಟೂ ಇದರಿಂದ ತೊಂದರೆಯೇ ಜಾಸ್ತಿ. ಸಮತೋಲನವನ್ನು ಕಾಯ್ದುಕೊಳ್ಳಲು ನಿಲ್ಲುವ ಭಂಗಿಯನ್ನು ಬದಲಿಸಬೇಕಾಗಿ ಬರುವುದು, ಬೆನ್ನು ನೋವು, ಉಸಿರಾಟಕ್ಕೆ ಕಷ್ಟವಾಗುವುದು ಇತ್ಯಾದಿ. ಅಲ್ಲದೇ ಈ ಮಹಿಳೆಯರಿಗೆ ಭುಜನೋವು, ಕೆಳಬೆನ್ನ ನೋವು ಸಹಾ ಹೆಚ್ಚಾಗಿ ಕಾಡುತ್ತದೆ.

ಈ ಮಸಾಜ್ ಮಾಡಿದರೆ ಸ್ತನ ಗಾತ್ರ ಹೆಚ್ಚುವುದು

ದೊಡ್ಡ ಗಾತ್ರವಿದ್ದಷ್ಟೂ ಇವು ಜೋಲುಬೀಳುವುದೇ ಹೆಚ್ಚು. ಸಮಯಕಳೆದಂತೆ ಸರಿಸುಮಾರು ಹೊಟ್ಟೆಯ ಮಟ್ಟಕ್ಕೆ ಸ್ತನತೊಟ್ಟುಗಳು ಬಂದು ತಲುಪಬಹುದು. ಇದನ್ನು ತಡೆಗಟ್ಟಲು ಶಸ್ತ್ರಚಿಕಿತ್ಸೆ ಲಭ್ಯವಿದೆಯಾದರೂ ಇದು ಸುರಕ್ಷಿತವಲ್ಲ ಹಾಗೂ ಸೌಂದರ್ಯವನ್ನೂ ಕೆಡಿಸಬಹುದು. ಆದ್ದರಿಂದ ಸ್ತನಗಳ ಕೊಬ್ಬನ್ನು ನೈಸರ್ಗಿಕವಾಗಿ ಕರಗಿಸಿ ಮತ್ತೊಮ್ಮೆ ಆಕರ್ಷಕ ಮೈಕಟ್ಟು ಪಡೆಯಲು ನೈಸರ್ಗಿಕ ಮನೆಮದ್ದುಗಳೇ ಯೋಗ್ಯವಾಗಿವೆ. ಬನ್ನಿ, ಈ ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ:

ಹಸಿಶುಂಠಿ

ಹಸಿಶುಂಠಿ

ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸುವಷ್ಟು ಶಕ್ತಿಶಾಲಿಯಾಗಿದೆ. ಹಸಿಶುಂಠಿಯನ್ನು ಕುದಿಸಿ ತಯಾರಿಸಿದ ಟೀ ಸೇವಿಸುವ ಮೂಲಕ ಕೊಬ್ಬನ್ನು ಕರಗಿಸುವುದು ಉತ್ತಮವಾದ ಆಯ್ಕೆಯಾಗಿದೆ.

ಹಸಿರು ಟೀ

ಹಸಿರು ಟೀ

ಇದರಲ್ಲಿರುವ ಕೆಲವು ಪೋಷಕಾಂಶಗಳು ಹೆಚ್ಚಿನ ಕ್ಯಾಲೋರಿಗಳನ್ನು ದಹಿಸಿ ವಿಶೇಷವಾಗಿ ಸ್ತನಗಳಿರುವಲ್ಲಿನ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಅಲ್ಲದೇ ದೇಹವನ್ನು ಉರಿಯೂತದಿಂದಲೂ ರಕ್ಷಿಸುತ್ತದೆ.

ಅಗಸೆ ಬೀಜಗಳು

ಅಗಸೆ ಬೀಜಗಳು

ಇದರಲ್ಲಿರುವ ಒಮೆಗಾ-3 ಕೊಬ್ಬಿನ ಆಮ್ಲಗಳು ಮಹಿಳೆಯರ ದೇಹದಲ್ಲಿ ಈಸ್ಟ್ರೋಜೆನ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಕೊಬ್ಬು ಹೆಚ್ಚು ಸಂಗ್ರಹಗೊಳ್ಳದಂತೆ ಹಾಗೂ ತನ್ಮೂಲಕ ಸ್ತನಗಳ ಗಾತ್ರವೂ ಕಡಿಮೆಯಾಗುವಂತೆ ಮಾಡುತ್ತದೆ.

ಬೇವು ಮತ್ತು ಅರಿಶಿನ

ಬೇವು ಮತ್ತು ಅರಿಶಿನ

ಇವೆರಡರಲ್ಲಿಯೂ ಉರಿಯೂತ ನಿವಾರಕ ಗುಣವಿದೆ. ಒಂದು ವೇಳೆ ಉರಿಯುತದ ಕಾರಣದಿಂದ ಸ್ತನಗಳ ಗಾತ್ರ ಹೆಚ್ಚಾಗಿದ್ದರೆ ಇವುಗಳ ಸೇವನೆಯಿಂದ ಉರಿಯೂತ ಕಡಿಮೆಯಾಗುತ್ತದೆ ಹಾಗೂ ಸ್ತನಗಳು ಸಹಜಗಾತ್ರಕ್ಕೆ ಹಿಂದಿರುಗುತ್ತವೆ.

ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗ

ಈ ಭಾಗವನ್ನು ಸೇವಿಸುವ ಮೂಲಕ ಸ್ತನಗಳ ಅಂಗಾಂಶಗಳನ್ನು ಸಂಕುಚಿತಗೊಳಿಸಿ ಎದೆಯ ಭಾಗದ ಸೆಳೆತವನ್ನು ಹೆಚ್ಚಿಸುವ ಮೂಲಕ ಸ್ತನಗಳ ಗಾತ್ರ ಚಿಕ್ಕದಾಗಿ ಕಾಣುವಂತೆ ನೆರವಾಗುತ್ತದೆ.

ಮೀನಿನೆಣ್ಣೆ

ಮೀನಿನೆಣ್ಣೆ

ಇದರಲ್ಲಿ ಉತ್ತಮ ಪ್ರಮಾಣದ ಒಮೆಗಾ ೩ ಕೊಬ್ಬಿನ ಆಮ್ಲವಿದ್ದು ಸ್ತನಗಳ ಗಾತ್ರವನ್ನು ತಗ್ಗಿಸಲು ಬಯಸುವ ಮಹಿಳೆಯರಿಗೆ ವರದಾನವಾಗಿದೆ. ಅಷ್ಟೇ ಅಲ್ಲ, ಇದು ದೇಹದ ಇತರ ಕೊಬ್ಬನ್ನೂ ಕರಗಿಸುವ ಮೂಲಕ ಉತ್ತಮ ಅಂಗಸೌಷ್ಠವ ನೀಡುವ ಮೂಲಕ ಅತ್ಯುತ್ತಮವಾದ ಮನೆಮದ್ದುಗಳಲ್ಲೊಂದಾಗಿದೆ.

ಮೆಂತೆ

ಮೆಂತೆ

ಮೆಂತೆಕಾಳುಗಳನ್ನು ನೆನೆಸಿಟ್ಟು ಸೇವಿಸುವ ಮೂಲಕವು ಸ್ತನಗಳ ಗಾತ್ರವನ್ನು ಸಹಜಗಾತ್ರಕ್ಕೆ ಮರಳಿಸಬಹುದು ಹಾಗೂ ಸೆಳೆತವನ್ನು ಹೆಚ್ಚಿಸಿ ಜೋಲುಬೀಳದಂತೆಯೂ ನೆರವಾಗುತ್ತದೆ.

ಗುವಾರಣಾ ಮೂಲಿಕೆ (Guarana Herb)

ಗುವಾರಣಾ ಮೂಲಿಕೆ (Guarana Herb)

ಈ ಮೂಲಿಕೆಯನ್ನು ಕುದಿಸಿ ಟೀ ರೂಪದಲ್ಲಿ ನಿತ್ಯವೂ ಸೇವಿಸುವ ಮೂಲಕವೂ ಸ್ತನಗಳಲ್ಲಿರುವ ಕೊಬ್ಬನ್ನು ಕರಗಿಸಿಕೊಳ್ಳಲು ಸಧ್ಯ. ಪರಿಣಾಮವಾಗಿ ಪುಟಿಯುವ ಹಾಗೂ ಸುಂದರ ಕುಚಗಳನ್ನು ಪಡೆಯಬಹುದು.

ಚಿತ್ರಾವಳಿ ಅಥವಾ ಮಂಜಿಷ್ಠ (ರೂಬಿಯಾ ಕಾರ್ಡಿಫೋಲಿಯಾ) ಮೂಲಿಕೆ (Rubia Cordifolia Herb)

ಚಿತ್ರಾವಳಿ ಅಥವಾ ಮಂಜಿಷ್ಠ (ರೂಬಿಯಾ ಕಾರ್ಡಿಫೋಲಿಯಾ) ಮೂಲಿಕೆ (Rubia Cordifolia Herb)

ಈ ಗಿಡಮೂಲಿಕೆಯಿಂದ ತಯಾರಾದ ಟಾನಿಕ್ ದೇಹದಲ್ಲಿ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ದೇಹದಲ್ಲಿರುವ ಹೆಚ್ಚಿನ ಕಲ್ಮಶಗಳು ನಿವಾರಣೆಯಾಗುತ್ತವೆ. ವಿಶೇಷವಾಗಿ ರಕ್ತ ಶುದ್ದೀಕರಣಗೊಳ್ಳುತ್ತದೆ. ನಿಯಮಿತ ಸೇವನೆಯ ಪರಿಣಾಮವಾಗಿ ಸ್ತನಗಳ ಕೊಬ್ಬು ಕರಗಿ ಗಾತ್ರ ಸಹಜಗಾತ್ರಕ್ಕೆ ಕುಗ್ಗಿ ಸುಂದರವಾಗುತ್ತವೆ.

ಲಿಂಬೆ ಹಣ್ಣಿನ ರಸಗಳು

ಲಿಂಬೆ ಹಣ್ಣಿನ ರಸಗಳು

ಲಿಂಬೆ ಜಾತಿಯ ಹಣ್ಣುಗಳಾದ ಕಿತ್ತಳೆ, ಲಿಂಬೆ ಮೊದಲಾದ ಹಣ್ಣುಗಳ ರಸವನ್ನು ಸೇವಿಸುವ ಮೂಲಕವೂ ಸ್ತನಗಳ ಗಾತ್ರ ಕಡಿಮೆಯಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲದೇ ಕೊಬ್ಬನ್ನು ಕರಗಿಸಲೂ ನೆರವಾಗುತ್ತದೆ. ಕೊಬ್ಬು ಕರಗಿಸಲು ಇದು ಸಹಾ ಉತ್ತಮವಾದ ಮನೆಮದ್ದಾಗಿದೆ.

ಹಸಿರು ತರಕಾರಿಗಳು

ಹಸಿರು ತರಕಾರಿಗಳು

ನಿಮ್ಮ ನಿತ್ಯದ ಆಹಾರಗಳಲ್ಲಿ ಸಾಧ್ಯವಾದಷ್ಟು ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳುವ ಮೂಲಕ ಕಡಿಮೆ ಕ್ಯಾಲೋರಿಗಳನ್ನು ಸೇವಿಸುವಂತಾಗುತ್ತದೆ ಹಾಗೂ ಉತ್ತಮ ದೇಹದಾರ್ಢ್ಯತೆಯನ್ನು ಪಡೆಯಲೂ ಸಾಧ್ಯವಾಗುತ್ತದೆ. ತನ್ಮೂಲಕ ಸ್ತನಗಳ ಕೊಬ್ಬು ಸಹಾ ಕರಗುತ್ತದೆ.

ಮೀನು

ಮೀನು

ನಿಮ್ಮ ಆಹಾರದಲ್ಲಿ ಮೀನಿನ ಪದಾರ್ಥಗಳು ಸಾಕಷ್ಟಿರುವಂತೆ ನೋಡಿಕೊಳ್ಳುವ ಮೂಲಕವೂ ಸ್ತನಗಳ ಗಾತ್ರ ಕಡಿಮೆಯಾಗುತ್ತದೆ. ಇದರಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲಗಳು ದೇಹದ ಕೊಬ್ಬಿನ ಕಣಗಳನ್ನು ದಹಿಸಲು ನೆರವಾಗುತ್ತವೆ.

ಶತಾವರಿ

ಶತಾವರಿ

ಮಹಿಳೆಯರ ಮಾಸಿಕ ದಿನಗಳಲ್ಲಿ ದೇಹಕ್ಕೆ ನೀರಿನ ಅಗತ್ಯತೆ ಹೆಚ್ಚೇ ಇರುವ ಕಾರಣ ದೇಹ ಹೆಚ್ಚಿನ ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಇದರೊಂದಿಗೆ ಹಾರ್ಮೋನುಗಳ ಏರುಪೇರಿನಿಂದ ಸ್ತನಗಳ ಗಾತ್ರವೂ ಹೆಚ್ಚಬಹುದು. ಶತಾವರಿ ಒಂದು ಉತ್ತಮವಾದ ಮೂಲಿಕೆಯಾಗಿದ್ದು ಇದರ ಸೇವನೆಯಿಂದ ಮಹಿಳೆಯರ ದೇಹದ ಹಾರ್ಮೋನುಗಳಲ್ಲಿ ಸಂತುಲತೆಯನ್ನು ಪಡೆಯಲು ಸಾಧ್ಯವಾಗುತ್ತದೆ ಹಾಗೂ ವಿಶೇಷವಾಗಿ ಮಾಸಿಕ ದಿನಗಳ ಅಥವಾ ರಜೋನಿವೃತ್ತಿಯ ಕಾಲದಲ್ಲಿ ಎದುರಾಗುವ ಸ್ಥೂಲಕಾಯವನ್ನು ತಡೆಯುತ್ತದೆ.

ಒಣಫಲಗಳು

ಒಣಫಲಗಳು

ನಿತ್ಯವೂ ಕೊಂಚ ಒಣಫಲಗಳನ್ನು ಸೇವಿಸುವ ಮೂಲಕ ದೇಹದ ಶಕ್ತಿ ಹೆಚ್ಚುತ್ತದೆ ಹಾಗೂ ಕೊಬ್ಬಿನ ಕಣಗಳು ದಹಿಸಲ್ಪಡುತ್ತವೆ. ತನ್ಮೂಲಕ ಸ್ತನಗಳ ಸಹಿತ ದೇಹದ ಇತರ ಭಾಗಗಳಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗುತ್ತದೆ. ಪರಿಣಾಮವಾಗಿ ಸ್ತನಗಳ ಗಾತ್ರ ಇಳಿಯುತ್ತದೆ.

ಮಸಾಜ್

ಮಸಾಜ್

ನಿಮಗೆ ಸೂಕ್ತವಾಗುವ ಮಸಾಜ್ ಮಾಡಿಸಿಕೊಳ್ಳುವ ಮೂಲಕವೂ ಕೊಬ್ಬು ಕರಗುತ್ತದೆ ಹಾಗೂ ಸಹಜಗಾತ್ರಕ್ಕೆ ಇಳಿಯಲು ನೆರವಾಗುತ್ತದೆ. ಉತ್ತಮ ಗುಣಮಟ್ಟದ ಮಸಾಜ್ ನಿಂದ ಮನಸ್ಸು ಹಾಗೂ ದೇಹ ಹಗುರಾಗುವ ಜೊತೆಗೇ ಕೊಬ್ಬು ಸಹಾ ನಿವಾರಿಸಲ್ಪಡುತ್ತವೆ.

ಧೂಮಪಾನ ಬಿಡಿ

ಧೂಮಪಾನ ಬಿಡಿ

ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಧೂಮಪಾನದ ವ್ಯಸನವಿರುವ ಮಹಿಳೆಯರ ಸ್ತನಗಳ ಗಾತ್ರವೂ ಹೆಚ್ಚುತ್ತದೆ ಹಾಗೂ ಜೋಲುಬೀಳುತ್ತವೆ. ಇವು ಸಹಜಸೌಂದರ್ಯವನ್ನು ಕುಗ್ಗಿಸುತ್ತವೆ. ಆದ್ದರಿಂದ ಧೂಮಪಾನವನ್ನು ಬಿಟ್ಟರೇನೇ ಸಹಜಗಾತ್ರದ ಸುಂದರ ಸ್ತನಗಳ ಒಡತಿಯಾಗಲು ಸಾಧ್ಯ.

ಅತಿಯಾದ ಮದ್ಯಪಾನವೂ ಬೇಡ

ಅತಿಯಾದ ಮದ್ಯಪಾನವೂ ಬೇಡ

ದೇಹದ ಮಿತಿಯನ್ನು ಮೀರಿದ ಯಾವುದೇ ವ್ಯಸನ ಆರೋಗ್ಯಕಾರಿಯಲ್ಲ. ಅಂತೆಯೇ ಮದ್ಯಪಾನ ಕೂಡಾ! ಮದ್ಯಪಾನದಿಂದ ಯಕೃತ್ ನ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಯಾವಾಗ ಯಕೃತ್ ನ ಕ್ಷಮತೆ ಕಡಿಮೆಯಾಗುತ್ತಾ ಹೋಯಿತೋ ಆಗ ಈಸ್ಟ್ರೋಜೆನ್ ರಸದೂತವನ್ನು ಒಡೆಯುವ ಕಾರ್ಯವೂ ಕಡಿಮೆಯಾಗುತ್ತಾ ಹೋಗುತ್ತದೆ. ಇದು ಕೊಬ್ಬು ಸಂಗ್ರಹಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ಮದ್ಯಪಾನದ ವ್ಯಸನದಿಂದ ಹೊರಬರುವುದೇ ಉತ್ತಮ.

ಆಹಾರದ ಪ್ರಮಾಣವನ್ನು ತಗ್ಗಿಸಿ

ಆಹಾರದ ಪ್ರಮಾಣವನ್ನು ತಗ್ಗಿಸಿ

ಪ್ರತಿ ಊಟದ ಪ್ರಮಾಣವನ್ನು ತಗ್ಗಿಸುವ ಮೂಲಕ ಹೆಚ್ಚಿನ ತೂಕವನ್ನು ಪಡೆಯುವುದನ್ನು ತಡೆಯುವುದರ ಜೊತೆಗೇ ಕೊಬ್ಬು ಸಹಾ ಇಳಿಸಬಹುದು. ಪರಿಣಾಮವಾಗಿ ವಕ್ಷಸ್ತಲವೂ ಸುಂದರವಾಗುತ್ತದೆ.

ಇಡಿಯ ದೇಹದ ವ್ಯಾಯಾಮ

ಇಡಿಯ ದೇಹದ ವ್ಯಾಯಾಮ

ಕೆಲವು ವ್ಯಾಯಾಮಗಳು ಇಡಿಯ ದೇಹದ ಸ್ನಾಯುಗಳಿಗೆ ಅನ್ವಯವಾಗುತ್ತವೆ. ಪುಷ್ ಅಪ್, ಚೆಸ್ಟ್ ಪ್ರೆಸ್, ಚೆಸ್ಟ್ ಫ್ಲೈ ಮೊದಲಾದ ವ್ಯಾಯಾಮಗಳನ್ನು ನಿತ್ಯವೂ ಅನುಸರಿಸುವ ಮೂಲಕ ದೇಹದ ಕೊಬ್ಬಿನ ಜೊತೆಗೇ ಸ್ತನಗಳ ಕೊಬ್ಬನ್ನೂ ಕರಗಿಸಬಹುದು.

ಸಕ್ಕರೆ-ಉಪ್ಪನ್ನು ಕಡಿಮೆ ಮಾಡಿ

ಸಕ್ಕರೆ-ಉಪ್ಪನ್ನು ಕಡಿಮೆ ಮಾಡಿ

ಸಕ್ಕರೆಯ ಹಾಗೂ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಿದಷ್ಟೂ ಉತ್ತಮ. ಈ ಪ್ರಮಾಣ ಹೆಚ್ಚಾದರೆ ದೇಹದ ಹಾಗೂ ವಿಶೇಷವಾಗಿ ಸ್ತನಗಳ ಭಾಗದಲ್ಲಿ ಹೆಚ್ಚಿನ ಕೊಬ್ಬು ಸಂಗ್ರಹವಾಗುತ್ತದೆ. ಆದ್ದರಿಂದ ಇವು ಕಡಿಮೆ ಇದ್ದಷ್ಟೂ ಉತ್ತಮ. ಸ್ತನಗಳ ಗಾತ್ರವನ್ನು ತಗ್ಗಿಸಲು ಇದೂ ಒಂದು ಉತ್ತಮ ಮನೆಮದ್ದಾಗಿದೆ.

English summary

Indian Home Remedies To Lose Breast Fat Naturally

The only point of time when women actually want to reduce their breast size is when it is too large! If the breast size is very large, then there will be a lot of limitations that you may face. Some of them are poor posture, back pain and difficulty in breathing. Women with large breasts always complain of shoulder pain, back pain and breathing problems.