For Quick Alerts
ALLOW NOTIFICATIONS  
For Daily Alerts

ಇಡ್ಲಿ ತಿಂದ್ರೆ ಇಡ್ಲಿಹಾಗೆ ಊದಿಕೊಳ್ಳುವುದಿಲ್ಲ! ಬದಲಿಗೆ ಸಾರಿನ ಹಾಗೆ ಸಣ್ಣಗಾಗುತ್ತೀರಿ!!

By Divya Pandith
|

ಮುಂಜಾನೆಯ ಅತ್ಯುತ್ತಮವಾದ ಉಪಹಾರಗಳ ಸಾಲಿನಲ್ಲಿ ಇಂಡ್ಲಿಯು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅಕ್ಕಿ, ಉದ್ದಿನ ಮಿಶ್ರಣದಲ್ಲಿ ತಯಾರಾಗುವ ಈ ತಿಂಡಿ ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯಂದಿರುಗೂ ಇಷ್ಟವಾಗುವ ತಿಂಡಿ. ಇದನ್ನು ಕೇವಲ ಉಪಹಾರಕ್ಕೆಂದೇ ಸೀಮಿತಪಡಿಸಬೇಕಿಲ್ಲ. ಪ್ರಧಾನ ಆಹಾರವಾಗಿಯೂ ಸೇವಿಸಬಹುದು. ದೀರ್ಘ ಸಮಯದ ವರೆಗೆ ಹಸಿವಾಗದಂತೆ ತಡೆಯುತ್ತದೆ.

ಹೌದು, ಒಮ್ಮೆ ಇಡ್ಲಿಯನ್ನು ತಿಂದರೆ ಗಂಟೆಗಳಕಾಲ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿಯೇ ಇಡ್ಲಿ ತೂಕ ನಷ್ಟ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಗಣನೀಯ ಪ್ರಮಾಣದಲ್ಲಿ ನಿತ್ಯವೂ ಇಟ್ಲಿ ಸೇವಿಸುವುದರಿಂದ ಆಶ್ಚರ್ಯಕರ ರೀತಿಯಲ್ಲಿ ತೂಕ ಇಳಿಯುತ್ತದೆ ಎಂದು ಕೆಲವು ಸಂಶೋಧನೆಗಳು ದೃಢ ಪಡಿಸಿವೆ. ಈ ವಿಚಾರ ನಿಮಗೆ ಕುತೂಹಲ ಎನಿಸಿದರೆ ಇನ್ನಷ್ಟು ಮಾಹಿತಿಗಾಗಿ ಮುಂದಿನ ವಿವರಣೆಯನ್ನು ಓದಿ...

ಇಡ್ಲಿ ತಿಂದರೆ ತೂಕ ಇಳಿಯುತ್ತೇ!!

ಇಡ್ಲಿ ತಿಂದರೆ ತೂಕ ಇಳಿಯುತ್ತೇ!!

ದಕ್ಷಿಣ ಭಾರತದ ಪ್ರಸಿದ್ಧ ಉಪಹಾರ ಎನಿಸಿಕೊಂಡ ಇಡ್ಲಿ ಸೇವನೆಯಿಂದ ತೂಕ ಇಳಿಯುತ್ತದೆ. ಇದರ ಸೇವನೆಯ ಮೂಲಕ ಅನೇಕ ಜನರು ತಮ್ಮ ತೂಕವನ್ನು ಕರಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ತಮಿಳುನಾಡಿನ ಖ್ಯಾತ ನಟ ರಜನಿ ಅವರು "ನಾನು 40 ದಿನಗಳಲ್ಲಿ 5 ಕೆ.ಜಿ ತೂಕ ಇಳಿಸಿದ್ದೇನೆ. ಅದು ಇಡ್ಲಿ ತಿನ್ನುವುದರ ಮೂಲಕ ಎಂದಿದ್ದಾರೆ." ತೂಕ ಇಳಿಸಲು ದಿನವಿಡೀ ಅಂದರೆ ಮೂರು ಹೊತ್ತು ಇಡ್ಲಿಯನ್ನೇ ತಿನ್ನುತ್ತಿರಬೇಕೆಂದಲ್ಲ. ಬೆಳಗಿನ ಉಪಹಾರ ಹಾಗೂ ಸಂಜೆಯ ಸ್ನ್ಯಾಕ್ಸ್ ರೂಪದಲ್ಲಿ ಸೇವಿಸಬಹುದು.

ಇಡ್ಲಿ ತಿಂದರೆ ತೂಕ ಇಳಿಯುತ್ತೇ!!

ಇಡ್ಲಿ ತಿಂದರೆ ತೂಕ ಇಳಿಯುತ್ತೇ!!

ಇಡ್ಲಿ ಹಬೆಯಲ್ಲಿ ಬೆಂದ ಹಾಗೆಯೇ ತೂಕವನ್ನೂ ಇಳಿಸುತ್ತದೆ. ಹಬೆಯಲ್ಲಿ ಬೆಂದ ಆಹಾರದಲ್ಲಿ ಕೊಬ್ಬು ಮತ್ತು ಕ್ಯಾಲೋರಿ ಇರುವುದಿಲ್ಲ. ಹಾಗಾಗಿ ತೂಕವನ್ನು ಇಳಿಸುವ ಆರೋಗ್ಯಕರ ವಿಧಾನದಲ್ಲಿ ಇಡ್ಲಿಸೇವನೆಯೂ ಒಂದು. ಇಡ್ಲಿಯನ್ನು ಉದ್ದು ಮತ್ತು ಅಕ್ಕಿಯಿಂದ ತಯಾರಿಸಲಾಗುತ್ತದೆ. ಈ ಎರಡು ವಸ್ತುಗಳು ಸುಲಭವಾಗಿ ಜೀರ್ಣವಾಗಿ ಚದುರಿ ಹೋಗುತ್ತವೆ. ಹಾಗಾಗಿ ಇದನ್ನೊಂದು ಆರೋಗ್ಯಕರ ಆಹಾರ ಎಂದು ಕರೆಯುತ್ತಾರೆ. ಅಕ್ಕಿಯು ಘನ ಆಹಾರವಾಗಿರುವುದರಿಂದ ಇದು ಹೊಟ್ಟೆಯಲ್ಲಿ ಹೆಚ್ಚುಕಾಲ ಉಳಿದುಕೊಳ್ಳುತ್ತದೆ. ತೂಕ ಹೆಚ್ಚಿಸಲು ಸಹಕಾರಿಯಾಗಿದೆ. ಅಕ್ಕಿಯೊಂದಿಗೆ ಉದ್ದನ್ನು ಬೆರೆಸಿದಾಗ ಅದು ಹೆಚ್ಚುವರಿ ಪೋಷಕಂಶವನ್ನು ಹೆಚ್ಚಿಸುವುದನ್ನು ತಡೆಯುತ್ತದೆ. ಹಾಗಾಗಿ ಇದರ ಪೌಷ್ಟಿಕಾಂಶವನ್ನು ಹೆಚ್ಚಿಸಲು ಕೆಲವರು ತರಕಾರಿಗಳನ್ನು ಬಳಸುತ್ತಾರೆ.

ಇಡ್ಲಿ ತಿಂದರೆ ತೂಕ ಇಳಿಯುತ್ತೇ!!

ಇಡ್ಲಿ ತಿಂದರೆ ತೂಕ ಇಳಿಯುತ್ತೇ!!

ಉಗಿ/ಹಬೆಯಲ್ಲಿ ಬೇಯಿಸಿದ ಇಡ್ಲಿಯನ್ನು ಸೇವಿಸುವಾಗ ದ್ರಾಕ್ಷಿ, ಕಿತ್ತಳೆ ಅಥವಾ ನಿಂಬೆ ರಸವನ್ನು ಸೇವಿಸುವುದರಿಂದ ಹೆಚ್ಚುವರಿ ಕೊಬ್ಬನ್ನು ಕರಗಿಸಬಹುದು. ಇವು ಅಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್‍ಗಳನ್ನು ತಡೆಯುತ್ತದೆ. ಇದೀಗ ನೀವು ಇಡ್ಲಿಯಿಂದ ತೂಕವನ್ನು ಇಳಿಸುವ ಕ್ರಮವನ್ನು ತಿಳಿದುಕೊಂಡಿದ್ದೀರಿ. ಇದೀಗ ಇಡ್ಲಿ ಸೇವನೆಯಿಂದ ಆರೋಗ್ಯಕ್ಕೆ ಆಗುವ ಅನುಕೂಲವನ್ನು ಅರಿಯಿರಿ.

ಪ್ರಯೋಜನಗಳು

ಪ್ರಯೋಜನಗಳು

1. ದಕ್ಷಿಣ ಭಾರತದ ಪ್ರಸಿದ್ಧ ಉಪಹಾರವಾದ ಇಡ್ಲಿಯನ್ನು ಲಘು ಆಹಾರ ಅಥವಾ ಘನ ಆಹಾರ ಎಂದು ವಿಂಗಡಿಸಬೇಕಿಲ್ಲ. ಇದನ್ನು ಅಕ್ಕಿಯಿಂದ ತಯಾರಿಸುವುದರಿಂದ ನಿಧಾನವಾಗಿ ಜೀರ್ಣವಾಗುತ್ತದೆ ಎಂದು ಹೇಳಬಹುದು.

2. ಇಡ್ಲಿ ಅಂಟು ಮುಕ್ತವಾಗಿರುತ್ತದೆ. ಅವು ಗೋಧಿಯಿಂದ ತಯಾರಿಸದೆ ಇರುವುದರಿಂದ ಅಂಟು ಇರುವುದಿಲ್ಲ ಎಂದು ಹೇಳಬಹುದು. ಹಾಗಾಗಿ ಉಪಹಾರಕ್ಕೆ ರೊಟ್ಟಿಯ ಬದಲು ಇಡ್ಲಿಯನ್ನು ಸೇವಿಸಬಹುದು.

ಪ್ರಯೋಜನಗಳು

ಪ್ರಯೋಜನಗಳು

3. ಇಡ್ಲಿಯಲ್ಲಿ ಕಾರ್ಬೋಹೈಡ್ರೇಟ್, ನಾರಿನಂಶ ಹಾಗೂ ಪ್ರೋಟೀನ್‍ಗಳ ಸಮೃದ್ಧ ಆಹರವಾಗಿರುವುದರಿಂದ ಇದೊಂದು ಪೌಷ್ಟಿಕ ಆಹಾರ ಎಂದು ಕರೆಯಲಾಗುತ್ತದೆ.

4. ಇಡ್ಲಿಯು ಹುದುಗುತ್ತದೆ. ಹಾಗೆಯೇ ಪ್ರೋಟೀನ್ ಮತ್ತು ವಿಟಮಿನ್‍ಗಳು ಸಮೃದ್ಧವಾಗಿರುತ್ತದೆ. ಇದು ಹುದುಗಿದ ಹಾಗೆ ಪ್ರೋಟೀನ್‍ಗಳು ಮತ್ತು ವಿಟಮಿನ್ ಬಿ ಆಹಾರವು ಹೆಚ್ಚುತ್ತದೆ.

5. ಅಕ್ಕಿಯು ನಿಮ್ಮ ತೂಕವನ್ನು ಹೆಚಿಸುತ್ತದೆ ಎನಿಸಿದರೆ ನೀವು ಗೋಧಿರವೆ ಇಡ್ಲಿಯನ್ನು ಮಾಡಬಹುದು. ಇದು ಸುಲಭವಾಗಿ ತೂಕ ಇಳಿಸಲು ಹಾಗೂ ಮಧುಮೇಹಕ್ಕೆ

ಒಳ್ಳೆಯದು. ಅಕ್ಕಿಯು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಗೋಧಿರವೆಯಿಂದ ಮಾಡಿದರೆ ರಕ್ತದ ಮಟ್ಟವನ್ನು ಹತೋಟಿಯಲ್ಲಿ ಇಡಬಹುದು. ಮಧುಮೇಹಿಗಳಿಗೆ ಇದೊಂದು ಸಂಪೂರ್ಣ ಆಹಾರ ಎನ್ನಬಹುದು.'

ಇಡ್ಲಿ ಭಾರತೀಯರ ಆಹಾರಗಳಲ್ಲೇ ಅತ್ಯಂತ ಉತ್ತಮ ಆಹಾರ!

ಇಡ್ಲಿ ಭಾರತೀಯರ ಆಹಾರಗಳಲ್ಲೇ ಅತ್ಯಂತ ಉತ್ತಮ ಆಹಾರ!

ಭಾರತೀಯರು ಕಂಡು ಹಿಡಿದಿರುವ ಆಹಾರಗಳಲ್ಲೇ ಅತ್ಯಂತ ಉತ್ತಮ ಆಹಾರ ಇಡ್ಲಿ ಅಂತ ಪರಿಗಣಿಸಲಾಗಿದೆ. ಎರಡರಿಂದ ಮೂರು ಇಂಚು ಅಗಲವಿರುವ ಇಡ್ಲಿಯನ್ನು

ಎಲ್ಲರಿಗೂ ಗೊತ್ತಿರೋ ಹಾಗೆ ಸಾಮಾನ್ಯವಾಗಿ ಉದ್ದು ಮತ್ತು ಅಕ್ಕಿಯಿಂದ ತಯಾರಿಸ್ತೀವಿ. ನಾವು ಬಿಡಿ ಭಾರತದವ್ರೇ ಆಗಿರೋದ್ರಿಂದ ಇನ್ನೂ ವೆರೈಟಿ ವೆರೈಟಿ ಇಡ್ಲಿಗಳನ್ನು ತಯಾರಿಸುವ ಬಗೆ ಗೊತ್ತು. ಆದ್ರೆ ಒಂದು ಸಾಮಾನ್ಯ ಇಡ್ಲಿಯಲ್ಲಿ ಏನೇನಿರುತ್ತೆ. ಅದು ಆರೋಗ್ಯಕ್ಕೆ ಉಪಕಾರಿ ಅನ್ನೋ ಅಂಶದ ನಿಜಕ್ಕೂ ಹುಬ್ಬೇರಿಸುವಂತದ್ದು

ಇಡ್ಲಿಯಲ್ಲಿ ಏನೇನಿರುತ್ತೆ?

ಇಡ್ಲಿಯಲ್ಲಿ ಏನೇನಿರುತ್ತೆ?

ಇಡ್ಲಿಯು ಕಾರ್ಬೋಹೈಡ್ರೇಟ್ಸ್,ಪ್ರೋಟೀನ್ಸ್, ಎನ್ಝೈಮ್ಸ್,ಫ್ಯಾಟ್ಸ್,ಅಮೈನೋ ಆಸಿಡ್ ಮತ್ತು ಫೈಬರ್ ಅಂಶಗಳನ್ನು ಒಳಗೊಂಡಿರುತ್ತೆ. ಆಶ್ಚರ್ಯ ಅಂದ್ರೆ ಇಡ್ಲಿ ತಿನ್ನುವವರು ದಪ್ಪ ಆಗಿ ಊದಿಕೊಳ್ಳೋಕೆ ಸಾಧ್ಯವೇ ಇಲ್ಲ. ಯಾಕಂದ್ರೆ ಇಡ್ಲಿಯಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಕೊಲೆಸ್ಟ್ರಾಲ್ ಅಂಶ ಇರೋದೆ ಇಲ್ಲ. ಹಾಗಾಗಿ ಯಾರು ಡಯಟ್ ಮಾಡಿ ತೆಳು ಆಗ್ಬೇಕು, ಫಿಟ್ ಆಗಿ ಇರಬೇಕು ಅಂತ ಬಯಸ್ತಾರೋ ಅಂತವರು ಇಡ್ಲಿಯ ಸೇವನೆಯನ್ನು ಮಾಡಬಹುದು. ಆದ್ರೆ ನೀವು ಇಡ್ಲಿಯ ಜೊತೆಗೆ ಯಾವ ಸೈಡ್ ಡಿಶ್ ಬಳಸ್ತೀರಿ ಅನ್ನೋದು ಕೂಡ ತುಂಬಾ ಮಹತ್ವ ಪಡೆಯುತ್ತೆ ಅನ್ನೋದು ನೆನಪಿರಲಿ.. ಅತ್ಯಂತ ಫ್ಯಾಟ್ ಅಂಶಗಳನ್ನು ಒಳಗೊಂಡಿರುವ ಸೈಡ್ ಡಿಶ್ ಬಳಸಿದ್ರೆ ತೂಕ ಹೆಚ್ಚಳವಾಗಬಹುದು. ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ತೆಂಗಿನಕಾಯಿಯಿಂದ ತಯಾರಿಸುವ ಚಟ್ನಿ ಮತ್ತು ಸಾಂಬಾರ್ ಬಳಕೆ ಮಾಡಲಾಗುತ್ತೆ. ಅದು ಅಷ್ಟೇನು ತೂಕ ಹೆಚ್ಚಳಕ್ಕೆ ಕಾರಣವಾಗದೇ ನಿಮ್ಮ ದೇಹಕ್ಕೆ ಇಷ್ಟನ್ನು ನ್ಯೂಟ್ರೀಷಿಯಸ್ ಆಹಾರವಾಗಿರುತ್ತೆ.

ಇಡ್ಲಿಯ ಲಾಭಗಳು

ಇಡ್ಲಿಯ ಲಾಭಗಳು

ಇಡ್ಲಿಯನ್ನು ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ಮುದುಕರವರೆಗೂ ಯಾರೂ ಬೇಕಾದ್ರೂ ಸೇವಿಸ್ಬಹುದು. ಅದ್ರಲ್ಲೂ ಪ್ರಮುಖವಾಗಿ ಯಾರಿಗೆ ಹಲ್ಲು ಇರೋದಿಲ್ವೋ ಅಂತವರೂ ಕೂಡ ಇಡ್ಲಿಯನ್ನು ಆರಾಮಾಗಿ ಜಗಿದು ತಿಂದು ಜೀರ್ಣಿಸಿಕೊಳ್ಳಬಹುದು. ಇಡ್ಲಿ ಅತ್ಯಂತ ಬೇಗನೆ ನಿಮ್ಮ ದೇಹದಲ್ಲಿ ಜೀರ್ಣವಾಗುತ್ತೆ. ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆ ಇರುವವರು ಕೂಡ ಇಡ್ಲಿಯ ಸೇವನೆಯಿಂದ ಆರಾಮಾಗಿ ತಿಂದಿದನ್ನು ಜೀರ್ಣಿಸಿಕೊಂಡು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆದುಕೊಳ್ಳಬಹುದು.

English summary

Idli Benefits Health and Aids Weight Loss

Have you heard about an idli diet? There is a non-technical diet named after idli. This diet has been introduced after knowing its health benefits and its major contribution in aiding weight loss. Idlis are a staple South-Indian dish that is made for breakfast and also enjoyed as a snack. In North India, idlis are a healthy and filling snack idea. If you love to eat idli, then you would like to know how it aids weight loss. Keep reading to know the answer...
X
Desktop Bottom Promotion