For Quick Alerts
ALLOW NOTIFICATIONS  
For Daily Alerts

ಕಿವಿ ನೋವಿದ್ದರೆ 'ಆಲಿವ್ ಎಣ್ಣೆ' ಬಳಸಿ-ಕೂಡಲೇ ನೋವು ಕಡಿಮೆಯಾಗುತ್ತದೆ

By Manu
|

ಕಿವಿ ನೋವಿನ ಕಿರಿಕಿರಿ ಹಿಂಸೆಯು ಬೇಡವೆಂದರೂ ನಮ್ಮ ಮುಖದಲ್ಲಿ ಎದ್ದು ಕಾಣುತ್ತದೆ. ನೋವಿನಿಂದ ರಾತ್ರಿ ನಿದ್ರೆಯೂ ಹಾಳಾಗಿ, ನಿತ್ಯದ ಕೆಲಸಗಳ ಮೇಲೂ ಪರಿಣಾಮ ಬೀರುವುದು. ಕಿವಿಯ ಸೋಂಕಿನ ಪ್ರಮಾಣ ಹೆಚ್ಚಿರಲೀ ಅಥವಾ ಕಡಿಮೆಯೇ ಇರಲಿ ನೋವಿನ ತೀವ್ರತೆ ಹೆಚ್ಚಾಗಿಯೇ ಇರುತ್ತದೆ. ಈ ನೋವನ್ನು ನಿಯಂತ್ರಿಸುವಲ್ಲಿ ಆಲಿವ್ ಎಣ್ಣೆಯ ಪಾತ್ರ ಮಹತ್ತರವಾದದ್ದು. ಇದು ಬಹು ಬೇಗ ನೋವನ್ನು ಶಮನಗೊಳಿಸುವುದು.

ಆಲಿವ್ ಎಣ್ಣೆಯನ್ನು ಕೇವಲ ಅಡುಗೆ ಪದಾರ್ಥಗಳ ತಯಾರಿಗೊಂದೇ ಸೂಕ್ತವಾದದ್ದು ಎಂದು ಹೇಳುತ್ತಾರೆ. ಆದರೆ ಆಲಿವ್ ಎಣ್ಣೆ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಹಲವಾರು ಕಾಯಿಲೆಗಳ ಚಿಕಿತ್ಸೆಗೆ ಇದನ್ನು ಬಳಸಬಹುದು. ಇದರ ಹೆಚ್ಚಿನ ಮಾಹಿತಿ ಅನೇಕರಿಗೆ ತಿಳಿದಿಲ್ಲವಷ್ಟೆ.

ಕಿವಿ ನೋವನ್ನು ತಡೆಗಟ್ಟಲು ಅನುಸರಿಸಬೇಕಾದ ವಿಧಾನಗಳೇನು?

ಕಿವಿ ನೋವಿನಿಂದ ಒಳ ಭಾಗದಲ್ಲಿ ದ್ರವ ಅಥವಾ ಪಸ್ ತರಹದ ವಿಸರ್ಜನೆ, ಊತ, ಜ್ವರ, ನೋವು ಕಾಣಿಸಿಕೊಳ್ಳುತ್ತದೆ. ಆಲಿವ್ ಎಣ್ಣೆಯ ಆರೈಕೆ ಮಾಡಿಕೊಂಡರೆ ಎಲ್ಲವೂ ನಿವಾರಣೆಯಾಗುವುದು. ಮಕ್ಕಳಿಗೆ ಮತ್ತು ವಯಸ್ಕರಿಗೆ ಎನ್ನುವ ತಾರತಮ್ಯವಿಲ್ಲದೆ ಆಲಿವ್ ಎಣ್ಣೆಯನ್ನು ಬಳಸಬಹುದು. ಅಲ್ಲದೆ ಆಲಿವ್ ಎಣ್ಣೆಯನ್ನು ಬಳಸಿಕೊಂಡು ವಿವಿಧ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಬಹುದು. ಈ ಕ್ರಮಗಳ ತಯಾರಿ ಹಾಗೂ ಬಳಕೆಯ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ...ಮುಂದೆ ಓದಿ

ಆಲಿವ್ ಎಣ್ಣೆ

ಆಲಿವ್ ಎಣ್ಣೆ

1. 3-4 ಹನಿ ಆಲಿವ್ ಎಣ್ಣೆಯನ್ನು ತೆಗೆದುಕೊಳ್ಳಿ.

2. ಒಂದು ಮಗ್ಗಲಲ್ಲಿ ಮಲಗಿಕೊಂಡು ಆಲಿವ್ ಎಣ್ಣೆಯನ್ನು ಕಿವಿಗೆ ಹಾಕಬೇಕು. ನಂತರ ತಕ್ಷಣವೇ ಕಿವಿಯ ಸುತ್ತಲು ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

3. ನಂತರ ಹತ್ತಿಯ ಸಣ್ಣ ಉಂಡೆಯನ್ನು ಕಿವಿಯಿಂದ ಎಣ್ಣೆ ಹೊರಗಡೆ ಬಾರದಂತೆ ಮುಚ್ಚಬೇಕು.

4. ಹೀಗೆ ದಿನಕ್ಕೆ ಎರಡು ಬಾರಿ ಮಾಡಿ

5. ಹೀಗೆ ಮಾಡುವುದರಿಂದ ಕಿವಿಯ ನೋವು ಶಮನವಾಗುವುದು. ಜೊತೆಗೆ ಕಿವಿಯು ಸ್ವಚ್ಛವಾಗುವುದು.

ಆಲಿವ್ ಎಣ್ಣೆ ಮತ್ತು ಬೆಳ್ಳುಳ್ಳಿ

ಆಲಿವ್ ಎಣ್ಣೆ ಮತ್ತು ಬೆಳ್ಳುಳ್ಳಿ

* ಒಂದು ಚಮಚ ಆಲಿವ್ ಎಣ್ಣೆ

* 3-4 ಜಜ್ಜಿದ ಬೆಳ್ಳುಳ್ಳಿ ಎಸಳು.

* ಇವೆರಡನ್ನು ಚೆನ್ನಾಗಿ ಕಲಸಬೇಕು.

* ನಂತರ ಇದನ್ನು ಬಿಸಿ ಮಾಡಿ.

* ಉಗುರು ಬೆಚ್ಚಗಿನ ಈ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ, ಕಿವಿಯಲ್ಲಿ ನೋವಿರುವ ಜಾಗದಲ್ಲಿ ಇಡಬೇಕು.

* ಸೋಂಕು ನಿವಾರಣೆ ಹೊಂದುವವರೆಗೂ ಹೀಗೆ ಮಾಡಬೇಕು.

ಆಲಿವ್ ಎಣ್ಣೆ ಮತ್ತು ಲವಂಗ

ಆಲಿವ್ ಎಣ್ಣೆ ಮತ್ತು ಲವಂಗ

1. ಒಂದು ಚಮಚ ಆಲಿವ್ ಎಣ್ಣೆ

2. 3-4 ಜಜ್ಜಿದ ಲವಂಗವನ್ನು ಎಣ್ಣೆಯಲ್ಲಿ ಮಿಶ್ರಗೊಳಿಸಬೇಕು.

3. ನಂತರ ಈ ಮಿಶ್ರಣವನ್ನು ಬಿಸಿಮಾಡಬೇಕು.

4. ಉಗುರು ಬೆಚ್ಚಗಿನ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ, ಕಿವಿಯ ನೋವಿರುವ ಜಾಗದಲ್ಲಿ ಇಡಬೇಕು.

5. ದಿನದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಕಿವಿ ನೋವು ಶಮನವಾಗುವುದು.

English summary

How To Use Olive Oil To Treat Ear Infection Quickly

The pain and the irritation you face when you have an ear infection can make you annoyed. This can even give you sleepless nights and affect your day-to-day work. Well, the infection in the ear varies from mild to severe. If the infection is a mild one then there are certain home remedies that one could take up. Olive oil is just one of the natural ingredients that helps in easing an ear infection.
X
Desktop Bottom Promotion