ಗಾಯದ ಸಮಸ್ಯೆಯಿದ್ದರೆ, ಬೆಳ್ಳುಳ್ಳಿ ಪೇಸ್ಟ್ ಹಚ್ಚಿ, ಕೂಡಲೇ ಕಡಿಮೆಯಾಗುತ್ತದೆ!

By: Arshad
Subscribe to Boldsky

ಅಡುಗೆ ಯಾವಾಗ ಪ್ರಾರಂಭವಾಯಿತೋ ಬಹುಶಃ ಅಂದಿನಿಂದಲೇ ಬೆಳ್ಳುಳ್ಳಿ ಒಂದು ಸಾಂಬಾರ ಪದಾರ್ಥವಾಗಿ ಬಳಕೆಯಾಗುತ್ತಾ ಬಂದಿರಬೇಕು. ಇದರ ಬ್ಯಾಕ್ಟೀರಿಯಾ ನಿವಾರಕ ಗುಣದ ಕಾರಣ ಇದೊಂದು ಸಾಂಬಾರ ಪದಾರ್ಥದ ಹೊರತಾಗಿ ಔಷಧಿಯ ರೂಪದಲ್ಲಿಯೇ ಹೆಚ್ಚು ಬಳಕೆಯಾಗುತ್ತಿದೆ.

ಮೊಳಕೆಯೊಡೆದ ಬೆಳ್ಳುಳ್ಳಿ ಸೇವನೆ-ಆರೋಗ್ಯಕ್ಕೆ ಬಹಳ ಒಳ್ಳೆಯದು....

ವಿಶೇಷವಾಗಿ ಇದರ ಪೋಷಕಾಂಶಗಳು ಗಾಯಗಳನ್ನು ಶೀಘ್ರವಾಗಿ ಮಾಗಿಸಲು ಸಮರ್ಥವಾಗಿದ್ದು ಸೋಂಕನ್ನು ತಡೆಯುವ ಮೂಲಕ ಗಾಯ ಒಣಗುವ ಗತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಈ ಮೂಲಕವೂ ಗಾಯ ಮಾಗಿಸುವ ಗತಿ ಹೆಚ್ಚುತ್ತದೆ. ಬನ್ನಿ, ಈ ಕ್ರಿಯೆಯನ್ನು ಚುರುಕುಗೊಳಿಸಲು ಬೆಳ್ಳುಳ್ಳಿಯನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ...

ಮೊದಲ ಹಂತ: ಗಾಯ ತೊಳೆಯಿರಿ

ಮೊದಲ ಹಂತ: ಗಾಯ ತೊಳೆಯಿರಿ

ಗಾಯ ಹಸಿಯಾಗಿದ್ದರೆ ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಜಜ್ಜಿ ನಯವಾದ ಲೇಪನವಾಗಿಸಿ. ಗಾಯವನ್ನು ಸ್ವಚ್ಛವಾದ ನೀರು ಹಾಗೂ ಡೆಟಾಲ್ ಬಳಸಿ ತೊಳೆದು ಒಣಗಿಸಿ. ಸಾಮಾನ್ಯ ಗಾತ್ರದ ಗಾಯಕ್ಕೆ ಸುಮಾರು ಹದಿನೈದು ಎಸಳು ಬೆಳ್ಳುಳ್ಳಿ ಸಾಕಾಗುತ್ತದೆ.

ಎರಡನೆಯ ಹಂತ:ಬೆಳ್ಳುಳ್ಳಿ ಲೇಪಿತ ಪಟ್ಟಿ ತಯಾರಿಸಿ

ಎರಡನೆಯ ಹಂತ:ಬೆಳ್ಳುಳ್ಳಿ ಲೇಪಿತ ಪಟ್ಟಿ ತಯಾರಿಸಿ

ಬ್ಯಾಂಡೇಜು ಕಟ್ಟುವ ಹತ್ತಿಯ ಬಟ್ಟೆಯನ್ನು ಕೆಲವು ಮಡಿಕೆಗಳಾಗಿಸಿ ಇದರ ಮೇಲೆ ಈ ಲೇಪನವನ್ನು ತೆಳುವಾಗಿ ಹರಡಿ. ಈ ಪಟ್ಟಿಯ ಮೇಲೆ ಲೇಪಿಸಿರುವ ಲೇಪನ ಗಾಯಕ್ಕೆ ತಗಲುವಂತೆ ಪಟ್ಟೆಯನ್ನು ಇರಿಸಿ.

ಮೂರನೆಯ ಹಂತ:ಪಟ್ಟಿ ಕಟ್ಟಿ

ಮೂರನೆಯ ಹಂತ:ಪಟ್ಟಿ ಕಟ್ಟಿ

ಕೊಂಚ ಉದ್ದವಾದ ಬ್ಯಾಂಡೇಜನ್ನು ಈ ಪಟ್ಟಿಯನ್ನು ಆವರಿಸುವಂತೆ ಕಟ್ಟಿ ಸುಮಾರು ಎರಡು ದಿನ ಹಾಗೇ ಇರುವಂತೆ ಬಿಗಿಯಾಗಿಸಿ. ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಹೊಂದಿದ್ದು ಗಾಯವನ್ನು ಶೀಘ್ರವಾಗಿ ಮಾಗಿಸಲು ನೆರವಾಗುತ್ತದೆ. ಅಲ್ಲದೇ ಗಾಯಕ್ಕೆ ಕಾರಣವಾದ ಪೆಟ್ಟಿನಿಂದ ಆಗಿದ್ದ ನೋವು ಸಹಾ ಶೀಘ್ರವಾಗಿ ಕಡಿಮೆಯಾಗುತ್ತದೆ.

ನಾಲ್ಕನೆಯ ಹಂತ:ಪಟ್ಟಿಯನ್ನು ಬದಲಿಸಿ

ನಾಲ್ಕನೆಯ ಹಂತ:ಪಟ್ಟಿಯನ್ನು ಬದಲಿಸಿ

ಎರಡು ದಿನಗಳ ಬಳಿಕ ಈ ಪಟ್ಟಿಯನ್ನು ನಿವಾರಿಸಿ ಮತ್ತೊಮ್ಮೆ ಗಾಯವನ್ನು ತಣ್ಣೀರು ಹಾಗೂ ಡೆಟಾಲ್ ಬಳಸಿ ತೊಳೆಯಿರಿ. ಗಾಯಕ್ಕೆ ಅಂಟಿಕೊಂಡಿದ್ದ ಹಳೆಯ ಬೆಳ್ಳುಳ್ಳಿಯ ಲೇಪನ ಪೂರ್ಣವಾಗಿ ನಿವಾರಣೆಯಾಗಬೇಕು. ಈಗ ಹೊಸ ಪಟ್ಟಿಯೊಂದನ್ನು ತಯಾರಿಸಿ ಮೊದಲಿನಂತೆಯೇ ಇನ್ನೊಂದು ಪಟ್ಟಿಯನ್ನು ಕಟ್ಟಿ. ಈ ಪಟ್ಟಿಯನ್ನು ಮುಂದಿನ ಎರಡು ದಿನಗಳವರೆಗೆ ಇರುವಂತೆ ಮಾಡಿ ಬಳಿಕ ನಿವಾರಿಸಿ. ನಾಲ್ಕೇ ದಿನಗಳಲ್ಲಿ ಗಾಯ ಮಾಗಿದ್ದು ಸೋಂಕು ಇಲ್ಲವಾಗಿರುತ್ತದೆ.

ಒಂದು ವೇಳೆ ಬೆಳ್ಳುಳ್ಳಿ ನಿಮಗೆ ಆಗದಿದ್ದರೆ?

ಒಂದು ವೇಳೆ ಬೆಳ್ಳುಳ್ಳಿ ನಿಮಗೆ ಆಗದಿದ್ದರೆ?

ಕೆಲವು ವ್ಯಕ್ತಿಗಳಿಗೆ ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಅಲರ್ಜಿಕಾರಕವಾಗಿದ್ದು ಗಾಯದ ಮೇಲೆ ಹಚ್ಚಿನ ಕೊಂಚ ಹೊತ್ತಿನಲ್ಲಿಯೇ ಉರಿಯಲು ಪ್ರಾರಂಭಿಸುತ್ತದೆ. ಹೀಗಾಗರೆ ಬೆಳ್ಳುಳ್ಳಿಯ ಬದಲು ಅರಿಶಿನ ಪುಡಿಯ ಲೇಪನವನ್ನು ಹಚ್ಚಿ ಹಾಗೂ ದಿನಕ್ಕೊಂದು ಲೋಟ ಬಿಸಿ ಹಾಲಿನಲ್ಲಿ ಅರಿಶಿನ ಪುಡಿ ಬೆರೆಸಿ ಕುಡಿಯಿರಿ. ಈ ವಿಧಾನದಿಂದಲೂ ಗಾಯ ಶೀಘ್ರವಾಗಿ ಮಾಗುತ್ತದೆ.

ಒಂದು ವೇಳೆ ಅರಿಶಿನಕ್ಕೂ ಅಲರ್ಜಿಯಾಗಿದ್ದರೆ?

ಒಂದು ವೇಳೆ ಅರಿಶಿನಕ್ಕೂ ಅಲರ್ಜಿಯಾಗಿದ್ದರೆ?

ಕೆಲವು ವ್ಯಕ್ತಿಗಳಿಗೆ ಬೆಳ್ಳುಳ್ಳಿ ಹಾಗೂ ಅರಿಶಿನ ಎರಡೂ ಅಲರ್ಜಿಕಾಕರವಾಗಿರುತ್ತದೆ. ಈ ವ್ಯಕ್ತಿಗಳು ಅಪ್ಪಟ ಜೇನನ್ನು ಗಾಯದ ಮೇಲೆ ಹಚ್ಚಿ ಒಂದು ಗಂಟೆಯ ಬಳಿಕ ನೀರಿನಿಂದ ತೊಳೆದುಕೊಳ್ಳಿ.

ಎಚ್ಚರಿಕೆ

ಎಚ್ಚರಿಕೆ

ಒಂದು ವೇಳೆ ಇವುಗಳಲ್ಲಿ ಯಾವುದೇ ಸಾಮಾಗ್ರಿ ನಿಮಗೆ ಅಲರ್ಜಿಕಾರಕವಾಗಿದ್ದರೆ ಹಾಗೂ ಚರ್ಮದ ಮೇಲೆ ಚಿಕ್ಕ ಗುಳ್ಳೆಗಳು ಎದ್ದರೆ ತಕ್ಷಣವೇ ಇದನ್ನು ತೊಳೆಯಿರಿ ಹಾಗೂ ವೈದ್ಯರ ಸಲಹೆಯನ್ನು ಪಡೆಯಿರಿ.

English summary

How To Use Garlic To Heal Wounds

Garlic is a part of home remedies since long. It contains antibiotic and antimicrobial agents that speed up wound recovery process. Garlic is a natural antibiotic and can be helpful in treating bothexternal wounds and internal wounds. It works well by reducing the infection. It also boosts immunity and helps in the healing process. Here are some tips to follow to heal wounds using garlic.
Subscribe Newsletter