For Quick Alerts
ALLOW NOTIFICATIONS  
For Daily Alerts

  ಮಕ್ಕಳ ಹಣೆಯ ಮೇಲೆ ಕುಂಕುಮ ಹಾಕಬಾರದಂತೆ!! ಯಾಕೆಂದರೆ...

  By Arshad
  |

  ಹಿಂದೂ ಧರ್ಮದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂದರ್ಭಗಳಲ್ಲಿ ಹಣೆಯ ಮೇಲೆ ಕೆಂಪು ಕುಂಕುಮದ ಬೊಟ್ಟೊಂದನ್ನು ಇರಿಸಲಾಗುತ್ತದೆ. ಆದರೆ ಇಂದು ಮಾರುಕಟ್ಟೆಯಲ್ಲಿ ಸಿಗುತ್ತಿರುವ ಕುಂಕುಮದಲ್ಲಿ ಆರೋಗ್ಯಕ್ಕೆ ಮಾರಕವಾಗಬಹುದಾದಷ್ಟು ಹೆಚ್ಚಿನ ಪ್ರಮಾಣದ ಸೀಸಿವಿದೆ.

  ಈ ವಿಷಕರ ಸೀಸ ಚರ್ಮದಿಂದ ರಕ್ತಕ್ಕೆ ಇಳಿಯುವ ಕ್ಷಮತೆ ಹೊಂದಿದ್ದು ವಿಶೇಷವಾಗಿ ಮಕ್ಕಳ ಬುದ್ಧಿ ಕ್ಷಮತೆಯನ್ನು ಕಡಿಮೆಗೊಳಿಸುವುದು, ನಡವಳಿಕೆಯಲ್ಲಿ ಬದಲಾವಣೆ ಹಾಗೂ ಬೆಳವಣಿಗೆ ತಡವಾಗುವುದು ಮೊದಲಾದ ತೊಂದರೆಗಳನ್ನು ಹುಟ್ಟುಹಾಕುತ್ತಿರುವುದು ಇತ್ತೀಚಿನ ಸಂಶೋಧನೆಗಳಲ್ಲಿ ಕಂಡುಬಂದಿದೆ. ಈ ಸಂಶೋಧನೆಯಲ್ಲಿ ಭಾರತ ಹಾಗೂ ಅಮೇರಿಕಾದಲ್ಲಿ ಲಭಿಸುತ್ತಿರುವ ಕುಂಕುಮದ ಪುಡಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು ಸೀಸದ ಅಪಾರ ಅಂಶವಿರುವುದು ಬೆಳಕಿಗೆ ಬಂದಿದೆ.

  ಕುಂಕುಮ ಅಥವಾ ಸಿಂಧೂರವನ್ನು ಹಿಂದೂ ಸಹಿತ ಇತರ ಧರ್ಮೀಯ ಮಹಿಳೆಯರು ಧಾರ್ಮಿಕ ಹಾಗೂ ಸೌಂದರ್ಯವರ್ಧಕದ ರೂಪದಲ್ಲಿ ಹಣೆಯ ನಡುವಿನಲ್ಲಿ ಧರಿಸಿಕೊಳ್ಳುತ್ತಾರೆ. ವಿವಾಹಿತ ಮಹಿಳೆಯರಿಗೆ ಬೈತಲೆಯ ಗೆರೆಯಲ್ಲಿ ಕೊಂಚ ಉದ್ದಕ್ಕೆ ಕುಂಕುಮನ್ನು ಧರಿಸುವುದು ವಿವಾಹಿತೆಯಾಗಿರುವ ಸೂಚನೆಯೂ ಆಗಿದೆ. ಇದಲ್ಲದೇ ಪುರುಷರೂ ಮಕ್ಕಳೂ ಇತರ ಧಾರ್ಮಿಕ ವಿಧಿಗಳಿಗನುಸಾರವಾಗಿ ಕುಂಕುಮವನ್ನು ಧರಿಸುತ್ತಾರೆ.

  Sindoor

  American Journal of Public Health ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಸಂಶೋಧಕರು ಅಮೇರಿಕಾದ ನ್ಯೂ ಜೆರ್ಸಿಯಲ್ಲಿ ಸಂಗ್ರಹಿಸಲಾದ ಕುಂಕುಮದ ಮಾದರಿಗಳಲ್ಲಿ 83 ಶೇಖಡಾ ಹಾಗೂ ಭಾರತದ ವಿವಿಧ ನಗರಗಳಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ 78 ಶೇಖಡಾದಷ್ಟು ಮಾದರಿಗಳಲ್ಲಿ ಪ್ರತಿ ಗ್ರಾಂ ಕುಂಕುಮದಲ್ಲಿ ಕನಿಷ್ಠ 1.0 ಮೈಕ್ರೋಗ್ರಾಂ ಸೀಸ ಕಂಡುಬಂದಿದೆ.

  ಇವುಗಳಲ್ಲಿ ಮೂರನೆಯ ಒಂದರದಷ್ಟು ಮಾದರಿಗಳಲ್ಲಂತೂ ಪ್ರತಿ ಗ್ರಾಂನಲ್ಲಿ ಇಪ್ಪತ್ತು ಮೈಕ್ರೋಗ್ರಾಂನಷ್ಟು ಆಗಾಧ ಪ್ರಮಾಣದಲ್ಲಿ ಕಂಡುಬಂದಿದೆ. ಆದರೆ ವಿಪರ್ಯಾಸವೆಂದರೆ ಅಮೇರಿಕಾದ ಆಹಾರ ಮತ್ತು ಔಷಧಿ ನಿರ್ದೇಶನಾಯಲ US Food and Drug Administration (FDA) ನಿಗದಿಪಡಿಸಿರುವಂತೆ ಈ ಪ್ರಮಾಣ ಇಪ್ಪತ್ತು ಮೈಕ್ರೋಗ್ರಾಂ ಮೀರಬಾರದು. ಆ ಲೆಕ್ಕದಲ್ಲಿ ಈ ಕುಂಕುಮ ಸುರಕ್ಷಿತ.

  ಆದರೆ ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ ಎಂಬ ಕನ್ನಡದ ಗಾದೆಮಾತಿನಂತೆ ಸೀಸ ಎಷ್ಟೇ ಕಡಿಮೆ ಇರಲಿ, ಇದು ಅಪಾಯಕಾರಿಯೇ ಎಂದು ನ್ಯೂ ಜೆರ್ಸಿಯ ರುಟ್ಗರ್ಸ್ ನಲ್ಲಿರುವ ದ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡೆರೆಕ್ ಶೆಂಡೆಲ್ ರವರು ತಿಳಿಸುತ್ತಾರೆ. ಇವರು ಈ ಸಂಶೋಧನೆಯ ವಿವರಗಳನ್ನು ಪ್ರಕಟಿಸಿದ ಲೇಖನದ ಸಹ ಲೇಖಕರೂ ಆಗಿದ್ದಾರೆ.

  "ಇದೇ ಕಾರಣಕ್ಕೆ ಯಾವ ಕುಂಕುಮದಲ್ಲಿ ಸೀಸ ಇರುತ್ತದೆಯೋ ಅದನ್ನು ಅಮೇರಿಕಾದಲ್ಲಿ ಮಾರಲಿಕ್ಕೆ ಅಥವಾ ತರಲಿಕ್ಕೆ ಅವಕಾಶ ನೀಡಕೂಡದು" ಎಂದು ಶೆಂಡೆಲ್ ರವರು ಅಭಿಪ್ರಾಯಪಡುತ್ತಾರೆ. ಸೀಸ ಸುಲಭವಾಗಿ ಚರ್ಮದಲ್ಲಿ ಹೀರಲ್ಪಡುವ ವಿಷವಾಗಿದ್ದು ಇದರ ಇರುವಿಕೆಯಿಂದ ವಿಶೇಷವಾಗಿ ಮಕ್ಕಳ ಬುದ್ಧಿಕ್ಷಮತೆಯಲ್ಲಿ ಇಳಿಕೆ, ಬೆಳವಣಿಗೆ ತಡವಾಗುವುದು, ನಡವಳಿಕೆಯಲ್ಲಿ ಬದಲಾವಣೆ ಮೊದಲಾದವು ಕಾಣಿಸಿಕೊಳ್ಳುತ್ತದೆ.  

  children

  ಸಾಮಾನ್ಯವಾಗಿ ಮಕ್ಕಳು ಕುಂಕುಮ ಸ್ಪರ್ಶಿಸಿದ ಬೆರಗಳುಗನ್ನೇ ತಿಂಡಿ ತಿನ್ನಲೂ ಬಳಸುವ ಮೂಲಕ ಈ ಅಪಾಯ ಇನ್ನಷ್ಟು ಹೆಚ್ಚುತ್ತದೆ. ಸೀಸದ ಭಯಾನಕ ರೂಪವನ್ನು ಕಂಡ ಬಳಿಕವೇ ಹಿಂದೆ ಪೆಟ್ರೋಲಿನಲ್ಲಿ ಬೆರೆಸಿತ್ತಿದ್ದರೂ ಈಗ ಸೀಸರಹಿತ (unleaded) ವಾಗಿಸಿಯೇ ಮಾರಾಟ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ ನಮಗಿಂದು ಪೆಟ್ರೋಲ್ ಬಂಕ್ ಗಳಲ್ಲಿ ಅನ್ ಲೆಡೆಡ್ ಎಂದು ಬರೆದಿರುವ ಪೆಟ್ರೋಲ್ ಲಭ್ಯವಿದೆ.

  ಈ ಸಂಶೋಧನೆಯಲ್ಲಿ US Environmental Protection Agency ಸಂಸ್ಥೆಯ ವಿಜ್ಞಾನಿಯಾಗಿರುವ ಮಂಥನ್ ಶಾ ಸಹಿತ ಹಲವಾರು ಸಂಶೋಧಕರು ತೊಡಗಿಸಿಕೊಂಡಿದ್ದು ಅಮೇರಿಕಾದಲ್ಲಿ ದಕ್ಷಿಣ ಭಾರತದ ವಸ್ತುಗಳು ಲಭ್ಯವಿರುವ ಅಂಗಡಿಗಳಿಂದ ಸಂಗ್ರಹಿಸಲಾದ ಒಟ್ಟು 118 ಮಾದರಿಗಳನ್ನು ಹಾಗೂ ಭಾರತದ ಮುಂಬೈ ಮತ್ತು ದೆಹಲಿಗಳಿಂದ ತರಿಸಲಾದ 23 ಮಾದರಿಯ ಕುಂಕುಮಗಳನ್ನು ವಿಶ್ಲೇಷಿಸಲಾಯಿತು.

  ಇದಕ್ಕೂ ಮುನ್ನ ಭಾರತ ಹಾಗೂ ನೈಜೀರಿಯಾಗಳಲ್ಲಿ ತಯಾರಾದ ಕಾಜಲ್ ಹಾಗೂ ಟಿರೋ ಎಂಬ ಸೌಂದರ್ಯವಸ್ತುಗಳಲ್ಲಿಯೂ ಸೀಸದ ಅಂಶವಿದ್ದ ಕಾರಣ FDA ಇವುಗಳ ಮಾರಾಟವನ್ನು ನಿರ್ಬಂಧಿಸಿತ್ತು. ಹತ್ತು ವರ್ಷಗಳ ಹಿಂದೆಯೇ Illinois Department of Health ವಿಭಾಗವೂ ಸಿಂಧೂರದ ಮಾದರಿಗಳಲ್ಲಿ ಸೀಸವಿದ್ದುದನ್ನು ಕಂಡುಕೊಂಡು ಇವುಗಳ ಬಳಕೆಯನ್ನು ನಿಷೇಧಿಸಿತ್ತು.

  ಈ ಕುಂಕುಮಗಳಲ್ಲಿ ಸೀಸದ ಪ್ರಮಾಣವಿರುವುದನ್ನು ಖಚಿತ ಪಡಿಸಿದ ಬಳಿಕ ಸಂಶೋಧಕರು ಸೀಸದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸುವುದು ಹಾಗೂ ಸೀಸರಹಿತ ಕುಂಕುಮವನ್ನು ಬಳಸುವಂತೆ ಜನರನ್ನು ಮನವೊಲಿಸಿ ಸುರಕ್ಷಿತ ಉತ್ಪನ್ನಗಳನ್ನೇ ಬಳಸುವಂತೆ ಮಾಡಬೇಕಾಗಿದೆ.

  ವಿಶೇಷವಾಗಿ ದಕ್ಷಿಣ ಭಾರತಕ್ಕೆ ಸೇರಿರುವ ಮಕ್ಕಳ ರಕ್ತದಲ್ಲಿ ಸೀಸದ ಅಂಶ ಅಪಾಯಕಾರಿ ಮಟ್ಟದಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಒಂದು ವೇಳೆ ಈ ಪ್ರಮಾಣ ಹೆಚ್ಚಾದರೆ ಮೆದುಳಿನ ಜೀವಕೋಶಗಳು ಅತಿ ಹೆಚ್ಚಾಗಿ ಸಾಯುತ್ತವೆ, ಇವೇ ಮೆದುಳಿನ ಕ್ಷಮತೆ ಉಡುಗಲು ಕಾರಣ ಎಂದು ರುಟ್ಗರ್ಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ವಿಲಿಯಂ ಹಾಲ್ಪೆರಿನ್ ರವರು ತಿಳಿಸುತ್ತಾರೆ.

  English summary

  How Sindoor Can Be Harmful For Your Child’s IQ

  Sindoor, a red powder used during Hindu religious and cultural ceremonies, has unsafe levels of lead, a highly toxic poison associated with lower IQ, behavioural problems and growth delays in children, says a study that examined samples of the cosmetic powder collected from India and the US.
  Story first published: Thursday, September 21, 2017, 13:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more