For Quick Alerts
ALLOW NOTIFICATIONS  
For Daily Alerts

ಈ ಮೌತ್‌ವಾಶ್ ಬಳಸಿ, ಮುಜುಗರವಿಲ್ಲದೆ ಹರಟೆ ಹೊಡೆಯಿರಿ!

By Anuradha Yogesh
|

ಏನನ್ನಾದರೂ ಸಹಿಸಬಹುದು, ಆದರೆ ಬಾಯಿಯ ದುರ್ಗಂಧ ಸಹಿಸುವದು ಅಸಾಧ್ಯ. ನಮ್ಮ ಬಾಯಿಯ ದುರ್ವಾಸನೆ ನಮಗೆ ತಿಳಿಯಬರುವದಿಲ್ಲ. ಮನೆಯಲ್ಲಿ ಕಛೇರಿಯಲ್ಲಿ ಮಾತನಾಡುವಾಗ, ಎದುರಿನ ವ್ಯಕ್ತಿ ಮುಖ ಕಿವುಚಿದರು ಎಂದಾಕ್ಷಣ ನಾವು ಎಚ್ಚೆತ್ತುಕೊಳ್ಳಬೇಕು. ಬಹುಶಃ ಬಾಯಿಯ ದುರ್ಗಂಧ ಕಾರಣವಿರಬಹುದು.

ಬಾಯಿಯ ದುರ್ಗಂಧಕ್ಕೆ ಕಾರಣ

ನಮ್ಮ ಬಾಯಿ ಸಾವಿರಾರು ತರಹದ ಸೂಕ್ಷ್ಮಜೀವಿಗಳ ಆಗರ. ಅದರಲ್ಲಿ ಅನೇಕ ತರಹದ ಬ್ಯಾಕ್ಟೀರಿಯಾಗಳು ಕೂಡ ಕಂಡುಬರುತ್ತವೆ. ನಮಗೇ ತಿಳಿಯದಂತೆ ಇವು ದಂತಕುಳಿ, ಪ್ಲೇಕ್(ಹಲ್ಲಿನ ಮೇಲೆ ಒಂದು ತರಹದ ಪದರ), ಒಸಡುಗಳ ಊತ ಉಂಟುಮಾಡಿ ಬಾಯಿಯ ದುರ್ವಾಸನೆಗೆ ಕಾರಣವಾಗುತ್ತವೆ.

ಬಾಯಿಯ ದುರ್ಗಂಧಕ್ಕೆ ಪರಿಹಾರಗಳು

ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇರುವಂತೆ ಇದಕ್ಕೂ ಕೂಡ ಅನೇಕ ಪರಿಹಾರಗಳಿವೆ. ದಿನಕ್ಕೆರಡು ಬಾರಿ ತಪ್ಪದೆ ಹಲ್ಲುಜ್ಜಬೇಕು, ಜೊತೆಗೆ ಹಲ್ಲಿನ ಸಂದಿಗಳನ್ನು 'ಫ್ಲಾಸ್' ಮಾಡಿ ಸ್ವಚ್ಛಗೊಳಿಸಬೇಕು. ಇವುಗಳ ಜೊತೆಗೆ ಮೌತ್‌ವಾಶ್ ಮಾಡಿಕೊಳ್ಳುವ ರೂಢಿ ಬೆಳೆಸಿಕೊಳ್ಳಬೇಕು. ಮೆಡಿಕಲ್ ಶಾಪ್‌ನಲ್ಲಿ ಅನೇಕ ತರಹದ ಮೌತ್‌ವಾಶ್‌ಗಳು ಲಭ್ಯವಾಗುತ್ತವೆ. 'ಲಿಸ್ಟರಿನ್', 'ಕೊಲ್ಗೇಟ್ ಪ್ಲೇಕ್ ರಿಮೂವರ್' ಇತ್ಯಾದಿ ಪ್ರಸಿದ್ಧ ಮೌತ್‌ವಾಶ್ ಬ್ರಾಂಡ್‌ಗಳು. ಇವನ್ನು ಪ್ರತಿನಿತ್ಯ ಉಪಯೋಗಿಸುವದರಿಂದ ತುಂಬಾ ದುಬಾರಿ ಎನಿಸುತ್ತವೆ.

ತಲೆಹೊಟ್ಟಿನ ಸಮಸ್ಯೆಗೆ ಹೊಸ ಔಷಧ ಅದೇ 'ಮೌತ್ ವಾಶ್'!

ಅಷ್ಟೆ ಅಲ್ಲದೆ, ಅನೇಕ ಅಧ್ಯಯನಗಳ ಪ್ರಕಾರ ಈ ಮೌತ್‌ವಾಶ್‌ಗಳಲ್ಲಿ ಅನೇಕ ರಾಸಾಯನಿಕಗಳಿದ್ದು, ಅವುಗಳಿಂದ ಆರೋಗ್ಯಕ್ಕೆ ಹಾನಿಯಾಗುವ ಸಂಭವಗಳೇ ಜಾಸ್ತಿ! ಗಂಟಲಿನ ಕ್ಯಾನ್ಸರ್ ಬರುತ್ತದೆಂದು ಹೇಳುತ್ತಾರೆ. ಆರೋಗ್ಯದ ವಿಷ್ಯದಲ್ಲಿ ನಮಗ್ಯಾಕೆ ರಿಸ್ಕ್ ಬೇಕು? ಇಲ್ಲಿ ನೋಡಿ ನಿಮಗೆ ' ಬೋಲ್ಡ್ ಸ್ಕೈ' ಮನೆಯಲ್ಲೇ ಮಾಡುವ ಮೌತ್‌ವಾಶ್ ಬಗ್ಗೆ ತಿಳಿಸುತ್ತದೆ...

ಬೇಕಾದ ಸಾಮಗ್ರಿಗಳು

ಬೇಕಾದ ಸಾಮಗ್ರಿಗಳು

1. ಬೇಕಿಂಗ್ ಸೋಡ

2. ಉಪ್ಪು

3. ಹೈಡ್ರೋಜೆನ್ ಪರಾಕ್ಸೈಡ್

4. ಟೂಥ್‌ಪಿಕ್‌ಗಳು

5. ಟೂಥ್‌ಬ್ರಶ್

ಅರ್ಧ ಚಮಚ ಉಪ್ಪು ಮತ್ತು ಒಂದು ಚಮಚ ಬೇಕಿಂಗ್ ಸೋಡ

ಅರ್ಧ ಚಮಚ ಉಪ್ಪು ಮತ್ತು ಒಂದು ಚಮಚ ಬೇಕಿಂಗ್ ಸೋಡ

1. ಸಣ್ಣ ಬೌಲ್‌ನಲ್ಲಿ ಅರ್ಧ ಚಮಚ ಉಪ್ಪು ಮತ್ತು ಒಂದು ಚಮಚ ಬೇಕಿಂಗ್ ಸೋಡವನ್ನು ಚೆನ್ನಾಗಿ ಬೆರೆಸಿ.

ಟೂಥ್‌ಬ್ರಶನ್ನು ಸ್ವಲ್ಪ ಹೊತ್ತು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ

ಟೂಥ್‌ಬ್ರಶನ್ನು ಸ್ವಲ್ಪ ಹೊತ್ತು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ

ನಿಮ್ಮ ಸ್ವಚ್ಛವಾದ ಟೂಥ್‌ಬ್ರಶನ್ನು ಸ್ವಲ್ಪ ಹೊತ್ತು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಟೂಥ್‌ಬ್ರಶ್‌ನ ಬಿರುಗೂದಲುಗಳು(ಬ್ರಿಸಲ್ಸ್) ಸ್ವಲ್ಪ ಮೆತ್ತಗಾಗುತ್ತವೆ.

ನಿಧಾನವಾಗಿ ಹಲ್ಲುಗಳನ್ನು ಉಜ್ಜಿ

ನಿಧಾನವಾಗಿ ಹಲ್ಲುಗಳನ್ನು ಉಜ್ಜಿ

ಟೂಥ್‌ಬ್ರಶ್‌ನ್ನು ಮೇಲೆ ತಯಾರಿಸಿದ ಮಿಶ್ರಣದಲ್ಲಿ ಅದ್ದಿ, ನಿಧಾನವಾಗಿ ಹಲ್ಲುಗಳನ್ನು ಉಜ್ಜಿ.

ಹೈಡ್ರೋಜೆನ್ ಪರಾಕ್ಸೈಡ್

ಹೈಡ್ರೋಜೆನ್ ಪರಾಕ್ಸೈಡ್

ಹೈಡ್ರೋಜೆನ್ ಪರಾಕ್ಸೈಡಿನ ಕೆಲವೇ ಹನಿಗಳನ್ನು ಬೆಚ್ಚಗಿನ ನೀರಿನಲ್ಲಿ ಹಾಕಿ ಕಲಿಸಿ. ಬಾಯಿಯನ್ನು ಈ ದ್ರವದಿಂದ ಚೆನ್ನಾಗಿ ಮುಕ್ಕಳಿಸಿ. ಹಲ್ಲಿನ ಬಣ್ಣ ನೋಡಿ ಒಮ್ಮೆಲೆ ಹೆದರಬೇಡಿ. ಚೆನ್ನಾಗಿ ತಣ್ಣನೆಯ ನೀರಿನಿಂದ ಸ್ವಲ್ಪ ಹೊತ್ತಿನ ನಂತರ ಮತ್ತೆ ಮುಕ್ಕಳಿಸಿ. ಸ್ವಚ್ಛವಾದ ದಂತಪಂಕ್ತಿಗಳು ಕಾಣುವವು.

ಹೈಡ್ರೋಜೆನ್ ಪರಾಕ್ಸೈಡ್

ಹೈಡ್ರೋಜೆನ್ ಪರಾಕ್ಸೈಡ್

ಈಗ ಟೂಥ್‌ಪಿಕ್‌ನಿಂದ ಹಲ್ಲಿನ ಸಂದಿಗಳನ್ನು ಸ್ವಚ್ಛಗೊಳಿಸಿ. ಮತ್ತೊಮ್ಮೆ ತಣ್ಣನೆಯ ನೀರಿನಿಂದ ಮುಕ್ಕಳಿಸಿ.

ಸಲಹೆ

ಸಲಹೆ

ಈಗೀಗ ನಾವು ಸಂಪೂರ್ಣ ದೇಹದ 'ಡಿಟಾಕ್ಸಿಫಿಕೇಶನ್' ಬಗ್ಗೆ ತುಂಬ ಕೇಳುತ್ತಿದ್ದೇವೆ. ಅದೇ ತರಹ ಹಲ್ಲಿನ 'ಡಿಟಾಕ್ಸಿಫಿಕೇಶನ್' ಬಗ್ಗೆ ಕೇಳಿದ್ದೀರಾ? ಅದಕ್ಕೆ 'ಆಯಿಲ್ ಪುಲ್ಲಿಂಗ್' ಎನ್ನುತ್ತಾರೆ. ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಅಥವ ಸನ್‌ಫ್ಲವರ್‌ನ ಎಣ್ಣೆ ಉಪಯೋಗಿಸಿ ಖಾಲಿ ಹೊಟ್ಟೆಯಲ್ಲಿ ಬಾಯಿ ಮುಕ್ಕಳಿಸಿದರೆ ದಂತಪಂಕ್ತಿಗಳು ಆರೋಗ್ಯದಿಂದ ನಳನಳಿಸುವವು! ದುರ್ನಾತವೂ ಮಂಗಮಾಯ!!

English summary

How to prepare your own mouth wash to kill bacteria?

Regular brushing and flossing are the basics of oral hygiene. But you need something else to keep your mouth and teeth clean. Mouth wash can help. But most of the products are expensive and they also contain harsh chemicals. Is there any natural method that is anti-bacterial? Here is a method which can help in preventing cavities and bad breath.
X
Desktop Bottom Promotion