Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಿಗರೇಟ್-ಕಾಫಿಯಿಂದ ಹಲ್ಲು ಹಳದಿಯಾಗಿದೆಯೇ? ಇಲ್ಲಿದೆ ನೋಡಿ ಮನೆಮದ್ದುಗಳು
ಹಲ್ಲುಗಳು ಬಿಳಿ ಹಾಗೂ ಹೊಳೆಯುತ್ತಾ ಇದ್ದರೆ ನಿಮ್ಮ ಸೌಂದರ್ಯವು ಮೂರು ಪಟ್ಟು ಹೆಚ್ಚುವುದು. ಅದೇ ಹಳದಿ ಹಲ್ಲುಗಳು ಕಾಣಿಸಿದರೆ ಅದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಕುಸಿಯುವುದು. ಹಲ್ಲುಗಳ ಆರೈಕೆ ತುಂಬಾ ಮುಖ್ಯ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ.
ನಾವು ತಿನ್ನುವಂತಹ ಆಹಾರ ತುಂಡರಿಸಬೇಕಾದರೆ ಹಲ್ಲುಗಳು ಬೇಕೇಬೇಕು. ಹಲವಾರು ಕಾರಣಗಳಿಂದಾಗಿ ಹಲ್ಲುಗಳ ಬಣ್ಣವು ಹಳದಿಯಾಗುವುದು. ವಿಟಮಿನ್ ಡಿ ಕೊರತೆ, ಚಹಾ ಸೇವನೆ, ಧೂಮಪಾನ, ಕಾಫಿ ಇತ್ಯಾದಿಗಳು ಹಲ್ಲು ಹಳದಿಯಾಗಲು ಕಾರಣಗಳು. ಹಲ್ಲುಗಳನ್ನು ಬಿಳಿಯಾಗಿಸಬೇಕೆಂದರೆ ಸುಮಾರು ಖರ್ಚು ಬರುವುದು. ಕಡಿಮೆಯೆಂದರೆ ನಾಲ್ಕು ಸಾವಿರ ರೂಪಾಯಿ ನಿಮ್ಮ ಕಿಸೆಯಲ್ಲಿದ್ದರೆ ಹಲ್ಲು ಬಿಳಿ ಮಾಡಲು ಸಾಧ್ಯ. ಆದರೆ ಬೋಲ್ಡ್ ಸ್ಕೈ ಹೇಳಿಕೊಡುತ್ತಿರುವ ವಿಧಾನದಿಂದ ನೀವು ಹೆಚ್ಚಿನ ಖರ್ಚಿಲ್ಲದೆ ಹಲ್ಲುಗಳನ್ನು ಬಿಳಿಯಾಗಿಸಬಹುದು. ಇದು ತುಂಬಾ ಸರಳ, ಹಣ ಮತ್ತು ಸಮಯ ಉಳಿಸುವುದು...

ಈ ಸಾಮಾಗ್ರಿ ಬಳಸಿಕೊಳ್ಳಿ
ಉಪ್ಪು, ತೆಂಗಿನೆಣ್ಣೆ, ಅಡುಗೆಸೋಡಾ ಮತ್ತು ಲಿಂಬೆರಸ

ಪೇಸ್ಟ್ ಮಾಡಿಕೊಳ್ಳುವ ವಿಧಾನ
ಒಂದು ಚಮಚ ಉಪ್ಪು, ಒಂದು ಚಮಚ ತೆಂಗಿನೆಣ್ಣೆ ಮತ್ತು ಅರ್ಧ ಚಮಚ ಅಡುಗೆ ಸೋಡಾ ಜತೆಯಾಗಿ ಸೇರಿಸಿ. ಇದಕ್ಕೆ ಮೂರು ಚಮಚ ಲಿಂಬೆರಸ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ.

ಬಳಸುವ ವಿಧಾನ
ಎರಡು ನಿಮಿಷ ಕಾಲ ಈ ಪೇಸ್ಟ್‌ನಿಂದ ಹಲ್ಲುಜ್ಜಿರಿ ಮತ್ತು ಬಳಿಕ ಬಾಯಿ ತೊಳೆಯಿರಿ. ವಾರದಲ್ಲಿ ಎರಡು ದಿನ ಎರಡು ನಿಮಿಷಕ್ಕಿಂತ ಹೆಚ್ಚು ಈ ಪೇಸ್ಟ್‌ನಿಂದ ಹಲ್ಲುಜ್ಜಬೇಡಿ.

ಲಾಭಗಳು
ಈ ಪೇಸ್ಟ್ ಹಲ್ಲುಗಳಲ್ಲಿ ಇರುವ ಪದರ ಮತ್ತು ಕಲೆಗಳ ನಿವಾರಣೆ ಮಾಡುವುದು. ಹಲ್ಲುಗಳನ್ನು ಬ್ಲೀಚ್ ಮಾಡಿ ಬಿಳಿಯಾಗಿಸುವುದು.

ಕಹಿ ಬೇವು
ಒ೦ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿರಿ, ಇದಕ್ಕೆ ಒ೦ದು ಅಥವಾ ಎರಡು ಹನಿಗಳಷ್ಟು ಲಿ೦ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ೦ದ ನಿಮ್ಮ ಹಳದಿ ದ೦ತಪ೦ಕ್ತಿಗಳನ್ನು ಮಾಲೀಸು ಮಾಡಿಕೊಳ್ಳುವುದರ ಮೂಲಕ ಅದನ್ನು ಬಿಳುಪಾಗಿಸಿರಿ. ಫಲಿತಾ೦ಶವು ಗಮನಾರ್ಹವಾಗಿ ಕ೦ಡುಬರುವ೦ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ೦ದು ಬಾರಿ ಕೈಗೊಳ್ಳಿರಿ.

ಅರಿಶಿನ ಮತ್ತು ತೆಂಗಿನೆಣ್ಣೆ
ಸ್ವಲ್ಪ ಅರಿಶಿನವನ್ನು ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡಿ ಮತ್ತು ಇದರಿಂದ ಹಲ್ಲು ತಿಕ್ಕಿರಿ. ಐದು ನಿಮಿಷಗಳ ತರುವಾಯ ಹಲ್ಲುಗಳನ್ನು ತೊಳೆದುಕೊಳ್ಳಿ. ಹಳದಿ ಕಲೆಯನ್ನು ಹೋಗಲಾಡಿಸಲು ನಿಯಮಿತವಾಗಿ ಈ ವಿಧಾನವನ್ನು ಅನುಸರಿಸಿ... ಇಲ್ಲದಿದ್ದರೆ ಇನ್ನೊಂದು ವಿಧಾನವಿದೆ ಅರಿಶಿನವನ್ನು ಹಾಲಿನೊಂದಿಗೆ ಚೆನ್ನಾಗಿ ಬೆರೆಸಿ. ಆ ಪೇಸ್ಟನ್ನು ಹಲ್ಲುಗಳಿಗೆ ಲೇಪಿಸಿ. 3 ನಿಮಿಷಗಳ ನಂತರ ಹಲ್ಲುಗಳನ್ನು ಚೆನ್ನಾಗಿ ತೊಳೆಯಿರಿ.



Click it and Unblock the Notifications
