Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೊಳ್ಳೆಯಿಂದ ಹರಡುವ ಇನ್ನೊಂದು ಭಯಾನಕ ರೋಗ 'ಝಿಕಾ'
ಇತ್ತೀಚೆಗೆ ನಮ್ಮನ್ನು ಭಯದ ಕೂಪಕ್ಕೆ ತಳ್ಳಿದ ಸೋಂಕೆಂದರೆ ಝಿಕಾ. ಹಲವು ದೇಶದಾದ್ಯಂತ ಕಾಣಿಸಿಕೊಳ್ಳುತ್ತಿರುವ ಈ ಸೋಂಕು ಸೊಳ್ಳೆಯಿಂದ ಬರುತ್ತದೆ. ಈ ಸೋಂಕಿಗೆ ತುತ್ತಾದರೆ ಏನಾಗುವುದು? ಮುಂಜಾಗ್ರತಾ ಕ್ರಮಗಳು ಯಾವುದು? ಎನ್ನುವ ಪ್ರಶ್ನೆ ಮನಸ್ಸಿಗೆ ಬಂದಿದ್ದರೆ, ಈ ಮುಂದಿನ ಮಾಹಿತಿಯನ್ನು ಓದಿ...
ಝಿಕಾ ವೈರಸ್ 1947ರಲ್ಲಿ ಉಗಾಂಡಾದ ಮಂಗಗಳಲ್ಲಿ ಕಂಡುಬಂದಿತು. ನಂತರ 1952ರಲ್ಲಿ ಮಾನವರಿಗೂ ಹರಡಿರುವುದು ಬೆಳಕಿಗೆ ಬಂತು. ಅದಾದ ನಂತರ 2007ರಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿತು. ಬಳಿಕ ಹೆಚ್ಚಿನ ತೊಡಕಿನೊಂದಿಗೆ 2015ರಿಂದ ಸರ್ವವ್ಯಾಪಿಯಾಗಿ ಕಾಣಿಸಿಕೊಂಡಿತು. ಸುಮಾರು 46 ದೇಶದಲ್ಲಿ ಇದನ್ನು ಗುರುತಿಸಲಾಗಿದೆ ಎನ್ನಲಾಗುತ್ತದೆ. ಈ ಸೋಂಕಿನಿಂದ ರೋಗನಿರೋಧಕ ಶಕ್ತಿ ಕುಗ್ಗುವುದು ಮತ್ತು ಸ್ನಾಯುಗಳ ದೌರ್ಬಲ್ಯ ಉಂಟಾಗುತ್ತದೆ ಎನ್ನಲಾಗುತ್ತದೆ...

ಸೊಳ್ಳೆ ಕಡಿತ
ಝಿಕಾ ಸೋಂಕು ಸೊಳ್ಳೆ ಕಡಿತದಿಂದ ಹರಡುತ್ತದೆ. ಏಡಿಸ್ ಈಜಿಪ್ತಿ ಎನ್ನುವ ಸೋಂಕಿತ ಹೆಣ್ಣು ಸೊಳ್ಳೆಯಿಂದ ಈ ರೋಗ ಹರಡುವುದು. ಚಿಕನ್‍ಗುನ್ಯಾ, ಡೆಂಗ್ಯೂ, ಮತ್ತು ಕಾಮಲೆಯ ಜ್ವರದಂತೆ ಇದು ಕಾಡುತ್ತದೆ.

ಲೈಂಗಿಕತೆ
ಇದು ಲೈಂಗಿಕತೆಯ ಮೂಲಕವೂ ಹರಡಬಲ್ಲದು. ವೀರ್ಯ, ರಕ್ತ, ಮೂತ್ರ, ಲವಣ, ಮೆದುಳು ಮತ್ತು ಬೆನ್ನುಹುರಿಗಳಲ್ಲಿ ಕಂಡು ಬರುವ ದೇಹ ದ್ರವಗಳಲ್ಲಿ ಝಿಕಾ ವೈರಸ್‍ಅನ್ನು ಪತ್ತೆಹಚ್ಚಲಾಗಿದೆ. ಗರ್ಭಾವಸ್ಥೆಯಲ್ಲಿ ತಾಯಿಗೆ ಈ ಸೋಂಕು ತಗುಲಿದರೆ ಮಗುವಿಗೂ ಹರಡುವುದು ಎನ್ನಲಾಗುತ್ತದೆ.

ರಕ್ತದಾನ
ರಕ್ತ ಪಡೆಯುವುದರಿಂದಲೂ ಈ ಸೋಂಕು ಹರಡುವುದು. ಸೋಂಕಿತ ವ್ಯಕ್ತಿಯ ರಕ್ತದಲ್ಲಿ ಈ ವೈರಸ್ ಇರುತ್ತದೆ. ಹಾಗಾಗಿ ರಕ್ತ ಪಡೆಯುವ ಮೊದಲು ಸೂಕ್ತ ರೀತಿಯ ರಕ್ತ ಪರೀಕ್ಷೆ ಮಾಡಿಯೇ ಪಡೆಯಬೇಕು. ಈ ವಿಚಾರವಾಗಿ ಇನ್ನೂ ತನಿಖಾ ಅಧ್ಯಯನಗಳು ನಡೆಯುತ್ತಿವೆ.

ಝಿಕಾ ವೈರಸ್‍ನ ಲಕ್ಷಣಗಳು
ಈ ಸೋಂಕು ತಗುಲಿದ ಮೇಲೆ ಸಣ್ಣ ಜ್ವರ, ದದ್ದುಗಳು, ಸ್ನಾಯು ನೋವು, ಸಂಧಿಗಳ ನೋವು, ತಲೆನೋವು ಹಾಗೂ ಹೆಚ್ಚಿನ ಆಯಾಸ ಉಂಟಾಗುವುದು. ಈ ರೋಗ ಲಕ್ಷಣಗಳು ಅಧಿಕ ಅವಧಿಯವರೆಗೂ ಇರುವ ಸಾಧ್ಯತೆ ಇರುತ್ತದೆ. ಸ್ಥಳೀಯ ದೇಶಗಳ ಪ್ರವಾಸ ಕೈಗೊಳ್ಳುವಾಗ ಅಧಿಕ ಮುಂಜಾಗ್ರತೆ ವಹಿಸಬೇಕಾಗುವುದು. ಇಲ್ಲವಾದರೆ ಅಲ್ಲಿಯ ಪರಿಸರದಿಂದಲೂ ಸೋಂಕು ತಗುಲಬಹುದು.



Click it and Unblock the Notifications
