ಬಿಸಿ ನೀರು-ನಿಂಬೆ ರಸದ ಮಹಿಮೆ ತಿಳಿಯಬೇಕಾದರೆ ಈ ಲೇಖನ ಓದಿ

By: Divya
Subscribe to Boldsky

ನಮ್ಮ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ ಕೇವಲ ಆಹಾರ ಮತ್ತು ವ್ಯಾಯಾಮ ಪ್ರಕ್ರಿಯೆ ಸರಿಯಾಗಿ ಇದ್ದರೆ ಸಾಲದು. ನಮ್ಮ ದೈನಂದಿನ ದಿನಚರಿಯೂ ಸೂಕ್ತ ರೀತಿಯಲ್ಲಿ ಇರಬೇಕು. ದಿನವಿಡೀ ನಿರಂತರವಾಗಿ ಕೆಲಸ ಮಾಡುವ ನಮ್ಮ ದೇಹದ ಒಳಾಂಗಗಳಿಗೆ ಅನುಕೂಲವಾಗುತ್ತದೆ. ಆಗ ಎಲ್ಲಾ ಅಂಗಾಂಗಗಳು ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸುತ್ತವೆ. ಜೊತೆಗೆ ಅನೇಕ ರೋಗಗಳು ಬರದಂತೆ ತಡೆಯುತ್ತವೆ. ಅಂತಹ ಉತ್ತಮ ದಿನಚರಿಯಲ್ಲಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಮತ್ತು ನಿಂಬೆ ರಸದ ಮಿಶ್ರಣವನ್ನು ಸೇವಿಸುವುದು.

ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ಇದು ಜೀರ್ಣಕ್ರಿಯೆಯ ಆರಂಭಕ್ಕೆ ಪೂರಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಖನಿಜಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ಹೆಚ್ಚಿಸುವುದರೊಂದಿಗೆ ಅನೇಕ ಆರೋಗ್ಯಕರ ಬದಲಾವಣೆಗೆ ಅನುಕೂಲ ಕಲ್ಪಿಸಿಕೊಡುತ್ತದೆ. ವಿಟಮಿನ್ ಸಿ ಸಮೃದ್ಧವಾಗಿ ಹೊಂದಿರುವ ನಿಂಬೆ ರಸವನ್ನು ಬಿಸಿನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ದೇಹದಲ್ಲಿ ಡಿ-ಲಿಮೋನೆನ್ ಎನ್ನುವ ಉತ್ಕರ್ಷಣ ನಿರೋಧಕವನ್ನು ಹೆಚ್ಚಿಸುತ್ತದೆ. ಇದರೊಟ್ಟಿಗೆ ಪಿತ್ತಕೋಶದ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ.

ಲಿಂಬೆ+ಜೇನು ಬೆರೆಸಿದ ನೀರು ಸೇವಿಸಿ-ತೂಕ ಇಳಿಸಿಕೊಳ್ಳಿ!

ಯಕೃತ್ತಿನಲ್ಲಿರುವ ಹಾನಿಕಾರಕ ಸಂಯುಕ್ತಗಳನ್ನು ಹೊರ ಹಾಕಲು ಸಹಾಯ ಮಾಡುವ ಈ ಪಾನೀಯ ನಮ್ಮ ಆರೋಗ್ಯದಲ್ಲಾಗುವ ಕೆಲವು ತೊಂದರೆಗಳಿಗೂ ಉತ್ತಮ ಆರೈಕೆಯನ್ನು ನೀಡುತ್ತದೆ. ಅವು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ... ಮುಂದೆ ಓದಿ...

ಟಾಕ್ಸಿನ್ ಹೊರ ಹಾಕಲು ಸಹಾಯ

ಟಾಕ್ಸಿನ್ ಹೊರ ಹಾಕಲು ಸಹಾಯ

ಈ ಮಿಶ್ರಣದಲ್ಲಿ ಸಾಕಷ್ಟು ಆಮ್ಲೀಯ ಗುಣಗಳಿರುವುದರಿಂದ ಇದನ್ನು ಕ್ಷಾರೀಯ(ಆಲ್ಕೈನ್) ಪಾನೀಯದ ಉತ್ತಮ ಮೂಲ ಎಂದು ಹೇಳಬಹುದು. ಇದು ದೇಹದ ಪಿಎಚ್‍ಅನ್ನು ಸಮತೋಲನಗೊಳಿಸುತ್ತದೆ. ಯಕೃತ್ತಿನಲ್ಲಿರುವ ಟಾಕ್ಸಿನ್‍ಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ನಿತ್ಯವೂ ಬಿಸಿ ನೀರು ಮತ್ತು ನಿಂಬೆಯ ಮಿಶ್ರಣವನ್ನು ಸೇವಿಸುವುದು ಒಂದು ಉತ್ತಮ ಅಭ್ಯಾಸ ಎನ್ನಬಹುದು.

 ಜೀರ್ಣಕ್ರಿಯೆಗೆ ಸಹಾಯ

ಜೀರ್ಣಕ್ರಿಯೆಗೆ ಸಹಾಯ

ಈ ಶಕ್ತಿಯುತವಾದ ಪಾನೀಯವನ್ನು ಸೇವಿಸುವುದರಿಂದ ಜೀರ್ಣಾಂಗವ್ಯೂಹ ಉತ್ತೇಜನಗೊಳ್ಳುತ್ತದೆ. ದಿನವಿಡೀ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆಹಾರವೂ ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತದೆ. ಹಾಗಾಗಿ ನಿತ್ಯವೂ ಬಿಸಿ ನೀರನ್ನು ಸೇವಿಸುವುದು ಒಂದು ಬುದ್ಧಿವಂತಿಕೆಯೂ ಹೌದು.

ತೂಕ ಇಳಿಸಲು ಬೆಂಬಲಿಸುತ್ತದೆ

ತೂಕ ಇಳಿಸಲು ಬೆಂಬಲಿಸುತ್ತದೆ

ನಿಂಬೆ ರಸವು ಪೆಕ್ಟಿನ್‍ಅನ್ನು ಒಳಗೊಂಡಿರುತ್ತದೆ. ದೈನಂದಿನ ಆಹಾರದಲ್ಲಿ ಅಗತ್ಯಕ್ಕಿಂತ ಹೆಚ್ಚಾದ ಕ್ಯಾಲೋರಿಯನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಅಗತ್ಯವಾದ ನಾರಿನಂಶವನ್ನು ಉತ್ತೇಜಿಸುತ್ತದೆ. ಉನ್ನತ ಆರೋಗ್ಯ ಪರಿಕಲ್ಪನೆಗೆ ಈ ಮಿಶ್ರಣ ದಿವ್ಯ ಔಷಧ ಎನ್ನಬಹುದು.

ಹೊಟ್ಟೆಯ ಆರೋಗ್ಯದ ಕಾಳಜಿ

ಹೊಟ್ಟೆಯ ಆರೋಗ್ಯದ ಕಾಳಜಿ

ಹೊಟ್ಟೆಯುಬ್ಬರ, ಎದೆಯುರಿ, ಗ್ಯಾಸ್‍ನಂತಹ ಸಮಸ್ಯೆಗೆ ಬಿಸಿ ನೀರು ಮತ್ತು ಲಿಂಬೆಯ ಮಿಶ್ರಣವು ಉತ್ತಮ ಪರಿಹಾರವನ್ನು ನೀಡುತ್ತದೆ. ಈ ಬಿಸಿ ನೀರು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಿ, ಆಮ್ಲತೆಯನ್ನು ಕಡಿಮೆ ಮಾಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚುವುದು

ರೋಗ ನಿರೋಧಕ ಶಕ್ತಿ ಹೆಚ್ಚುವುದು

ನಿಂಬೆಯಲ್ಲಿ ಸಿ ಜೀವಸತ್ವ ಹೆಚ್ಚಿರುತ್ತದೆ. ಇದು ದೇಹಕ್ಕೆ ಉಂಟಾಗುವ ಶೀತ, ಉರಿಯೂತಗಳಂತಹ ಸಮಸ್ಯೆಯನ್ನು ಪರಿಹರಿಸುತ್ತದೆ. ಈ ಮಿಶ್ರಣವು ಪೊಟ್ಯಾಶಿಯಂನೊಂದಿಗೆ ಪುಷ್ಟೀಕರಿಸಿ ಮೆದುಳು ಮತ್ತು ನರ ವ್ಯವಸ್ಥೆಯ ಕಾರ್ಯ ಚಟುವಟಿಕೆಗೆ ಸಹಾಯ ಮಾಡುವುದು. ದೇಹಕ್ಕೆ ಅಂಟಿಕೊಳ್ಳುವ ಚಿಕ್ಕ ಪುಟ್ಟ ಸಮಸ್ಯೆಗಳು ಬರದಂತೆ ತಡೆಯುತ್ತದೆ.

ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ

ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ

ನಿತ್ಯವು ಬಿಸಿ ನೀರು ಮತ್ತು ನಿಂಬೆಯ ಮಿಶ್ರಣವನ್ನು ಸೇವಿಸುವುದರಿಂದ ದೇಹದಲ್ಲಿರುವ ಆಸಿಡಿಟಿ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೆ ಮೂಳೆಗಳ ಸಂಧಿಯಲ್ಲಿ ಸಂಗ್ರಹವಾಗುವ ಯೂರಿಕ್ ಆಸಿಡ್‍ಅನ್ನು ತೆಗೆಯಲು ಸಹಾಯ ಮಾಡುತ್ತದೆ.

ಮನಸ್ಸು ಹೆಚ್ಚು ಉತ್ಸಾಹದಲ್ಲಿರುತ್ತದೆ

ಮನಸ್ಸು ಹೆಚ್ಚು ಉತ್ಸಾಹದಲ್ಲಿರುತ್ತದೆ

ಈ ಮಿಶ್ರಣವು ದೇಹಕ್ಕೆ ಋಣಾತ್ಮಕ ಪರಿಣಾಮ ಬೀರುವುದರಿಂದ ಜೀರ್ಣಾಂಗ ವ್ಯವಸ್ಥೆ ಸೇರಿದಂತೆ ದೇಹದ ಅಂಗಾಂಗಗಳು ಹೆಚ್ಚು ಶಕ್ತಿಯುತವಾಗಿ ಕೆಲಸ ನಿರ್ವಹಿಸುತ್ತವೆ. ಇದರಿಂದ ಮನಸ್ಸು ಯಾವುದೇ ತೊಂದರೆಗೆ ಒಳಗಾಗದೆ ಹೆಚ್ಚು ಉತ್ಸಾಹದಲ್ಲಿರುತ್ತದೆ.

 ಹಲ್ಲಿನ ಕುರಿತು ಸ್ವಲ್ಪ ಕಾಳಜಿ

ಹಲ್ಲಿನ ಕುರಿತು ಸ್ವಲ್ಪ ಕಾಳಜಿ

ನಿಂಬೆಯಲ್ಲಿ ಸಿಟ್ರಿಕ್ ಆಸಿಡ್ ಹೆಚ್ಚಾಗಿ ಇರುವುದರಿಂದ ಇದು ಹಲ್ಲಿನ ದಂತ ಕವಚವನ್ನು ಹಾಳುಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಂಬೆ ನೀರನ್ನು ಕುಡಿದ ತಕ್ಷಣ ಹಲ್ಲುಜ್ಜಬಾರದು. ಹಲ್ಲುಜ್ಜಿದ ನಂತರ ಕುಡಿಯುವುದು ಅಥವಾ ಮಿಶ್ರಣವನ್ನು ಸೇವಿಸಿದ ನಂತರ ಸ್ವಲ್ಪ ಕಾಲದ ನಂತರ ಹಲ್ಲುಜ್ಜುವ ಪ್ರಕ್ರಿಯೆ ಹೊಂದಬೇಕಾಗುತ್ತದೆ.

English summary

Hot Lemon Water Benefits & Why You Need To Have It Morning

In this article, we have mentioned some of the top health benefits of hot lemon water. Read further to know more about the benefits of hot lemon water and if it's good to be consumed every morning.
Story first published: Saturday, August 12, 2017, 7:02 [IST]
Subscribe Newsletter