Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹದ ಕೊಬ್ಬು ಕರಗಿಸಿ, ಶಕ್ತಿ ಹೆಚ್ಚಿಸುವ ಜೇನುತುಪ್ಪ+ಲಿಂಬೆ ಸೀರಮ್!
ಮನೆಯಲ್ಲಿ ತಯಾರಿಸುವ ಜೇನುತುಪ್ಪ ಮತ್ತು ಲಿಂಬೆಯ ಸೀರಮ್ ಕೊಬ್ಬು ಕರಗಿಸುವುದಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು
ಪದೇ ಪದೇ ನೀವು ಜ್ವರ ಮತ್ತು ಶೀತದಿಂದ ತೊಂದರೆ ಅನುಭವಿಸಿ ವೈದ್ಯರಲ್ಲಿಗೆ ಚಿಕಿತ್ಸೆ ಹೋಗುತ್ತಾ ಇದ್ದರೆ ನೀವು ಲೇಖನ ಓದಲೇಬೇಕು.
ಇಂತಹ ಸಮಸ್ಯೆಯಿರುವವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿದೆ ಎಂದು ಹೇಳಲಾಗುತ್ತದೆ. ವೈದ್ಯರಲ್ಲಿ ಪದೇ ಪದೇ ಚಿಕಿತ್ಸೆಗೆ ಹೋಗುವ ಬದಲು ಮನೆಯಲ್ಲೇ ತಯಾರಿಸಿದ ಸೀರಮ್ ಬಳಸುವುದರಿಂದ ನಿಮ್ಮ ಸಮಸ್ಯೆ ಪರಿಹಾರವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಇಲ್ಲಿ ನೈಸರ್ಗಿಕವಾದ ಮನೆಮದ್ದಿಗೆ ಬಳಸುತ್ತಾ ಇರುವುದು ಲಿಂಬೆರಸ ಮತ್ತು ಜೇನುತುಪ್ಪ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಸೀರಮ್ ತೂಕ ಕಳೆದುಕೊಳ್ಳಲು ನಿಮಗೆ ನೆರವಾಗುವುದು.

ಲಿಂಬೆಯಲ್ಲಿ ವಿಟಮಿನ್ ಸಿಯಂತಹ ತುಂಬಾ ಬಲಶಾಲಿ ಆ್ಯಂಟಿಆಕ್ಸಿಡೆಂಟ್ ಇದೆ. ಇದು ದೇಹ ಶುದ್ದೀಕರಿಸುವುದು. ಜೇನುತುಪ್ಪದಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿಯಾಗಿಯೂ ಕೆಲಸ ಮಾಡುವುದು. ಈ ಸೀರಮ್ ಗೆ ಶುಂಠಿ ಬಳಸಿಕೊಂಡರೆ ಮತ್ತಷ್ಟು ಒಳ್ಳೆಯದು.
ಇದರಲ್ಲಿ ಹಲವಾರು ರೀತಿಯ ಚಿಕಿತ್ಸಕ ಗುಣಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಇದೆ. ಇದು ಉರಿಯೂತ ಉಂಟು ಮಾಡುವ ಅಂಶಗಳನ್ನು ನಿವಾರಣೆ ಮಾಡುವುದು. ಗಂಟಲು ನೋವಿಗೂ ಈ ಸೀರಮ್ ತುಂಬಾ ಒಳ್ಳೆಯದು. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಿ ತೂಕ ಕಳೆದುಕೊಳ್ಳಲು ನೆರವಾಗುವುದು.
ಬೇಕಾಗುವ ಸಾಮಗ್ರಿಗಳು
ಲಿಂಬೆ
ಹಸಿ ಜೇನುತುಪ್ಪ
ಸಿಪ್ಪೆ ತೆಗೆದು ಕತ್ತರಿಸಿದ ಶುಂಠಿ
ಒಂದು ಗಾಜಿನ ಶುದ್ಧ ಜಾರ್
ವಿಧಾನ
ಲಿಂಬೆ ಮತ್ತು ಶುಂಠಿ ಕತ್ತರಿಸಿಕೊಂಡು ಜಾರ್ ಗೆ ಹಾಕಿ. ಲಿಂಬೆ ಮತ್ತು ಶುಂಠಿಯನ್ನು ಕಳಸಿಕೊಂಡರೆ ರಸ ಬರುವುದು. ಈ ಜಾರ್ ಗೆ ¾ ಭಾಗದಷ್ಟು ಲಿಂಬೆರಸ ಹಾಕಿ. ಉಳಿದ ¼ ಭಾಗ ಜೇನುತುಪ್ಪ ತುಂಬಿಸಿ ಎಲ್ಲವನ್ನು ಸರಿಯಾಗಿ ಕಲಸಿಕೊಳ್ಳಿ. ಇದರ ಮುಚ್ಚಲ ಮುಚ್ಚಿಕೊಂಡು ಫ್ರಿಡ್ಜ್‌ನಲ್ಲಿ ಇಟ್ಟುಬಿಡಿ. ಇದು ತಯಾರಾಗುವ ತನಕ ಕಾಯಿರಿ. ತಯಾರಾದ ಬಳಿಕ ಇದರ ಒಂದು ಚಮಚ ತೆಗೆದು ಬಿಸಿ ನೀರಿಗೆ ಹಾಕಿಕೊಂಡು ದಿನವಿಡಿ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


