Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ಹೊಟ್ಟೆ ಭಾಗದ ಕೊಬ್ಬು ಹೀಗೂ ಕರಗುವುದು ನೋಡಿ...
ನಾವು ಸೇವಿಸುತ್ತಿರುವ ಆಹಾರಗಳೆಲ್ಲವೂ ಜಂಕ್ ಫುಡ್ ಹಾಗೂ ಅನಾರೋಗ್ಯಕರ ಕ್ಯಾಲೋರಿಗಳಿಂದ ಆವರಿಸಿಕೊಂಡಿದೆ. ನಾವು ಅದೆಷ್ಟೇ ಆರೋಗ್ಯಕರ ಆಹಾರವನ್ನು ಸೇವಿಸಬೇಕು ಅಂದುಕೊಂಡರೂ ಸಾಧ್ಯವಾಗುವುದಿಲ್ಲ. ಸ್ವಯಂ ಅಡುಗೆ ತಯಾರಿಸುವಲ್ಲಿ ನಿರುತ್ಸಾಹ ಹಾಗೂ ಕೆಲಸದ ಗಡಿಬಿಡಿಯಿಂದ ರೆಡಿಮೇಡ್ ಆಹಾರ ಉತ್ಪನ್ನಗಳನ್ನು ಸೇವಿಸುತ್ತೇವೆ. ಇದರ ಪರಿಣಾಮವಾಗಿ ದೇಹದಲ್ಲಿ ಅನಗತ್ಯ ಕೊಬ್ಬಿನಂಶಗಳ ಶೇಖರಣೆ ಅಧಿಕ ಪ್ರಮಾಣದಲ್ಲಿ ಆಗುತ್ತದೆ.
ದೇಹಕ್ಕೆ ಬೇಕಾದ ಪ್ರೋಟೀನ್ ವಿಟಮಿನ್‍ಗಳು ಸೂಕ್ತ ರೀತಿಯಲ್ಲಿ ದೊರೆಯದೆ ಅನುಪಯುಕ್ತ ಕೊಬ್ಬಿನಂಶಗಳು ದೇಹದ ಕೆಲವು ಭಾಗಗಳಲ್ಲಿ ಶೇಖರಣೆಯಾಗುತ್ತವೆ. ಪುರುಷರಿಗಿಂತ ಮಹಿಳೆಯರಿಗೆ ಕೊಬ್ಬಿನಂಶ ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಯಾಗುತ್ತದೆ. ಸೂಕ್ತ ವ್ಯಾಯಾಮಗಳು ಅಥವಾ ದೈಹಿಕ ಶ್ರಮಗಳಿಲ್ಲದಿರುವಾಗ ಕೊಬ್ಬು ಕರಗುವುದಿಲ್ಲ. ಬದಲಿಗೆ ಒಂದೊಂದೇ ಕಾಯಿಲೆಗಳು ದೇಹಕ್ಕೆ ಅಂಟಿಕೊಳ್ಳಲು ಪ್ರಾರಂಭಿಸುತ್ತವೆ.
ಹೊಟ್ಟೆ ಭಾಗದಲ್ಲಿ ಕೊಬ್ಬು ಶೇಖಣೆಯಾಗುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಗೆ ದೇಹದ ಆಕಾರವೂ ಹಾಳಾಗುತ್ತದೆ. ಅಲ್ಲದೆ ನಮಗೆ ಬೇಕೆನಿಸಿ ಉಡುಗೆಯನ್ನು ತೊಡುವುದಕ್ಕೂ ಕಷ್ಟವಾಗುತ್ತದೆ. ಕೆಲವೊಮ್ಮೆ ತೊಟ್ಟ ಉಡುಗೆಯೂ ಅಸಹ್ಯವಾಗಿ ತೋರುವ ಸಾಧ್ಯತೆಗಳೇ ಹೆಚ್ಚು. ನೀವು ಈ ಬಗೆಯ ಸಮಸ್ಯೆಯನ್ನು ನಿತ್ಯವೂ ಎದುಸುತ್ತಿದ್ದೀರಿ. ದೇಹದ ಫಿಟ್‍ನೆಸ್ ಕಾಪಾಡಿಕೊಳ್ಳಲು ಬೇಕಾದ ವ್ಯಾಯಾಮವನ್ನು ಮಾಡಲು ಸಾಧ್ಯವಾಗದಿದ್ದರೆ ಈ ಕೆಳಗಿನ ಕ್ರಮವನ್ನು ಅನ್ವಯಿಸಿ. ಬಹುಬೇಗ ಕೊಬ್ಬು ಕರಗುವುದು....

ನಿಂಬೆಯ ಜೊತೆ ಬೆಚ್ಚಗಿನ ನೀರು
ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ನಿಂಬೆ ರಸ, ಉಪ್ಪು ಅಥವಾ ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು. ಹೀಗೆ ನಿತ್ಯವೂ ಮಾಡುವುದರಿಂದ ಬಹು ಬೇಗ ಹೊಟ್ಟೆ ಭಾಗದ ಕೊಬ್ಬು ಹಾಗೂ ದೇಹದ ಇನ್ನಿತ ಭಾಗದಲ್ಲಿ ಶೇಖರಣೆಗೊಂಡ ಕೊಬ್ಬಿನಂಶವು ಕರಗುವುದು.
ಇನ್ನೊಂದು ಟಿಪ್ಸ್
ಬೆಚ್ಚಗಿನ ನೀರಿಗೆ ಲಿಂಬೆ ರಸವನ್ನು ಹಿಂಡಿಕೊಂಡು ಪ್ರಾತಃ ಕಾಲದಲ್ಲಿ ನಿತ್ಯವೂ ಸೇವಿಸಿದರೆ ನಿಮ್ಮ ಕೊಬ್ಬು ಕರಗಿ ಸುಂದರ ಆಕಾರ ನಿಮ್ಮದಾಗುತ್ತದೆ. ಹೊಟ್ಟೆಯ ಕೊಬ್ಬು ವಾರದೊಳಗೆ ಖಂಡಿತ ಕರಗುತ್ತದೆ. ಆದರೆ ಲಿಂಬೆ ಬೆರೆಸಿದ ಬೆಚ್ಚಗಿನ ನೀರಿನ ಸೇವನೆಯನ್ನು ನಿತ್ಯವೂ ನೀವು ಮಾಡಬೇಕು ಆದರೆ ಮಾತ್ರ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ಬೆಳ್ಳುಳ್ಳಿಯನ್ನು ಜಗೆಯಿರಿ
ಬೆಳಗ್ಗೆ ಒಂದು ಅಥವಾ ಎರಡು ಬೆಳ್ಳುಳ್ಳಿ ಎಸಳನ್ನು ಜಗೆದು ತಿನ್ನಿರಿ. ನಿತ್ಯವೂ ಕಾಲಿ ಹೊಟ್ಟೆಯಲ್ಲಿ ಹೀಗೆ ಮಾಡುವುದರಿಂದ ಬಹುಬೇಗ ಕೊಬ್ಬನ್ನು ಕರಗಿಸಬಹುದು. ಆರಂಭದಲ್ಲಿ ಬೆಳ್ಳುಳ್ಳಿ ಜಗೆಯಲು ಸ್ವಲ್ಪ ಕಷ್ಟವಾಗಬಹುದು. ನಂತರ ನಿಧಾನವಾಗಿ ಅಭ್ಯಾಸವಾಗುವುದು. ಇನ್ನೊಂದು ಟಿಪ್ಸ್
ಬೆಳ್ಳುಳ್ಳಿ+ಲಿಂಬೆ ರಸ
*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ
*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.
*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.
*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

ಜೀರಿಗೆ ನೀರು
ಇನ್ನೊಂದು ಪರ್ಯಾಯ ಪದ್ಧತಿಯೆಂದರೆ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದು. ಒಂದು ಟೀ ಚಮಚ ಜೀರಿಗೆಯನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ. ನಂತರ ಜೀರಿಗೆಯನ್ನು ಸೋಸಿ ತೆಗೆಯಿರಿ. ಬಿಸಿಯಿರುವಾಗಲೇ ಇದನ್ನು ಸೇವಿಸಿದರೆ ಹೆಚ್ಚು ಆರೋಗ್ಯ ಪೂರ್ಣವಾದದ್ದು. ಇದು ಕಿಬ್ಬೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಗೊಂಡ ಕೊಬ್ಬನ್ನು ಕರಗಿಸುತ್ತದೆ.

ಇಡೀ ಧಾನ್ಯಗಳ ಆಯ್ಕೆ ಮಾಡಿ
ಧಾನ್ಯಗಳಲ್ಲಿ ಉತ್ತಮ ನಾರಿನಂಶಗಳನ್ನು ಒಳಗೊಂಡಿರುವುದಲ್ಲದೆ ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಪೋಷಕಾಂಶಗಳನ್ನು ಸಹ ಹೊಂದಿರುತ್ತದೆ. ಧಾನ್ಯ ಹಾಗೂ ಅದರ ಹಿಟ್ಟಿನ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯ ಪೂರ್ಣ ದೇಹವನ್ನು ಹೊಂದುವುದರ ಜೊತೆಗೆ ದೇಹಕ್ಕೆ ಬೇಡದ ಕೊಬ್ಬಿನಂಶ ಕಡಿಮೆಯಾಗುತ್ತದೆ.

ರಾಸಾಯನಿಕ ಸಕ್ಕರೆಯಿಂದ ದೂರವಿರಿ
ನೈಸರ್ಗಿಕ ಸಕ್ಕರೆ ರೂಪವಲ್ಲದ ಸಿಹಿ ತಿಂಡಿಗಳು, ಐಸ್ ಕ್ರೀಮ್, ತಂಪು ಪಾನೀಯ, ಕಾರ್ಬೋನೇಟೆಡ್ ಪಾನೀಯಗಳನ್ನು ಸೇವಿಸಬಾರದು. ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುವುದರ ಜೊತೆಗೆ ಕೊಬ್ಬನ್ನು ದ್ವಿಗುಣ ಗೊಳಿಸುತ್ತವೆ. ವಿಶೇಷವಾಗಿ ಹೊಟ್ಟೆ ಮತ್ತು ತೊಡೆಯ ಭಾಗದಲ್ಲಿ ಎಂದು ಹೇಳಬಹುದು.

ದಿನವಿಡೀ ನೀರನ್ನು ಸೇವಿಸಿ
ನೀರು ನಮ್ಮ ಜೀವಕ್ಕೆ ಒಂದು ಅಮೃತ ಸೆಲೆ ಎನ್ನಬಹುದು. ಅನೇಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚು ನೀರು ಕುಡಿಯುವುದರ ಮೂಲಕ ಗುಣಮುಕಮಾಡಬಹುದು. ದಿನಕ್ಕೆ ಕಡಿಮೆ ಎಂದರೂ 8 ಗ್ಲಾಸ್ ನೀರನ್ನು ಸೇವಿಸಿದರೆ ದೇಹದಲ್ಲಿ ಕೊಬ್ಬಿನಂಶದ ಶೇಕರಣೆಯನ್ನು ತಪ್ಪಿಸಬಹುದು ಎಂದು
ಹೇಳಲಾಗುತ್ತದೆ.

ಕಚ್ಚಾ ಆಹಾರವನ್ನು ಸೇವಿಸಿ
ನೀವು ಕಚ್ಚಾ ರೂಪದಲ್ಲಿ ಸಿಗುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಬಹುದು. ಇವು ದೇಹಕ್ಕೆ ಪೋಷಕಾಂಶವನ್ನು ಒದಗಿಸುತ್ತದೆಯೇ ಹೊರತು ಬೇಡದ ಕೊಬ್ಬಿನಂಶವನ್ನಲ್ಲ. ಇವುಗಳಲ್ಲಿ ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್‍ಗಳಲ್ಲಿ ಸಮೃದ್ಧವಾಗಿದೆ. ಇದರಿಂದ ತೂಕವನ್ನು ಕಳೆದುಕೊಳ್ಳಲು ಸಹಾಯವಾಗುವುದು.

ಹಚ್ಚ ಹಸಿರು ಜ್ಯೂಸ್
ಇದುವರೆಗೆ ಹಸಿರು ರಸವನ್ನು ಸೇವಿಸದೇ ಇದ್ದಲ್ಲಿ ಮೊದಲು ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಸೂಕ್ತ ಪ್ರಮಾಣದ ವಿಟಮಿನ್ ಮತ್ತು ಖನಿಜಗಳಿವೆ ಹಾಗೂ ಅಲ್ಪಪ್ರಮಾಣದಲ್ಲಿ ಸೆಲ್ಯುಲೋಸ್ ಇದೆ. ಸಮಪ್ರಮಾಣದಲ್ಲಿ ಅನಾನಾಸ್, ಹಸಿರು ಸೇಬು ಮತ್ತು ಒಂದು ಲೋಟಕ್ಕೆ ಅರ್ಧ ಇಂಚು ಗಾತ್ರದ ಶುಂಠಿ ಮತ್ತು ಎರಡು ದೊಡ್ಡ ಚಮಚದಷ್ಟು ಅಚ್ಚು ಮೂಡ ಸೊಪ್ಪು (ಅಥವಾ parsley leaves) (ಇದು ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುತ್ತದೆ, ಆದರೆ ರುಚಿಯಲ್ಲಿ ಬದಲಾವಣೆ ಇರುತ್ತದೆ) ಮತ್ತು ಇಷ್ಟೇ ಪ್ರಮಾಣದ ಕೇಲ್ ಎಲೆಗಳನ್ನು ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ದಿನಕ್ಕೊಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಬೊಜ್ಜು ನಿಧಾನವಾಗಿ ಕರಗುತ್ತದೆ.

ಮೆಂತೆ ನೀರು
ಮೆಂತೆಯು ತುಂಬಾ ಕಹಿಯಾಗಿರುವುದು. ಆದರೆ ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದ್ದು, ಕಾರ್ಬ್ರ್ಸ್ ಮತ್ತು ಕೊಲೆಸ್ಟ್ರಾಲ್ ಕಡಿಮೆಯಿದೆ. ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಈ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.

ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ
ಒಂದು ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ ಮತ್ತು ಒಂದು ಹಿಡಿ ಪಾಲಕ ಸೊಪ್ಪು ತೆಗೆದುಕೊಳ್ಳಿ. ಇದನ್ನು ರುಬ್ಬಿಕೊಂಡು ದಪ್ಪಗಿನ ಜ್ಯೂಸ್ ಮಾಡಿಕೊಳ್ಳಿ. ಈ ಜ್ಯೂಸ್ aನ್ನು ಮಲಗುವ ಮೊದಲು ಒಂದು ವಾರ ಕಾಲ ಕುಡಿಯಬೇಕು. ಇದನ್ನು ಕೆಲವು ದಿನ ಹೆಚ್ಚು ಕಾಲ ಸೇವನೆ ಮಾಡಬಹುದು. ಇದರಿಂದ ಹೊಟ್ಟೆಯಲ್ಲಿರುವ ಮತ್ತಷ್ಟು ಕೊಬ್ಬು ಕರಗುವುದು. ಇದು ಚಯಾಪಚಾಯ ಕ್ರಿಯೆ ಹೆಚ್ಚಿಸಿ, ಹಸಿವನ್ನು ಕಡಿಮೆ ಮಾಡಿ ಸಂಪೂರ್ಣ ದೇಹದಲ್ಲಿ ಕೊಬ್ಬಿನ ಕೋಶಗಳನ್ನು ವಿಘಟಿಸುವುದು. ಈ ಪಾನೀಯದಲ್ಲಿ ಇರುವ ಸಿಟ್ರಿಕ್ ಅಂಶವು ಹೊಟ್ಟೆಯಲ್ಲಿನ ಕೊಬ್ಬನ್ನು ಕರಗಿಸಲು ಪ್ರಮುಖ ಪಾತ್ರ ನಿರ್ವಹಿಸುವುದು. ಇದು ಯಕೃತ್ ಅನ್ನು ಶುದ್ಧೀಕರಿಸಿ ಜೀರ್ಣಕ್ರಿಯೆಗೆ ನೆರವಾಗುವುದು. ಕೊಬ್ಬು ಕಡಿಮೆ ಮಾಡಲು ದೇಹಕ್ಕೆ ಬೇಕಾಗುವ ನಾರಿನಾಂಶವು ಪಿಯರ್ನಲ್ಲಿ ಇರುವುದು. ಇದು ಆಗಾಗ ಹಸಿವಾಗುವುದನ್ನು ತಪ್ಪಿಸುವುದು. ಪಾಲಕವು ಉರಿಯೂತ ಮತ್ತು ರಕ್ತದ ಅಸಿಡಿಟಿ ಕಡಿಮೆ ಮಾಡುವುದು.

ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಿ
ಹೋಟೆಲ್ ರೆಸ್ಟೋರೆಂಟ್ ಹಾಗು ರಸ್ತೆ ಬದಿಯ ಅಂಗಡಿಗಳಲ್ಲಿ ಪದೆ ಪದೆ ತಿನ್ನುವುದರಿಂದ ನಿಮ್ಮದ ದೇಹದ ತೂಕವು ಸುಲಭವಾಗಿ ಹೆಚ್ಚುವುದು ಎಂದು ಎಲ್ಲರಿಗೂ ತಿಳಿದ ಸಂಗತಿಯೇ. ಮನೆಯಲ್ಲಿ ಕಡಿಮೆ ಎಣ್ಣೆಯ ಮತ್ತು ಕೊಬ್ಬಿನಿಂದ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಿ. ಸೊಪ್ಪು ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸುವುದರಿಂದ ಒಬೆಸಿಟಿಯನ್ನು ತಡೆಗಟ್ಟಬಹುದು.



Click it and Unblock the Notifications











