For Quick Alerts
ALLOW NOTIFICATIONS  
For Daily Alerts

  ಪ್ರೊಸ್ಟೇಟ್ ಗ್ರಂಥಿಯ ತೊಂದರೆಗೆ ಇಲ್ಲಿದೆ ನೋಡಿ ಮನೆಮದ್ದುಗಳು

  By Arshad
  |

  ಸಾಮಾನ್ಯವಾಗಿ ಪುರುಷರು ತಮ್ಮ ವಯಸ್ಸನ್ನು ಮುಚ್ಚಿಡಲು ಯತ್ನಿಸುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ವಯಸ್ಸಾಗುತ್ತಿದ್ದಂತೆಯೇ ವೃದ್ಧಾಪ್ಯದ ಲಕ್ಷಣಗಳನ್ನು ತಾರುಣ್ಯದ ಲಕ್ಷಣಗಳಂತೆ ಪರಿವರ್ತಿಸುವ ಪ್ರಯತ್ನಗಳನ್ನು ಪುರುಷರು ಯತ್ನಿಸುವುದು ಮಾತ್ರ ಸುಳ್ಳಲ್ಲ. ನೆರೆದ ಕೂದಲನ್ನು ಕಪ್ಪಾಗಿಸುವುದು, ಯುವಕರು ತೊಡುವ ಟೀ-ಶರ್ಟ್ ತೊಡುವುದು ಇತ್ಯಾದಿ, ಕೆಲವರ ಪ್ರಯತ್ನವಂತೂ ಸರಿಸುಮಾರು ಮಹಿಳೆಯರಿಗೆ ಸರಿಸಮನಾಗಿಯೇ ಇರುತ್ತದೆ. ವಯಸ್ಸನ್ನು ಈ ಪರಿಯ ಯತ್ನಗಳಿಂದ ಮರೆಮಾಚಲು ಯತ್ನಿಸಿದಷ್ಟೂ ಹೆಚ್ಚು ಸ್ಪಷ್ಟವಾಗಿ ಪ್ರಕಟಗೊಳ್ಳುವ ಸಾಧ್ಯತೆಯೇ ಅಧಿಕ.

  ಹಾಗಾಗಿ ಆರೋಗ್ಯವನ್ನೇ ಉತ್ತಮವಾಗಿಸಿ ತರುಣರಂತಹ ಮೈಕಟ್ಟನ್ನು ಹೊಂದುವ ಮೂಲಕ ಮಾತ್ರ ತಾರುಣ್ಯವನ್ನು ನಿಜವಾಗಿಯೂ ಹಿಂದೆ ಬರುವಂತೆ ಮಾಡಬಹುದು. ವಿಶೇಷವಾಗಿ ಮುಖದಲ್ಲಿ ಮೂಡಿರುವ ನೆರಿಗೆಗಳನ್ನು ನಿವಾರಿಸಲು ಇಂದು ನೀಡಲಾಗಿರುವ ಸಲಹೆಗಳು ನಿಜವಾಗಿಯೂ ಕೆಲಸ ಮಾಡುವಂತಹದ್ದಾಗಿವೆ.

  ಆದರೆ ಇವುಗಳ ಪರಿಣಾಮ ಕಂಡುಕೊಳ್ಳಲು ಕೊಂಚ ಸಮಾಯಾವಕಾಶದ ಅಗತ್ಯವಿರುವ ಕಾರಣ ಪ್ರಯತ್ನವನ್ನು ಶ್ರದ್ಧಾಸಕ್ತಿ ಹಾಗೂ ಸತತವಾಗಿಸುವುದು ಅಗತ್ಯವಾಗಿದೆ. ಬೋಲ್ಡ್ ಸ್ಕೈ ತಂಡದಲ್ಲಿರುವ ಸೌಂದರ್ಯ ತಜ್ಞರು ನೀಡಿರುವ ಈ ಉಪಯುಕ್ತ ಸಲಹೆಗಳಲ್ಲಿ ನಿಮಗೆ ಸೂಕ್ತವಾದುದನ್ನು ಪಾಲಿಸುವ ಮೂಲಕ ವೃದ್ಧಾಪ್ಯದ ಗೆರೆಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ ವಯಸ್ಸಿನ ಗಡಿಯಾರದ ಮುಳ್ಳುಗಳನ್ನು ಕೆಲವಾರು ವರ್ಷಗಳಷ್ಟು ಹಿಂದೆ ತಿರುಗಿಸಲು ಸಾಧ್ಯ.....

  ಟೊಮೇಟೊ

  ಟೊಮೇಟೊ

  ಟೊಮೇಟೊ ಹಣ್ಣಿಗೆ ಕೆಂಪುಬಣ್ಣ ಬರಲು ಲೈಕೋಪೀನ್ ಎಂಬ ಪೋಷಕಾಂಶ ಕಾರಣವಾಗಿದೆ. ಇದೊಂದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದ್ದು ಪ್ರೊಸ್ಟೇಟ್ ಗ್ರಂಥಿ ಊದಿಕೊಳ್ಳುವುದನ್ನು ತಡೆಯುತ್ತದೆ. ಹಾಗೂ ಪ್ರೊಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಗೊಳಿಸುತ್ತದೆ. ಟೊಮೆಟೊ ಕ್ಯಾನ್ಸರ್ ಉಂಟು ಮಾಡುವ ಜೀವಕೋಶಗಳನ್ನು ಕೊಲ್ಲುತ್ತದೆ. ಅಲ್ಲದೇ ಸತತ ಮೂತ್ರ ವಿಸರ್ಜನೆಯಿಂದಲೂ ತಪ್ಪಿಸುತ್ತದೆ. ಟೊಮೇಟೊ ಹಣ್ಣನ್ನು ಹಸಿಯಾಗಿ ಸಾಲಾಡ್ ಮೂಲಕ ಸೇವಿಸಬಹುದು ಅಥವಾ ಬೀಜ ಮತ್ತು ಸಿಪ್ಪೆ ನಿವಾರಿಸಿದ ತಿರುಳಿನಿಂದ ತಯಾರಿಸಿದ ಜ್ಯೂಸ್ ಕುಡಿಯಬಹುದು.

  ಉಗುರುಬೆಚ್ಚನೆಯ ನೀರಿನ ಸ್ನಾನ

  ಉಗುರುಬೆಚ್ಚನೆಯ ನೀರಿನ ಸ್ನಾನ

  ಈ ಸ್ನಾನದಿಂದ ಪ್ರೊಸ್ಟೇಟ್ ಗ್ರಂಥಿಯ ಉರಿಯೂತ ಕಡಿಮೆಯಾಗುತ್ತದೆ ಹಾಗೂ ಊದಿಕೊಂಡಿದ್ದ ಗ್ರಂಥಿ ಮೊದಲ ಗಾತ್ರಕ್ಕೆ ಬರಲು ನೆರವಾಗುತ್ತದೆ. ಉತ್ತಮ ವಿಧಾನವೆಂದರೆ ಉಗುರುಬೆಚ್ಚನೆಯ ನೀರು ತುಂಬಿರುವ ತೊಟ್ಟಿಯಲ್ಲಿ ಸೊಂಟದ ಭಾಗ ಪೂರ್ಣವಾಗಿ ಮುಳುಗಿರುವಂತೆ ಕೊಂಚ ಹೊತ್ತು ಕುಳಿತಿರುವುದು. ಇದರಿಂದ ನೋವು ಕಡಿಮೆಯಾಗುತ್ತದೆ ಹಾಗೂ ಪ್ರಾಸ್ಟೈಟಿಸ್ ಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಸಹಾ ಕೊಲ್ಲಲು ಸಾಧ್ಯವಾಗುತ್ತದೆ. ಪ್ರೊಸ್ಟೇಟ್ ಗ್ರಂಥಿಯ ತೊಂದರೆಗಳಿಗೆ ಈ ಮನೆಮದ್ದು ಅತ್ಯಂತ ಉಪಯುಕ್ತವಾಗಿದೆ.

  ಕುಂಬಳದ ಬೀಜ

  ಕುಂಬಳದ ಬೀಜ

  ಒಂದು ವೇಳೆ ಪ್ರೊಸ್ಟೇಟ್ ಗ್ರಂಥಿ ಊದಿಕೊಂಡಿದ್ದರೆ ಕುಂಬಳದ ಬೀಜದ ಸೇವನೆಯಿಂದ ಉತ್ತಮ ಪರಿಣಾಮ ಕಂಡುಬರುತ್ತದೆ. ಇದರಲ್ಲಿರುವ ಫೈಟೋ ಸ್ಟೆರಾಲ್ ಎಂಬ ಪೋಷಕಾಂಶಗಳು ಗ್ರಂಥಿಯ ಊತಕ್ಕೆ ಕಾರಣವಾಗುವ dihydrotestosterone (DHT) ಎಂಬ ಕಣಗಳ ಮಟ್ಟವನ್ನು ಕಡಿಮೆಗೊಳಿಸಿ ಊತ ಕಡಿಮೆಗೊಳಿಸುತ್ತದೆ. ಈ ತೊಂದರೆ ಇರುವ ಪುರುಷರು ನಿತ್ಯವೂ ಕೊಂಚ ಬೀಜಗಳನ್ನು ಹಸಿಯಾಗಿ ಅಥವಾ ಬೇಯಿಸಿ ಸೇವಿಸಬೇಕು. ಇದರ ಸೇವನೆಯಿಂದ ಮೂತ್ರನಾಳದ ಸೋಂಕಿಗೆ ಕಾರಣವಾಗುವ ಬಹುತೇಕ ಎಲ್ಲ ತೊಂದರೆಗಳು ಇಲ್ಲವಾಗುತ್ತವೆ ಹಾಗೂ ಪ್ರಾಸ್ಟೈಟಿಸ್ ಗೆ ಸಂಬಂಧಿಸಿದ ಎಲ್ಲಾ ತೊಂದರೆಗಳೂ ಇಲ್ಲವಾಗುತ್ತವೆ.

  ಹಸಿರು ಟೀ

  ಹಸಿರು ಟೀ

  ಈ ಟೀಯಲ್ಲಿ ಹಲವಾರು ಆಂಟಿ ಆಕ್ಸಿಡೆಂಟುಗಳಿದ್ದು ಪ್ರೊಸ್ಟೇಟ್ ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ. ಇದು ಅನಿಯಂತ್ರಿತ ಮೂತ್ರವನ್ನೂ ನಿಯಂತ್ರಿಸುತ್ತದೆ, ಊದಿಕೊಂಡಿದ್ದ ಗ್ರಂಥಿಯ ಗಾತ್ರವನ್ನು ತಗ್ಗಿಸುತ್ತದೆ ಹಾಗೂ ಮೂತ್ರವಿಸರ್ಜನೆಯ ಸಮಯದಲ್ಲಿ ಎದುರಾಗುವ ಬೆಂಕಿಯಂತಿರುವ ಊರಿಯನ್ನೂ ಕಡಿಮೆಗೊಳಿಸುತ್ತದೆ. ಪ್ರೊಸ್ಟೇಟ್ ತೊಂದರೆ ಯಾವುದೇ ಹಂತದಲ್ಲಿದ್ದರೂ ಇದನ್ನು ಗುಣಪಡಿಸಲು ಹಸಿರು ಟೀ ಸೇವನೆ ಉತ್ತಮವಾದ ಮನೆಮದ್ದಾಗಿದೆ.

  ತುಳಸಿ ಎಲೆಗಳು

  ತುಳಸಿ ಎಲೆಗಳು

  ಊದಿಕೊಂಡಿರುವ ಪ್ರೊಸ್ಟೇಟ್ ಗ್ರಂಥಿಗಳ ಚಿಕಿತ್ಸೆಗೆ ತುಳಸಿಯೂ ಉತ್ತಮ ಆಯ್ಕೆಯಾಗಿದೆ. ಅಲ್ಲದೇ ಇದರ ಉರಿಯೂತ ನಿವಾರಕ ಗುಣ ಪ್ರೊಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಬರುವುದರಿಂದಲೂ ರಕ್ಷಣೆ ಒದಗಿಸುತ್ತದೆ. ತುಳಸಿ ಎಳೆಗಳನ್ನು ಹಿಂಡಿ ತೆಗೆದ ರಸವನ್ನು ದಿನದಲ್ಲಿ ಹಲವಾರು ಬಾರಿ ನೀರಿನೊಂದಿಗೆ ಕುಡಿಯುವ ಮೂಲಕ ಉತ್ತಮ ಪರಿಹಾರ ಕಂಡುಬರುತ್ತದೆ. ಪ್ರೊಸ್ಟೇಟ್ ಗ್ರಂಥಿಯ ತೊಂದರೆ ಹಾಗೂ ಉರಿಯಿಂದ ತುಳಸಿ ಅತ್ಯುತ್ತಮವಾದ ನೈಸರ್ಗಿಕ

  ಪರಿಹಾರವಾಗಿದೆ.

  ಕಲ್ಲಂಗಡಿ ಬೀಜಗಳು

  ಕಲ್ಲಂಗಡಿ ಬೀಜಗಳು

  ಈ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಮೂತ್ರಕೋಶದ ಸಹಿತ ದೇಹದ ಇತರ ಭಾಗಗಳಿಂದಲೂ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಇದಕ್ಕಾಗಿ ಕೊಂಚ ಕಲ್ಲಂಗಡಿ ಬೀಜಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಈ ನೀರು ಅರ್ಧದಷ್ಟಾದ ಬಳಿಕ ತಣಿಸಿ ಸೋಸಿ ಕುಡಿಯಬಹುದು. ಸಾಧ್ಯವಾದರೆ ಬೀಜಗಳನ್ನು ತಿನ್ನಲೂ ಬಹುದು.

  ಎಳ್ಳು

  ಎಳ್ಳು

  ಪ್ರೊಸ್ಟೇಟ್ ಗ್ರಂಥಿ ಉತ್ತಮವಾಗಿ ಕೆಲಸ ಮಾಡುತ್ತಿರಲು ಎಳ್ಳು ಸಹಾ ಉತ್ತಮ ಆಯ್ಕೆಯಾಗಿದೆ. ಎಳ್ಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಪ್ರೊಸ್ಟೇಟ್ ಗ್ರಂಥಿಯ ಊದಿಕೊಳ್ಳುವುದನ್ನು ತಡೆಯಬಹುದು ಹಾಗೂ ಕ್ಯಾನ್ಸರ್ ಆವರಿಸುವುದರಿಂದಲೂ ರಕ್ಷಣೆ ಒದಗಿಸುತ್ತದೆ. ಇದಕ್ಕಾಗಿ ಕೊಂಚ ಎಳ್ಳನ್ನು ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಟ್ಟು ಬಳಿಕ ಜಗಿದು ನುಂಗಬೇಕು.

  ತುರಿಚೆಗಿಡದ ಬೇರು (Stinging Nettle Root)

  ತುರಿಚೆಗಿಡದ ಬೇರು (Stinging Nettle Root)

  ಸತತ ಮೂತ್ರಕ್ಕೆ ಅವಸರವಾಗುವುದು, ಉರಿಯೂತ, ನೋವಿನಿಂದ ಕೂಡಿದ ಮೂತ್ರವಿಸರ್ಜನೆ ಹಾಗೂ ಬೆಂಕಿಯಂತೆ ಉರಿಯುವ ಮೂತ್ರ ಮೊದಲಾದ ತೊಂದರೆಗಳಿಗೆ ತುರಿ಼ಚೆಗಿಡದ ಬೇರು ಉತ್ತಮ ಪರಿಹಾರ ಒದಗಿಸುತ್ತದೆ. ಈ ಬೇರು ಸಿದ್ದರೂಪದಲ್ಲಿ ಸೇವನೆಗೆ ಲಭ್ಯವಿದ್ದು ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ಪ್ರಾಸ್ಟೈಟಿಸ್ ಚಿಕಿತ್ಸೆಗೆ ಇದು ಉತ್ತಮ ಆಯ್ಕೆಯಾಗಿದೆ.

  ಕ್ಯಾರೆಟ್ ಜ್ಯೂಸ್

  ಕ್ಯಾರೆಟ್ ಜ್ಯೂಸ್

  ಪ್ರಾಸ್ಟೈಟಿಸ್ ಚಿಕಿತ್ಸೆಗೆ ಹಾಗೂ ಪ್ರೊಸ್ಟೇಟ್ ಕ್ಯಾನ್ಸರ್ ನಿಂದ ತಡೆಗಟ್ಟಲು ಕ್ಯಾರೆಟ್ ಜ್ಯೂ ಸಹಾ ಉತ್ತಮ ಆಯ್ಕೆಯಾಗಿದೆ. ನಿತ್ಯವೂ ಒಂದು ದೊಡ್ದ ಲೋಟ ತಾಜಾ ಗಜ್ಜರಿಗಳಿಂದ ತಯಾರಿಸಿದ ರಸವನ್ನು ಕುಡಿಯುವ ಮೂಲಕ ಮೂತ್ರವಿಸರ್ಜನೆಯ ವೇಳೆ ಎದುರಾಗುವ ಎಲ್ಲಾ ಪ್ರೊಸ್ಟೇಟ್ ಸಂಬಂಧಿತ ತೊಂದರೆಗಳನ್ನು ನಿವಾರಿಸುತ್ತದೆ.

  ಗೋಲ್ಡನ್ ಸೀಲ್

  ಗೋಲ್ಡನ್ ಸೀಲ್

  ಈ ಹೆಸರಿನಲ್ಲಿ ಸಿಗುವ ಔಷಧಿ ಸಹಾ ಪ್ರಾಸ್ಟೈಟಿಸ್ ತೊಂದರೆಗಳನ್ನು ಗುಣಪಡಿಸಲು ನೆರವಾಗುತ್ತದೆ. ಇದು ಪ್ರತಿಜೀವಕದಂತೆ ಕೆಲಸ ಮಾಡುತ್ತದೆ ಹಾಗೂ ಪ್ರೊಸ್ಟೇಟ್ ತೊಂದರೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಅಲ್ಲದೇ ಇದರ ಸೇವನೆಯಿಂದ ಊದಿಕೊಂಡಿರುವ ಗ್ರಂಥಿಯನ್ನೂ ಸಾಮಾನ್ಯ ಗಾತ್ರಕ್ಕೆ ತರುತ್ತದೆ. ಇದರ ಪ್ರಬಲ ಮೂತ್ರವರ್ಧಕ ಗುಣ ಮೂತ್ರವನ್ನು ಹೆಚ್ಚಿಸುವ ಜೊತೆಗೇ ಇತರ ತೊಂದರೆಗಳನ್ನೂ ನಿವಾರಿಸುತ್ತದೆ.

  ಅರಿಶಿನ

  ಅರಿಶಿನ

  ಇದರಲ್ಲಿ ಪ್ರಬಲ ಉರಿಯೂತನಿವಾರಕ ಗುಣವಿರುವ ಕಾರಣ ಪ್ರಾಸ್ಟೈಟಿಸ್ ನ ಚಿಕಿತ್ಸೆಗೂ ನೆರವಾಗುತ್ತದೆ. ಅಲ್ಲದೇ ಪ್ರೊಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಅರಿಶಿನವನ್ನು ಕೊಂಚ ಜೇನಿನೊಂದಿಗೆ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿಯಬೇಕು.

  ಗರಗಸ ತಾಳೆಮರ (Saw Palmetto)

  ಗರಗಸ ತಾಳೆಮರ (Saw Palmetto)

  ಈ ಮರದ ಹಣ್ಣು ಪ್ರೊಸ್ಟೇಟ್ ಗ್ರಂಥಿಯ ಚಿಕಿತ್ಸೆಗೆ ಉತ್ತಮ ಆಯ್ಕೆಯಾಗಿದೆ. ಇದು ಮೂತ್ರನಾಳದ ಸೋಂಕಿನಿಂದ ಎದುರಾದ ತೊಂದರೆಗಳನ್ನು ನಿವಾರಿಸುವುದು ಮಾತ್ರವಲ್ಲ ಪ್ರಾಸ್ಟೈಟಿಸ್ ತೊಂದರೆಗೂ ಪರಿಹಾರ ಒದಗಿಸುತ್ತದೆ. ಇದರ ಪ್ರಬಲ ಮೂತ್ರವರ್ಧಕ ಗುಣ ಮೂತ್ರದ ಪ್ರಮಾಣವನ್ನು ಹೆಚ್ಚಿಸಿ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ನಿಯಮಿತ ಸೇವನೆಯಿಂದ ಮೂತ್ರವಿಸರ್ಜನೆಯ ವೇಳೆ ಎದುರಾಗುವ ನೋವು, ಬೆಂಕಿಯಂತೆ ಉರಿಯುವ ತೊಂದರೆಯನ್ನೂ ನಿವಾರಿಸುತ್ತದೆ. ನೇರವಾಗಿ ತಿನ್ನಲು ಸಾಧ್ಯವಾಗದಿದ್ದರೆ ಈ ಫಲಗಳನ್ನು ಕುದಿಸಿ ತಣಿಸಿ ಸೋಸಿದ ಟೀ ಸೇವನೆಯೂ ಉತ್ತಮವಾಗಿದೆ.

  ನೀರು

  ನೀರು

  ಪ್ರೊಸ್ಟೇಟ್ ಗ್ರಂಥಿಯ ಎಲ್ಲಾ ತೊಂದರೆಗೆ ಪ್ರಮುಖ ಕಾರಣ ನೀರಿನ ಕೊರತೆಯಾಗಿದೆ. ದಿನವಿಡೀ ಸತತವಾಗಿ ಸಾಕಷ್ಟು ನೀರು ಕುಡಿಯುತ್ತಿರುವುದರಿಂದ ದೇಹದಕ್ಕೆ ಅಗತ್ಯವಾದ ಆರ್ದ್ರತೆ ಒದಗಿಸುವುದು, ಉರಿಮೂತ್ರವನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ ದೇಹದಿಂದ ಕಲ್ಮಶಗಳನ್ನು ಹೊರಹಾಕಲೂ ನೆರವಾಗುತ್ತದೆ.

  English summary

  Home Remedies For Prostate Problems In Men

  Prostate gland issues in men has become a common problem now a days. Prostatitis means inflammation and pain in prostate gland. In prostatitis there is infection of the prostate gland. Fortunately, there are effectively home remedies for prostate problems that we will discuss with you today. The causes of prostate problems is mostly infection, prostate enlargement or prostate cancer
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more