ಅಡುಗೆಮನೆಯ ಪುಟ್ಟ ಬೆಳ್ಳುಳ್ಳಿಯನ್ನು ಎಷ್ಟು ಹೊಗಳಿದರೂ ಸಾಲದು!

Posted By: Hemanth
Subscribe to Boldsky

ಬೆಳ್ಳುಳ್ಳಿಯಲ್ಲಿರುವ ಆರೋಗ್ಯ ಲಾಭಗಳ ಬಗ್ಗೆ ಈಗಾಗಲೇ ಬೋಲ್ಡ್ ಸ್ಕೈ ಹಲವಾರು ಲೇಖನಗಳ ಮೂಲಕ ಓದುಗರಿಗೆ ಮಾಹಿತಿ ನೀಡಿದೆ. ಬೆಳ್ಳುಳ್ಳಿಯಲ್ಲಿರುವ ಆರೋಗ್ಯ ಗುಣಗಳನ್ನು ತಿಳಿದುಕೊಂಡಿರುವ ಓದುಗರು ಇದನ್ನು ಬಳಸಿಕೊಂಡು ಅದರ ಲಾಭ ಪಡೆದಿದ್ದಾರೆ. ಪ್ರತಿಯೊಂದು ಅಡುಗೆ ಮನೆಯಲ್ಲೂ ಸಿಗುವ ಬೆಳ್ಳುಳ್ಳಿಯನ್ನು ಖಾದ್ಯಕ್ಕೆ ರುಚಿ ಹಾಗೂ ಸುವಾಸನೆ ಹೆಚ್ಚಿಸಲು ಬಳಸಿಕೊಳ್ಳಲಾಗುತ್ತದೆ. ಆದರೆ ಹಿಂದಿನಿಂದಲೂ ಭಾರತೀಯರು ಬೆಳ್ಳುಳ್ಳಿಯಲ್ಲಿರುವ ಆರೋಗ್ಯ ಲಾಭಗಳನ್ನು ತಿಳಿದುಕೊಂಡು ವಿವಿಧ ರೀತಿಯಿಂದ ಅದನ್ನು ಬಳಸಿಕೊಂಡು ಬರುತ್ತಾ ಇದ್ದಾರೆ. ಹೆಚ್ಚಿನ ಆಯುರ್ವೇದ ಔಷಧಿಗಳಿಗೂ ಬೆಳ್ಳುಳ್ಳಿ ಬಳಸಲಾಗುತ್ತದೆ.

ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎನ್ನುವ ಅಂಶವು ಪ್ರತಿಜೀವಕದಂತೆ ಕೆಲಸ ಮಾಡುವುದು ಮಾತ್ರವಲ್ಲದೆ ಹಲವಾರು ರೀತಿಯ ಸೋಂಕು ನಿವಾರಿಸುವುದು. ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ವಿಟಮಿನ್ ಬಿ6, ಕಬ್ಬಿನಾಂಶ ಮತ್ತು ಪೊಟಾಶಿಯಂನಂತಹ ಹಲವಾರು ಪೋಷಕಾಂಶಗಳು ಇದೆ. ಪ್ರತಿನಿತ್ಯವೂ ಬೆಳ್ಳುಳ್ಳಿ ಸೇವಿಸಿದರೆ ಅದರಿಂದ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಾಗುವುದು. ಈ ಲೇಖನದಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವಂತಹ ಕಾಲಿನ ಶಿಲೀಂಧ್ರ ಸಮಸ್ಯೆಯನ್ನು ಬೆಳ್ಳುಳ್ಳಿಯಿಂದ ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯುವುದು. ಓದು ಮುಂದುವರಿಯಲಿ.... 

ಜಜ್ಜಿದ ಬೆಳ್ಳುಳ್ಳಿ ಪೇಸ್ಟ್

ಜಜ್ಜಿದ ಬೆಳ್ಳುಳ್ಳಿ ಪೇಸ್ಟ್

*3-6 ಬೆಳ್ಳುಳ್ಳಿ ಎಸಲುಗಳನ್ನು ತೆಗೆದುಕೊಂಡು ಸರಿಯಾಗಿ ಜಜ್ಜಿ ಪೇಸ್ಟ್ ಮಾಡಿ.

*ಇದಕ್ಕೆ ಒಂದು ಚಮಚ ಆಲಿವ್ ತೈಲ ಹಾಕಿ ಸರಿಯಾಗಿ ಮಿಶ್ರಣ ಮಾಡಿ.

*ಹತ್ತಿ ಉಂಡೆ ಬಳಸಿ ಈ ಔಷಧಿಯನ್ನು ಕಾಲಿನ ಭಾದಿತ ಭಾಗಗಳಿಗೆ ಹಚ್ಚಿಕೊಳ್ಳಿ.

*ದಿನದಲ್ಲಿ 2-3 ಸಲ ಇದನ್ನು ಹಚ್ಚಿಕೊಳ್ಳಿ ಅಥವಾ ಸೋಂಕು ಕಡಿಮೆಯಾಗುವ ತನಕ ಮುಂದುವರಿಸಿ.

ಬೆಳ್ಳುಳ್ಳಿ ಮತ್ತು ಅಲೋವೆರಾ

ಬೆಳ್ಳುಳ್ಳಿ ಮತ್ತು ಅಲೋವೆರಾ

*ಒಂದು ತುಂಡು ತಾಜಾ ಅಲೋವೆರಾದಿಂದ ಅದರ ಲೋಳೆ ತೆಗೆಯಿರಿ.

*ಕೆಲವು ಬೆಳ್ಳುಳ್ಳಿ ಎಸಲುಗಳನ್ನು ಸರಿಯಾಗಿ ಜಜ್ಜಿಕೊಂಡು ಅದರ ಪೇಸ್ಟ್ ಮಾಡಿಕೊಳ್ಳಿ.

*ಇದಕ್ಕೆ ಅಲೋವೆರಾ ಲೋಳೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ.

*ಸೋಂಕು ತಾಗಿರುವ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ.

*ತಣ್ಣೀರಿನಿಂದ ಇದನ್ನು ತೊಳೆಯಿರಿ.

*ಒಳ್ಳೆಯ ಫಲಿತಾಂಶ ಪಡೆಯಲು ದಿನದಲ್ಲಿ ಎರಡು ಸಲ ಬಳಸಿ.

ಬೆಳ್ಳುಳ್ಳಿ ಮತ್ತು ಆ್ಯಪಲ್ ಸೀಡರ್ ವಿನೇಗರ್

ಬೆಳ್ಳುಳ್ಳಿ ಮತ್ತು ಆ್ಯಪಲ್ ಸೀಡರ್ ವಿನೇಗರ್

*3-6 ಬೆಳ್ಳುಳ್ಳಿ ಎಸಲು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ.

*ಇದಕ್ಕೆ ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ಹಾಕಿ ಮಿಶ್ರಣ ಮಾಡಿ.

*ಹತ್ತಿ ಉಂಡೆ ಬಳಸಿಕೊಂಡು ಈ ಮಿಶ್ರಣವನ್ನು ಕಾಲಿನ ಭಾದಿತ ಜಾಗಕ್ಕೆ ಹಚ್ಚಿಕೊಳ್ಳಿ.

*ಹತ್ತು ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ.

*ಒಳ್ಳೆಯ ಫಲಿತಾಂಶ ಬೇಕಾದರೆ ದಿನದಲ್ಲಿ ಎರಡು ಸಲ ಇದನ್ನು ಬಳಸಿ.

ಬೆಳ್ಳುಳ್ಳಿ ಮತ್ತು ಅಡುಗೆ ಸೋಡಾ

ಬೆಳ್ಳುಳ್ಳಿ ಮತ್ತು ಅಡುಗೆ ಸೋಡಾ

*ಕೆಲವು ಬೆಳ್ಳುಳ್ಳಿ ಎಸಲುಗಳನ್ನು ತೆಗೆದುಕೊಂಡು ಜಜ್ಜಿಕೊಳ್ಳಿ ಮತ್ತು ಅದರ ರಸ ತೆಗೆಯಿರಿ.

*ಇದನ್ನು ಒಂದು ಸಣ್ಣ ಪಾತ್ರೆಗೆ ಹಾಕಿಕೊಳ್ಳಿ ಮತ್ತು ಒಂದು ಚಮಚ ಅಡುಗೆ ಸೋಡಾದೊಂದಿಗೆ ಮಿಶ್ರಣ ಮಾಡಿ.

*ಇದನ್ನು ಭಾದಿತ ಜಾಗಕ್ಕೆ ಹಚ್ಚಿಕೊಂಡು ಅದು ಒಣಗಲು ಬಿಡಿ. ನೀರಿನಿಂದ ತೊಳೆದ ಬಳಿಕ ಸರಿಯಾಗಿ ಒರೆಸಿಕೊಳ್ಳಿ.

*ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಹೀಗೆ ಮಾಡಿ.

For Quick Alerts
ALLOW NOTIFICATIONS
For Daily Alerts

    English summary

    Home Remedies: How To Use Garlic To Treat Foot Fungus During Monsoon

    In addition to this, garlic is loaded with calcium, vitamins - mainly vitamin C and B6, minerals, iron and potassium, just to name a few. Consuming garlic on a regular basis helps in boosting the immune system, and this in turn helps to fight the infections. Also due to the innumerable benefits it has, garlic is also one of the most widely used ingredients in ayurveda as well.
    Story first published: Tuesday, July 25, 2017, 7:02 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more