ಮಳೆಗಾಲದಲ್ಲಿ ಕಣ್ಣಿನ ರಕ್ಷಣೆ: ಮರೆಯದೇ ಈ ಟಿಪ್ಸ್‌ಗಳನ್ನು ಅನುಸರಿಸಿ

Posted By: Hemanth
Subscribe to Boldsky

ಮಳೆಗಾಲದಲ್ಲಿ ಚುಮುಚುಮು ಚಳಿ, ಆ ಕಡೆ ಧೋ ಎಂದು ಸುರಿಯುತ್ತಿರುವ ಮಳೆ ಇದನ್ನು ಅನುಭವಿಸಲು ಮಳೆನಾಡಿಗೆ ಹೋಗಲೇಬೇಕು. ಇಂತಹ ಹವಾಮಾನ ಪ್ರತಿಯೊಬ್ಬರಿಗೂ ತುಂಬಾ ಸಂತೋಷ ನೀಡುತ್ತದೆ. ಆದರೆ ಮಳೆಗಾಲ ಬಂದರೆ ಅದರೊಂದಿಗೆ ಹಲವಾರು ರೋಗಗಳು ಬೆನ್ನಿಗಂಟಿಕೊಂಡು ಬರುತ್ತದೆ. ಹಲವಾರು ರೀತಿಯ ಸೋಂಕು ಮತ್ತು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಮಳೆಗಾಲದಲ್ಲಿ ಹೆಚ್ಚಿನ ಜನರನ್ನು ಕಾಡುವಂತಹ ಸಮಸ್ಯೆಯಲ್ಲಿ ಪ್ರಮುಖವಾಗಿ ವಿವಿಧ ರೀತಿಯ ಜ್ವರಗಳು. 

ಮಳೆಗಾಲದ ಅಪಾಯಕಾರಿ ರೋಗಗಳ ಬಗ್ಗೆ ಎಚ್ಚರವಿರಲಿ

ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ತಮ್ಮ ಸಂತಾನಭಿವೃದ್ಧಿ ಮಾಡುವ ಕಾರಣದಿಂದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾದಂತಹ ಜ್ವರಗಳು ಬರುವುದು. ಶೀತ ಮತ್ತು ಕಾಲು ಹಾಗೂ ಕಣ್ಣಿನ ಸೋಂಕು ಕಾಣಿಸಿಕೊಳ್ಳುತ್ತದೆ. ಕಣ್ಣುಗಳು ಊದಿಕೊಳ್ಳುವುದು, ಒಣಗಿದ ಕಣ್ಣುಗಳು ಮತ್ತು ಕಾರ್ನಿಯಾದ ಅಲ್ಸರ್ ಪ್ರಮುಖವಾಗಿ ಮಳೆಗಾಲದಲ್ಲಿ ಭಾದಿಸುತ್ತದೆ. 

ಮಳೆಗಾಲ ಶುರುವಾಗಿ ಬಿಟ್ಟಿದೆ, ಆರೋಗ್ಯದ ಬಗ್ಗೆ ಇರಲಿ ಕಾಳಜಿ....

ಆಗಾಗ ಕೈಗಳನ್ನು ತೊಳೆದುಕೊಳ್ಳುವುದು, ಹೊರಗಡೆ ಹೋಗುವಾಗ ಸನ್ ಗ್ಲಾಸ್ ಹಾಕಿಕೊಳ್ಳಬೇಕು ಮತ್ತು ಕೈಯಿಂದ ಪದೇ ಪದೇ ಕಣ್ಣುಗಳನ್ನು ಮುಟ್ಟಲೇಬಾರದು. ಈ ಬಗ್ಗೆ ಗಮನಹರಿಸಿದರೆ ಕಣ್ಣಿನ ಸೋಂಕಿನಿಂದ ಪಾರಾಗಬಹುದು. ಕಣ್ಣಿನ ಸೋಂಕು ಕಾಣಿಸಿಕೊಂಡರೆ ನಾವು ಓಡಿ ಹೋಗುವುದು ವೈದ್ಯರಲ್ಲಿಗೆ. ಆದರೆ ಕೆಲವೊಂದು ಮನೆಮದ್ದನ್ನು ಬಳಸಿಕೊಂಡರೆ ಕಣ್ಣಿನ ಸೋಂಕಿನ ಸಮಸ್ಯೆ ನಿವಾರಣೆ ಮಾಡಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡುತ್ತದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಕೂಡ ಇಲ್ಲ. ಮಳೆಗಾಲದಲ್ಲಿ ಕಂಡುಬರುವ ಕೆಲವೊಂದು ಕಣ್ಣಿನ ಸೋಂಕಿಗೆ ಮನೆಮದ್ದನ್ನು ಈ ಲೇಖನದಲ್ಲಿ ನೀಡಲಾಗಿದೆ. ಇದನ್ನು ಪರೀಕ್ಷಿಸಿ ಫಲಿತಾಂಶ ಪಡೆಯಿರಿ... 

ತಂಪು ಚಿಕಿತ್ಸೆ

ತಂಪು ಚಿಕಿತ್ಸೆ

ಕಣ್ಣುಗಳು ತುರಿಸುತ್ತಾ ತುಂಬಾ ಕಿರಿಕಿರಿ ಉಂಟು ಮಾಡುತ್ತಾ ಇದ್ದರೆ ತಂಪಾದ ನೀರಿನಿಂದ ಕಣ್ಣಿಗೆ ಚಿಕಿತ್ಸೆ ನೀಡಬಹುದು. ತಂಪಾದ ನೀರಿನಲ್ಲಿ ಹತ್ತಿ ಬಟ್ಟೆಯನ್ನು ಅದ್ದಿಕೊಂಡು ಅದನ್ನು ಕಣ್ಣಿಗೆ ಒತ್ತಿಕೊಳ್ಳಿ. ಕೆಲವು ನಿಮಿಷ ಕಾಲ ಹೀಗೆ ಇದ್ದರೆ ಒಳ್ಳೆಯ ಪರಿಹಾರ ಸಿಗುವುದು. ಒಳ್ಳೆಯ ಪರಿಣಾಮ ಕಂಡು ಬರುವ ತನಕ ಹಲವಾರು ಸಲ ಇದನ್ನು ಮುಂದುವರಿಸಿ.

ಟೀ ಬ್ಯಾಗ್

ಟೀ ಬ್ಯಾಗ್

ಕಣ್ಣಿಗೆ ಶಮನ ನೀಡಬೇಕಾದರೆ ಕ್ಯಾಮೊಮೈಲ್ ಟೀ ಬ್ಯಾಗ್ ನ್ನು ಕಣ್ಣಿಗೆ ಇಟ್ಟುಕೊಳ್ಳಿ. ಕ್ಯಾಮೊಲೈನ್ ಐಸ್ ಟೀಯ ಎರಡು ಟೀ ಬ್ಯಾಗ್ ನ್ನು ರೆಫ್ರಿಜರೇಟರ್ ನಲ್ಲಿ ಒಂದರಿಂದ ಎರಡು ಗಂಟೆ ಕಾಲ ಇಟ್ಟುಬಿಡಿ. ಫ್ರಿಡ್ಜ್ ನಿಂದ ತೆಗೆದು ಐದರಿಂದ ಹತ್ತು ನಿಮಿಷ ಕಾಲ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಬೇಗ ಪರಿಹಾರ ಸಿಗಬೇಕಾದರೆ ಮೂರರಿಂದ ನಾಲ್ಕು ಸಲ ಇದನ್ನು ಮುಂದುವರಿಸಿ.

ಉಪ್ಪು ನೀರು

ಉಪ್ಪು ನೀರು

ನೋವು ಹಾಗೂ ತುರಿಕೆ ಉಂಟು ಮಾಡುವ ಕಣ್ಣುಗಳಿಗೆ ನೀರು ಹಾಗೂ ಉಪ್ಪಿನ ಮಿಶ್ರಣ ತುಂಬಾ ಒಳ್ಳೆಯದು. ಉಪ್ಪು ಹಾಕಿರುವ ನೀರಿನಿಂದ ಕಣ್ಣುಗಳನ್ನು ತೊಳೆದರೆ ಕಣ್ಣುಗಳ ತುರಿಕೆ ಕಡಿಮೆ ಆಗುವುದು. ಕಣ್ಣುಗಳಲ್ಲಿ ತುಂಬಿಕೊಂಡಿರುವ ಕಸವು ಹೊರಹೋಗಿ ಉರಿಯೂತ ಕಡಿಮೆ ಮಾಡುವಲ್ಲಿ ಉಪ್ಪು ನೀರು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಉಪ್ಪು ಬ್ಯಾಕ್ಟೀರಿಯಾ ವಿರೋಧಿಯಾಗಿ ಕೆಲಸ ಮಾಡಿ ಬ್ಯಾಕ್ಟೀರಿಯಾವನ್ನು ಕೊಂದು ಹಾಕುತ್ತದೆ. ಒಂದು ಕಪ್ ಡಿಸ್ಟಿಲ್ ನೀರು ಮತ್ತು ಒಂದು ಚಮಚ ಉಪ್ಪು ಹಾಕಿಕೊಂಡು ಕಣ್ಣನ್ನು ನೈಸರ್ಗಿಕವಾಗಿ ತೊಳೆಯುವ ನೀರು ತಯಾರಿಸಿಕೊಳ್ಳಿ. ಉಪ್ಪು ಸಂಪೂರ್ಣವಾಗಿ ಕರಗಿ ಹೋಗುವ ತನಕ ನೀರನ್ನು ಕುದಿಸಿ. ನೀರು ತಣ್ಣಗಾದ ಬಳಿಕ ಕಣ್ಣನ್ನು ತೊಳೆಯಿರಿ. ದಿನದಲ್ಲಿ 2-3 ಸಲ ಹೀಗೆ ಮಾಡಿ.

ಗ್ರೀನ್ ಟೀ

ಗ್ರೀನ್ ಟೀ

ಉರಿಯೂತ ಶಮನಕಾರಿ ಗುಣ ಹೊಂದಿರುವ ಗ್ರೀನ್ ಟೀ ಕಣ್ಣಿಗೆ ಶಮನ ನೀಡುವುದು. ಒಂದು ಕಪ್ ಡಿಸ್ಟಿಲ್ಡ್ ನೀರಿನಲ್ಲಿ ಎರಡು ಗ್ರೀನ್ ಟೀ ಬ್ಯಾಗ್ ಹಾಕಿ ಕುದಿಸಿ. ಈ ನೀರು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ ಮತ್ತು ಈ ನೀರಿನಿಂದ ಕಣ್ಣನ್ನು ದಿನದಲ್ಲಿ ಎರಡು ಸಲ ತೊಳೆದರೆ ಒಳ್ಳೆಯ ಫಲಿತಾಂಶ ಸಿಗುವುದು.

ಅಲೋವೆರಾ

ಅಲೋವೆರಾ

ಕಣ್ಣಿನಲ್ಲಿ ತುರಿಕೆ ಉಂಟು ಮಾಡುವಂತಹ ಸೋಂಕನ್ನು ನಿವಾರಣೆ ಮಾಡುವಂತಹ ಫಂಗಲ್ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅಲೋವೆರಾದಲ್ಲಿದೆ. ಅಲೋವೆರಾವನ್ನು ಸುಲಭವಾಗಿ ಬಳಸಿಕೊಳ್ಳಬಹುದು.

ಮುಳ್ಳು ಸೌತೆಕಾಯಿ

ಮುಳ್ಳು ಸೌತೆಕಾಯಿ

ಕಣ್ಣಿನಲ್ಲಿ ಕಿರಿಕಿರಿ, ತುರಿಕೆ, ಕಣ್ಣು ಕೆಂಪಾಗುವುದು, ಉರಿಯೂತ ಮತ್ತು ನೀರು ತುಂಬಿಕೊಳ್ಳುವಂತಹ ಸಮಸ್ಯೆಗೆ ಮುಳ್ಳುಸೌತೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಇದರಲ್ಲಿ ಇರುವಂತಹ ಉರಿಯೂತ ವಿರೋಧಿ ಗುಣಗಳು ಕಣ್ಣಿಗೆ ತುಂಬಾ ಒಳ್ಳೆಯದು. ಮುಳ್ಳುಸೌತೆಯನ್ನು ವೃತ್ತಾಕಾರವಾಗಿ ತುಂಡು ಮಾಡಿಕೊಂಡು ಅದನ್ನು ಕಣ್ಣಿನ ಮೇಲಿಡಿ. 5ರಿಂದ 10 ನಿಮಿಷ ಕಾಲ ಕಣ್ಣಿನಲ್ಲಿ ಹಾಗೆ ಬಿಡಿ. ನೋವು ಹಾಗೂ ತುರಿಕೆ ಕಡಿಮೆ ಮಾಡಲು ಮುಳ್ಳುಸೌತೆಯ ರಸ ತೆಗೆದು ಅದನ್ನು ಕಣ್ಣಿಗೆ ಹಚ್ಚಿಕೊಳ್ಳಬಹುದು. ಮುಳ್ಳುಸೌತೆಯನ್ನು ತುಂಡು ಮಾಡಿಕೊಂಡು ಅದರ ರಸ ತೆಗೆದು ಹತ್ತಿ ಉಂಡೆಯಿಂದ ಮುಚ್ಚಿರುವ ಕಣ್ಣುಗಳ ಮೇಲೆ ಹಚ್ಚಿ. ಕೆಲವು ನಿಮಿಷ ಹಾಗೆ ಬಿಟ್ಟರೆ ಒಳ್ಳೆಯ ಶಮನ ಸಿಗುವುದು.

ಮೆಂತೆ ಕಾಳುಗಳು

ಮೆಂತೆ ಕಾಳುಗಳು

ಕಣ್ಣುಗಳನ್ನು ಸರಿಯಾಗಿ ಮುಚ್ಚಿಕೊಂಡು ಮೆಂತ್ಯೆ ಕಾಳಿನ ಪೇಸ್ಟ್ ನ್ನು ಎರಡು ಕಣ್ಣುಗಳಿಗೆ ಹಚ್ಚಿಕೊಳ್ಳಿ. ಕಣ್ಣಿನ ಉರಿಯೂತ, ಕಣ್ಣು ಕೆಂಪಾಗುವುದು ಮತ್ತು ಕಿರಿಕಿರಿ ತಡೆಯಲು ಮೆಂತ್ಯೆಯ ಪೇಸ್ಟ್ ನ್ನು ಸುಮಾರು 15 ರಿಂದ 20 ನಿಮಿಷ ಕಾಲ ಕಣ್ಣಿನ ಮೇಲಿಟ್ಟು ಬಳಿಕ ತಣ್ಣೀರಿನಿಂದ ತೊಳೆಯಿರಿ.

ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು ನೂರು!

For Quick Alerts
ALLOW NOTIFICATIONS
For Daily Alerts

    English summary

    Home Remedies For Eye Infections During Monsoon

    Monsoon brings a sigh of relief from the scorching summer heat; but at the same time, it brings along a host of infections and health hazards.Despite taking several precautionary measures, this is something that happens every year. As the monsoon sets in, the moisture in the atmosphere increases, making it conducive for the infections to thrive.
    Story first published: Wednesday, June 28, 2017, 7:02 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more