ನೆನಪಿಡಿ, ನಾಲಗೆ ಸ್ವಚ್ಛಗೊಳಿಸದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ!

By: Hemanth
Subscribe to Boldsky

ಹಲ್ಲುಜ್ಜುವುದು ಮತ್ತು ಹಲ್ಲಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ನಮಗೆ ಬಾಲ್ಯದಲ್ಲೇ ಹೇಳಿಕೊಡಲಾಗುತ್ತದೆ. ಪ್ರತೀ ದಿನ ಬೆಳಿಗ್ಗೆ ಹಾಗೂ ರಾತ್ರಿ ಹಲ್ಲುಜ್ಜಬೇಕು ಎಂದು ಹೇಳಿರುತ್ತಾರೆ. ಆದರೆ ನಾವು ಮಾತ್ರ ಬೆಳಿಗ್ಗೆ ಹಲ್ಲುಜ್ಜಿದ ಬಳಿಕ ಹಲ್ಲಿನ ಸ್ವಚ್ಛತೆಯ ನಿಯಮವನ್ನು ಗಾಳಿಗೆ ತೂರಿ ಬಿಡುತ್ತೇವೆ. ಇದರಿಂದ ಹಲ್ಲುಗಳು ಕೆಡುತ್ತದೆ ಮತ್ತು ವಯಸ್ಸಾಗುವ ಮೊದಲೇ ಹಲ್ಲುಗಳು ಕಿತ್ತು ಹೋಗುತ್ತದೆ. ನಾಲಗೆಯಲ್ಲಿ ಬಿಳಿ ಪದರ ಆಗಿದ್ರೆ ಚಿಂತಿಸದಿರಿ, ಇಲ್ಲಿದೆ ಪರಿಹಾರ 

ಹಲ್ಲಿನಂತೆ ಬಾಯಿಯನ್ನು ಕೂಡ ಸ್ವಚ್ಛವಾಗಿಡುವುದು ಅತೀ ಅಗತ್ಯವಾಗಿದೆ. ಇದಕ್ಕೆ ನಾಲಗೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು. ನಾಲಗೆಯಲ್ಲಿ ಅತೀ ಹೆಚ್ಚಿನ ಬ್ಯಾಕ್ಟೀರಿಯಾಗಳು ನೆಲೆನಿಲ್ಲುತ್ತದೆ. ಈ ಕಾರಣದಿಂದ ನಾಲಗೆ ಸ್ವಚ್ಛತೆ ಅತೀ ಅಗತ್ಯವಾಗಿದೆ. ನಾಲಗೆಯನ್ನು ಸ್ವಚ್ಛಗೊಳಿಸದೆ ಇದ್ದರೆ ಏನಾಗುತ್ತದೆ ಎಂದು ಈ ಮೂಲಕ ತಿಳಿದುಕೊಳ್ಳುವ..... 

ನಾಲಗೆ ಕಪ್ಪಾಗುವುದು

ನಾಲಗೆ ಕಪ್ಪಾಗುವುದು

ಆಹಾರ, ಪಾನೀಯಗಳಾದ ಚಹಾ, ತಂಪುಪಾನೀಯ ಮತ್ತು ಕಾಫಿಯಿಂದಾಗಿ ನಾಲಗೆಯ ಮೇಲೆ ಕಲೆಗಳು ಹಾಗೂ ಒಂದು ಪದರವು ನಿರ್ಮಾಣವಾಗುತ್ತದೆ. ನಿಯಮಿತವಾಗಿ ನಾಲಗೆಯನ್ನು ಬ್ರಶ್ ಮಾಡದೆ ಇದ್ದರೆ ಅದರಿಂದ ನಾಲಗೆಯು ಕಪ್ಪಾಗಬಹುದು.ನಾಲಗೆಯಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರಿಗೆ ತೋರಿಸಿ

ಕಿಣ್ವದ ಸೋಂಕು

ಕಿಣ್ವದ ಸೋಂಕು

ಕಿಣ್ವಗಳು ಸಾಮಾನ್ಯವಾಗಿ ಜನನಾಂಗದ ಮೇಲೆ ಪ್ರಭಾವವನ್ನು ಬೀರುತ್ತದೆ. ಆದರೆ ಇದು ಬಾಯಿಯಲ್ಲೂ ಹಾನಿಯನ್ನು ಉಂಟು ಮಾಡಬಹುದು. ಹಾನಿಕಾರಕ ಕಿಣ್ವಗಳು ನಾಲಗೆಗೆ ಬ್ರಷ್ ಮಾಡದೆ ಇರುವ ಸಂದರ್ಭದಲ್ಲಿ ಸೋಂಕು ನಿರ್ಮಾಣವಾಗಬಹುದು.

ದಂತ ಕಾಯಿಲೆ

ದಂತ ಕಾಯಿಲೆ

ನಾಲಗೆ ಮೇಲೆ ಬ್ಯಾಕ್ಟೀರಿಯಾ ನಿರ್ಮಾಣದಿಂದಾಗಿ ಹಲ್ಲುಗಳು ಹಾಗೂ ಒಸಡಿನ ಮೇಲೆ ಪರಿಣಾಮ ಉಂಟಾಗಬಹುದು. ನಾಲಗೆಗೆ ಬ್ರಷ್ ಮಾಡದೆ ಇದ್ದರೆ ಒಸಡಿನ ಉರಿಯೂತ ಮತ್ತು ದಂತ ಕಾಯಿಲೆಗಳು ಬರಬಹುದು.

ರುಚಿ ಸಿಗದು

ರುಚಿ ಸಿಗದು

ನಾಲಗೆಗೆ ಬ್ರಷ್ ಮಾಡದೆ ಇದ್ದಾಗ ಬ್ಯಾಕ್ಟೀರಿಯಾಗಳು ಅತಿಯಾಗಿ ತುಂಬಿಕೊಳ್ಳುತ್ತದೆ. ಇದರಿಂದ ನಾಲಗೆಗೆ ಯಾವುದೇ ರೀತಿಯ ರುಚಿ ಸಿಗದು. ನಾಲಗೆಯಲ್ಲಿ ಬಿಳಿ ಪದರ ಆಗಿದ್ರೆ ಚಿಂತಿಸದಿರಿ, ಇಲ್ಲಿದೆ ಪರಿಹಾರ

 
English summary

Here is why you must never miss out on brushing your tongue!

Surely, most of us would know by now how important dental hygiene is, right? Right from a very young age, we are advised and trained by our parents to brush our teeth twice every day, once in the morning and once at night. However, many of us may not follow this rule and end up having unhygienic teeth, or even worse cavities and gum problems.
Subscribe Newsletter