ಅಧ್ಯಯನ ವರದಿ: ಕರುಳಿನ ಕ್ಯಾನ್ಸರ್ ನಿಯಂತ್ರಿಸಲು ಆಹಾರ ಪಥ್ಯ ಹೀಗಿರಲಿ...

By: Arshad
Subscribe to Boldsky

ಉತ್ತಮ ಆರೋಗ್ಯಕ್ಕೆ ಸೂಕ್ತವಾದ ಆಹಾರಕ್ರಮವೂ ಅಗತ್ಯವಾಗಿದೆ. ಸರಿಯಾದ ಆಹಾರ ಸೇವನೆಯಿಂದ ಹಲವಾರು ಆರೋಗ್ಯದ ತೊಂದರೆಗಳಿಂದ ರಕ್ಷಣೆ ಪಡೆಯಬಹುದು. ವಿಶೇಷವಾಗಿ ಕರುಳಿನ ಕ್ಯಾನ್ಸರ್‌ನಿಂದ ರಕ್ಷಣೆ ಪಡೆಯಲು ನಮ್ಮ ಆಹಾರಕ್ರಮ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.

American Institute for Cancer Research ಸಂಸ್ಥೆ ಹಾಗೂ World Cancer Research Fund International ಪ್ರಕಟಿಸಿರುವ ವರದಿಯ ಪ್ರಕಾರ ಇಡಿಯ ಧಾನ್ಯಗಳನ್ನು ಪ್ರಮುಖ ಆಹಾರವಾಗಿ ಸೇವಿಸುವ ಮೂಲಕ, ನಿಯಮಿತ ವ್ಯಾಯಮ ಹಾಗೂ ಮದ್ಯಪಾನ ಮತ್ತು ಸಂಸ್ಕರಿಸಿದ ಮಾಂಸಾಹಾರಗಳನ್ನು ಅತಿ ಕಡಿಮೆ ಮಾಡುವ ಮೂಲಕ ಕರುಳಿನ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು.

colon cancer

ಈ ವರದಿಯಲ್ಲಿ ತಿಳಿಸಿರುವ ಪ್ರಕಾರ ದಿನಕ್ಕೆ ಮೂರು ಕಪ್‌ನಷ್ಟು ಇಡಿಯ ಧಾನ್ಯಗಳು, ಉದಾಹರಣೆಗೆ ಪಾಲಿಶ್ ಮಾಡದ ಅಕ್ಕಿ ಅಥವಾ ಇಡಿಯ ಗೋಧಿಯ ಬ್ರೆಡ್ ಮೊದಲಾದವುಗಳನ್ನು ಸೇವಿಸುವ ಮೂಲಕ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಶೇ 17ರಷ್ಟು ಕಡಿಮೆಯಾಗುತ್ತದೆ.

"ಸಮತೋಲನದ ದೇಹದ ತೂಕವನ್ನು ಕಾಯ್ದುಕೊಳ್ಳುವುದು, ಸಾಕಷ್ಟು ವ್ಯಾಯಾಮ, ಆರೋಗ್ಯಕರ ಆಹಾರಕ್ರಮ ಹಾಗೂ ಧೂಮಪಾನ/ಮದ್ಯಪಾನದಿಂದ ದೂರವಿರುವುದರ ಮೂಲಕ ಕರುಳು ಹಾಗೂ ಮಲದ್ವಾರದ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆ ಮಾಡಬಹುದು" ಎಂದು ಹಾರ್ವರ್ಡ್ ಸಾರ್ವಜನಿಕ ಆರೋಗ್ಯ ಶಾಲೆಯ ಪೌಷ್ಟಿಕ ಆಹಾರ ಹಾಗೂ ಸೋಂಕುಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಜಿಯೋವಾನ್ನುಸ್ಸಿಯವರು ತಿಳಿಸಿದ್ದಾರೆ.

ಸಂಶೋಧಕರ ಪ್ರಕಾರ ಹೆಚ್ಚು ಹೆಚ್ಚು ಇಡಿಯ ಧಾನ್ಯದ ಆಹಾರಗಳನ್ನು ಸೇವಿಸುವ ಮೂಲಕ ಗರಿಷ್ಟ ರಕ್ಷಣೆಯನ್ನು ಪಡೆಯಬಹುದು. ಈ ಸಂಶೋಧಕರು 25,000 ಜನ ಕರುಳಿನ ಕ್ಯಾನ್ಸರ್ ಪೀಡಿತ ವ್ಯಕ್ತಿಗಳ ಸಹಿತ ಸುಮಾರು ಮೂರು ಕೋಟಿಯಷ್ಟು ಜನರ ಆಹಾರಕ್ರಮಗಳನ್ನು ಅಭ್ಯಸಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇವರ ಪ್ರಕಾರ ಯಾವುದೇ ವ್ಯಕ್ತಿ ಒಂದು ವಾರದ ಅವಧಿಯಲ್ಲಿ ಐನೂರು ಗ್ರಾಂ ಗಿಂತ ಹೆಚ್ಚಿನ ಪ್ರಮಾಣದ ಸಂಸ್ಕರಿತ ಮಾಂಸಾಹಾರವನ್ನು ಸೇವಿಸಕೂಡದು.

ಇದೇ ರೀತಿ ದಿನಕ್ಕೆ ಎರಡು ಅಥವಾ ಹೆಚ್ಚಿನ ಪೆಗ್ ನಷ್ಟು ಮದ್ಯಪಾನ ಸೇವಿಸುವ ಹಾಗೂ ಸ್ಥೂಲದೇಹ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆಯೊಂದಿಗೆ ನಿಕಟ ಸಂಬಂಧ ಹೊಂದಿದೆ.

whole grain

"ಆರೋಗ್ಯಕರ ಆಹಾರ ಎಂದರೆ ಸಾಕಷ್ಟು ನಾರಿನಂಶ ಹೆಚ್ಚಿರುವ ಆಹಾರಗಳು, ಹಣ್ಣುಗಳು, ಹಸಿಯಾಗಿ ಸೇವಿಸಬಹುದಾದ ತರಕಾರಿಗಳನ್ನು ಹೆಚ್ಚು ಹೆಚ್ಚಾಗಿ ಹಾಗೂ ಸಂಸ್ಕರಿಸಿದ ಕಾಳುಗಳು, ಪಿಷ್ಟಭರಿತ ಆಹಾರಗಳು ಹಾಗೂ ಹೆಚ್ಚಿನ ಸಕ್ಕರೆ ಮತ್ತು ಕೊಬ್ಬು ಇರುವ ಆಹಾರಗಳನ್ನು ಅತಿ ಕಡಿಮೆ ಸೇವಿಸುವುದು" ಎಂದು ಜಿಯೋವಾನ್ನುಸ್ಸಿ ತಿಳಿಸುತ್ತಾರೆ. "ಕೇವಲ ಇಡಿಯ ಧಾನ್ಯಗಳನ್ನು ಮಾತ್ರ ತಿಂದರೆ ಸಾಲದು, ಬದಲಿಗೆ ನಿತ್ಯವೂ ಸಾಕಷ್ಟು ವ್ಯಾಯಾಮ ಹಾಗೂ ಚಟುವಟಿಕೆಯಿಂದಿರಬೇಕು. ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಅತ್ಯಗತ್ಯವಾಗಿದೆ" ಎಂದೂ ಅವರು ತಿಳಿಸುತ್ತಾರೆ.

English summary

here-is-how-you-can-lower-the-risk-of-colon-caner

According to a new report from the American Institute for Cancer Research and the World Cancer Research Fund International, for reducing the risk of colon cancer, whole grains and exercise are necessary, while processed meat and alcohol should be limited. These findings suggest that three servings a day of whole grains, like brown rice or whole wheat bread, may actually lower the risk of colon cancer by 17 percent.
Subscribe Newsletter