ಈ ಬೀಜಗಳು ನೋಡಲು ಚಿಕ್ಕದಾದರೂ, ಕಾರುಬಾರು ಮಾತ್ರ ದೊಡ್ಡದು!!

By: manu
Subscribe to Boldsky

ಬೀಜಗಳು ಅತಿ ಆರೋಗ್ಯಕರವೇಕೆಂದು ಗೊತ್ತೇ? ವಾಸ್ತವವಾಗಿ ಬೀಜವೆಂದರೆ ಇಡಿಯ ಹೆಮ್ಮರದ ಪ್ರತಿ ಗುಣವನ್ನೂ ಅತ್ಯಂತ ಸೂಕ್ಷ್ಮರೂಪದಲ್ಲಿ ಹುದುಗಿಸಿಕೊಂಡಿರುವ ಪ್ರತಿನಿಧಿಯಾಗಿದ್ದು ಸಸ್ಯ ಸಂಕುಲವನ್ನು ಬೇರೊಂದು ಸ್ಥಳದಲ್ಲಿ ಮುಂದುವರೆಸಲು ನಿಸರ್ಗವೇ ಒದಗಿಸಿದ ವ್ಯವಸ್ಥೆಯಾಗಿದೆ. ಅಂದರೆ ಈ ಪುಟ್ಟ ಬೀಜದಲ್ಲಿ ಒಂದು ಹೆಮ್ಮರದ ಅಂಶವೇ ಇದೆ.

ಒಂದೇ ಒಂದು ಬೀಜಕ್ಕೆ ಸೂಕ್ತ ಆರೈಕೆ ಒದಗಿದರೆ ಇದು ಬೇರುಬಿಟ್ಟು ಆರೋಗ್ಯಕರ ಮರವಾಗಿ ಬೆಳೆಯುತ್ತದೆ. ಇದೇ ಕಾರಣಕ್ಕೆ ಬೀಜಗಳಲ್ಲಿ ವಿಟಮಿನ್ನುಗಳು, ಖನಿಜಗಳು, ಪ್ರೋಟೀನುಗಳು ಹಾಗೂ ಕೆಲವು ಕಿಣ್ವಗಳು ಗರಿಷ್ಠ ಮತ್ತು ಸಾಂದ್ರೀಕೃತ ಪ್ರಮಾಣದಲ್ಲಿರುತ್ತವೆ. ಈ ಬೀಜಗಳನ್ನು ಹಸಿಯಾಗಿಯೇ ತಿನ್ನುವ ಮೂಲಕ ಈ ಎಲ್ಲಾ ಪೋಷಕಾಂಶಗಳ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು. ಬನ್ನಿ, ಹೀಗೆ ತಿನ್ನಲು ಅತ್ಯುತ್ತಮವಾದ ಬೀಜಗಳು ಯಾವುವು ಎಂಬುದನ್ನು ನೋಡೋಣ....

ದಾಳಿಂಬೆ ಬೀಜಗಳು

ದಾಳಿಂಬೆ ಬೀಜಗಳು

ಈ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಇದೆ. ಅಲ್ಲದೇ ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇದ್ದು ತೂಕ ಇಳಿಸುವವರಿಗೆ ಹೆಚ್ಚಿನ ನೆರವು ನೀಡುತ್ತದೆ. ಈ ಬೀಜಗಳಿಂದ ಹಿಂಡಿ ತೆಗೆದ ರಸವನ್ನು ಕುಡಿಯುವ ಮೂಲಕ ರಕ್ತದಲ್ಲಿ ತಕ್ಷಣವೇ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಬಹುದು. ಹಾಗೂ ಇದರಲ್ಲಿರುವ ಪೋಷಕಾಂಶಗಳು ರಕ್ತವನ್ನು ಹೆಪ್ಪುಗಟ್ಟುವುದರಿಂದ ರಕ್ಷಿಸುತ್ತದೆ. ಇದೇ ಕಾರಣಕ್ಕೆ ದಾಳಿಂಬೆ ಬೀಜಗಳನ್ನು ತಿಂದ ಬಳಿಕ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಇದರಲ್ಲಿ ಪಾಲಿಫೆನಾಲುಗಳು ಹಾಗೂ ಕೊಂಚಮಟ್ಟಿಗೆ ಪೊಟ್ಯಾಶಿಯಂ ಸಹಾ ಇದ್ದು ಆರೋಗ್ಯಕ್ಕೆ ಪೂರಕವಾಗಿವೆ.

'ದಾಳಿಂಬೆ ಸಿಪ್ಪೆಯ' ಗುಣ ಗೊತ್ತಾದರೆ, ಬಿಸಾಡಲು ಮನಸ್ಸು ಬರಲ್ಲ!

ಕುಂಬಳದ ಬೀಜಗಳು

ಕುಂಬಳದ ಬೀಜಗಳು

ನಮ್ಮ ನಿತ್ಯದ ಚಟುವಟಿಕೆಗೆ ಕಬ್ಬಿಣದ ಅಗತ್ಯವೂ ಇದೆ. ಇದನ್ನು ಕುಂಬಳದ ಒಣಬೀಜಗಳು ಉತ್ತಮಪ್ರಮಾಣದಲ್ಲಿ ಒದಗಿಸುತ್ತವೆ. ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚಿದ್ದಷ್ಟೂ ರಕ್ತ ಆರೋಗ್ಯಕರವಾಗಿರುತ್ತದೆ ಹಾಗೂ ದೇಹದಲ್ಲಿ ಶಕ್ತಿ ತುಂಬಿರುತ್ತದೆ. ಇವುಗಳಲ್ಲಿ ಪ್ರೋಟೀನುಗಳೂ ಇವೆ. ಅಲ್ಲದೇ ಒಂದು ವೇಳೆ ನಿಮ್ಮ ದೇಹದಲ್ಲಿ ವಿಟಮಿನ್ ಬಿ ಕೊರತೆ ಇದ್ದರೆ ಕುಂಬಳ ಬೀಜಗಳನ್ನು ತಿನ್ನುವ ಮೂಲಕ ಈ ಕೊರತೆಯನ್ನು ನೀಗಿಸಬಹುದು. ಅಲ್ಲದೇ ಇದರಲ್ಲಿರುವ ನಿಯಾಸಿನ್, ರೈಬೋಫ್ಲೀವಿನ್, ಫೋಲೇಟ್ ಹಾಗೂ ಥಿಯಾಮಿನ ಗಳು ಆರೋಗ್ಯ ವರ್ಧಿಸುತ್ತವೆ. ವಿಶೇಷವಾಗಿ ಎಲ್-ಟ್ರಿಪ್ಟೋಫ್ಯಾನ್ ಎಂಬ ಪೋಷಕಾಂಶ ಮನೋಭಾವವನ್ನು ಉತ್ತಮಗೊಳಿಸುವ ಮೂಲಕ ಖಿನ್ನತೆ ಎದುರಾಗದಂತೆ ನೋಡಿಕೊಳ್ಳುತ್ತದೆ.

ಆರೋಗ್ಯದ ಪಾಲಿನ ಸಂಜೀವಿನಿ-ಸಿಹಿ ಕುಂಬಳಕಾಯಿ

ಸೆಣಬಿನ ಬೀಜಗಳು (Hemp Seeds)

ಸೆಣಬಿನ ಬೀಜಗಳು (Hemp Seeds)

ಒಂದು ವೇಳೆ ನೀವು ವ್ಯಾಯಾಮ ಮಾಡುತ್ತಿದ್ದು ಸ್ನಾಯುಗಳನ್ನು ಬಲಪಡಿಸಲು ಇಚ್ಛಿಸಿದರೆ ಈ ಬೀಜಗಳಿಗಿಂತ ಹೆಚ್ಚಿನ ಪ್ರೋಟೀನುಗಳನ್ನು ಹಾಗೂ ಅವಶ್ಯಕ ಅಮೈನೋ ಆಮ್ಲಗಳನ್ನು ಬೇರಾವ ಆಹಾರವೂ ನೀಡಲಾರದು. ಈ ಬೀಜಗಳಲ್ಲಿ ಬಹುತೇಕ ಎಲ್ಲಾ ಅವಶ್ಯಕ ಅಮೈನೋ ಆಮ್ಲಗಳಿವೆ. ಇದರಲ್ಲಿ ಫೈಟೋ ನ್ಯೂಟ್ರಿಯೆಂಟುಗಳೂ ಇವೆ. ಇವೆಲ್ಲವೂ ಅಂಗಾಂಗಗಳಿಗೆ, ತ್ವಚೆ, ಜೀವಕೋಶ, ಅಂಗಾಂಶ, ಅಷ್ಟೇ ಅಲ್ಲ, ರಕ್ತಕ್ಕೂ ಉತ್ತಮವಾಗಿವೆ.

ಚಿಯಾ ಬೀಜಗಳು (Chia Seeds)

ಚಿಯಾ ಬೀಜಗಳು (Chia Seeds)

ಮೂಳೆಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಈ ಬೀಜದಲ್ಲಿ ಹೇರಳವಾಗಿವೆ. ಆದ್ದರಿಂದ ಈ ಬೀಜಗಳನ್ನು ನಿಯಮಿತವಾಗಿ ಸೇವಿಸುತ್ತಾ ಇರಬೇಕು. ಕೆಂಪು ಬೀನ್ಸ್ ಬೀಜಗಳಿಗಿಂತಲೂ ಹೆಚ್ಚು ಪ್ರೋಟೀನ್ ಈ ಬೀಜದಲ್ಲಿದೆ. ಪಾಲಕ್ ನಲ್ಲಿರುವುದಕ್ಕಿಂತಲೂ ಹೆಚ್ಚು ಕಬ್ಬಿಣವಿದೆ. ಬ್ಲೂಬೆರಿ ನೀಡುವುದಕ್ಕಿಂತಲೂ ಹೆಚ್ಚು ಆಂಟಿ ಆಕ್ಸಿಡೆಂಟುಗಳನ್ನು ಒದಗಿಸುತ್ತದೆ. ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ, ಕಿತ್ತಳೆಗಿಂತಲೂ ಹೆಚ್ಚು ವಿಟಮಿನ್ ಸಿ ಹಾಗೂ ಮೀನಿನಲ್ಲಿರುವುದಕ್ಕಿಂತಲೂ ಹೆಚ್ಚು ಒಮೆಗಾ 3 ಕೊಬ್ಬಿನ ಆಮ್ಲಗಳಿವೆ. ಅಷ್ಟೇ ಅಲ್ಲ, ಕರಗದ ನಾರು ಹಾಗೂ ಮೆಗ್ನೇಶಿಯಂ ಸಹಾ ಇದೆ.

ಜೀರಿಗೆ

ಜೀರಿಗೆ

ಈ ಬೀಜಗಳಲ್ಲಿ ನಂಜುನಿರೋಧಕ ಗುಣ ಹಾಗೂ ಉತ್ತಮ ಪ್ರಮಾಣದ ಕಬ್ಬಿಣವಿದೆ. ಇವು ಯಕೃತ್ ನ ಕ್ಷಮತೆ ಹೆಚ್ಚಿಸುತ್ತದೆ ಹಾಗೂ ಜೀರ್ಣಕ್ರಿಯೆಗೂ ನೆರವಾಗುತ್ತದೆ. ಇವುಗಳನ್ನು ಸೇವಿಸುವ ಮೂಲಕ ಶೀತ, ಕೆಮ್ಮು ಗಂಟಲ ಕಿರಿಕಿರಿ ಕಡಿಮೆಯಾಗುತ್ತದೆ. ಇವು ಮೂತ್ರಪಿಂಡಗಳಿಗೆ ಉತ್ತಮವಾಗಿವೆ ಹಾಗೂ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಜೀರಿಗೆ ನೀರು: ಸಣ್ಣ-ಪುಟ್ಟ ಕಾಯಿಲೆಗೆ ದಿವ್ಯೌಷಧ

ಎಳ್ಳಿನ ಬೀಜಗಳು

ಎಳ್ಳಿನ ಬೀಜಗಳು

ಹೃದಯಕ್ಕೆ ಅತ್ಯುತ್ತಮವಾದ ಬೀಜಗಳು ಯಾವುವು? ಉತ್ತರ ಒಮೆಗಾ 6 ಕೊಬ್ಬಿನ ಆಮ್ಲ (ಲಿನೋಲಿಕ್ ಆಮ್ಲ) ಇರುವ ಈ ಪುಟ್ಟ ಎಳ್ಳು. ಇವುಗಳ ಸೇವನೆಯಿಂದ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಈ ಪುಟ್ಟ ಬೀಜಗಳಲ್ಲಿ ಕರಗುವ ನಾರು, ಸತು, ವಿಟಮಿನ್ ಬಿ೧, ಗಂಧಕ, ಕಬ್ಬಿಣ, ಮೆಗ್ನೀಶಿಯಂ ಹಾಗೂ ಕ್ಯಾಲ್ಸಿಯಂ ಸಹಾ ಇದೆ.

ಅಗಸೆ ಬೀಜ(Flax Seeds)

ಅಗಸೆ ಬೀಜ(Flax Seeds)

ಈ ಬೀಜಗಳಲ್ಲಿ ಕ್ಯಾನ್ಸರ್ ನಿರೋಧಕ ಗುಣವಿದೆ. ಅಲ್ಲದೇ ಇದರಲ್ಲಿ ಉರಿಯೂತ ಕಡಿಮೆಗೊಳಿಸುವ ಪೋಷಕಾಂಶಗಳೂ ಇವೆ. ನಿಮ್ಮ ನಿತ್ಯದ ಸಲಾಡ್ ಗಳೊಂದಿಗೆ ಈ ಬೀಜಗಳನ್ನು ತಿನ್ನುವುದು ಆರೋಗ್ಯಕರ.

ಅಗಸೆ ಬೀಜದ ಆರೋಗ್ಯಕರ ಲಾಭಗಳು

English summary

Here Are The Healthiest Seeds In The World!

Do you know why seeds are healthy? Well, a seed is the one that produces a tree or a plant. It contains everything that can give life to a plant. Every plant ensures to produce seeds that can later on transform themselves into healthy plants. That is why seeds are rich in vitamins, minerals, proteins and some enzymes. Eating seeds in the raw form helps you derive lot of nutrients. Here are some of the best seeds to include in your diet.
Subscribe Newsletter