ರಾತ್ರಿ ಊಟದ ನಂತರ ಅಪ್ಪಿತಪ್ಪಿಯೂ ಹೀಗೆಲ್ಲಾ ಮಾಡಬೇಡಿ!

Posted By: manu
Subscribe to Boldsky

ರಾತ್ರಿಯ ಊಟ ಗಡದ್ದಾಗಿದ್ದಷ್ಟೂ ಹೆಚ್ಚಿನ ಸಂಖ್ಯೆಯ ಕ್ಯಾಲೋರಿಗಳು ಕೊಬ್ಬಾಗಿ ಪರಿವರ್ತನೆಗೊಳ್ಳುತ್ತವೆ. ರಾತ್ರಿಯ ಊಟದ ಬಗ್ಗೆ ಇಂತಹ ಇನ್ನೂ ಕೆಲವು ಅಭ್ಯಾಸಗಳು ಅನಾರೋಗ್ಯಕರವಾಗಿದ್ದು ಇಂದಿನ ಲೇಖನದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗುತ್ತಿದೆ.

ನಮ್ಮ ದಿನದ ಆಹಾರದಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆ ಇರುವ ಆಹಾರಗಳೆಂದರೆ ಉಪಾಹಾರ ಮತ್ತು ರಾತ್ರಿಯ ಊಟ. ಇವೆರಡೂ ಕಡಿಮೆ ಪ್ರಮಾಣದಲ್ಲಿದ್ದು ಪೌಷ್ಟಿಕವಾಗಿದ್ದಷ್ಟೂ ಆರೋಗ್ಯಕ್ಕೂ ಉತ್ತಮ ಹಾಗೂ ತೂಕ ಹೆಚ್ಚಿಸಿಕೊಳ್ಳದೇ ಇರಲೂ ನೆರವಾಗುತ್ತದೆ. ರಾತ್ರಿಯ ಊಟ ಗಡದ್ದಾಗಿದ್ದಷ್ಟೂ ಹೆಚ್ಚಿನ ಸಂಖ್ಯೆಯ ಕ್ಯಾಲೋರಿಗಳು ಕೊಬ್ಬಾಗಿ ಪರಿವರ್ತನೆಗೊಳ್ಳುತ್ತವೆ. ರಾತ್ರಿಯ ಊಟದ ಬಗ್ಗೆ ಇಂತಹ ಇನ್ನೂ ಕೆಲವು ಅಭ್ಯಾಸಗಳು ಅನಾರೋಗ್ಯಕರವಾಗಿದ್ದು ಇಂದಿನ ಲೇಖನದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗುತ್ತಿದೆ.

ಪೌಷ್ಟಿಕ ಮತ್ತು ಸೂಕ್ತಪ್ರಮಾಣದ ರಾತ್ರಿಯ ಊಟ ಬರೆ ತೂಕ ಹೆಚ್ಚಿಸಿಕೊಳ್ಳದಿರಲು ಮಾತ್ರವಲ್ಲ, ಬದಲಿಗೆ ಸುಖವಾದ ನಿದ್ದೆ, ರಾತ್ರಿಯ ಅನೈಚ್ಛಿಕ ಕಾರ್ಯಗಳಿಗೆ ಅಗತ್ಯವಾದ ಪೋಷಕಾಂಶಗಳ ಪೂರೈಕೆ ಮೊದಲಾದವುಗಳಿಗೂ ಅವಶ್ಯವಾಗಿದೆ. ಈ ಕೆಲಸಕ್ಕೆ ರಾತ್ರಿಯೂಟಕ್ಕೂ ಮುನ್ನ ಕೊಂಚ ಹಣ್ಣು ಮತ್ತು ಹಸಿಯಾಗಿ ತಿನ್ನಬಹುದಾದ ತರಕಾರಿಗಳನ್ನು ತಿನ್ನುವುದೇ ಸೂಕ್ತ. ಊಟಕ್ಕೆ ಮೊದಲು ಖಾರ, ಆಮೇಲೆ ಸಿಹಿ! ಯಾಕೆ ಹೀಗೆ?

ಪರ್ಯಾಯವಾಗಿ ತರಕಾರಿಯ ಅಥವಾ ಚಿಕನ್ ಸೂಪ್ ಅನ್ನೂ ಸೇವಿಸಬಹುದು. ರಾತ್ರಿಯೂಟದ ಬಳಿಕ ಅಥವಾ ನಡುವೆ ಸಿಹಿ ಬೇಡವೇ ಬೇಡ. ಇಂತಹ ಇನ್ನೂ ಹಲವಾರು ಮಾಹಿತಿಗಳನ್ನು ನೀಡಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತಿದೆ. ಬನ್ನಿ, ರಾತ್ರಿಯೂಕ್ಕೆ ಸಂಬಂಧಿಸಿದಂತೆ ಅಮೂಲ್ಯವಾದ ಮಾಹಿತಿಗಳನ್ನು ಈಗ ನೋಡೋಣ...

ಊಟದ ಬಳಿಕ ತಕ್ಷಣವೇ ಮಲಗಬೇಡಿ

ಊಟದ ಬಳಿಕ ತಕ್ಷಣವೇ ಮಲಗಬೇಡಿ

ರಾತ್ರಿಯೂಟದ ಬಳಿಕ ತಕ್ಷಣವೇ ಮಲಗಿದರೆ ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಹೊಟ್ಟೆಯುಬ್ಬರಿಕೆ ಹಾಗೂ ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳಲು ಕಾರಣವಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ರಾತ್ರಿಯೂಟದ ಎರಡು ಗಂಟೆಗಳ ಬಳಿಕವೇ ಮಲಗಬೇಕು. ಹಿರಿಯರ ಪ್ರಕಾರ ಊಟದ ಬಳಿಕ ಕೊಂಚ ಅಡ್ಡಾಡಿ, ಕೊಂಚ ಕಾಲ ಯಾವುದೇ ಗದ್ದಲವಿಲ್ಲದೇ ಮನಸ್ಸಿಗೆ ಮುದನೀಡುವ ವಿಷಯವನ್ನು ಓದಿ, ಪಾದಗಳನ್ನು ತಣ್ಣೀರಿನಿಂದ ತೊಳೆದು ಮಲಗಿದರೆ ಸುಖವಾದ ನಿದ್ದೆ ಆವರಿಸುತ್ತದೆ.

ಭಾರೀ ವ್ಯಾಯಮಗಳನ್ನು ಮಾಡಬೇಡಿ

ಭಾರೀ ವ್ಯಾಯಮಗಳನ್ನು ಮಾಡಬೇಡಿ

ಊಟದ ಬಳಿಕ ರಕ್ತದ ಹೆಚ್ಚಿನ ಪ್ರಮಾಣ ಜೀರ್ಣಾಂಗಗಳಿಗೆ ಒದಗಿಸಲ್ಪಡುವ ಕಾರಣ ಈ ಸಮಯದಲ್ಲಿ ನಡೆದಾಟಕ್ಕಿಂತ ಹೆಚ್ಚಿನ ಶ್ರಮದ ಯಾವುದೇ ವ್ಯಾಯಾಮಕ್ಕೆ ಸ್ನಾಯುಗಳಿಗೆ ರಕ್ತಪೂರೈಕೆ ಸಾಕಾಗುವುದಿಲ್ಲ. (ಊಟ ಮಾಡಿದ ಬಳಿಕ ಓಡಿದರೆ ಹೊಟ್ಟೆಯಲ್ಲಿ ನೋವಾಗುವುದಕ್ಕೆ ಇದೇ ಕಾರಣ). ಹೆಚ್ಚಿನ ರಕ್ತ ಪೂರೈಕೆಗೆ ಹೃದಯ ಇರುವ ರಕ್ತವನ್ನೇ ಹೆಚ್ಚಿನ ಒತ್ತಡದಲ್ಲಿ ನೀಡುವ ಅನಿವಾರ್ಯತೆಗೆ ಸಿಲುಕಿಕೊಳ್ಳುತ್ತದೆ. ಪರಿಣಾಮವಾಗಿ ಹೃದಯದ ಬಡಿತವೂ ಹೆಚ್ಚುತ್ತದೆ ಹಾಗೂ ಶರೀರ ಹೆಚ್ಚು ಬಿಸಿಯಾಗತೊಡಗುತ್ತದೆ. ಇದು ವಿಶೇಷವಾಗಿ ಹೊಟ್ಟೆಯ ಸ್ನಾಯುಗಳಲ್ಲಿ ನೋವು ಮತ್ತು ಸೆಡೆತಕ್ಕೂ ಕಾರಣವಾಗಬಹುದು.

ಕೊಂಚ ನಡೆದಾಡಿ

ಕೊಂಚ ನಡೆದಾಡಿ

ಊಟದ ಬಳಿಕ ಕೊಂಚ ದೂರವಾದರೂ ನಡೆಯಲೇಬೇಕು. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನಡೆದರೂ ಸಾಕಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳದಿರಲು ನೆರವಾಗುತ್ತದೆ. ತೂಕ ಇಳಿಸಬೇಕೆಂದರೆ ಈ ಕ್ರಮ ಅತ್ಯಗತ್ಯವಾಗಿದೆ.

ತಪ್ಪದೇ ಹಲ್ಲುಜ್ಜಿ

ತಪ್ಪದೇ ಹಲ್ಲುಜ್ಜಿ

ಊಟಾವಾದ ಅರ್ಧಗಂಟೆಯ ಬಳಿಕ ತಪ್ಪದೇ ಹಲ್ಲುಜ್ಜಬೇಕು. ಇದರಿಂದ ಬಾಯಿಯಲ್ಲಿ ಉಳಿದಿದ್ದ ಆಹಾರದ ತುಣುಕುಗಳು ಲಾಲಾರಸದಲ್ಲಿ ಕರಗಿ ಆಮ್ಲೀಯಮಾಗಿದ್ದು ಹಲ್ಲುಗಳ ಸವೆತಕ್ಕೆ ಕಾರಣವಾಗಬಹುದಾಗಿದ್ದುದು ಈಗ ಇಲ್ಲವಾಗುತ್ತದೆ. ಊಟದ ಅರ್ಧಗಂಟೆಯ ಬಳಿಕ ಹಲ್ಲುಜ್ಜುವುದು ಅತ್ಯಂತ ಆರೋಗ್ಯಕರ ಅಭ್ಯಾಸವಾಗಿದೆ.

ಸ್ನಾನ ಮಾಡಬೇಡಿ

ಸ್ನಾನ ಮಾಡಬೇಡಿ

ಕೆಲವರಿಗೆ ಊಟದ ಬಳಿಕ ಸ್ನಾನ ಮಾಡುವ ಅಭ್ಯಾಸವಿರುತ್ತದೆ. ವಾಸ್ತವವಾಗಿ ಊಟದ ಬಳಿಕ ರಕ್ತಪರಿಚಲನೆ ಜೀರ್ಣಾಂಗಗಳಿಗೆ ಹೆಚ್ಚಾಗುವ ಕಾರಣ ಈ ಹೊತ್ತಿನಲ್ಲಿ ಸ್ನಾನ ಮಾಡುವುದರಿಂದ ಬಲವಂತವಾಗಿ ಚರ್ಮವನ್ನು ಪ್ರಚೋದಿಸಿದಂತಾಗಿ ದೇಹದ ತಾಪಮಾನ ಕಡಿಮೆಯಾಗುತ್ತದೆ. ಆಗ ಅನಿವಾರ್ಯವಾಗಿ ರಕ್ತಪರಿಚಲನೆ ಹಿಮ್ಮೆಟ್ಟಿ ಚರ್ಮದೆಡೆಗೆ ಬರಬೇಕಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಅರ್ಧಂಬರ್ಧವಾಗಿಸುತ್ತದೆ ಹಾಗೂ ಇದರ ಪರಿಣಾಮಗಳೂ ಗಾಢವೇ ಅಗಿರುತ್ತದೆ. ಉತ್ತಮ ಅಭ್ಯಾಸವೆಂದರೆ ಸ್ನಾನ ಮಾಡಿದ ಕೊಂಚ ಹೊತ್ತಿನ ಬಳಿಕವೇ ಊಟ ಮಾಡುವುದು. ಸ್ನಾನ ಮಾಡುವಾಗ ಈ ರೀತಿಯ ತಪ್ಪು ಮಾತ್ರ ಮಾಡಬೇಡಿ!

ಧೂಮಪಾನ ಮಾಡಬೇಡಿ

ಧೂಮಪಾನ ಮಾಡಬೇಡಿ

ದಿನದ ಯಾವುದೇ ಹೊತ್ತಿನಲ್ಲಿ ಧೂಮಪಾನ ಮಾಡುವುದು ಅಥವಾ ಇತರರು ಬಿಡ್ಡ ಹೊಗೆಯನ್ನು ಸೇವಿಸುವುದು ಅನಾರೋಗ್ಯಕರ. ಆದರೆ ಊಟದ ಬಳಿಕ ಮಾಡುವ ಧೂಮಪಾನದಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಮತ್ತು ಎದೆಯುರಿ ಉಂಟಾಗುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ನೈಸರ್ಗಿಕವಾಗಿ ಧೂಮಪಾನವನ್ನು ತ್ಯಜಿಸುವ ಸರಳ ವಿಧಾನಗಳು

ಸಡಿಲವಾದ ಬಟ್ಟೆಗಳನ್ನೇ ತೊಡಿ

ಸಡಿಲವಾದ ಬಟ್ಟೆಗಳನ್ನೇ ತೊಡಿ

ಊಟದ ಬಳಿಕ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಹೊಟ್ಟೆಯ ಭಾಗದಲ್ಲಿ ಹೆಚ್ಚಿನ ಒತ್ತಡ ಹೇರಿ ಇದರಿಂದ ಎದೆಯುರಿಗೆ ಕಾರಣವಾಗುತ್ತದೆ. ಆದ್ದರಿಂದ ಸಡಿಲವಾದ ಬಟ್ಟೆಗಳನ್ನೇ ತೊಡುವುದು ಉತ್ತಮ. ವಿಶೇಷವಾಗಿ ಸೊಂಟಕ್ಕೆ ಪಟ್ಟಿ ಕಟ್ಟಿಕೊಳ್ಳದಿರುವ ಅಥವಾ ಸುಮ್ಮನೇ ಸುತ್ತಿಕೊಳ್ಳಬಹುದಾದ ಉಡುಗೆಗಳೇ ಉತ್ತಮ. ಬಿಗಿಯುಡುಗೆ ಧರಿಸುವುದರಿಂದ ದೇಹದ ತಾಪಮಾನವೂ ಹೆಚ್ಚುತ್ತದೆ, ನಿದ್ದೆಯೂ ಭಂಗಗೊಳ್ಳುತ್ತದೆ ಹಾಗೂ ವಾಯುಪ್ರಕೋಪ, ಹುಳಿತೇಗು ಮೊದಲಾದವುಗಳಿಗೂ ಕಾರಣವಾಗುತ್ತದೆ.

ಊಟ ಹೆಚ್ಚಾಗಿದ್ದರೆ ಬೆಲ್ಟ್ ಸಡಿಲಿಸಬೇಡಿ

ಊಟ ಹೆಚ್ಚಾಗಿದ್ದರೆ ಬೆಲ್ಟ್ ಸಡಿಲಿಸಬೇಡಿ

ಒಂದು ವೇಳೆ ಜಿಹ್ವಾಚಾಪಲ್ಯ ಅಥವಾ ನೆಂಟರ ಪ್ರೀತಿ ಹೆಚ್ಚಾಗಿ ಹೊಟ್ಟೆಯುಬ್ಬಿದರೆ ಇದಕ್ಕನುಗುಣವಾಗಿ ನಮ್ಮ ಸೊಂಟದ ಬೆಲ್ಟ್ ಅನ್ನು ಸಡಿಲಗೊಳಿಸುತ್ತೇವೆ. ವಾಸ್ತವವಾಗಿ ಹೀಗೆ ಮಾಡುವುದರಿಂದ ಹೊಟ್ಟೆಯ ಸ್ನಾಯುಗಳಿಗೆ ವಿಕಸಿಸಲು ಅವಕಾಶ ಮಾಡಿಕೊಟ್ಟಂತಾಗಿ ಹೊಟ್ಟೆ ವಿಶಾಲವಾಗಲು ಪರೋಕ್ಷವಾಗಿ ನೆರವಾದಂತಾಗುತ್ತದೆ. ಆದ್ದರಿಂದ ಅತಿ ಬಿಗಿಯೂ ಅಲ್ಲದಂತೆ ಬೆಲ್ಟ್ ಕಟ್ಟಿಕೊಂಡೇ ಇರುವುದು ಮತ್ತು ಮಲಗುವ ಮುನ್ನ ಸಡಿಲಿಸುವುದು ಆರೋಗ್ಯಕರ ಕ್ರಮವಾಗಿದೆ.

ಊಟದ ಬಳಿಕ ಹಣ್ಣುಗಳ ಸೇವನೆ ಒಳ್ಳೆಯದಲ್ಲ

ಊಟದ ಬಳಿಕ ಹಣ್ಣುಗಳ ಸೇವನೆ ಒಳ್ಳೆಯದಲ್ಲ

ಸಾಮಾನ್ಯವಾಗಿ ಊಟದ ಬಳಿಕ ಹಣ್ಣುಗಳನ್ನು ಸೇವಿಸಬಾರದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಕಟ್ಟುಪಾಡಿಗೆ ವಿನಾಯಿತಿ ಪಡೆದ ಒಂದೇ ಹಣ್ಣೆಂದರೆ ಬಾಳೆಹಣ್ಣು. ಉಳಿದ ಯಾವುದೇ ಹಣ್ಣುಗಳು ಅಜೀರ್ಣತೆಗೆ ಕಾರಣವಾಗಬಹುದು. ಊಟದ ತಕ್ಷಣ ಹಣ್ಣುಗಳನ್ನು ಸೇವಿಸುವುದರಿಂದ ಇವುಗಳ ಪೋಷಕಾಂಶವನ್ನು ಪಡೆಯಲು ಜೀರ್ಣಾಂಗಗಳಿಗೆ ಸಾಧ್ಯವಾಗದೇ ಇವು ಅಜೀರ್ಣವಾಗುತ್ತವೆ. ಇದು ನಿದ್ದೆಯನ್ನೂ ಭಂಗಗೊಳಿಸಬಹುದು.

ಕೆಫೀನ್ ಇರುವ ಪೇಯಗಳನ್ನು ಸೇವಿಸಬೇಡಿ

ಕೆಫೀನ್ ಇರುವ ಪೇಯಗಳನ್ನು ಸೇವಿಸಬೇಡಿ

ಊಟದ ಬಳಿಕ ಕಾಫಿ ಅಥವಾ ಕೆಫೀನ್ ಇರುವ ಯಾವುದೇ ಪೇಯವನ್ನು ಸೇವಿಸಬೇಡಿ. ಇದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಮತ್ತು ಎದೆಯುರಿತ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೇ ನಿದ್ದೆಯನ್ನೂ ಭಂಗಗೊಳಿಸಿ ತಡರಾತ್ರಿಯವರೆಗೆ ಎಚ್ಚರವಾಗಿರುವಂತೆ ಮಾಡುತ್ತದೆ.

English summary

Healthy Things to Remember Before and After You Eat Dinner ...

There are some healthy habits after eating dinner that we will share with you today. There are some healthy habits after eating dinner that we will share with you today. A healthy and light dinner is important for a better, sound and restful sleep
Story first published: Monday, April 3, 2017, 23:14 [IST]