For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ದಿನನಿತ್ಯ 'ಮೊಸರು' ಸೇವಿಸಿ ಆರೋಗ್ಯ ವೃದ್ಧಿಸಿ

By Arshad
|

ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವೆಂದರೆ ನೀರು. ಅದು ಬಿಟ್ಟರೆ ಮೊಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಹಾಲನ್ನು ಮೊಸರನ್ನಾಗಿಸುವ ಕ್ರಿಯೆಯಲ್ಲಿ ನಮ್ಮ ಜೀರ್ಣಾಂಗಗಳು ಮಾಡುವ ಮುಕ್ಕಾಲುಪಾಲು ಕೆಲಸವನ್ನು ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳೇ ಮುಗಿಸಿರುತ್ತವೆ. ಹಾಗಾಗಿ ಮೊಸರು ನಮಗೆ ಅತ್ಯುತ್ತಮವಾದ ಆಹಾರವಾಗಿದೆ.

ಸೌಂದರ್ಯ ಹೆಚ್ಚಿಸುವ 'ಮೊಸರು'-ಎಷ್ಟು ಹೊಗಳಿದರೂ ಸಾಲದು!

ವೈದ್ಯರೂ ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ಮೊಸರನ್ನೇ ಆಹಾರವನ್ನಾಗಿ ಸ್ವೀಕರಿಸಲು ಸಲಹೆ ಮಾಡುತ್ತಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಊಟದ ಕೊನೆಯಲ್ಲಿ ಮೊಸರು ಇಲ್ಲವಾದಲ್ಲಿ ಊಟ ಎಂಬುದು ಯಾವತ್ತಿಗೂ ಪರಿಪೂರ್ಣವಾಗುವುದಿಲ್ಲ. ಒಂದು ಒಳ್ಳೆಯ ಊಟಕ್ಕೆ ಉಪಸಂಹಾರ ಆಡುವುದೇ ಮೊಸರು. ಊಟದ ಕೊನೆಯಲ್ಲಿ ನೀವು ಸೇವಿಸುವ ಮೊಸರನ್ನವು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.

ರಾತ್ರಿ ಹೊತ್ತು ಮೊಸರನ್ನು ಸೇವಿಸದಿರಿ, ಇಲ್ಲಿದೆ ಪರಿಹಾರ

ಅಧ್ಯಯನದ ಪ್ರಕಾರ ಮೊಸರು ಎಂಬುದು ಒಂದು ಅಳತೆಯಿಲ್ಲದ ಪದಾರ್ಥವಾಗಿದ್ದು, ಇದು ನಿಮ್ಮ ಆಯುಸ್ಸನ್ನು ಹೆಚ್ಚಿಸಲು ಸಹಕರಿಸುತ್ತದೆ ಎಂದು ತಿಳಿದು ಬಂದಿದೆ. ಅದಕ್ಕಾಗಿ ಇದನ್ನು ನೀವು ತಪ್ಪದೆ ದಿನಾ ಸೇವಿಸಬೇಕು ಎಂಬುದನ್ನು ಮರೆಯಬಾರದು. ಬನ್ನಿ ಮೊಸರಿನ ಇನ್ನೂ ಹಲವು ಸದ್ಗುಣಗಳ ಪೈಕಿ ಪ್ರಮುಖವಾದುದನ್ನು ಇಲ್ಲಿ ವಿವರಿಸಲಾಗಿದೆ, ಮುಂದೆ ಓದಿ....

ಹಸಿವು ಹಾಗೂ ನಿಶಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ

ಹಸಿವು ಹಾಗೂ ನಿಶಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ

ನಿಯಮಿತವಾಗಿ ಮೊಸರನ್ನು ಸೇವಿಸುವ ಮೂಲಕ ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ ಹಾಗೂ ದೇಹದಲ್ಲಿ ನಿಶಕ್ತಿಯಾಗದಂತೆ ತಡೆಯುತ್ತದೆ. ಹಾಲು ಮೊಸರಾಗುವ ಸಮಯದಲ್ಲಿ ಹಾಲಿನಲ್ಲಿರುವ ಸಕ್ಕರೆಗಳು ಒಡೆದು ಒಂದು ಬಗೆಯ ಆಮ್ಲವಾಗಿ ಪರಿವರ್ತಿತವಾಗುತ್ತದೆ. ಈ ಆಮ್ಲವೇ ಮೊಸರಿನ ಹುಳಿಯಾದ ರುಚಿಗೆ ಕಾರಣವಾಗಿದ್ದು ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ. ಹಸಿವು ಹಾಗೂ ನಿಶಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮೊಸರು ಅತ್ಯುತ್ತಮವಾದ ಆಹಾರವಾಗಿದೆ.

ಕರುಳು ಹಾಗೂ ಜಠರದ ತೊಂದರೆಗಳಿಗೆ ರಾಮಬಾಣ

ಕರುಳು ಹಾಗೂ ಜಠರದ ತೊಂದರೆಗಳಿಗೆ ರಾಮಬಾಣ

ನಿತ್ಯವೂ ಮೊಸರನ್ನು ಆಹಾರದ ಒಂದು ಭಾಗವಾಗಿ ಸೇವಿಸುವ ವ್ಯಕ್ತಿಗಳಲ್ಲಿ ಕರುಳು ಹಾಗೂ ಜಠರದ ತೊಂದರೆಗಳು ಆವರಿಸುವ ಸಾಧ್ಯತೆ ಇತರ ವ್ಯಕ್ತಿಗಳಿಗಿಂತ ಕಡಿಮೆ ಇರುತ್ತದೆ. ಒಂದು ವೇಳೆ ಹೊಟ್ಟೆಯೊಳಗೆ ಬಿಸಿಯಾಗಿರುವಂತೆ ಅನ್ನಿಸಿದರೆ ಬಿಳಿ ಅನ್ನಕ್ಕೆ ಮೊಸರು ಕಲಸಿಕೊಂಡು ಸೇವಿಸಬೇಕು.

ಮೂಳೆಗಳ ಆರೋಗ್ಯಕ್ಕೆ

ಮೂಳೆಗಳ ಆರೋಗ್ಯಕ್ಕೆ

ಮೂಳೆಗಳನ್ನು ದೃಢಗೊಳಿಸಲು ಹಾಲಿಗಿಂತಲೂ ಮೊಸರು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ನೇರವಾಗಿ ಪಡೆದುಕೊಳ್ಳಲು ನಮ್ಮ ದೇಹಕ್ಕೆ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಜೇನನ್ನು ಸೇರಿಸಬೇಕಾಗುತ್ತದೆ. ಆದರೆ ಮೊಸರಿನಲ್ಲಿರುವ ಕ್ಯಾಲ್ಸಿಯಂ ಅನ್ನು ಜೇನಿನ ಅಗತ್ಯವಿಲ್ಲದೇ ದೇಹ ಹೀರಿಕೊಳ್ಳಲು ಸಾಧ್ಯ.

 ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಕ್ಕೆಲ್ಲಾ ರಾಮಬಾಣ

ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಕ್ಕೆಲ್ಲಾ ರಾಮಬಾಣ

ಮೊಸರಿನ ಸೇವನೆಯಿಂದ ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಗಳಿಂದ ರಕ್ಷಣೆ ದೊರಕುತ್ತದೆ. ಅಲ್ಲದೇ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಈ ಮೂಲಕ ಹೃದಯದ ಬಡಿತದ ವೇಗ ಹಾಗೂ ಒತ್ತಡವನ್ನೂ ನಿಯಂತ್ರಿಸುತ್ತದೆ.

ಮೂಲವ್ಯಾಧಿಯ ಸಮಸ್ಯೆಗೆ

ಮೂಲವ್ಯಾಧಿಯ ಸಮಸ್ಯೆಗೆ

ಮೂಲವ್ಯಾಧಿಯ ಕಾರಣ ಆಸನಭಾಗದಲ್ಲಿ ಗಂಟುಗಳಾಗಿರುವ (hemorrhoids) ವ್ಯಕ್ತಿಗಳಿಗೆ ಮೊಸರನ್ನು ನೀರಾಗಿಸಿ ಇದರಲ್ಲಿ ಕೆಲವು ನೆನೆಸಿಟ್ಟ ಪಿಸ್ತಾಗಳನ್ನು ಅರೆದು ಕುಡಿಯುವ ಮೂಲಕ ನೋವಿನಿಂದ ಮುಕ್ತಿ ದೊರಕುತ್ತದೆ.

ನಿದ್ರಾಹೀನತೆಯಿಂದ ಬಳಲುವ ವ್ಯಕ್ತಿಗಳಿಗೆ

ನಿದ್ರಾಹೀನತೆಯಿಂದ ಬಳಲುವ ವ್ಯಕ್ತಿಗಳಿಗೆ

ನಿದ್ರಾಹೀನತೆಯಿಂದ ಬಳಲುವ ವ್ಯಕ್ತಿಗಳು ರಾತ್ರಿ ಮಲಗುವ ಮುನ್ನ ಮೊಸರನ್ನು ಸೇವಿಸಿ ಮಲಗಬೇಕು

ಬಾಯಿಯ ಹುಣ್ಣು ಸನಸ್ಯೆಯಿಂದ ಬಳಲುತ್ತಿದ್ದರೆ

ಬಾಯಿಯ ಹುಣ್ಣು ಸನಸ್ಯೆಯಿಂದ ಬಳಲುತ್ತಿದ್ದರೆ

ಒಂದು ವೇಳೆ ಸತತವಾಗಿ ಬಾಯಿಯ ಹುಣ್ಣು ಅಥವಾ ಮೌಥ್ ಅಲ್ಸರ್ ನಿಂದ ಬಳಲುತ್ತಿದ್ದರೆ ರಾತ್ರಿ ಮಲಗುವ ಮುನ್ನ ಮತ್ತು ಬೆಳಿಗ್ಗೆದ್ದ ತಕ್ಷಣ ಗಟ್ಟಿ ಮೊಸರನ್ನು ಬಾಯಿಯ ಒಳಭಾಗದಲ್ಲಿ ಸವರಿಕೊಂಡರೆ ಶೀಘ್ರವೇ ಗುಣವಾಗುತ್ತದೆ.

English summary

Health benefits of Yogurt will keep you away from medicines

Curd has ‘good bacteria’ present in it that strengthens the immune system by fighting against various microorganisms that are present in the body. However, cud has many hidden benefits which every curd lover should know...
X
Desktop Bottom Promotion