Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ದಿನಕ್ಕೆ ಮೂರು ಕಪ್ ಕಾಫಿ ಕುಡಿಯಿರಿ ಸಾಕು-ಆರೋಗ್ಯವಾಗಿರುವಿರಿ!
ಕಾಫಿ ಜನಪ್ರಿಯ ಆಹಾರವಾಗಿದ್ದರೂ ಇಂದಿಗೂ ಕೆಲವರ ಮನದಲ್ಲಿ ಅನುಮಾನಗಳು ಮಾತ್ರ ಹಾಗೇ ಉಳಿದುಕೊಂಡಿವೆ. ಕೆಲವರು ಕಾಫಿ ಕುಡಿಯುವುದು ಒಳ್ಳೆಯದು ಎಂಬ ಅಭಿಪ್ರಾಯ ಹೊಂದಿದ್ದರೆ ಕೆಲವರು ಕಾಫಿ ಒಳ್ಳೆಯದಲ್ಲ, ಕೆಲವರು ಬೆಳಿಗ್ಗೆ ಮಾತ್ರ ಕುಡಿಯಬೇಕು, ಸಂಜೆಯ ಬಳಿಕ ಕುಡಿಯಬಾರದು ಎಂಬೆಲ್ಲಾ ಅಭಿಪ್ರಾಯ ಹೊಂದಿದ್ದಾರೆ. ಅತಿಯಾದರೆ ಅಮೃತವೂ ವಿಷವಂತೆ. ಕಾಫಿಯೂ ಇದಕ್ಕೆ ಹೊರತಲ್ಲ. ಮಿತಿಯೊಳಗೇ ಸೇವಿಸಿದರೆ ಇದು ಆರೋಗ್ಯಕರವೇ ಹೌದು ಎನ್ನುತ್ತದೆ ಒಂದು ಸಂಶೋಧನೆ.
ಇಂಗ್ಲಿಂಡಿನ ಸೌಥಾಂಪ್ಟನ್ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಒಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ದಿನದ ಅವಧಿಯಲ್ಲಿ ಸುಮಾರು ಮೂರರಿಂದ ನಾಲ್ಕು ಕಪ್ ನಷ್ಟು ಕಾಫಿ ಕುಡಿಯುವುದರಿಂದ ಕೆಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇದರಲ್ಲಿ ಪ್ರಮುಖವಾದುವೆಂದರೆ ಯಕೃತ್ ಕಾಯಿಲೆಗಳ ವಿರುದ್ಧ ರಕ್ಷಣೆ, ಮಧುಮೇಹ ತಡವಾಗಿಸುವುದು, ಮರೆಗುಳಿತನದಿಂದ ರಕ್ಶಿಸುವುದು, ಕೆಲವಾರು ಕ್ಯಾನ್ಸರ್ ಬರದಂತೆ ತಡೆಯುವುದು ಇತ್ಯಾದಿ.
ಅಷ್ಟೇ ಅಲ್ಲ, ಇದಕ್ಕೂ ಮುನ್ನ ಕಾಫಿಯ ಸೇವನೆಯ ಬಗ್ಗೆ ನಡೆಸಲಾದ ಸುಮಾರು ಇನ್ನೂರಕ್ಕೂ ಅಧ್ಯಯನಗಳ ವಿವರಗಳನ್ನು ಪರಿಶೀಲಿಸಿ ಇದರ ಅಂಕಿ ಅಂಶಗಳನ್ನು ಗಮನಿಸಿದಾಗ ಕಾಫಿಯ ಸೇವನೆಯಿಂದ ಹೃದಯದ ಕಾಯಿಲೆಗಳು ಆವರಿಸುವ ಸಾಧ್ಯತೆಗಳು ಕಡಿಮೆಯಾಗುತ್ತದೆ ಎಂದು ಸಹಾ ಕಂಡುಕೊಳ್ಳಲಾಯಿತು. ಆಷ್ಟೇ ಅಲ್ಲ, ಕಾಫಿ ಪ್ರಿಯರಿಗೆ ಹೃದಯಸ್ತಂಭನ ಆವರಿಸುವ ಸಾಧ್ಯತೆ ಇತರರಿಗಿಂತಲೂ ಕಡಿಮೆ ಎಂದೂ ತಿಳಿದುಬಂದಿದೆ. ಆದರೆ ಈ ಪ್ರಯೋಜನಗಳನ್ನು ಪಡೆಯಲು ಕಾಫಿಯ ಪ್ರಮಾಣ ಮಿತಿಯೊಳಗೇ ಇರಬೇಕೇ ವಿನಃ ಹೆಚ್ಚಾದರೆ ಇದರ ಕೆಲವು ಅಡ್ಡಪರಿಣಾಮಗಳು ಆರೋಗ್ಯಕ್ಕೇ ಮಾರಕವಾಗುವ ಸಂಭವವಿದೆ.
ಕೆಲವು ವ್ಯಕ್ತಿಗಳಿಗೆ ಕಾಫಿಯ ಪೋಷಕಾಂಶಗಳು ಅಲರ್ಜಿಕಾರಕವಾಗಿದ್ದರೆ ಇವರು ಕಾಫಿಯಿಂದ ದೂರವಿರುವುದೇ ಒಳ್ಳೆಯದು. ಅಷ್ಟೇ ಅಲ್ಲ, ಗರ್ಭಿಣಿಯರು ಬಾಣಂತನ ಮುಗಿಯುವವರೆಗೂ ಕಾಫಿ ಕುಡಿಯಬಾರದು. ಈ ವಿಷಯವನ್ನು BMJ ಎಂಬ ವೈದ್ಯಕೀಯ ನಿಯತಕಾಲಿಕೆಯೇ ಇತ್ತೀಚೆಗೆ ಪ್ರಕಟಿಸಿದೆ. ಒಂದು ವೇಳೆ ಕಾಫಿ ನಿಮಗೆ ಇಷ್ಟವಾಗಿದ್ದು ಯಾವುದೇ ಅಲರ್ಜಿ ಎಲ್ಲವೆಂದಾದಲ್ಲಿ ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಕುಡಿಯುವ ಮೂಲಕ ಯಾವ ಪ್ರಯೋಜನಗಳು ಲಭಿಸಲಿವೆ ಎಂಬುದನ್ನು ನೋಡೋಣ....
ಶಕ್ತಿಯನ್ನು ಹೆಚ್ಚಿಸುತ್ತದೆ
ಕಾಫಿಯಲ್ಲಿರುವ ಕೆಫೀನ್ ಎಂಬ ಪೋಷಕಾಂಶ ವಾಸ್ತವವಾಗಿ ಒಂದು ಪ್ರಚೋದಕವಾಗಿದ್ದು ಮೆದುಳಿನಲ್ಲಿ ನರಪ್ರೇಕ್ಷಕ ಅಥವಾ ನ್ಯೂರೋಟ್ರಾನ್ಸ್ ಮಿಟರ್ ಎಂಬ ವ್ಯವಸ್ಥೆ ಸೂಚನೆಗಳನ್ನು ಕಳುಹಿಸಲು ಹೆಚ್ಚಿನ ಪ್ರಚೋದನೆ ನೀಡುತ್ತದೆ. ತನ್ಮೂಲಕ ನಮ್ಮ ದೇಹದ ವಿವಿಧ ಭಾಗಗಳಿಗೆ ಹೆಚ್ಚಿನ ಕೆಲಸ ಮಾಡುವಂತೆ ಆಜ್ಞೆ ದೊರೆತು ಶಕ್ತಿ ಹೆಚ್ಚುತ್ತದೆ. ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಮೆದುಳಿನ ಇತರ ಕ್ಷಮತೆಗಳೂ ಹೆಚ್ಚುತ್ತವೆ.
ತೂಕ ಇಳಿಸಲು ನೆರವಾಗುತ್ತದೆ
ಕಾಫಿಯಲ್ಲಿ ಕೆಲವು ಅವಶ್ಯಕ ಖನಿಜಗಳಾದ ಮೆಗ್ನೀಶಿಯಂ ಹಾಗೂ ಪೊಟ್ಯಾಶಿಯಂ ಇವೆ. ಇವು ದೇಹದಲ್ಲಿರುವ ಇನ್ಸುಲಿನ್ ಹೆಚ್ಚು ಬಳಕೆಯಾಗಲು ಕಾರಣವಾಗುತ್ತವೆ. ಪರಿಣಾಮವಾಗಿ ರಕ್ತದಲ್ಲಿರುವ ಸಕ್ಕರೆಯ ಮಟ್ಟ ನಿಯಂತ್ರಿಸಲ್ಪಡುತ್ತವೆ ಹಾಗೂ ಈ ಮೂಲಕ ದೇಹ ಇನ್ನಷ್ಟು ಸಕ್ಕರೆ ಬೇಡುವುದರಿಂದ ತಡೆದಂತಾಗುತ್ತದೆ. ಹಾಗೂ ಕಾಫಿಯಲ್ಲಿರುವ ಕೆಫೀನ್ ದೇಹದಲ್ಲಿರುವ ಕೊಬ್ಬಿನ ಕಣಗಳನ್ನು ಒಡೆದು ಬಳಸಿಕೊಳ್ಳಲು ಸುಲಭವಾಗಿಸುವ ಮೂಲಕವೂ ತೂಕ ಇಳಿಕೆಯಲ್ಲಿ ನೆರವಾಗುತ್ತದೆ.
ಮಧುಮೇಹದ ಸಾಧ್ಯತೆ ಕಡಿಮೆ ಮಾಡುತ್ತದೆ
ಕಾಫಿಯಲ್ಲಿರುವ ಕೆಫೀನ್ ವಿಶೇಷವಾಗಿ ಟೈಪ್ ೨ ಮಧುಮೇಹವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಈ ಬಗೆಯ ಮಧುಮೇಹಿಗಳ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾದರೂ ಇದನ್ನು ಬಳಸಿಕೊಳ್ಳಲು ದೇಹ ವಿಫಲವಾಗುತ್ತದೆ. ಇದಕ್ಕೆ insulin sensitivity ಎಂದು ಕರೆಯುತ್ತಾರೆ. ಕೆಫೀನ್ ಈ ಇನ್ಸುಲಿನ್ ಬಳಕೆಯಾಗಲು ನೆರವಾಗುವ ಮೂಲಕ ದೇಹ ಗ್ಲುಕೋಸ್ ಅನ್ನು ಸ್ವೀಕರಿಸಲು ಹೆಚ್ಚು ಸಮರ್ಥವಾಗುತ್ತದೆ (glucose tolerance). ಇದು ಟೈಪ್ ೨ ಮಧುಮೇಹ ಆವರಿಸುವ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.
ಖಿನ್ನತೆ ಕಡಿಮೆ ಮಾಡಲು ನೆರವಾಗುತ್ತದೆ
ಕಾಫಿಯಲ್ಲಿರುವ ಕೆಫೀನ್ ಮೆದುಳಿನ ಮೇಲೆ ನೀಡುವ ಪ್ರಚೋದನೆಯ ಮೂಲಕ ಮೆದುಳಿನಲ್ಲಿರುವ ಕೇಂದ್ರ ನರವ್ಯೂಹ ವ್ಯವಸ್ಥೆಗೂ ಚುರುಕು ತಟ್ಟುತ್ತದೆ ಹಾಗೂ ನರಪ್ರೇಕ್ಷಕಗಳಾದ ಸೆರೋಟೋನಿನ್, ಡೋಪಮೈನ್ ಹಾಗೂ ನೋರಾಡೋಪಮೈನ್ ಎಂಬ ರಾಸಾಯನಿಕಗಳನ್ನು ಹೆಚ್ಚು ಬಿಡುಗಡೆ ಮಾಡುತ್ತದೆ. ಇವು ಮನೋಭಾವವನ್ನು ತಿಳಿಯಾಗಿಸುವ ಮೂಲಕ ಖಿನ್ನತೆಯಿಂದ ಹೊರಬರಲು ನೆರವಾಗುತ್ತವೆ. ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಕುಡಿಯುವುದರಿಂದ ಹೆಚ್ಚು ಕಡಿಮೆ ಇಡಿಯ ದಿನ ಸಕಾರಾತ್ಮಕವಾಗಿ ಯೋಚಿಸಲು ಸಾಧ್ಯ. ಆದರೆ ಈ ಪ್ರಮಾಣ ಇದಕ್ಕೂ ಹೆಚ್ಚಾಗಬಾರದು.
ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವು ನೀಡುತ್ತದೆ
ಕಾಫಿ ಬೀಜಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕಾಫಿಯನ್ನು ಕುಡಿದ ಬಳಿಕ ದೇಹಕ್ಕೆ ಲಭ್ಯವಾಗುತ್ತವೆ. ದಿನಕ್ಕೆ ಎರಡು ಮೂರು ಕಪ್ ಕುಡಿಯುವುದರಿಂದ ಈ ಪೋಷಕಾಂಶಗಳು ದೇಹದ ಕೆಲವಾರು ಬಗೆಯ ಕ್ಯಾನ್ಸರ್ ಗಳು ಆವರಿಸುವ ಸಾಧ್ಯತೆ ಕಡಿಮೆಯಾಗಿರುವುದನ್ನು ಕೆಲವಾರು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ. ಮಿತಪ್ರಮಾಣದ ಕಾಫಿ ಸೇವನೆಯಿಂದ ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವು ಪಡೆದಿರುವುದನ್ನು ಗಮಿನಿಸಲಾಗಿದೆ.
ಆಲ್ಝೈಮೆರ್ ನಿಯಂತ್ರಣಕ್ಕೆ
ಆಲ್ಝೈಮೆರ್ ಎನ್ನುವುದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಇದು ಮೆದುಳಿನ ಜೀವಕೋಶದ ನೆನಪು, ಕಾರ್ಯ ಮತ್ತು ಕೌಶಲ್ಯ ಹಾಳುಗೆಡವುದು. ಇದರಿಂದ ಆ ವ್ಯಕ್ತಿಯ ದೈನಂದಿನ ಚಟುವಟಿಕೆ ಮೇಲೆ ಪರಿಣಾಮವಾಗುವುದು.ಕಾಫಿಯಲ್ಲಿ ಇರುವಂತಹ ಕೆಫಿನ್ ಮೆದುಳಿನ ಕೋಶಗಳು ಆರೋಗ್ಯವಾಗಿ ಹಾಗೂ ದೀರ್ಘಕಾಲ ತನಕ ಚಟುವಟಿಕೆಯಿಂದ ಇರುವಂತೆ ಮಾಡುವುದು. ಇದರಿಂದ ಆಲ್ಝೈಮೆರ್ ಕಾಯಿಲೆ ತಡೆಯಬಹುದು ಎಂದು ಅಮೆರಿಕಾದ ಸಂಶೋಧನಾ ವರದಿ ಹೇಳಿದೆ.
ಪಾರ್ಶ್ವವಾಯು
ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಮೆದುಳಿಗೆ ಸರಿಯಾಗಿ ರಕ್ತ ಸರಬರಾಜು ಆಗದೆ ಅದರ ಕೋಶಗಳಿಗೆ ಹಾನಿಯಾಗುವುದೇ ಪಾರ್ಶ್ವವಾಯು. ಇದು ತುಂಬಾ ಗಂಭೀರ ಮತ್ತು ಪ್ರಾಣಹಾನಿ ಉಂಟು ಮಾಡುವ ಕಾಯಿಲೆ. ಪ್ರತೀ ದಿನ ಒಂದು ಸಣ್ಣ ಕಪ್ ಕಾಫಿ ಸಕ್ಕರೆ ಹಾಕದೆ ಸೇವಿಸಿದರೆ ಅದರಿಂದ ರಕ್ತನಾಳಗಳು ಸರಾಗವಾಗಿ ಕೆಲಸ ಮಾಡಿ ರಕ್ತ ಹೆಪ್ಪುಗಟ್ಟದಂತೆ ತಡೆದು ಪಾರ್ಶ್ವವಾಯು ತಡೆಯುವುದು.
ಕಾಫಿ ಕುಡಿಯಲು ಅತ್ಯುತ್ತಮ ಸಮಯ ಯಾವುದು?
ಕಾಫಿಯ ಅತ್ಯುತ್ತಮ ಪ್ರಯೋಜನಗಳನ್ನು ಪಡೆಯಬೇಕೆಂದರೆ ನಮ್ಮ ಮೆದುಳು ಕಾರ್ಟಿಸೋಲ್ ಎಂಬ ರಸದೂತವನ್ನು ಹೆಚ್ಚು ಸ್ರವಿಸಲು ಅಗತ್ಯವಿರುವಾಗಲೇ ಸೇವಿಸಬೇಕು. ತಜ್ಞರ ಪ್ರಕಾರ ಬೆಳಿಗ್ಗೆ 8-9ರ ನಡುವೆ ಮೊದಲ ಕಪ್, ಮದ್ಯಾಹ್ನ 12-1 ರ ನಡುವೆ ಎರಡನೆಯ ಕಪ್ ಹಾಗೂ ಸಂಜೆ 5:30-6:30 ರ ನಡುವೆ ಮೂರನೆಯ ಕಪ್. ಈ ಅವಧಿಯ ಬಳಿಕ ಕಾಫಿಯನ್ನು ಸೇವಿಸಬಾರದು. ರಾತ್ರಿಯಂತೂ ಬೇಡವೇ ಬೇಡ.