ಸಾಸಿವೆ ಎಣ್ಣೆ- ಆರೋಗ್ಯಕ್ಕೂ ಸೈ, ಅಡುಗೆಗೂ ಜೈ

By: Suhani B
Subscribe to Boldsky

ಕೆಲವರಿಗಂತೂ ಅಡುಗೆ ಮಾಡುವುದೆಂದರೆ ಬಲು ಇಷ್ಟ ಹಾಗೂ ಅದೊಂದು ಕಲೆ ಹಾಗಾಗಿ ಉಪ್ಪಿಗಿಂತ ರುಚಿಯಿಲ್ಲ, ಎಂಬ ಗಾದೆಯಂತೆ ಎಣ‍್ಣೆಯಿಲ್ಲದೆ  ಅಡುಗೆಯಿಲ್ಲ. ಜಗತ್ತಿನಾದ್ಯಂತ ಅಡುಗೆಗೆ ಎಣ್ಣೆ ಬೇಕೇಬೇಕು ಎಣ್ಣೆಯಿಲ್ಲದೆ ರುಚಿಯಾದ ಅಡುಗೆಯಿಲ್ಲ. ಪ್ರತಿದಿನ ಎಣ್ಣೆಯಿಲ್ಲದೆ ರುಚಿಯಾದ ಅಡುಗೆಯನ್ನು ಊಹಿಸಲು ಸಾಧ್ಯವಿಲ್ಲ ಉದಾಹರಣೆಗೆ ಎಣ್ಣೆ ಉಪಯೋಗಿಸದ ದೋಸೆ ತುಂಬಾ ಮೃದು ಹಾಗೂ ಮಬ್ಬು ಆದರೆ ಅದೇ ದೋಸೆಗೆ ಎಣ್ಣೆ ಹುಯ್ಯಿದರೆ ಗರಿ ಗರಿ ಹಾಗೂ ತಿನ್ನಲು ಬಲು ರುಚಿ. ವಿವಿಧ ರೀತಿಯ ಅಡುಗೆ ಮಾಡಬೇಕಾದಲ್ಲಿ ವಿಭಿನ್ನ ಪ್ರಮಾಣ ಹಾಗೂ ವಿಭಿನ್ನ ರೀತಿಯ ಎಣ್ಣೆಯನ್ನು ಉಪಯೋಗಿಸಬೇಕಾಗುತ್ತದೆ.

ಈಗ ನೀವು ತಿಳಿದಿರುವಂತೆ ಪ್ರತಿಯೊಂದು ದೇಶ ಹಾಗೂ ರಾಜ್ಯಕ್ಕೆ ವಿಭಿನ್ನ ರೀತಿಯ ಆಹಾರವಿದ್ದೇ ಇರುತ್ತದೆ. ಉದಾಹರಣೆಗೆ ಮಾಂಸ ಹಾಗೂ ಬ್ರೆಡ್ ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಧಾನ ಆಹಾರದ ಅಂಗವಾಗಿದೆ ಆದರೆ ದಕ್ಷಿಣ ಪ್ರಾಂತ್ಯ ದೇಶಗಳಲ್ಲಿ ಅನ್ನವನ್ನು ಪ್ರಧಾನ ಆಹಾರವಾಗಿ ಬಳಸುತ್ತಾರೆ.

musturd oil

ಸ್ನೇಹಿತರೇ, ವಿಷೇಶವಾಗಿ ಅಡುಗೆ ಎಣ್ಣೆ ವಿಚಾರಕ್ಕೆ ಬಂದಾಗ ಬೇರೆ ಬೇರೆ ದೇಶಗಳಲ್ಲಿ ವಿವಿಧ ರೀತಿಯ ಕಾಳುಗಳ ಎಣ್ಣೆಗಳನ್ನು ಅಡುಗೆಗೆ ಮತ್ತು ಊಟಕ್ಕೆ ಬಳಸುತ್ತಾರೆ ಅದರಲ್ಲಿ ಸಾಸಿವೆ ಎಣ್ಣೆ ಬಹಳ ವಿಶೇಷ. ಭಾರತದಲ್ಲಿ ಪ್ರಖ್ಯಾತ ಎಣ್ಣೆಗಳೆಂದರೆ ನೆಲಗಡಲೆ ಎಣ್ಣೆ, ಸಾಸಿವೆ ಎಣ್ಣೆ, ಕೊಬ್ಬರಿ ಎಣ್ಣೆ. ಪಾಶ್ಚಿಮಾತ್ಯ ದೇಶಗಳಲ್ಲಿ ಆಲಿವ್ ಎಣ್ಣೆ ,ಅಗಸೆಬೀಜದ ಎಣ್ಣೆ ಹೆಸರುವಾಸಿಯಾದವು.

ಈಗ ಹೆಚ್ಚಿನವರೆಲ್ಲಾ ಪಾಶ್ಚಿಮಾತ್ಯ ಆಹಾರ ಪದ್ಧತಿಗಳನ್ನು ಅನುಸರಿಸುತ್ತಿರುವುದರಿಂದ ಅವರು ಬಳಸುವಂತಹ ಆಲಿವ್ ಎಣ್ಣೆಯೇ ಒಳ್ಳೆಯದೆಂದು ತಿಳಿದು ಅಡುಗೆಯಲ್ಲಿ ಬಳಸುತ್ತಾರೆ. ಆದರೆ ಆಲಿವ್ ಎಣ್ಣೆಯಲ್ಲಿ ಆರೋಗ್ಯಕರವಾಗಿ ಇದ್ದರೂ WHO ಪ್ರಕಾರ ಭಾರತದಲ್ಲಿ ಹಲವಾರು ವರ್ಷಗಳಿಂದ ಉಪಯೋಗಿಸುವಂತಹ ಸಾಸಿವೆ ಎಣ್ಣೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ತಿಳಿಸಿರುತ್ತಾರೆ...ಮುಂದೆ ಓದಿ...

ನಿದರ್ಶನ #1: ಒಮೆಗಾ 3, ಕೊಬ್ಬಿನಾಮ್ಲಗಳು 

WHO ಪ್ರಕಾರ ಸಾಸಿವೆ ಎಣ್ಣೆ ಒಮೆಗಾ 3 ಹಾಗೂ ಒಮೆಗಾ 6 ಕೊಬ್ಬಿನಾಮ್ಲಗಳು ಅನುಪಾತವಾಗಿವೆ ಹಾಗೂ ಆಲಿವ್ ಎಣ್ಣೆಯಲ್ಲಿ ಇದು ಕಂಡು ಬಂದಿಲ್ಲ.

ನಿದರ್ಶನ #2: ಮಿದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ

ಸಾಸಿವೆ ಎಣ್ಣೆಯಲ್ಲಿ ಹೆಚ್ಚಿನ ಆರೋಗ್ಯಕರ ಕೊಬ್ಬಿನಾಂಶವಿರುವುದಿಲ್ಲ ಇದು ನಮ್ಮ ಮಿದುಳಿನ ಕಾರ್ಯವನ್ನು ಆರೋಗ್ಯವಾಗಿರುವುದಲ್ಲದೆ ನೆನಪಿನ ಶಕ್ತಿಯನ್ನು ಚುರುಕುಗೊಳ್ಳಿಸುತ್ತದೆ.

brain

ನಿದರ್ಶನ #3: ಹೆಚ್ಚಿನ ಕೊಲೆಸ್ಟ್ರಾಲ್ ನನ್ನು ತಡೆಗಟ್ಟುತ್ತದೆ

ಬೇರೆ ಎಲ್ಲಾ ಎಣ್ಣೆಗಳಿಂತ ಸಾಸಿವೆ ಎಣ್ಣೆಯಲ್ಲಿ ಹೆಚ್ಚಿನ ಪೋಷಕಾಂಶಗಳಿರುವುದರಿಂದ ಇದು ಕೊಲೆಸ್ಟ್ರಾಲ್ ತಡೆಗಟ್ಟುತ್ತದೆ.

ನಿದರ್ಶನ #4: ಹೃದಯ ಸ್ನೇಹಿ

ಸಾಸಿವೆ ಎಣ‍್ಣೆ ಬೇರೆ ಎಣ‍್ಣೆಗಳಿಗೆ ಹೋಲಿಕೆ ಮಾಡಿದರೆ ಇದು ಹೃದಯ ಸ್ನೇಹಿ ಹಾಗೂ ಇದರಲ್ಲಿ ಪೋಷಕಾಂಶಗಳು ಹೇರಳವಾಗಿರುವ ಕಾರಣ ಇದನ್ನು ದಿನ ನಿತ್ಯ ಉಪಯೋಗಿಸಬಹುದು ಇದು ಹೃದಯ ಕಾಯಿಲೆಗಳಿಗೆ ಮಾರಕವಾಗಿಲ್ಲ.

ನಿದರ್ಶನ #5: ಹೆಚ್ಚಿನ ಧೂಮಪಾನ ಬಿಂದು

ಸಾಸಿವೆ ಎಣ್ಣೆಯಲ್ಲಿ ಯಾವುದೇ ತಿಂಡಿಯನ್ನು ಕರಿದಾಗ, ಅದರಲ್ಲಿ ಹೊರಸೂಸುವಂತಹ ಹೊಗೆ ಹಾನಿಕಾರಕವಲ್ಲ.

heart rate

ನಿದರ್ಶನ #6: ಕೆಮ್ಮು ಮತ್ತು ಶೀತಕ್ಕೆ 

ಸಣ್ಣಪುಟ್ಟ ಕಾಯಿಲೆಯಾದ ಶೀತ ಕೆಮುವಿಗೆ ಸಾಸಿವೆ ಎಣ್ಣೆ ಸಹಕಾರಿ

ನಿದರ್ಶನ #7: ತಲೆನೋವು ಮತ್ತು ಹೊಟ್ಟೆ ಉರಿ

ಸಾಸಿವೆ ಎಣ್ಣೆಯ ಬಳಕೆಯಿಂದ ಹೊಟ್ಟೆ ಉರಿ,ತಲೆನೋವು ಮತ್ತು ವಸಡು ನೋವುಗಳಿಗೆ ಪರಿಣಾಮಕಾರಿಯಾಗಿದೆ

English summary

Health benefits of mustard oil

Groundnut oil, mustard oil and coconut oil are popular in India, olive oil and flaxseed oil are much popular in the western countries. Now, we know that developing countries like India are very much influenced by the western concepts and so many of us today, feel that using olive oil may be healthy for cooking, just because it is widely used in the other countries.Find out why mustard oil is extremely healthy, in this article.
Story first published: Saturday, July 22, 2017, 7:04 [IST]
Subscribe Newsletter