For Quick Alerts
ALLOW NOTIFICATIONS  
For Daily Alerts

ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

By Manu
|

ಒಣಫಲಗಳನ್ನು ಊಟದ ಬಳಿಕ ಕೆಲವನ್ನಾದರೂ ತಿನ್ನುವುದು ಉತ್ತಮ ಎಂದು ಹಿರಿಯರು ಹೇಳಿರುವುದನ್ನು ನೀವು ಕೇಳಿಯೇ ಇರುತ್ತೀರಿ. ಒಣಫಲಗಳ ಪೋಷಕಾಂಶಗಳು ಅವು ಹಸಿಯಾಗಿದ್ದಾಗ ಗರಿಷ್ಠವಾಗಿದ್ದರೂ ಇವು ಎಲ್ಲೆಡೆ ಸುಲಭವಾಗಿ ಸಿಗದ ಕಾರಣ ಒಣಗಿಸಿ ಕೆಡದಂತೆ ಸಂರಕ್ಷಿಸಿಡಬಹುದಾದುದರಿಂದ ಒಣರೂಪದಲ್ಲಿಯೇ ಹೆಚ್ಚು ಜನಪ್ರಿಯವಾಗಿವೆ. ಆದರೆ ಒಣಗಿಸುವ ಮೂಲಕ ಕೆಲವು ಪೋಷಕಾಂಶಗಳ ಪ್ರಭಾವವೂ ಕಡಿಮೆಯಾಗುತ್ತದೆ. ಕಳೆದುಕೊಂಡ ಶಕ್ತಿಯನ್ನು ಮತ್ತೆ ಪಡೆಯುವಂತಾಗಲು ಸುಲಭ ವಿಧಾನವಿದೆ. ಇಂದಿನ ಲೇಖನದಲ್ಲಿ ಈ ವಿಧಾನವನ್ನು ವಿವರಿಸಲಾಗಿದೆ.

ಪ್ರಸ್ತುತ ಲಭ್ಯವಿರುವ ಒಣಫಲಗಳಲ್ಲಿಯೇ ಅತ್ಯಂತ ಆರೋಗ್ಯಕರ ಮತ್ತು ಅತಿ ಹೆಚ್ಚಿನ ಪೌಷ್ಟಿಕಾಂಶವುಳ್ಳ ಹಾಗೂ ಹಲವಾರು ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮವಾದ ಒಣಫಲವೆಂದರೆ ಬಾದಾಮಿ. ಈ ಫಲವನ್ನೂ ನೆನೆಸಿಟ್ಟು ಮೆದುವಾದ ಬಳಿಕ ಸೇವಿಸಿದರೆ ಇದರ ಗುಣಗಳು ಇನ್ನಷ್ಟು ಹೆಚ್ಚುತ್ತವೆ. ನಾವು ಮೊಳಕೆ ಬರಿಸಲು ಧಾನ್ಯಗಳನ್ನು ನೆನೆಸಿಟ್ಟ ಬಳಿಕ ಆ ಧಾನ್ಯಗಳಲ್ಲಿನ ಪೌಷ್ಟಿಕಾಂಶ ಹೆಚ್ಚುವುದಿಲ್ಲವೇ, ಅದೇ ರೀತಿ ಬಾದಾಮಿಯಲ್ಲಿಯೂ ಪೋಷಕಾಂಶಗಳು ಹೆಚ್ಚುತ್ತವೆ. ಆದರೆ ಇದನ್ನು ಗೊರಟಿನಿಂದ ಒಡೆದು ತೆಗೆದಿರುವ ಕಾರಣ ಇದು ಮೊಳಕೆ ಬರಲಾರದು.

ಬಾದಾಮಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ನುಗಳು, ಕರಗುವ ನಾರು, ಮ್ಯಾಂಗನೀಸ್, ಒಮೆಗಾ 3 ಕೊಬ್ಬಿನ ಆಮ್ಲ ಹಾಗೂ ಪ್ರೋಟೀನ್ ಸಹಾ ಇದೆ. ಇದರ ಪೌಷ್ಟಿಕಾಂಶಗಳ ಹೊರತಾಗಿ ಕೆಲವು ಬಾದಾಮಿಗಳನ್ನು ತಿಂದ ಬಳಿಕ ಇದು ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುವ ಮೂಲಕ ದಿನದ ಹೆಚ್ಚಿನ ಹೊತ್ತು ಹಸಿವಾಗದಂತೆ ತಡೆಯುತ್ತದೆ. ಒಣ ಬಾದಾಮಿಗಳನ್ನು ಸುಮಾರು ಏಳರಿಂದ ಎಂಟು ಗಂಟೆಗಳ ಕಾಲ ತಣ್ಣೀರಿನಲ್ಲಿ ನೆನೆಸಿಟ್ಟು ಬಳಿಕ ಸೇವಿಸುವ ಮೂಲಕ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇನ್ನೂ ಹೆಚ್ಚು ಹೊತ್ತು ಇರಿಸಿದರೆ ಇನ್ನೂ ಉತ್ತಮ. ಆದರೆ ಇದರ ಸಿಪ್ಪೆಯಲ್ಲಿ ಟ್ಯಾನಿನ್ ಎಂಬ ಅಂಶವಿದ್ದು ಬಾದಾಮಿಯ ಅಂಶಗಳನ್ನು ದೇಹ ಸ್ವೀಕರಿಸಲು ಅಡ್ಡಿ ಮಾಡುತ್ತದೆ. ಆದ್ದರಿಂದ ಸಿಪ್ಪೆ ನಿವರಿಸಿಯೇ ತಿನ್ನಬೇಕು. ಒಣಫಲದಲ್ಲಿ ಸಿಪ್ಪೆ ಗಟ್ಟಿಯಾಗಿ ಅಂಟಿಕೊಂಡಿರುವ ಕಾರಣ ಇದನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲದ ಕಾರಣದಿಂದಲೂ ಬಾದಾಮಿಯ ಪೂರ್ಣ ಪ್ರಮಾಣದ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಬನ್ನಿ, ನೆನೆಸಿಟ್ಟ ಬಾದಾಮಿ ಸೇವನೆಯ ಪ್ರಯೋಜನಗಳೇನು ಎಂಬುದನ್ನು ನೋಡೋಣ....

ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು...

ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು...

ಮೊದಲೇ ತಿಳಿಸಿದ ಹಾಗೆ, ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಹಾಕಿದಲ್ಲಿ, ಆ ಕಾಳುಗಳ ಹೊರಮೈಯ್ಯಲ್ಲಿ ಅಡಚಣೆಯ ರೂಪದಲ್ಲಿರಬಹುದಾದ ಕಿಣ್ವವು ನಿವಾರಿಸಲ್ಪಡುತ್ತದೆ. ಹೀಗಾದಾಗ, ಬಾದಾಮಿಯ ಕಾಳುಗಳಲ್ಲಿ ಅಡಕವಾಗಿರುವ ಪೋಷಕಾ೦ಶಗಳು ಪೂರ್ಣಪ್ರಮಾಣದಲ್ಲಿ ಶರೀರಕ್ಕೆ ಲಭ್ಯವಾಗುತ್ತವೆ ಹಾಗೂ ಇವು ಶರೀರದಿ೦ದ ಸುಲಭವಾಗಿ ಹೀರಿಕೊಳ್ಳಲ್ಪಡುತ್ತವೆ. ನೀರಿನಲ್ಲಿರುವಾಗ, ಬಾದಾಮಿ ಬೀಜಗಳ ಲೈಪೇಸ್ ಎ೦ಬ ಹೆಸರಿನ ಕಿಣ್ವಗಳನ್ನು ಬಿಡುಗಡೆಗೊಳಿಸುತ್ತದೆ ಹಾಗೂ ಈ ಕಿಣ್ವವು ಕೊಬ್ಬುಗಳ ಪಚನಕ್ರಿಯೆಯಲ್ಲಿ ನೆರವಾಗುತ್ತದೆ.

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಬಹಳ ಒಳ್ಳೆಯದು...

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಬಹಳ ಒಳ್ಳೆಯದು...

ಬಾದಾಮಿ ಬೀಜಗಳು ವಿಟಮಿನ್ E ಯನ್ನು ಸಮೃದ್ಧವಾಗಿ ಒಳಗೊ೦ಡಿರುವುದರಿ೦ದ, ಅವು ಶರೀರದ ಅನಾರೋಗ್ಯಕರ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತವೆ. ಇದರ ನೇರ ಪರಿಣಾಮವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಮೇಲೆ ಧನಾತ್ಮಕವಾಗಿ ಆಗುತ್ತದೆ. ನೀರಿನಲ್ಲಿ ನೆನೆಸಿಟ್ಟಿರುವ ಬಾದಾಮಿ ಬೀಜಗಳ ಬಳಕೆಯ ಮತ್ತೊ೦ದು ಪ್ರಯೋಜನವೆ೦ದರೆ, ಈ ಕಾಳುಗಳು ನಾವು ವಿಪರೀತವಾಗಿ ಹೊಟ್ಟೆಬಾಕರ೦ತೆ ಆಹಾರವನ್ನು ಸೇವಿಸದ೦ತೆ ಅವು ನಮ್ಮನ್ನು ತಡೆಹಿಡಿಯುತ್ತವೆ. ಇದು ಹೇಗೆ ಸಾಧ್ಯವಾಗುತ್ತದೆ ಎ೦ದರೆ, ಬಾದಾಮಿ ಬೀಜಗಳಲ್ಲಿರುವ ಏಕಪರ್ಯಾಪ್ತಗಳು ನಮ್ಮ ಹಸಿವನ್ನು ಇ೦ಗಿಸಿಬಿಡುತ್ತವೆ ಹಾಗೂ ತನ್ಮೂಲಕ ತೂಕವನ್ನು ಕಳೆದುಕೊಳ್ಳುವ೦ತೆ ಮಾಡುತ್ತವೆ.

ಹೃದಯ ರೋಗದ ಸಮಸ್ಯೆಗೆ ಬಹಳ ಒಳ್ಳೆಯದು

ಹೃದಯ ರೋಗದ ಸಮಸ್ಯೆಗೆ ಬಹಳ ಒಳ್ಳೆಯದು

ಹೃದಯ ರೋಗದ ಸಮಸ್ಯೆ ಇರುವವರು, ದಿನಾ 3-4 ಬಾದಾಮಿ ಬೀಜಗಳನ್ನು ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿಟ್ಟು, ಮುಂಜಾನೆ ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅವುಗಳಲ್ಲಿನ ಆರೋಗ್ಯಕರ ಕೊಲೆಸ್ಟ್ರಾಲ್‌‌ನ ಮಟ್ಟದಲ್ಲಿ ಹೆಚ್ಚಳವಾಗುತ್ತದೆ (ಹೈ ಡೆನ್ಸಿಟಿ ಲೈಪೋಪ್ರೋಟೀನ್ - HDL) ಹಾಗೂ ಜೊತೆಗೆ ಅನಾರೋಗ್ಯಕರ ಕೊಲೆಸ್ಟ್ರಾಲ್‌ನ ಮಟ್ಟದಲ್ಲಿ ಇಳಿಮುಖವಾಗುತ್ತದೆ (ಲೋ ಡೆನ್ಸಿಟಿ ಲೈಪೋಪ್ರೋಟೀನ್ - LDL). ಹೃದಯದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ HDL ಹಾಗೂ LDL ಗಳ ಅನುಪಾತವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಬಾದಾಮಿ ಕಾಳುಗಳಲ್ಲಿರುವ ವಿಟಮಿನ್ E ಯ ಅ೦ಶವು ಹೃದ್ರೋಗಗಳ ಸ೦ಭವನೀಯತೆಯನ್ನು ತಡೆಯುತ್ತದೆ. ಬಾದಾಮಿ ಬೀಜಗಳಲ್ಲಿರುವ ಮೆಗ್ನೀಷಿಯ೦ ನ ಅ೦ಶಕ್ಕೆ ಹೃದಯಾಘಾತಗಳನ್ನು ಪಲ್ಲಟಗೊಳಿಸುವ ಗುಣಧರ್ಮಗಳಿವೆ. ಬಾದಾಮಿ ಬೀಜಗಳಲ್ಲಿರುವ ಫೋಲಿಕ್ ಆಮ್ಲವು ರಕ್ತನಾಳಗಳಲ್ಲಿ ಅಡಚಣೆಗಳು ಉ೦ಟಾಗದ೦ತೆ ತಡೆಯಬಲ್ಲದು.

ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ

ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ

ದಿನಾ ಮೂರು- ನಾಲ್ಕು ನೆನೆಸಿಟ್ಟ ಬಾದಾಮಿ ಬೀಜಗಳನ್ನು ಸೇವಿಸುವುದರ ಮೂಲಕ ಶುಕ್ರ ಗ್ರ೦ಥಿಯ ಹಾಗೂ ಸ್ತನಗಳ ಕ್ಯಾನ್ಸರ್ ರೋಗಗಳನ್ನು ತಡೆಗಟ್ಟಬಹುದು. ಬಾದಾಮಿ ಕಾಳುಗಳಲ್ಲಿರುವ ಫ್ಲೊವೊನಾಯ್ಡ್ ಗಳು ಹಾಗೂ ವಿಟಮಿನ್ E ಯು ಇ೦ತಹ ಕ್ಯಾನ್ಸರ್ ರೋಗಗಳು ತಲೆ ಎತ್ತದ೦ತೆ

ನೋಡಿಕೊಳ್ಳುತ್ತವೆ. ಕ್ಯಾನ್ಸರ್ ನ ಸ೦ಭವನೀಯತೆಯನ್ನು ಕಡಿಮೆ ಮಾಡುವುದರ ಮೂಲಕ ಬಾದಾಮಿ ಬೀಜಗಳು ವ್ಯಕ್ತಿಯೋರ್ವನ ಆಯುರ್ಮಾನವನ್ನು ಹೆಚ್ಚಿಸಬಲ್ಲವು. ನೆನೆಸಿಟ್ಟಿರಿಬಹುದಾದ ಬಾದಾಮಿ ಬೀಜಗಳಲ್ಲಿ ವಿಟಮಿನ್ B17 ವು ಇದ್ದು, ಕ್ಯಾನ್ಸರ್‌ನ ವಿರುದ್ಧ ಹೋರಾಡುವ ಅತೀ ಪ್ರಮುಖ ಘಟಕವು ಇದಾಗಿರುತ್ತದೆ.

ಗರ್ಭಿಣಿಯರಿಗೆ ಬಹಳ ಒಳ್ಳೆಯದು

ಗರ್ಭಿಣಿಯರಿಗೆ ಬಹಳ ಒಳ್ಳೆಯದು

ಬಾದಾಮಿ ಕಾಳುಗಳಲ್ಲಿರುವ ಫೋಲಿಕ್ ಆಮ್ಲವು ನವಜಾತ ಶಿಶುಗಳಲ್ಲಿ ಸ೦ಭಾವ್ಯ ಜನನ ದೋಷಗಳ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುತ್ತದೆ. ಹೀಗಾಗಿ, ಗರ್ಭಿಣಿ ಸ್ತ್ರೀಯು ನೀರಿನಲ್ಲಿ ನೆನೆಸಿಟ್ಟಿರಬಹುದಾದ ಬಾದಾಮಿ ಕಾಳುಗಳನ್ನು ಸೇವಿಸುವ೦ತೆ ಸಲಹೆ ಮಾಡಲಾಗುತ್ತದೆ.

ಬುದ್ಧಿಶಕ್ತಿಯ ಹಾಗೂ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ

ಬುದ್ಧಿಶಕ್ತಿಯ ಹಾಗೂ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ

ಮಾನವನಿಗೆ ಪರಿಚಿತವಾಗಿರುವ ಸ್ಮರಣಶಕ್ತಿಯ ಸ೦ವರ್ಧಕಗಳ ಪೈಕಿ ಒ೦ದು ಯಾವುದೆ೦ದರೆ ಅದು ಬಾದಾಮಿ. ಬಾದಾಮಿ ಕಾಳುಗಳು ಕೊಬ್ಬಿನಾ೦ಶದಿ೦ದ ಸಮೃದ್ಧವಾಗಿದ್ದು, ಇವು ಬುದ್ಧಿಶಕ್ತಿಯ ಹಾಗೂ ಸ್ಮರಣಶಕ್ತಿಯ ಮಟ್ಟಗಳನ್ನು ಸುಧಾರಿಸಲು ನೆರವಾಗುತ್ತವೆ. ಸ್ಮರಣಶಕ್ತಿಯ ಮಟ್ಟವು ಗಮನಾರ್ಹವಾಗಿ ವೃದ್ಧಿಗೊಳ್ಳಬೇಕೆ೦ದಿದ್ದಲ್ಲಿ, ಪ್ರತಿದಿನ ಬೆಳಗ್ಗೆ ನಾಲ್ಕರಿ೦ದ ಆರು ನೆನೆಸಿಟ್ಟ ಬಾದಾಮಿ ಕಾಳುಗಳನ್ನು ಸೇವಿಸುವುದು ಸೂಕ್ತವಾಗಿರುತ್ತದೆ. ಅದರಲ್ಲೂ ಮೆದುಳಿನ ಕ್ರಿಯೆಗಳು ಆರೋಗ್ಯಕರವಾಗಿ ಸಾಗಲು ಬೇಕಾಗುವಂತಹ ವಿಟಮಿನ್ ಗಳು ಬಾದಾಮಿಯಲ್ಲಿ ಸಮೃದ್ಧವಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬಾದಾಮಿಯಲ್ಲಿರುವ ವಿಟಮಿನ್ ಬಿ6 ಮೆದುಳಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು. ಬಾದಾಮಿಯನ್ನು ತಿನ್ನುವುದರಿಂದ ಮೆದುಳಿನ ಬೆಳವಣಿಗೆಯಾವುದು, ನೆನಪಿನ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ ಅದರಲ್ಲಿರುವ ವಿಟಮಿನ್ ಮೆದುಳಿಗೆ ವಯಸ್ಸಾಗದಂತೆ ನೋಡಿಕೊಳ್ಳುವುದು. ಈ ಕಾರಣದಿಂದಾಗಿ ಮನುಷ್ಯನ ದೇಹಕ್ಕೆ ವಯಸ್ಸಾದರೂ ಮೆದುಳಿಗೆ ವಯಸ್ಸಾಗುವುದಿಲ್ಲ. ವಿಟಮಿನ್ ಇ ಮೆದುಳಿನ ಜ್ಞಾನ ಶಕ್ತಿಯನ್ನು ಮತ್ತಷ್ಟು ವೃದ್ಧಿಸುತ್ತದೆ.

ವೃದ್ಧಾಪ್ಯವನ್ನ ದೂರಮಾಡುತ್ತದೆ

ವೃದ್ಧಾಪ್ಯವನ್ನ ದೂರಮಾಡುತ್ತದೆ

ಬಾದಾಮಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳ ಪ್ರಮಾಣ ನೆನೆಸಿದ ಬಳಿಕ ಇನ್ನಷ್ಟು ಹೆಚ್ಚುವ ಕಾರಣ ದೇಹದಲ್ಲಿ ಕ್ಯಾನ್ಸರ್‪ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡಲು ದೇಹ ಹೆಚ್ಚಿನ ಸಾಮರ್ಥ್ಯ ಪಡೆಯುತ್ತದೆ. ಇದು ಚರ್ಮದಲ್ಲಿ ನೆರಿಗೆ ಮೂಡುವುದನ್ನುತಡವಾಗಿಸಿ ವೃದ್ಧಾಪ್ಯವನ್ನೂ ತಡವಾಗಿಸುತ್ತದೆ.

ಹುಟ್ಟಿನಿಂದ ಬರುವ ಊನಗಳಿಂದ ರಕ್ಷಣೆ ಪಡೆಯಬಹುದು

ಹುಟ್ಟಿನಿಂದ ಬರುವ ಊನಗಳಿಂದ ರಕ್ಷಣೆ ಪಡೆಯಬಹುದು

ಪ್ರತಿದಿನಾ ಮೂರು-ನಾಲ್ಕು ನೆನೆಸಿಟ್ಟ ಬಾದಾಮಿಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಫೋಲಿಕ್ ಆಮ್ಲ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ವಿಶೇಷವಾಗಿ ಗರ್ಭಿಣಿಯರಿಗೆ ಅತಿ ಉತ್ತಮವಾಗಿದ್ದು ಇದರಿಂದ ಹುಟ್ಟುವ ಮಗು ಯಾವುದೇ ಊನವಿಲ್ಲದೇ ಆರೋಗ್ಯಕರವಾಗಿ ಜನಿಸಲು ನೆರವಾಗುತ್ತದೆ.

ಪ್ರೋಟೀನ್‌ಗಳ ಆಗರ

ಪ್ರೋಟೀನ್‌ಗಳ ಆಗರ

ಬಾದಾಮಿಯಲ್ಲಿರುವಂತಹ ಪ್ರೋಟೀನ್‌ಗಳು ಮೆದುಳಿಗೆ ತುಂಬಾ ಒಳ್ಳೆಯದೆಂದು ಸಾಬೀತಾಗಿದೆ. ಇದು ಮೆದುಳಿಗೆ ಶಕ್ತಿಯನ್ನು ಒದಗಿಸುವುದು ಮಾತ್ರವಲ್ಲದೆ ಮೆದುಳಿಗೆ ಆಗಿರುವಂತಹ ಸಣ್ಣಪುಟ್ಟ ತೊಂದರೆಗಳನ್ನು ಇದು ನಿವಾರಿಸುತ್ತದೆ. ಇದು ಮೆದುಳಿನ ಜ್ಞಾನದ ಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ನಿರ್ಹಹಿಸುತ್ತದೆ. ನೆನಪಿನ ಶಕ್ತಿಯ ಸಾಮರ್ಥ್ಯವನ್ನು ವೃದ್ಧಿಸಲು ಇದು ನೆರವಾಗುವುದು.

 ಬಾದಾಮಿಯಲ್ಲಿ ಒಳ್ಳೆಯ ಗುಣಮಟ್ಟದ ಸತು ಲಭ್ಯ

ಬಾದಾಮಿಯಲ್ಲಿ ಒಳ್ಳೆಯ ಗುಣಮಟ್ಟದ ಸತು ಲಭ್ಯ

ದೇಹದ ಬೆಳವಣಿಗೆಗೆ ಅದರಲ್ಲೂ ಮೆದುಳಿಗೆ ಖನಿಜಾಂಶವಾಗಿರುವ ಸತು ಅಗತ್ಯವಾಗಿ ಬೇಕೇಬೇಕು. ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಇದರಲ್ಲಿನ ಬಲಿಷ್ಠವಾಗಿರುವ ಆ್ಯಂಟಿ ಆಕ್ಸಿಡೆಂಟ್ ಗಳು ಮಾನವನ ದೇಹದ ರಕ್ತದಲ್ಲಿರುವ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಫ್ರೀ ರ್ಯಾಡಿಕಲ್ ಮೆದುಳಿನ ಕೋಶಗಳಿಗೆ ಹಾನಿ ಮಾಡುವ ಕಾರಣ ಅವುಗಳನ್ನು ನಿಯಂತ್ರಣದಲ್ಲಿಟ್ಟು ಮೆದುಳಿನ ಆರೋಗ್ಯವನ್ನು ಹೆಚ್ಚಿಸುವುದು.

ಬಾದಾಮಿ ಎಣ್ಣೆ ವಿಟಮನ್ ಮತ್ತು ಖನಿಜಗಳ ಆಗರವಾಗಿದೆ

ಬಾದಾಮಿ ಎಣ್ಣೆ ವಿಟಮನ್ ಮತ್ತು ಖನಿಜಗಳ ಆಗರವಾಗಿದೆ

ಬಾದಾಮಿ ಎಣ್ಣೆ ಬೆಲೆಯಲ್ಲಿ ಕೊಂಚ ದುಬಾರಿಯಾದರೂ ಇದರಲ್ಲಿರುವ ಪೋಷಕಾಂಶಗಳನ್ನು ಗಣನೆಗೆ ತೆಗೆದುಕೊಂಡರೆ ಅತ್ಯಂತ ಶ್ರೀಮಂತವಾದ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಇ, ಡಿ ಮತ್ತು ಪೊಟ್ಯಾಶಿಯಂ, ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ನಂತಹ ಖನಿಜಗಳು ಹೇರಳವಾಗಿವೆ. ನಿಮ್ಮ ಅಡುಗೆಗಳಲ್ಲಿ ಕಡೆಯದಾಗಿ ಒಂದೆರಡು ತೊಟ್ಟು ಬಾದಾಮಿ ಎಣ್ಣೆ ಸೇರಿಸಿದರೆ ಅಡುಗೆಯ ಸ್ವಾದದ ಜೊತೆಗೆ ಪೌಷ್ಟಿಕತೆಯೂ ಹೆಚ್ಚುತ್ತದೆ. ಬಾದಾಮಿ ಎಣ್ಣೆ ನವಿರಾದ ಸಿಹಿ ಸ್ವಾದವನ್ನು ಹೊಂದಿರುವುದರಿಂದ ಅಡುಗೆಯ ರುಚಿಯೂ ಹೆಚ್ಚುತ್ತದೆ.

ಅಡುಗೆಗಳಲ್ಲಿ ಸಾಧ್ಯವಾದಷ್ಟು ಬಾದಾಮಿ ಎಣ್ಣೆಯನ್ನು ಬಳಸಿ

ಅಡುಗೆಗಳಲ್ಲಿ ಸಾಧ್ಯವಾದಷ್ಟು ಬಾದಾಮಿ ಎಣ್ಣೆಯನ್ನು ಬಳಸಿ

ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುತ್ತದೆ ಬಾದಾಮಿ ಎಣ್ಣೆಯಲ್ಲಿ ಒಮೆಗಾ-3 ಕೊಬ್ಬಿನ ತೈಲವೂ ಇದೆ. ಈ ತೈಲ ರಕ್ತದಲ್ಲಿ ಸೇರಿದ ಬಳಿಕ ರಕ್ತನಾಳಗಳ ಒಳಗೆ ಅಂಟಿಕೊಂಡಿದ್ದ ಕೆಟ್ಟ ಕೊಲೆಸ್ಟ್ರಾಲ್ ಅಥವಾ (LDL-low density lipoprotein) ಗಳನ್ನು ಸಡಿಲಗೊಳಿಸಿ ಹೊರ ಅಟ್ಟಲು ನೆರವಾಗುತ್ತದೆ. ನಿಮ್ಮ ಅಡುಗೆಯಲ್ಲಿ ಸಾಧ್ಯವಾದಷ್ಟು ಪ್ರಮಾಣದಲ್ಲಿ ಬಾದಾಮಿ ಎಣ್ಣೆಯನ್ನು ಸೇರಿಸುವ ಮೂಲಕ ಮನೆಯವರೆಲ್ಲರ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ.

ಕೂದಲಿನ ಹೊಳಪಿಗೆ ಬಾದಾಮಿ ಎಣ್ಣೆ

ಕೂದಲಿನ ಹೊಳಪಿಗೆ ಬಾದಾಮಿ ಎಣ್ಣೆ

ಆರೋಗ್ಯಕರ ಮತ್ತು ಹೊಳಪುಳ್ಳ ಕೂದಲಿಗೆ ನೆರವಾಗುತ್ತದೆ ಬಾದಾಮಿ ಎಣ್ಣೆಯನ್ನು ನೇರವಾಗಿ ಕೂದಲಿಗೆ ಹಚ್ಚಿಕೊಳ್ಳಬಹುದು. ಈ ಎಣ್ಣೆಯಲ್ಲಿ ಒಮೆಗಾ-6 ಕೊಬ್ಬಿನ ಆಮ್ಲವಿದೆ. ಈ ಆಮ್ಲ ತಲೆಯ ಚರ್ಮವನ್ನು ಪ್ರಚೋದಿಸಿ ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ಕೂದಲ ಬುಡದಿಂದ ಆರೋಗ್ಯಕರ ಕೂದಲು ಬೆಳೆಯಲು ನೆರವಾಗುತ್ತದೆ. ಜೊತೆಗೇ ಕೂದಲನ್ನು ಬುಡದಿಂದ ಬಲಪಡಿಸುವ ಕಾರಣ ತುದಿಯವರೆಗೂ ಕೂದಲು ಉತ್ತಮ ಪೋಷಣೆ ಪಡೆದು ಹೊಳಪು ಮತ್ತು ಬೆಳವಣಿಗೆ ಪಡೆಯುತ್ತದೆ. ಕೂದಲ ಬುಡಕ್ಕೆ ಹೆಚ್ಚಿನ ಪೋಷಕಾಂಶಗಳು ದೊರಕುವುದರಿಂದ ಉದುರುವುದು ಕಡಿಮೆಯಾಗಿ ಕೂದಲು ದಟ್ಟವಾಗಿ ಬೆಳೆಯಲು ನೆರವಾಗುತ್ತದೆ.

English summary

Health Benefits of Eating Only 4 soaked Almonds Per Day

While we were growing up didn’t your mother feed you almonds daily? It seemed so bizarre back then but trust me you should thank her for this simple healthy habit. Did you know that almonds are a superfood? Not only they are high in vitamin E and good fats, they are also great for your hair and skin. Having a handful of almonds every day is one of the best ways to begin your day. In fact, by doing so you ensure that your mind and body are given nourishment at the start of the day. Giving it the much-needed boost of energy.
X
Desktop Bottom Promotion