ಪ್ರತಿ ದಿನ ಸ್ನಾನದ ನೀರಿಗೆ ಒಂದು ಚಮಚ ಉಪ್ಪನ್ನು ಹಾಕಿ ಸ್ನಾನ ಮಾಡಿ!

By: Hemanth
Subscribe to Boldsky

ಕರ್ನಾಟಕದಲ್ಲಿ ಹೆಚ್ಚಾಗಿ ವಿಶೇಷ ಅಮಾವಾಸ್ಯೆ ಸಂದರ್ಭದಲ್ಲಿ ಸಮುದ್ರದಲ್ಲಿ ಸ್ನಾನ ಮಾಡಿಕೊಂಡು ಬರುವಂತಹ ಸಂಪ್ರದಾಯವಿದೆ. ಸಮುದ್ರದ ನೀರು ಉಪ್ಪಾಗಿರುವ ಕಾರಣದಿಂದ ಅದು ಚರ್ಮ ರೋಗಗಳನ್ನು ನಿವಾರಣೆ ಮಾಡಿ ದೇಹಕ್ಕೆ ಒಳ್ಳೆಯದನ್ನು ಮಾಡಲಿದೆ ಎನ್ನುತ್ತಾರೆ. ನಾವು ಹಿಂದಿನಿಂದಲೂ ಈ ರೀತಿಯ ಸ್ನಾನ ಮಾಡಿಕೊಂಡು ಬರುತ್ತಾ ಇದ್ದೇವೆ.

ಆದರೆ ಆಧುನಿಕ ಯುಗದಲ್ಲಿ ಬೀಚ್ ಗೆ ಸುತ್ತಾಡಲು ಮಾತ್ರ ಹೋಗುತ್ತಾರೆ. ಸಮುದ್ರದಲ್ಲಿ ಸ್ನಾನ ಮಾಡುವುದು ಅವರಿಗೆ ಆಗದು. ಈ ಸ್ನಾನ ಮಹತ್ವ ಅವರಿಗೆ ತಿಳಿದೇ ಇಲ್ಲ. ಇದನ್ನು ಬಂಡವಾಳವಾಗಿ ಮಾಡಿಕೊಂಡಿರುವ ಕೆಲವೊಂದು ಸ್ಪಾಗಳು ಕೂಡ ಉಪ್ಪು ನೀರಿನ ಸ್ನಾನ ಎನ್ನುವ ಹೊಸ ವಿಧಾನ ಹುಡುಕಿಕೊಂಡಿವೆ.

ಹೊಟ್ಟೆಯೊಳಗಿನ ಕಲ್ಮಶ ಹೋಗಲಾಡಿಸಲು-ಉಪ್ಪು ನೀರಿನ ರೆಸಿಪಿ!

ವೈದ್ಯರು ಕೂಡ ಕೆಲವೊಂದು ಚರ್ಮ ಕಾಯಿಲೆಗಳಿಗೆ ಉಪ್ಪು ನೀರಿನ ಸ್ನಾನ ಮಾಡಬಹುದು ಎಂದು ಹೇಳುತ್ತಾರೆ. ಉಪ್ಪಿನಲ್ಲಿ ಇರುವಂತಹ ಪೊಟಾಶಿಯಂ, ಮೆಗ್ನಿಶಿಯಂ, ಸೋಡಿಯಂ ಮತ್ತು ಕ್ಯಾಲ್ಸಿಯಂ ದೇಹಕ್ಕೆ ಒಳ್ಳೆಯದು ಮತ್ತು ಇದು ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದು. ಈ ಖನಿಜಾಂಶಗಳನ್ನು ದೇಹವು ಹೀರಿಕೊಳ್ಳುವುದು ಮಾತ್ರವಲ್ಲದೆ ದೇಹಕ್ಕೆ ಶಮನ ನೀಡುವುದು. ಇದರಲ್ಲಿ ಇರುವಂತಹ ಕ್ಯಾಲ್ಸಿಯಂ ರಕ್ತ ಪರಿಚಲನೆ ಉತ್ತಮಪಡಿಸಿ ಮೂಳೆಗಳು, ಹಲ್ಲು ಹಾಗೂ ಉಗುರನ್ನು ಗಟ್ಟಿಗೊಳಿಸುವುದು.

ಸೋಡಿಯಂ ದುಗ್ದರಸದ ನಿಯಂತ್ರಣ ಮಾಡುವ ಕಾರಣದಿಂದ ಸಂಪೂರ್ಣ ದೇಹವು ಹೊಂದಾಣಿಕೆಯಿಂದ ಇರುವಂತೆ ಮಾಡುವುದು. ದೇಹಕ್ಕೆ ಶಕ್ತಿ ನೀಡುವಂತಹ ಪೊಟಾಶಿಯಂ ಚರ್ಮವನ್ನು ಮೃಧುವಾಗಿಸುವುದು. ವಯಸ್ಸಾಗುವ ಲಕ್ಷಣ ತಡೆಯುವ ಮೆಗ್ನಿಶಿಯಂ ನೀರು ನಿಲ್ಲುವುದನ್ನು ತಡೆದು ಹೊಟ್ಟೆಯುಬ್ಬರ ಕಡಿಮೆ ಮಾಡುವುದು.

ಉಪ್ಪು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು!

ತ್ವಚೆಯ ಆರೈಕೆಯಲ್ಲಿ ಉಪ್ಪು ನೀರಿನ ಸ್ನಾನ ಮಾಡಿದರೆ ನಿಮಗೆ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು. ಉಪ್ಪು ನೀರಿನ ಸ್ನಾನವನ್ನು ಹೆಚ್ಚು ಖರ್ಚಿಲ್ಲದೆ ಹಾಗೂ ಶ್ರಮವಿಲ್ಲದೆ ಮಾಡಬಹುದು. ಸ್ನಾನ ಮಾಡುವಂತಹ ನೀರಿಗೆ ಸ್ವಲ್ಪ ಉಪ್ಪು ಹಾಕಿಕೊಂಡು ಸ್ನಾನ ಮಾಡಿದರೆ ಅದರಿಂದ ಹಲವಾರು ರೀತಿಯ ಲಾಭಗಳು ನಿಮ್ಮ ದೇಹಕ್ಕೆ ಆಗಲಿದೆ. ಉಪ್ಪು ನೀರಿನ ಸ್ನಾನದಿಂದ ಯಾವ್ಯಾವ ಲಾಭಗಳು ನಿಮಗೆ ಸಿಗಲಿದೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಲಿದೆ....

ಆರೋಗ್ಯಕ್ಕೆ ಬಹಳ ಒಳ್ಳೆಯದು...

ಆರೋಗ್ಯಕ್ಕೆ ಬಹಳ ಒಳ್ಳೆಯದು...

ಉಪ್ಪು ನೀರಿನ ಸ್ನಾನ ಮಾಡಿದಾಗ ಆಸ್ಮೋಸಿಸ್ ಎನ್ನುವ ವಿಧಾನದಿಂದ ದೇಹದಲ್ಲಿನ ಋಣಾತ್ಮಕ ಅಂಶಗಳು ಮಾಯವಾಗಿ ಧನಾತ್ಮಕ ಅಂಶಗಳು ಬರುವುದು. ದೈಹಿಕ ಮತ್ತು ಅತೀಂದ್ರಿಯ ಮಟ್ಟದಲ್ಲಿ ಮಾನವ ದೇಹವು ಪ್ರವೇಶಿಸಬಹುದಾದ ಕಾರಣದಿಂದ ಹೀಗೆ ಆಗುತ್ತದೆ. ಉಪ್ಪು ಸಂಪೂರ್ಣವಾಗಿ ಸ್ವಚ್ಛ ಮಾಡುತ್ತದೆ. ಇದು ಎಲ್ಲಾ ದೇಹದಲ್ಲಿರುವ ಚಕ್ರಗಳನ್ನು ಸ್ವಚ್ಛ ಮಾಡಿ ದೇಹವನ್ನು ಹೊಂದಾಣಿಕೆಯಲ್ಲಿಡುವುದು. ಉಪ್ಪಿನ ಸ್ನಾನ ಮಾಡಿದರೆ ದೇಹವು ವಿಷವನ್ನು ಹೊರಹಾಕಿ ಆರಾಮವಾದ ಭಾವನೆ ಆಗುವುದು.

ಮೆದುಳಿಗೆ ಒಳ್ಳೆಯದು

ಮೆದುಳಿಗೆ ಒಳ್ಳೆಯದು

ಮೆದುಳಿನಲ್ಲಿ ಹಾನಿಗೊಳಗಾಗಿರುವ ನರಗಳನ್ನು ಸರಿಪಡಿಸುವಂತಹ ಉಪ್ಪು ನೀರಿನ ಸ್ನಾನವು ಮೆದುಳು ಬೇಗನೆ ಬೆಳವಣಿಗೆಯಾಗಲು ನೆರವಾಗುವುದು. ಇದು ಮೆದುಳಿನಲ್ಲಿ ಪ್ರೋಟೀನ್ ರಚನೆಯಾಗಲು ಸಹಕಾರಿ. ಇದರಿಂದ ವ್ಯಕ್ತಿಯು ತುಂಬಾ ಚುರುಕಾಗಿ ಕ್ಲಿಷ್ಟಕರ ಸಮಸ್ಯೆಗಳನ್ನು ಕೂಡ ನಿವಾರಿಸಬಲ್ಲ. ಉಪ್ಪು ನೀರಿನಲ್ಲಿ ಸ್ನಾನ ಮಾಡುವುದರಿಂದ ಹಾನಿಗೊಳಗಾಗಿರುವ ಆವಯವಗಳು ಕೂಡ ಸರಿಯಾಗುವುದು.

ಗಂಟು ನೋವು ಹಾಗೂ ಸ್ನಾಯು ನೋವು ನಿವಾರಣೆ

ಗಂಟು ನೋವು ಹಾಗೂ ಸ್ನಾಯು ನೋವು ನಿವಾರಣೆ

ಉಪ್ಪು ನೀರಿನಲ್ಲಿ ಸ್ನಾನವು ಗಂಟು ನೋವು ಮತ್ತು ಸ್ನಾಯು ನೋವಿಗೆ ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಇದು ಸ್ನಾಯುಗಳಲ್ಲಿ ಇರುವ ಸೆಳೆತ ಕಡಿಮೆ ಗೊಳಿಸಿ ಕೀಲು ನೋವನ್ನು ನಿವಾರಣೆ ಮಾಡುವುದು. ಇದರಲ್ಲಿ ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಇರುವ ಕಾರಣದಿಂದ ಹಿಂದಿನಿಂದಲೂ ಸಂಧಿವಾತಕ್ಕೆ ಉಪ್ಪು ನೀರಿನ ಸ್ನಾನವನ್ನು ಬಳಸಿಕೊಂಡು ಬರುತ್ತಾ ಇದ್ದಾರೆ.

ಒತ್ತಡ ನಿವಾರಣೆ

ಒತ್ತಡ ನಿವಾರಣೆ

ಹಿಂದಿನಿಂದಲೂ ಒತ್ತಡ ನಿವಾರಣೆ ಮಾಡಿಕೊಳ್ಳಲು ಉಪ್ಪು ನೀರಿನ ಸ್ನಾನ ಮಾಡಲಾಗುತ್ತಾ ಇತ್ತು. ಉಪ್ಪು ನೀರಿನ ಸ್ನಾನ ಮಾಡಿದರೆ ಕ್ಷೋಭೆಗೊಂಡಿರುವ ನರಗಳು ಶಾಂತಗೊಳ್ಳುವುದು. ಇದರೊಂದಿಗೆ ಕೆಲವು ಸಾರಭೂತ ತೈಲಗಳಾದ ಮಲ್ಲಿಗೆ, ಲ್ಯಾವೆಂಡರ್, ಗಂಧ ಅಥವಾ ಕ್ಯಾಮೊಮೈಲ್ ಎಣ್ಣೆ ಬಳಸಿದರೆ ಅದು ಶಾಂತಗೊಳಿಸುವ ಪ್ರಕ್ರಿಯೆಗೆ ವೇಗ ನೀಡುವುದು. ಒತ್ತಡವು ಹೆಚ್ಚಾಗುತ್ತಾ ಇದ್ದರೆ ನೀವು ಉಪ್ಪು ನೀರಿನ ಸ್ನಾನ ಮಾಡುವುದು ಒಳ್ಳೆಯದು.

ಚರ್ಮಕ್ಕೆ ಹಿಂದಿನಿಂದಲೂ ಇದು ಒಳ್ಳೆಯ ಮದ್ದು

ಚರ್ಮಕ್ಕೆ ಹಿಂದಿನಿಂದಲೂ ಇದು ಒಳ್ಳೆಯ ಮದ್ದು

ಉಪ್ಪು ನೀರಿನ ಸ್ನಾನವು ಸುಲಿಯುವ ಅಂಶವನ್ನು ಹೊಂದಿದೆ. ಇದರಲ್ಲಿ ಇರುವಂತಹ ಖನಿಜಾಂಶಗಳು ಸತ್ತ ಚರ್ಮ ಸುಲಿದು ಪೋಷಣೆ ನೀಡುವುದು. ವಯಸ್ಸಾಗುವ ಚರ್ಮ, ಜೋತುಬಿದ್ದ ಚರ್ಮ ಮತ್ತು ಆರೋಗ್ಯಕಾರಿ ಚರ್ಮಕ್ಕೆ ಹಿಂದಿನಿಂದಲೂ ಇದು ಒಳ್ಳೆಯ ಮದ್ದಾಗಿದೆ. ತ್ವಚೆಯ ಆರೈಕೆ ಮಾಡುವಂತವರು ಉಪ್ಪು ನೀರಿನ ಸ್ನಾನವನ್ನು ಇದರಲ್ಲಿ ಬಳಸಿಕೊಳ್ಳಲೇಬೇಕು. ಯಾಕೆಂದರೆ ಇದು ತುಂಬಾ ಅಗ್ಗ ಹಾಗೂ ಸುಲಭವಾಗಿ ಅನುಸರಿಸಬಹುದಾದ ಚರ್ಮದ ಆರೈಕೆಯ ಕ್ರಮ. ಇದನ್ನು ಬಳಸಿಕೊಂಡು ಫಲಿತಾಂಶ ಪಡೆದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

English summary

Health Benefits Of Bath Salt

Bath salts are rich in minerals, and their benefits are more than just skin deep. People have been using bath salts for generations, and they're even recommended by doctors - and today, you get them in a number of exciting variants and fragrances that are sure to make bath-time a pleasurable, sensory experience you'll enjoy. Bath salts are rich in minerals like potassium, magnesium, sodium and calcium and soaking in them is a cheap, effective way to detoxify the body.
Story first published: Tuesday, July 4, 2017, 7:01 [IST]
Subscribe Newsletter