For Quick Alerts
ALLOW NOTIFICATIONS  
For Daily Alerts

  ದೈವೀ ಸ್ವರೂಪದ ವಿಭೂತಿ, ನಿಮ್ಮ ಆರೋಗ್ಯದ ಸಂಗಾತಿ...

  By Manu
  |

  ಹಲವು ಭಾರತೀಯರಿಗೆ ತಮ್ಮ ಹಣೆಯ ನಡುವೆ ಬೂದಿಯ ಬೊಟ್ಟೊಂದನ್ನು ಇರಿಸುವ ಅಭ್ಯಾಸವಿರುತ್ತದೆ. ಈ ಪವಿತ್ರವಾದ ಬೂದಿಗೆ ಭಸ್ಮ ಅಥವಾ ವಿಭೂತಿ ಎಂದೂ ಕರೆಯುತ್ತಾರೆ. ಕೆಲವರು ಹಣೆಯ ಹೊರತಾಗಿ ತಮ್ಮ ಕೈಗಳ ಮೇಲೆ ಎದೆಯ ಮೇಲೂ ಹಚ್ಚಿಕೊಳ್ಳುತ್ತಾರೆ. ವಾಸ್ತವವಾಗಿ ವಿಭೂತಿ ಎಂದರೇನು?

  ಯಾವುದೇ ಕಟ್ಟಿಗೆಯನ್ನು ಸುಟ್ಟ ಬಳಿಕ ಉಳಿದ ಬೂದಿಯೆಲ್ಲಾ ವಿಭೂತಿಯಾಗಲು ಸಾಧ್ಯವಿಲ್ಲ. ಬದಲಿಗೆ ಪವಿತ್ರ ಅಗ್ನಿಯಲ್ಲಿ ಮಂತ್ರಘೋಷದ ನಡುವೆ ಸುಟ್ಟ ಕಟ್ಟಿಗೆಯ ಬೂದಿಗೆ ಮಾತ್ರ ವಿಭೂತಿಯ ಪಟ್ಟ ಸಿಗಲು ಸಾಧ್ಯ. ಈ ಪವಿತ್ರ ಅಗ್ನಿಗೆ ಅರ್ಪಿಸಲು ಕೆಲವು ವಿಧದ ಧಾನ್ಯಗಳು, ಕೆಲವು ಮೂಲಿಕೆಗಳು, ತುಪ್ಪ ಹಾಗೂ ಕಾಷ್ಠವನ್ನು ಅರ್ಪಿಸಲಾಗುತ್ತದೆ. ಇವೆಲ್ಲವೂ ಸುಟ್ಟ ಬಳಿಕ ಉಳಿದ ಬೂದಿಯನ್ನೇ ವಿಭೂತಿ ಎನ್ನಲಾಗುತ್ತದೆ. ಈ ವಿಭೂತಿಗೆ ಕೆಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇವು ಯಾವುವು ಎಂಬುದನ್ನು ನೋಡೋಣ....

  ವಿಭೂತಿಯ ಆರೋಗ್ಯಕಾರಿ ಅಂಶಗಳು

  ವಿಭೂತಿಯ ಆರೋಗ್ಯಕಾರಿ ಅಂಶಗಳು

  ನಾಟಿ ಹಸುವಿನ ಬೆರಣಿ ತಟ್ಟಿ ಸರಿಯಾದ ಕ್ರಮಬದ್ಧವಾದ ಹೋಮ ಮಾಡಿ ತಯಾರಿಸುವ ವಿಭೂತಿಯೂ ಕೇವಲ ಸ್ಪಿರುಚ್ಯುವಲ್ ಕಾರಣಕ್ಕೆ ಮಾತ್ರವಲ್ಲ. ಬದಲಾಗಿ ಇದ್ರಲ್ಲಿ ಹಲವು ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಅನ್ನೋದು ಬಹಿರಂಗಗೊಂಡಿರುವ ಸತ್ಯ. ಪ್ರಮುಖವಾಗಿ ಋಣಾತ್ಮಕ ಶಕ್ತಿಯನ್ನು ಕುಗ್ಗಿಸಿ ನಮ್ಮ ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ವಿಭೂತಿಗಿದೆ. ವಿಭೂತಿಯನ್ನು ಹಚ್ಚಿಕೊಂಡು ಶಿವ ಕಾಮವನ್ನು ತ್ಯಜಿಸಿ ನಶ್ವರತೆಯ ಕಡೆಗೆ ವಾಲಿದ ಅನ್ನೋದು ಕಥೆಪುರಾಣಗಳಿಂದ ತಿಳಿದಿರುವ ಸತ್ಯ. ಅಂತೆಯೇ ಯಾರು ವಿಭೂತಿ ಹಚ್ಚಿಕೊಳ್ತಾರೋ ಅವ್ರ ಕಾಮೋತ್ತೇಜಕ ಪ್ರವೃತ್ತಿ ನಿಯಂತ್ರಣದಲ್ಲಿ ಇರಲು ಸಾಧ್ಯ ಅನ್ನೋದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.

  ತಲೆನೋವಿಗೆ

  ತಲೆನೋವಿಗೆ

  ಹಣೆಯ ಮೇಲೆ ಕೊಂಚ ವಿಭೂತಿಯನ್ನು ಹಚ್ಚಿಕೊಳ್ಳುವ ಮೂಲಕ ಹೆಚ್ಚು ಬಿಸಿಲಿನಲ್ಲಿ ತಿರುಗಿದ ಬಳಿಕ ಎದುರಾಗುವ ತಲೆನೋವನ್ನು ಕಡಿಮೆ ಮಾಡಬಹುದು.

  ಮಾತ್ರೆಯ ಹಂಗಿಲ್ಲದೆ ಮೈಗ್ರೇನ್ ತಲೆನೋವು ನಿಯಂತ್ರಣಕ್ಕೆ!

  ತಲೆನೋವಿಗೆ

  ತಲೆನೋವಿಗೆ

  ಹಲವು ಚಿಕಿತ್ಸೆಗಳಲ್ಲಿ ಹಣೆಯ ಮೇಲೆ, ಎರಡು ಕಣ್ಣುಗಳ ಹುಬ್ಬುಗಳ ನಡುವಣ ಸ್ಥಳಕ್ಕೆ ಹೆಚ್ಚಿನ ಮಹತ್ವವಿದೆ. ಈ ಭಾಗದಲ್ಲಿ ಕೊಂಚವೇ ಒತ್ತಡದಿಂದ ಮಸಾಜ್ ಮಾಡುವ ಮೂಲಕ ಕೆಲವು ತಲೆನೋವುಗಳನ್ನು ಕಡಿಮೆ ಮಾಡಬಹುದು.

  ಆಯುರ್ವೇದದಲ್ಲಿ ಭಸ್ಮಕ್ಕೆ ಪ್ರಮುಖ ಸ್ಥಾನವಿದೆ...

  ಆಯುರ್ವೇದದಲ್ಲಿ ಭಸ್ಮಕ್ಕೆ ಪ್ರಮುಖ ಸ್ಥಾನವಿದೆ...

  ಆಯುರ್ವೇದದಲ್ಲಿ ಭಸ್ಮಕ್ಕೆ ಪ್ರಮುಖ ಪಾತ್ರವಿದೆ. ಕೆಲವಾರು ಔಷಧಿಗಳಲ್ಲಿ ಮೂಲವಸ್ತುವಾಗಿ (base element) ಭಸ್ಮವನ್ನು ಉಪಯೋಗಿಸಲಾಗುತ್ತದೆ. ಏಕೆಂದರೆ ಭಸ್ಮವನ್ನು ನಾವು ಜೀರ್ಣಿಸಿಕೊಳ್ಳಲಾರೆವು, ಹಾಗಾಗಿ ಔಷಧಿಯನ್ನು ಭಸ್ಮದೊಂದಿಗೆ ಸೇವಿಸಿದಾಗ ಜೀರ್ಣಾಂಗವ್ಯವಸ್ಥೆಯ ಕಡೆಯ ಹಂತದವರೆಗೂ ತಲುಪಲು ಸಾಧ್ಯವಾಗುತ್ತದೆ. ಭಸ್ಮವನ್ನು ತೇವಗೊಳಿಸಿ ಹಣೆಗೆ ಹಚ್ಚಿಕೊಳ್ಳುವುದರಿಂದ ಶೀತವಾಗದಂತೆ ರಕ್ಷಣೆ ಪಡೆಯಬಹುದು.

  ಸೈನಸ್ ಸಮಸ್ಯೆಗಳಿದ್ದರೆ...

  ಸೈನಸ್ ಸಮಸ್ಯೆಗಳಿದ್ದರೆ...

  ಹುಬ್ಬುಗಳ ನಡುವಣ ಭಾಗವನ್ನು ಕೊಂಚವೇ ಮಸಾಜ್‌ಗೊಳಿಸುವ ಮೂಲಕ ಇನ್ನೊಂದು ಪ್ರಯೋಜನವಿದೆ. ಅದೆಂದರೆ ಇದರ ಅಡಿಯಲಿರುವ ಕುಹರ ಅಥವಾ ಸೈನಸ್ ಭಾಗವನ್ನು ತೆರವು ಮಾಡಲು ನೆರವಾಗುತ್ತದೆ. ಈ ಭಾಗದಲ್ಲಿ ನಿಯಮಿತವಾಗಿ ಕೊಂಚ ವಿಭೂತಿ ಹಚ್ಚಿಕೊಳ್ಳುವ ಮೂಲಕ ಕುಹರ ಪ್ರಚೋದನೆ ಪಡೆಯುತ್ತದೆ ಹಾಗೂ ಈ ಭಾಗದಲ್ಲಿ ಸೋಂಕು ಉಂಟಾಗದಂತೆ ತಡೆಯಬಹುದು.

  ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

  ವೃದ್ಧಾಪ್ಯದ ನೆರಿಗೆಗಳು

  ವೃದ್ಧಾಪ್ಯದ ನೆರಿಗೆಗಳು

  ಹಣೆಗೆ ವಿಭೂತಿಯನ್ನು ಹಚ್ಚಿಕೊಳ್ಳುವ ಮೂಲಕ ನಯವಾಗಿ ಮಸಾಜ್ ಮಾಡಿದಂತೆಯೂ ಆಗುತ್ತದೆ. ಈ ಮೂಲಕ ಹಣೆಯ ಮೇಲೆ ಮೂಡುವ ವೃದ್ಧಾಪ್ಯದ ನೆರಿಗೆಗಳು ಹಾಗೂ ಸೂಕ್ಷ್ಮ ಗೆರೆಗಳು ಇಲ್ಲವಾಗುತ್ತವೆ.

  ಧನಾತ್ಮಕ ಶಕ್ತಿ ಪಡೆಯಲು...

  ಧನಾತ್ಮಕ ಶಕ್ತಿ ಪಡೆಯಲು...

  ಹಣೆಯ ಮೇಲೆ ವಿಭೂತಿಯನ್ನು ಹಚ್ಚಿಕೊಳ್ಳುವ ಮೂಲಕ ಧನಾತ್ಮಕ ಶಕ್ತಿ ಪಡೆಯಲು ಸಾಧ್ಯವಾಗುತ್ತದೆ. ಅಂದರೆ ಮನಸ್ಸಿನಲ್ಲಿ ಋಣಾತ್ಮಕ ಯೋಚನೆಗಳು ತಲೆಯೊಳಗೆ ಹೊಕ್ಕದಂತೆ ಒಂದು ರೀತಿಯ ದ್ವಾರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

  ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ....

  ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ....

  ಹುಬ್ಬುಗಳ ನಡುವಣ ಭಾಗವನ್ನು ನಯವಾಗಿ ಮಸಾಜ್ ಮಾಡುವ ಮೂಲಕ ಮನಸ್ಸು ನಿರಾಳವಾಗುತ್ತದೆ ಹಾಗೂ ಶಾಂತವಾಗಿರುತ್ತದೆ. ಇದರಿಂದ ಮನಸ್ಸಿನ ಒತ್ತಡ ಕಡಿಮೆಯಾಗಿ ಸುಖವಾದ ನಿದ್ದೆ ಆವರಿಸಲು ನೆರವಾಗುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಈ ಮಸಾಜ್ ಅತ್ಯಂತ ಹೆಚ್ಚಿನ ನೆರವು ನೀಡುತ್ತದೆ.

  English summary

  Health Benefits Of Applying Vibhuti

  Many Indians have the habit of applying ash on the forehead. That ash is known as 'vibhuti' or 'bhasma'. Some apply it only on forehead, whereas some apply it even to the chest and arms. Actually, what is vibhuti? Well, vibhuti or bhasma is the ash or the remnant of auspicious fires (Dhuni). Generally, certain types of grains, some herbs, ghee and wood are offered to the auspicious fire and the ash is the product of all of those ingredients which have so many health benefits.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more