For Quick Alerts
ALLOW NOTIFICATIONS  
For Daily Alerts

ಈ ಪ್ರಬಲ ರಾಸಾಯನಿಕಗಳು ಪುರುಷರ ಆರೋಗ್ಯಕ್ಕೆ ಬಹಳ ಡೇಂಜರ್!!

By Arshad
|

ಯಾವ ರಾಸಾಯನಿಕಗಳು ಅತಿ ಹೆಚ್ಚು ಅಪಾಯಕಾರಿ? ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ. ಏಕೆಂದರೆ ವಿವಿಧ ಜೀವಿಗಳಿಗೆ ರಾಸಾಯನಿಕಗಳು ವಿವಿಧ ರೀತಿಯಲ್ಲಿ ಹಾನಿಯನ್ನು ಎಸಗುತ್ತವೆ. ಪುರುಷರನ್ನು ಪರಿಗಣಿಸಿದಾಗ ಕೆಲವು ರಾಸಾಯನಿಕಗಳು ಇತರರಿಗಿಂತ ಭಿನ್ನವಾಗಿ ತಮ್ಮ ಪ್ರಭಾವವನ್ನು ಬೀರುತ್ತವೆ. ಕೆಲವು ವಿಷಕಾರಿ ರಾಸಾಯನಿಕಗಳು ಆಹಾರ ಸರಪಳಿಯ ಮೂಲಕ ದೇಹವನ್ನು ಪ್ರವೇಶಿಸಬಹುದು.

ನಾವು ಸೇವಿಸುವ ಕೆಲವು ರಾಸಾಯನಿಕಗಳು ಸೇವಿಸಿದ ಆಹಾರಕ್ಕಿಂತಲೂ ಹೆಚ್ಚು ಘಾಸಿಯುಂಟುಮಾಡಬಹುದು. ಕೆಲವು ರಾಸಾಯನಿಕಗಳು ಪುರುಷರಿಗೆ ಮೀಸಲಾಗಿರುವ ಟೆಸ್ಟೋಸ್ಟೆರಾನ್ ಎಂಬ ರಸದೂತದ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಮೂಲಕ ದೇಹದ ಆರೋಗ್ಯವನ್ನು ಏರುಪೇರು ಮಾಡಬಹುದು.

ಪುರುಷರ ಆಕರ್ಷಕ ಮೈಕಟ್ಟಿಗೆ ಸತ್ವಯುತ ಆಹಾರ

ಅಷ್ಟೇ ಅಲ್ಲ, ಕೆಲವು ರಾಸಾಯನಿಕಗಳು ವಿಶೇಷವಾಗಿ ನಿರ್ನಾಳಗ್ರಂಥಿಯು ಸ್ರವಿಸುವ ಪದಾರ್ಥವಾದ ಎಂಡೋಕ್ರೈನ್ ಎಂಬ ವ್ಯವಸ್ಥೆಯ ಮೇಲೂ ಪ್ರಭಾವ ಬೀರಬಹುದು. ಕೆಲವು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಪುರುಷರ ದೇಹದಲ್ಲಿರುವ ರಾಸಾಯನಿಕ ಹಾಗೂ ಕಡಿಮೆ ಫಲವತ್ತತೆಗೆ ನಿಕಟವಾದ ಸಂಭಂಧವಿದೆ. ಇಂದು ಮಾರುಕಟ್ಟೆಯಲ್ಲಿ ಸಿದ್ಧ ಆಹಾರಗಳು ಕೆಡದಂತೆ ಸೇರಿಸುವ ಕೃತಕ ರಾಸಾಯನಿಕಗಳಿಗೂ ಈ ಗುಣವಿರುವ ಕಾರಣ ಸಿದ್ಧ ಆಹಾರಗಳ ಬದಲಿಗೆ ನೈಸರ್ಗಿಕ ಆಹಾರಗಳನ್ನು ಸೇವಿಸುವುದೇ ಇಂದಿನ ಅಗತ್ಯವಾಗಿದೆ. ಕೆಲವು ಸಂರಕ್ಷಕಗಳಂತೂ ಪುರುಷರ ಸಂತಾನೋತ್ಪತ್ತಿಯ ಶಕ್ತಿಯನ್ನೇ ಕುಂದಿಸಿಬಿಡುತ್ತವೆ ಹಾಗೂ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆಯನ್ನೂ ಕಡಿಮೆ ಮಾಡುತ್ತವೆ. ಇದರ ಹೊರತಾಗಿ ಪುರುಷರು ಇತರ ತೊಂದರೆಗಳೂ ಎದುರಾಗಬಹುದು. ಬನ್ನಿ, ಪುರುಷರಿಗೆ ಮಾರಕವಾಗಿರುವ ಈ ರಾಸಾಯನಿಕಗಳು ಯಾವುವು ಎಂಬುದನ್ನು ನೋಡೋಣ...

ಥಾಲೇಟ್ (Phthalate)

ಥಾಲೇಟ್ (Phthalate)

ಈ ರಾಸಾಯನಿಕದ ಪ್ರಭಾವದಿಂದ ಭ್ರೂಣದಲ್ಲಿ incomplete testicular descent ಅಥವಾ ವೃಷಣದ ಚೀಲದಲ್ಲಿ ಒಂದು ವೃಷಣ ಕಡಿಮೆ ಗಾತ್ರದಾಗಿರುವುದು ಕಂಡುಬರುತ್ತದೆ. ಈ ರಾಸಾಯನಿಕ ವಿನೈಲ್ ಫ್ಲೋರಿಂಗ್, ಡಿಟರ್ಜೆಂಟ್ ಪೌಡರ್, ವಾಹನದ ತಯಾರಿಕೆಯಲ್ಲಿ ಬಳಸಲಾಗುವ ಪ್ಲಾಸ್ಟಿಕ್, ಸೋಪು, ಶಾಂಪೂ, ಸುಗಂಧದ್ರವ್ಯಗಳು, ಕೂದಲ ಸ್ಪ್ರೇ, ಆಹಾರವಸ್ತುಗಳನ್ನು ಪ್ಯಾಕ್ ಮಾಡುವ ವಸ್ತುಗಳು ಇತ್ಯಾದಿಗಳಲ್ಲಿ ಕಂಡುಬರುತ್ತದೆ.

ಬೈಸ್ಫೆನಾಲ್ ಎ (Bisphenol A)

ಬೈಸ್ಫೆನಾಲ್ ಎ (Bisphenol A)

ಇದು ಹಲವು ಸಾಮಾನ್ಯ ಬಳಕೆಯ ಪ್ಲಾಸ್ಟಿಕ್ ನಲ್ಲಿ ಬಳಸಲಾಗುತ್ತದೆ. ಇವುಗಳಲ್ಲಿ ಪ್ರಮುಖವಾದವು ಮರುಬಳಸಲಾಗುವ ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಆಹಾರವನ್ನು ಬಿಸಿಮಾಡುವ ಪ್ಲಾಸ್ಟಿಕ್ ಅಥವಾ ಗಾಜಿನ ಪಾತ್ರೆಗಳ ಅಂಚುಗಳಿಂದ ದ್ರವ ಸೋರದಂತೆ ಬಳಸುವ ಲೈನರ್ ರಬ್ಬರುಗಳಲ್ಲಿ ಬಳಸಲಾಗುತ್ತದೆ. ಈ ವಸ್ತುಗಳಿಗೆ ಅಂಟಿದ ಆಹಾರವನ್ನು ಸೇವಿಸಿದ ಮಹಿಳೆಯರ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೆ ಅಡ್ಡಿಪಡಿಸುತ್ತದೆ.

ಪರ್ಪ್ಲ್ಯೂರೋ ಆಕ್ಟಾನೋಯಿಕ್ ಆಮ್ಲ (Perflurooctanoic Acid (PFOA))

ಪರ್ಪ್ಲ್ಯೂರೋ ಆಕ್ಟಾನೋಯಿಕ್ ಆಮ್ಲ (Perflurooctanoic Acid (PFOA))

ಇದು ಸಾಮಾನ್ಯವಾಗಿ ಜಾರುಕವಾಗಿ ಬಳಸಲಾಗುವ ಗ್ರೀಸ್ ಹಾಗೂ ನೀರು ತಗಲದಂತೆ ಸಿಂಪಡಿಸಲು ಬಳಸಲಾಗುವ ಟೆಫ್ಲಾನ್ ಹಾಗೂ ಗೋರ್-ಟೆಕ್ಸ್ ಮೊದಲಾದ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಈ ರಾಸಾಯನಿಕ ಕ್ಯಾನ್ಸರ್ ಗೆ ಕಾರಣವಾಗಬಹುದು.

ಮೀಥಾಕ್ಸಿಕ್ಲೋರ್ ಹಾಗೂ ವಿಂಕ್ಲೀಜಿನ್ (Methoxychlor And Vinclozin)

ಮೀಥಾಕ್ಸಿಕ್ಲೋರ್ ಹಾಗೂ ವಿಂಕ್ಲೀಜಿನ್ (Methoxychlor And Vinclozin)

ಇವು ಕ್ರಮವಾಗಿ ಕೀಟನಾಶಕ ಹಾಗೂ ಶಿಲೀಂಧ್ರನಾಶಕ ರಾಸಾಯನಿಕಗಳಲ್ಲಿ ಬಳಸಲ್ಪಡುತ್ತವೆ. ಈ ರಾಸಾಯನಿಕಗಳನ್ನು ಗಂಡು ಇಲಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಕಂಡುಕೊಂಡಂತೆ ಆ ಇಲಿಗಳ ಸಹಿತ ಮುಂದಿನ ನಾಲ್ಕು ತಲೆಮಾರುಗಳವರೆಗೆ ಈ ರಾಸಾಯನಿಕ ಬದಲಾವಣೆಯನ್ನು ಉಂಟುಮಾಡಿದೆ.

ನೋನೈಲ್ ಫಿನಾಲ್ ಇಥೋಕ್ಸೈಲೇಟ್ಸ್ (Nonylphenol Ethoxylates)

ನೋನೈಲ್ ಫಿನಾಲ್ ಇಥೋಕ್ಸೈಲೇಟ್ಸ್ (Nonylphenol Ethoxylates)

ಈ ರಾಸಾಯನಿಕಗಳು endocrine disruptors ಅಥವಾ ಎಂಡೋಕ್ರೈನ್ ವ್ಯವಸ್ಥೆಯನ್ನು ಏರುಪೇರಾಗಿಸುವ ಗುಣ ಹೊಂದಿದ್ದು ಇದರ ಪರಿಣಾಮವಾಗಿ ಕೆಲವು ವಂಶವಾಹಿ ಸೂಚನೆಗಳಲ್ಲಿ ಕೆಲವು ನಿರ್ಧಿಷ್ಟ ಬದಲಾವಣೆ ಮಾಡುವ ಮೂಲಕ ದೇಹದಿಂದ ಹೊರಸೂಸುವ ಗ್ರಂಥಿಗಳಾದ ಕಣ್ಣೀರು, ಬೆವರು ಮೊದಲಾದ ಗ್ರಂಥಿಗಳ ಕಾರ್ಯವ್ಯವಸ್ಥೆಯನ್ನೇ ಬದಲಿಸಿಬಿಡುತ್ತದೆ.

ಬೋವೈನ್ ಬೆಳವಣಿಗೆ ಹಾರ್ಮೋನು

ಬೋವೈನ್ ಬೆಳವಣಿಗೆ ಹಾರ್ಮೋನು

ಈ ರಾಸಾಯನಿಕ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಬಹುಪ್ರಮಾಣದಲ್ಲಿ ದೊರಕುವ ಡೈರಿ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದರ ಸೇವನೆಯಿಂದ ಸೂಕ್ತ ವಯಸ್ಸಿಗೂ ಮುನ್ನವೇ ಹದಿಹರೆಯದ ಲಕ್ಷಣಗಳು ಕಾಣತೊಡಗುತ್ತವೆ. ಇದು ವಿಶೇಷವಾಗಿ ಪುರುಷರಲ್ಲಿ ನಂಪುಸಕತ್ವ ಮೂಡಿಸುವ ಕ್ಷಮತೆ ಹೊಂದಿದ್ದು ಈ ರಾಸಾಯನಿಕವಿರುವ ಆಹಾರವಸ್ತುಗಳನ್ನು ಸೇವಿಸಲೇಬಾರದು.

ಆಸ್ಬೆಸ್ಟಾಸ್

ಆಸ್ಬೆಸ್ಟಾಸ್

ಕಟ್ಟಡಗಳಲ್ಲಿ ಹೊರಗಿನ ತಾಪಮಾನ ಒಳಬರದಂತೆ ತಡೆಯಲು ಬಳಸಲಾಗುವ ಆವಾಹಕ ವಸ್ತುಗಳಲ್ಲಿ ಈ ರಾಸಾಯನಿಕವನ್ನು ಬಳಸಲಾಗುತ್ತದೆ. ಈ ರಾಸಾಯನಿಕಗಳು ಶ್ವಾಸಕೋಶದ ಅಂಚುಗಳಲ್ಲಿ ಎದುರಾಗುವ ಕ್ಯಾನ್ಸರ್ (mesothelioma) ಉಂಟುಮಾಡಲು ಕಾರಣವಾಗಬಹುದು. ಮನೆಯ ಮೇಲ್ಛಾವಣಿಗೆ ಉಪಯೋಗಿಸುವ ಆಸ್ಪೆಸ್ಟಾಸ್ ಶೀಟುಗಳಿಂದಲೂ ಈ ರಾಸಾಯನಿಕ ಸೂಸುತ್ತಿದ್ದು ಇದರ ಸೇವನೆಯಿಂದ ಆರೋಗ್ಯ ಏರುಪೇರಾಗುವುದು.

ಫ್ಲ್ರೋರೈಡ್

ಫ್ಲ್ರೋರೈಡ್

ಈ ರಾಸಾಯನಿಕದ ಪ್ರಭಾವದಿಂದ ಫಲವತ್ತತೆ ಕಡಿಮೆಯಾಗುವುದು, ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಕಂಡುಬರುತ್ತದೆ. ಇದು ಪುರುಷರಲ್ಲಿ ನಪುಂಸಕತ್ವ ಉಂಟುಮಾಡುವ ಸಾಧ್ಯತೆ ಹೆಚ್ಚಿಸುತ್ತದೆ.

ಸೋಯಾ ಉತ್ಪನ್ನಗಳು

ಸೋಯಾ ಉತ್ಪನ್ನಗಳು

ಸೋಯಾ ಅವರೆಗಳನ್ನು ಬಳಸಿ ಉತ್ಪಾದಿಸಿದ ಉತ್ಪನ್ನಗಳನ್ನು ಸೇವಿಸುವ ಮೂಲಕ ಪುರುಷರಲ್ಲಿ ಫಲವತ್ತತೆಯಲ್ಲಿ ಪ್ರಭಾವವುಂಟುಮಾಡಬಹುದು. ಆದ್ದರಿಂದ ಪುರುಷರು ಈ ಉತ್ಪನ್ನಗಳ ಸೇವನೆಯನ್ನು ಕನಿಷ್ಟ ಪ್ರಮಾಣಕ್ಕೆ ಇಳಿಸಬೇಕು ಅಥವಾ ವರ್ಜಿಸಬೇಕು.

ಮೋಸೋಸೋಡಿಯಂ ಗ್ಲುಟಮೇಟ್ (MSG)

ಮೋಸೋಸೋಡಿಯಂ ಗ್ಲುಟಮೇಟ್ (MSG)

ವಿಶೇಷವಾಗಿ ಮಸಾಲೆಯುಕ್ತ ಆಹಾರಗಳಲ್ಲಿ ರುಚಿಬರಲೆಂದು ಸೇರಿಸುವ ಈ ರಸಾಯನಿಕ ಪುರುಷರ ಫಲವತ್ತತೆಯನ್ನು ಕಡಿಮೆಗೊಳಿಸಬಹುದು. ಇದು ಸಂಸ್ಕರಿತ ಆಹಾರ ಹಾಗೂ ಕೃತಕ ಆಹಾರಗಳಲ್ಲಿಯೂ ಕಂಡುಬರುತ್ತದೆ.

ಮದುವೆಯಾಗಿರುವ ಪುರುಷರು ಈ ಆಹಾರಗಳನ್ನು ತಿನ್ನಲೇಬೇಕು!

English summary

Harmful Chemicals That Can Affect Men's Health

Some studies have also suggested a link between ingesting chemicals and low-birth rate. Taking your family off the grid of processed foods and switching to natural and organic diet is the need of the hour. Some of the chemicals found in the processed foods are linked to hamper fertility and can affect the healthy sperm count. It can also cause other health troubles in men. Read further to know about the chemicals that can be harmful for men.
X
Desktop Bottom Promotion